Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ತಂದೆಯ ಮರಣ ದಂಡನೆ ಜತೆಗೆ ತಾಯಿಗೂ ಅದೇ ಶಿಕ್ಷೆಯಾಗಲಿ

Tuesday, 12.12.2017, 7:12 PM       No Comments

<< ತಮಿಳುನಾಡಿನ ದಲಿತ ಶಂಕರನ ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ ವಿಧವೆ ಕೌಶಲ್ಯ ಬಯಕೆ >>

ಚೆನ್ನೈ: ಪ್ರೀತಿಸಿ ವಿವಾಹವಾಗಿದ್ದ ಪತಿಯನ್ನು ದಲಿತನೆಂಬ ಕಾರಣಕ್ಕೆ ಬರ್ಬರವಾಗಿ ಮರ್ಯಾದೆಗೇಡು ಹತ್ಯೆ ಮಾಡಿಸಿದ್ದ ತಂದೆಗೆ ನ್ಯಾಯಾಲಯ ವಿಧಿಸಿರುವ ಮರಣ ದಂಡನೆಯನ್ನು ಸ್ವಾಗತಿಸಿರುವ ವಿಧವೆ ಎಸ್. ಕೌಶಲ್ಯ, ತಾಯಿಯನ್ನು ಖುಲಾಸೆ ಮಾಡಿರುವುದಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಎಂಜಿನಿಯರಿಂಗ್​ ವಿದ್ಯಾರ್ಥಿ ವಿ.ಶಂಕರ್ (23) ನನ್ನು ಕೌಶಲ್ಯ 2025ರ ಜುಲೈನಲ್ಲಿ ವಿವಾಹವಾಗಿದ್ದಳು. ಮದುವೆಯಾದ ಕೇವಲ 8 ತಿಂಗಳಲ್ಲಿ ಜನನಿಬಿಡ ತಿರುಪುರ್ ಮಾರುಕಟ್ಟೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದು ರಾಷ್ಟ್ರಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಶ್ರೀಮಂತ ಹಾಗೂ ರಾಜಕೀಯವಾಗಿ ಪ್ರಬಲವಾದ ತೇವಾರ್ ಸಮುದಾಯಕ್ಕೆ ಸೇರಿದ ಕೌಶಲ್ಯ, ದಲಿತ ಯುವಕನನ್ನು ವಿವಾಹವಾಗಿದ್ದೆ ಪಾಲಕರ ವಿರೋಧಕ್ಕೆ ಕಾರಣವಾಗಿತ್ತು. ಪಾಲಕರೇ ಸುಪಾರಿ ನೀಡಿ ಶಂಕರನನ್ನು ಹತ್ಯೆ ಮಾಡಿಸಿದ್ದರು.

ತಮಿಳುನಾಡು ನ್ಯಾಯಾಲಯ ತಂದೆ ಚಿನ್ನಸ್ವಾಮಿ ಸೇರಿ ಐವರಿಗೆ ನೀಡಿರುವ ಮರಣದಂಡನೆಯನ್ನು ಸ್ವಾಗತಿಸಿರುವ ಕೌಶಲ್ಯ, ಇತರೆ ಮೂವರಾದ ತಾಯಿ, ಚಿಕ್ಕಪ್ಪ ಹಾಗೂ ಮತ್ತೊಬ್ಬ ಸಂಬಂಧಿ ಖುಲಾಸೆ ಮಾಡಿರುವುದಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇವರಿಂದ ತನ್ನ ಮತ್ತು ಶಂಕರ್ ಕುಟುಂಬಕ್ಕೆ ಜೀವ ಭಯವಿದೆ ಎಂದಿದ್ದಾಳೆ.

Leave a Reply

Your email address will not be published. Required fields are marked *

Back To Top