Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮಕ್ಕೆ ಬೆಳಕು ನೀಡಿದ ನಟಿ ಆಲಿಯಾ!

Sunday, 15.07.2018, 3:05 AM       No Comments

ಬೆಂಗಳೂರು: ಕಲಾವಿದರು ನಟನೆಯ ಜತೆಗೆ ಸಾಮಾಜಿಕ ಕೆಲಸಗಳಲ್ಲೂ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ನೀನಾಸಂ ಸತೀಶ್ ಮಂಡ್ಯದ ಹಳ್ಳಿಯೊಂದನ್ನು ದತ್ತು ಪಡೆದಿದ್ದರು. ಈಗ ಬಾಲಿವುಡ್ ನಟಿ ಆಲಿಯಾ ಭಟ್ ಸರದಿ. ಅವರು ಆರಂಭಿಸಿದ ‘ಮೈ ವಾರ್ಡ್ ರೋಬ್ ಇಸ್ ಯುವರ್ ವಾರ್ಡ್​ರೋಬ್’ ಅಭಿಯಾನದಿಂದ ಮಂಡ್ಯ ಜಿಲ್ಲೆಯ ಕಿಕ್ಕೇರಿ ಗ್ರಾಮದ 32 ಗುಡಿಸಲುಗಳಿಗೆ ಬೆಳಕು ಲಭ್ಯವಾಗಿದೆ! ಈ ಬಗ್ಗೆ ಖುದ್ದು ಆಲಿಯಾ ಟ್ವೀಟ್ ಮಾಡಿದ್ದಾರೆ.

ಕೆಲ ತಿಂಗಳ ಹಿಂದೆ ‘ಮೈ ವಾರ್ಡ್​ರೋಬ್ ಇಸ್ ಯುವರ್ ವಾರ್ಡ್​ರೋಬ್’ ಅಭಿಯಾನದಲ್ಲಿ ಆಲಿಯಾ ತಾವು ಬಳಕೆ ಮಾಡಿದ ಉಡುಪುಗಳನ್ನು ಹರಾಜಿಗೆ ಇಟ್ಟಿದ್ದರು. ಅಚ್ಚರಿಯ ವಿಚಾರ ಏನೆಂದರೆ ಅವೆಲ್ಲ ಹರಾಜಿಗೆ ಇಟ್ಟ ಕೇವಲ 2 ಗಂಟೆಗಳಲ್ಲಿ ಮಾರಾಟವಾಗಿದ್ದವು. ಅದರಿಂದ ಬಂದ ಹಣವನ್ನು ಬೆಂಗಳೂರು ಮೂಲದ ‘ಆರೋಹಾ’ ಎನ್​ಜಿಒ ಆರಂಭಿಸಿರುವ ‘ಲಿಟ್ಟರ್ ಆಫ್ ಲೈಟ್’ ಕಾರ್ಯಕ್ರಮಕ್ಕೆ ನೀಡಿದ್ದರು.

‘ಆರೋಹಾ’ ಪ್ಲಾಸ್ಟಿಕ್ ಬಾಟಲಿಗಳನ್ನು ಮರುಬಳಕೆ ಮಾಡಿಕೊಂಡು, ವಿದ್ಯುತ್ ಇಲ್ಲದ ಕುಗ್ರಾಮಗಳಿಗೆ ಸೌರಶಕ್ತಿ ದೀಪ ನೀಡುವ ಕೆಲಸ ಮಾಡುತ್ತಿದೆ. ಈಗ ಆಲಿಯಾ ನೀಡಿದ ಹಣದಿಂದ ಮಂಡ್ಯದ ಕಿಕ್ಕೇರಿ ಗ್ರಾಮದ 32 ಗುಡಿಸಲುಗಳಿಗೆ ಸೋಲಾರ್ ಲ್ಯಾಂಪ್ ನೀಡಲಾಗಿದೆ. ಜತೆಗೆ 3 ಬೀದಿ ದೀಪ ವ್ಯವಸ್ಥೆಗೊಳಿಸಲಾಗಿದೆ. ಈ ಮೂಲಕ ಕತ್ತಲಲ್ಲಿ ಜೀವನ ದೂಡುತ್ತಿದ್ದ 200 ಕೂಲಿ ಕಾರ್ವಿುಕರಿಗೆ ಬೆಳಕು ನೀಡಿದ್ದಾರೆ ಆಲಿಯಾ. ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಇಚ್ಛೆ ತೋರಿದ್ದಾರೆ. ಈ ಕಾರ್ಯಕ್ರಮಕ್ಕೆ ಸ್ಟಾಂಡರ್ಡ್ ಎಲೆಕ್ಟ್ರಿಕಲ್ ಸಂಸ್ಥೆಕೂಡ ಬೆಂಬಲ ನೀಡಿದೆ. ಈ ಅಭಿಯಾನ ಮೊದಲ ಹಂತದಲ್ಲಿ ಯಶಸ್ಸು ಕಂಡಿರುವುದಕ್ಕೆ ಆಲಿಯಾ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಆರಂಭಿಸಿದ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ‘ಲಿಟ್ಟರ್ ಆಫ್ ಲೈಟ್’ ಕಾರ್ಯಕ್ರಮದ ಮೂಲಕ ಕತ್ತಲೆಯಲ್ಲಿ ಜೀವನ ಸಾಗಿಸುತ್ತಿದ್ದ ಕಿಕ್ಕೇರಿ 40 ಮನೆಗಳಿಗೆ ಬೆಳಕು ಸಿಕ್ಕಿದೆ. ಒಟ್ಟು 200 ಜನರು ಅದರ ಲಾಭ ಪಡೆದಿದ್ದಾರೆ.

| ಆಲಿಯಾ ಭಟ್ ನಟಿ

Leave a Reply

Your email address will not be published. Required fields are marked *

Back To Top