Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಮಲ್ಯಗಾಗಿ ಮುಂಬೈ ಜೈಲಿನ ವಿಡಿಯೋ ಪರಿಶೀಲಿಸಲಿರುವ ಲಂಡನ್​ ಕೋರ್ಟ್​

Wednesday, 12.09.2018, 4:31 PM       No Comments

ಲಂಡನ್​: ತಲೆಮರೆಸಿಕೊಂಡ ಆರ್ಥಿಕ ಅಪರಾಧಿ ಎಂದೆನಿಸಿರುವ ಉದ್ಯಮಿ ವಿಜಯ್ ಮಲ್ಯಗಾಗಿ ಸಿದ್ಧಪಡಿಸಿರುವ ಮುಂಬೈನ ಆರ್ಥರ್​ ರೋಡ್​ ಜೈಲಿನ ಕೊಠಡಿಯ ವಿಡಿಯೋವನ್ನು ಲಂಡನ್​ನ ವೆಸ್ಟ್​ಮಿನಿಸ್ಟರ್​ ಮ್ಯಾಜಿಸ್ಟ್ರೇಟ್​ ಕೋರ್ಟ್​ ಇಂದು ಪರಿಶೀಲಿಸಲಿದೆ.

ಗಡಿಪಾರು ಪ್ರಕರಣದ ವಿಚಾರಣೆಗಾಗಿ ವಿಜಯ್​ ಮಲ್ಯ ಕೋರ್ಟ್​ಗೆ ಹಾಜರಾಗಿದ್ದು, ವಿಚಾರಣೆ ನಡೆಯುತ್ತಿದೆ. ವಿಜಯ್​ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ಕೋರಿ ಸಿಬಿಐ ಲಂಡನ್​ ಕೋರ್ಟ್​ಗೆ ಅರ್ಜಿ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶೆ ಎಮ್ಮಾ ಅರ್ಬುತ್ನೋಟ್ ಆರ್ಥರ್​ ರೋಡ್​ ಜೈಲಿನ 12ನೇ ಬ್ಯಾರೆಕ್​ನ ವಿಡಿಯೋ ಚಿತ್ರಣವನ್ನು ಕೋರ್ಟ್​ಗೆ ಸಲ್ಲಿಸುವಂತೆ ಕಳೆದ ಜುಲೈನಲ್ಲಿ ಸೂಚಿಸಿದ್ದರು.

ಕೋರ್ಟ್​ ಸೂಚನೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಜೈಲು ಕೊಠಡಿಯ 6-8 ನಿಮಿಷಗಳ ವಿಡಿಯೋವನ್ನು ಸಿದ್ಧಪಡಿಸಿದ್ದು, ಕೋರ್ಟ್​ಗೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ಕೋರ್ಟ್​ ಜೈಲಿನ ಕೊಠಡಿಯ ವಿಡಿಯೋವನ್ನು ವಿಜಯ್​ ಮಲ್ಯಗೆ 3 ಬಾರಿ ತೋರಿಸಿದೆ ಎಂದು ತಿಳಿದು ಬಂದಿದೆ.

ಕೋರ್ಟ್ ಹಾಲ್​ಗೆ ತೆರಳುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಮಲ್ಯ ನಾನು ಈಗಾಗಲೇ ಕರ್ನಾಟಕ ಹೈಕೋರ್ಟ್​ ಮುಂದೆ ಸಾಲ ಮರುಪಾವತಿ ಸಂಬಂಧ ಪ್ರಸ್ತಾವನೆಯೊಂದನ್ನು ಇಟ್ಟಿದ್ದೆ. ಕೋರ್ಟ್​ ಈ ವಿಷಯವನ್ನು ಪರಿಗಣಿಸಲಿದೆ ಎಂದು ನಂಬಿದ್ದೇನೆ. ಅಂತಿಮವಾಗಿ ಪ್ರಕರಣದ ಕುರಿತು ಕೋರ್ಟ್​ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. (ಏಜೆನ್ಸೀಸ್​)

ಮದ್ಯದ ದೊರೆ ವಿಜಯ್‌ ಮಲ್ಯನಿಗಾಗಿಯೇ ರೆಡಿಯಾಯ್ತು ಹೈಟೆಕ್‌ ಜೈಲು!

Leave a Reply

Your email address will not be published. Required fields are marked *

Back To Top