Saturday, 16th December 2017  

Vijayavani

1. ಭಯೋತ್ಪಾದನೆಗೆ ಒತ್ತಡ ಆರೋಪ ವಿಚಾರ- ಆತ್ಮಹತ್ಯೆಗೆ ಯತ್ನಿಸಿದ ಯುವಕನ ಸ್ಥಿತಿ ಗಂಭೀರ- ಬಾಗಲಕೋಟೆ ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ 2. ಎಐಸಿಸಿ ಅಧ್ಯಕ್ಷರಾಗಿ ಇಂದು ರಾಹುಲ್​​​ ಅಧಿಕಾರ- ದೆಹಲಿ ಕಚೇರಿಯಲ್ಲಿ ಪದಗ್ರಹಣ ಕಾರ್ಯಕ್ರಮ- ರಾಹುಲ್​​​​ ಮುಂದಿದೆ ನೂರಾರು ಸವಾಲು 3. ಸುನಿಲ್​​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪ್ರಕರಣ- ಇಂದು ಬೆಳಗೆರೆ ಜಾಮೀನು ಅರ್ಜಿ ವಿಚಾರಣೆ- ಇತ್ತ ಜಯದೇವದಲ್ಲಿ ಮುಂದುವರಿದ ಚಿಕಿತ್ಸೆ 4. ಕಲಬುರಗಿಯತ್ತ ಸಾಗಿದ ಸಿಎಂ ಸಾಧನ ಸಂಭ್ರಮ- ಜೇವರ್ಗಿಯಲ್ಲಿ ಹಲವು ಕಾಮಗಾರಿಗೆ ಚಾಲನೆ- ಸಿಎಂಗೆ ಹಲವು ಸಚಿವರಿಂದ ಸಾಥ್​​​ 5. ಸನ್ನಿ ನೈಟ್​​ಗೆ ಸರ್ಕಾರದ ಬ್ರೇಕ್​- ನಿರ್ಧಾರದ ವಿರುದ್ಧ ಪರ-ವಿರುದ್ಧ ಚರ್ಚೆ- ಸಚಿವರ ಕ್ರಮಕ್ಕೆ ಕೆಂಡಕಾರಿದ ಅಭಿಮಾನಿಗಳು
Breaking News :

ಹೆಣ್ಣು ಮಗುವಿಗೆ ಜನ್ಮ ನೀಡಿದ್ರೆ ಹೀಗಾ ಮಾಡುವುದು?

Friday, 13.10.2017, 9:33 AM       No Comments

ಬೆಂಗಳೂರು: ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಮತ್ತು ವರದಕ್ಷಿಣೆ ಹಣ ತಂದಿಲ್ಲವೆಂದು ಪತ್ನಿಗೆ ಚಿತ್ರಹಿಂಸೆ ನೀಡಿ ಮನೆಯಿಂದ ಹೊರ ಹಾಕಿರುವ ಘಟನೆ ಬೆಂಗಳೂರಿನ ತಿಪ್ಪಸಂದ್ರದಲ್ಲಿ ನಡೆದಿದೆ. ವಿಪರ್ಯಾಸವೆಂದರೆ ಈ ಕುರಿತು ದೂರು ನೀಡಲು ಹೋದರೆ ಪೊಲೀಸರು ಸಹ ದೂರು ದಾಖಲಿಸಿಕೊಂಡಿಲ್ಲ.

ದಂಪತಿಗೆ ಮೂರು ವರ್ಷದ ಮುದ್ದಾದ ಹೆಣ್ಣು ಮಗುವಿದೆ. ಆದರೆ, ವರದಕ್ಷಿಣೆ ಹಣ ತರುವವರೆಗೆ ಮನೆ ಒಳಗೆ ಬರಬೇಡ ಎಂದು ಅತ್ತೆ ನಾಗವೇಣಿ, ಮಾವ ನಾಗರಾಜ್ ಹಾಗೂ ಪತಿ ಚೇತನ್ ಪತ್ನಿ ಹರ್ಷಿತಾಗೆ ಹಿಂಸೆ ನೀಡಿದ್ದಾರೆ. ಅಲ್ಲದೇ, ಸರಿಯಾಗಿ ಊಟ ನೀಡದೆ ಕೋಣೆಯಲ್ಲಿ ಕೂಡಿ ಹಾಕಿದ್ದರೆಂದು ಹರ್ಷಿತಾ ಕುಟುಂಬದವರು ಆರೋಪ ಮಾಡಿದ್ದಾರೆ.

ಊಟವಿಲ್ಲದೆ ತೀವ್ರ ಅಸ್ವಸ್ಥಗೊಂಡಿರುವ ಹರ್ಷಿತಾ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಚೇತನ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ ಅಂತಾ ಹರ್ಷಿತಾ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.(ದಿಗ್ವಿಜಯ ನ್ಯೂಸ್)

 

Leave a Reply

Your email address will not be published. Required fields are marked *

Back To Top