Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಆಯುಧ ಪೂಜೆಗೆ ರಿಲಯನ್ಸ್ ಜಿಯೋ ಕೊಡುಗೆ ಏನು?

Wednesday, 20.09.2017, 1:00 PM       No Comments

ಮುಂಬೈ: ಈಗಾಗಲೇ “Rs 0” ಎಂದೇ ಖ್ಯಾತಿ ಪಡೆದು, ಸುಮಾರು 60 ಲಕ್ಷ ಪ್ರೀ ಬುಕ್ಕಿಂಗ್​ಗಳನ್ನು ಕಂಡ ಜಿಯೋ 4G ಫೋನ್ ಯಾವಾಗ ತಮ್ಮ ಕೈ ಸೇರಲಿದೆ ಎಂದು ಗ್ರಾಹಕರು ಕಾಯುತ್ತಿದ್ದಾರೆ. ಆ ಎಲ್ಲ ಗ್ರಾಹಕರಿಗೆ ಇಲ್ಲೊಂದು ಖುಷಿ ಸುದ್ದಿ ಇದೆ. ಇದೀಗ ದೊರೆತಿರುವ ಮಾಹಿತಿಯ ಪ್ರಕಾರ ನವರಾತ್ರಿಯ ಶುಭ ಸಂದರ್ಭದಲ್ಲಿ ಮೊದಲ ಬ್ಯಾಚ್​ನ ಜಿಯೋ ಫೋನ್​ಗಳು ವಿತರಣೆಗೊಳ್ಳಲಿವೆ.

ಆಗಸ್ಟ್ 24ರಂದು ನಡೆದ ಪ್ರೀ ಬುಕ್ಕಿಂಗ್​ನಲ್ಲಿ ಕಾಯ್ದಿರಿಸಲಾದ ಈ ಫೋನ್​ಗಳು ಸೆಪ್ಟೆಂಬರ್ ಕೊನೆಯ ವಾರದಲ್ಲಿ ವಿತರಣೆಯಾಗಲಿವೆ. ಎಸ್​ಎಮ್​ಎಸ್​ ಮೂಲಕ ಫೋನ್ ಬಂದಿರುವ ಸೂಚನೆ ಗ್ರಾಹಕರಿಗೆ ದೊರೆಯಲಿದ್ದು, ತಮ್ಮ ಹತ್ತಿರದ ರಿಲಯನ್ಸ್ ಜಿಯೋ ಸ್ಟೋರ್​ನಿಂದ ಗ್ರಾಹಕರು ಫೋನ್ ತೆಗೆದುಕೊಳ್ಳಬಹುದಾಗಿದೆ.

ಗ್ರಾಹಕರು MyJio app ಮೂಲಕ ತಮ್ಮ ಮೊಬೈಲ್ ನಂಬರ್ ನೋಂದಾಯಿಸಿಕೊಂಡು ಫೋನ್ ಯಾವಾಗ ತಮ್ಮ ಕೈ ಸೇರುತ್ತದೆ ಎಂಬ ಮಾಹಿತಿಯನ್ನು ಕೂಡ ಪಡೆಯಬಹುದಾಗಿದೆ. ಇನ್ನು ಮೊದಲ ಸಲ ಪ್ರೀ ಬುಕ್ಕಿಂಗ್ ವೇಳೆ ಫೋನ್ ಕಾಯ್ದಿರಿಸದೆ ಇರುವ ಗ್ರಾಹಕರು ಚಿಂತಿಸುವ ಅವಶ್ಯಕತೆಯಿಲ್ಲ, ಹಬ್ಬದ ಸಂದರ್ಭದಲ್ಲಿ ಮತ್ತೆ ಪ್ರೀ ಬುಕ್ಕಿಂಗ್ ಪ್ರಾರಂಭವಾಗಲಿದೆ.(ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top