Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಸ್ವಾಮಿತ್ವದ ಘನತೆ ಹೆಚ್ಚಿಸುವ ಮೌನ ವ್ರತ

Thursday, 14.06.2018, 7:14 PM       No Comments

ಅಕ್ಕಿಆಲೂರ: ಸ್ವಾಮಿತ್ವದ ಘನತೆ ಹೆಚ್ಚಿಸುವಲ್ಲಿ ಮೌನ ವ್ರತ ಮಹತ್ವದ ಪಾತ್ರ ವಹಿಸಿದೆ ಎಂದು ಹುಬ್ಬಳ್ಳಿ ಮೂರು ಸಾವಿರಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಲೋಕಕಲ್ಯಾಣ ಮತ್ತು ಮನುಕುಲದ ಒಳಿತಿಗಾಗಿ ಇಲ್ಲಿನ ಚನ್ನವೀರೇಶ್ವರ ವಿರಕ್ತಮಠದ ಶಿವಬಸವ ಸ್ವಾಮೀಜಿ ಕಳೆದೊಂದು ತಿಂಗಳಿಂದ ನಡೆಸಿದ ಮೌನ ಅನುಷ್ಠಾನದ ಮಂಗಲ ಸಮಾರಂಭದಲ್ಲಿ ಗುರುವಾರ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸ್ವಾಮೀಜಿಗಳು ಕೇವಲ ಪೂಜೆ, ಆಶೀರ್ವಚನಕ್ಕೆ ಮಾತ್ರ ಸಿಮೀತವಾಗದೆ, ನಾಡಿನ ಸರ್ವ ಜಾತಿ ಜನಾಂಗದ ಶ್ರೇಯೋಭಿವೃದ್ಧಿ ಬಯಸುವ ಮೌನ ಅನುಷ್ಠಾನ, ತಪಸ್ಸು, ನಿರಂತರ ಉಪವಾಸದಂತಂಹ ಕಠೋರ ವ್ರತಗಳನ್ನು ಮಾಡಲು ಮುಂದಾಗಬೇಕು. ಇದು ಮಠಮಾನ್ಯಗಳ ಮೇಲೆ ಭಕ್ತವೃಂದದ ಶ್ರದ್ಧೆಗೆ ಕಾರಣವಾಗುತ್ತದೆ. ಅಲ್ಲದೆ, ಸ್ವಾಮೀಜಿಗಳ ಮೌಲ್ಯ ಹೆಚ್ಚಿಸುತ್ತದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಸಿ.ಎಂ. ಉದಾಸಿ, ಅಧಿಕಾರ, ಹಣ ಮತ್ತು ಉದ್ಯೋಗವೇ ಜೀವನ ಎಂದು ತಿಳಿಯುತ್ತಿರುವ ಇಂದಿನ ಬಹುತೇಕ ಜನರು, ಮಾನವೀಯ ಮೌಲ್ಯ, ನೈತಿಕತೆಯನ್ನು ಮರೆಯುತ್ತಿದ್ದಾರೆ. ಎಲ್ಲರನ್ನೂ ಎಚ್ಚರಿಸಿ ಜಾಗೃತಿ ಮೂಡಿಸುತ್ತಿರುವ ಅಧ್ಯಾತ್ಮ ಕೇಂದ್ರಗಳಿಗೆ ಆಡಳಿತ ವ್ಯವಸ್ಥೆಯಿಂದಲೂ ವಿಶೇಷ ಪ್ರೋತ್ಸಾಹ ಅಗತ್ಯ ಎಂದು ಹೇಳಿದರು.

ಶ್ರೀಗಳ ಮಂಗಲ ನುಡಿ: ಮೌನಾನುಷ್ಠಾನದ ನಂತರ ಮಂಗಲ ನುಡಿಗಳನ್ನಾಡಿದ ಶಿವಬಸವ ಸ್ವಾಮೀಜಿ, ಅರೆಮಲೆನಾಡು ಪ್ರದೇಶವಾದ ಈ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಹೇಳಿಕೊಳ್ಳುವಂತಹ ಮಳೆ- ಬೆಳೆಯಾಗುತ್ತಿಲ್ಲ. ಹಾನಗಲ್ಲ ಕುಮಾರೇಶ್ವರರ ಮತ್ತು ಲಿಂ. ಚನ್ನವೀರೇಶ್ವರ ಸ್ವಾಮೀಜಿಗಳ ತತ್ವದಂತೆ ಒಂದು ತಿಂಗಳಕಾಲ ಕೋಟಿ, ಕೋಟಿ ಜಪಗೈದು ಅನಾಗರಿಕತೆ ದೂರವಾಗಿ, ಸಮೃದ್ಧಿ, ಸಾತ್ವಿಕ, ಜಾತ್ಯಾತೀತ ಸಮಾಜ ನಿರ್ವಣವಾಗಲು ಮೌನಾನುಷ್ಠಾನದ ಮೂಲಕ ಪ್ರಾರ್ಥಿಸಲಾಗಿದೆ. ಈ ಪುಣ್ಯ ಪರಂಪರೆ ಮುಂದುವರಿಸಲಾಗುವುದು ಎಂದು ಹೇಳಿದರು.

ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಮೂಲೆಗದ್ದೆಯ ಶಾಂತಕುಮಾರ ಸ್ವಾಮೀಜಿ, ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ನಿವೃತ್ತ ಪ್ರಾಚಾರ್ಯ ಕೆ.ಎಸ್. ಕುಂಬಾರ ದಂಪತಿ ಹಾಗೂ ಶಾಸಕ ಉದಾಸಿ ಅವರನ್ನು ಸನ್ಮಾನಿಸಲಾಯಿತು. ಗಂಗಪ್ಪ ಸಾಲವಟಿಗಿ, ನಿರಂಜನಪ್ಪ ಪಾವಲಿ, ಸಿ.ಸಿ. ಬೆಲ್ಲದ, ಎಸ್.ಬಿ. ತುಪ್ಪದ, ರಾಜಣ್ಣ ಗೌಳಿ, ಉದಯಕುಮಾರ ವಿರಪಣ್ಣವರ, ಕುಮಾರ ದೇಶಮುಖ, ಸದಾನಂದ ಉಡುಪ, ಕೊಟ್ರಪ್ಪ ಬೆಲ್ಲದ, ರಾಜಶೇಖರ ಪರೆಗೊಂಡರ, ಷಣ್ಮುಖಪ್ಪ ಮುಚ್ಚಂಡಿ, ಬಸವರಾಜ ಕೋರಿ, ರಾಜಣ್ಣ ಚವಟಿ, ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Back To Top