Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

ಸಚ್ಚಾರಿತ್ರ್ಯಮೂರ್ತಿ ಸ್ವಾಮಿ ವಿವೇಕಾನಂದ

Friday, 12.05.2017, 3:05 AM       No Comments

ಸ್ವಾಮಿ ವಿವೇಕಾನಂದರ ಬೋಧನೆ-ಸಾಧನೆ ಬೋಧಪ್ರದ. ತಮ್ಮ ಬದುಕಿನಲ್ಲಿ ಅತ್ಯುನ್ನತ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಇತರರಿಗೆ ಆದರ್ಶಪ್ರಾಯರಾದವರು. ಜೀವನದಲ್ಲಿ ಅಡೆತಡೆಗಳು ಎದುರಾದಾಗಲೂ ನೈತಿಕತೆಯ ಗೆರೆಯನ್ನು ಒಂಚೂರೂ ಮೀರಿದವರಲ್ಲ.

| ಸ್ವಾಮಿ ವೀರೇಶಾನಂದ ಸರಸ್ವತೀ

ಪ್ರತಿಯೊಂದು ಸಮಾಜ ಹಾಗೂ ರಾಷ್ಟ್ರಕ್ಕೆ ತನ್ನದೇ ಆದ ಆದರ್ಶವಿರುವುದು ಸಹಜ. ಆದರೆ ಎಲ್ಲ ವ್ಯಕ್ತಿಗಳ, ಎಲ್ಲ ಸಮಾಜಗಳ ಹಾಗೂ ಎಲ್ಲ ರಾಷ್ಟ್ರಗಳ ಸಾರ್ವತ್ರಿಕ ಆದರ್ಶವಷ್ಟೇ ಅಲ್ಲ, ಸಾರ್ವತ್ರಿಕ ಅವಶ್ಯಕತೆ- ಚಾರಿತ್ರ್ಯ ಚಾರಿತ್ರ್ಯಂತ ಮಾತ್ರ ಚರಿತ್ರೆ ನಿರ್ವಿುಸಬಲ್ಲ.

ಚಾರಿತ್ರ್ಯ ಎನ್ನುವುದು ವ್ಯಕ್ತಿಯೊಬ್ಬನ ಆಲೋಚನೆಗಳು, ಉದ್ದೇಶಗಳು, ಸ್ವಭಾವ ಹಾಗೂ ನಡೆವಳಿಕೆಗಳ ಒಟ್ಟು ಮೊತ್ತ. ಅಮೆರಿಕನ್ ಲೇಖಕ ಟೋಜರ್ ಹೀಗೆ ಹೇಳುತ್ತಾರೆ: ‘ಶುದ್ಧತೆಯು ಬಂಗಾರದ ಹಿರಿಮೆ. ಕಲೆಯಲ್ಲಿ ಸೌಂದರ್ಯ ಶ್ರೇಷ್ಠ. ಹಾಗೇ ವ್ಯಕ್ತಿಗೆ ಚಾರಿತ್ರ್ಯೇ ಭೂಷಣ.’ ‘ಬುದ್ಧಿಶಕ್ತಿಯು ಶ್ರೇಷ್ಠ ವಿಜ್ಞಾನಿಯನ್ನು ರೂಪಿಸುತ್ತದೆ ಎಂದು ಬಹಳ ಮಂದಿ ಹೇಳುತ್ತಾರೆ. ಅದು ತಪ್ಪು. ವಿಜ್ಞಾನಿಯನ್ನು ರೂಪಿಸುವುದು ಆತನ ಚಾರಿತ್ರ್ಯ ಎಂಬುದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್​ಸ್ಟೈನ್ ಮಾತು. ವ್ಯಕ್ತಿಯೊಬ್ಬ ಮೊದಲು ಮಾನವನಾದ ನಂತರ ಬರುವ ಪ್ರಶ್ನೆ ಆತ ವಿಜ್ಞಾನಿಯೋ, ಕಲಾವಿದನೋ, ಮತ್ತೊಂದೋ ಎನ್ನುವುದು. ಒಬ್ಬ ಶ್ರೇಷ್ಠ ವಿಜ್ಞಾನಿಯಾಗುವುದಕ್ಕೇ ಚಾರಿತ್ರ್ಯ ಎನ್ನುವುದು ಅವಶ್ಯಕವಾದರೆ, ಇನ್ನು ನಿಜವಾದ ಅರ್ಥದಲ್ಲಿ ಒಬ್ಬ ಮಾನವನಾಗಲು ಅದು ಅನಿವಾರ್ಯವೇ ಸರಿ.

ವ್ಯಕ್ತಿಯೊಬ್ಬನ ಚಾರಿತ್ರ್ಯರ್ವಣ ಪ್ರಾರಂಭವಾಗುವುದು ಭ್ರೂಣಾವಸ್ಥೆಯಿಂದಲೇ, ಅದು ಮುಂದುವರಿಯುವುದು ಮನೆ, ಶಾಲೆ ಮತ್ತು ಸಮಾಜದಲ್ಲಿ. ಸುಸಂಸ್ಕೃತ ಸಮಾಜವನ್ನು ಸೃಷ್ಟಿಸುವವರು ವ್ಯಕ್ತಿಗಳು; ಸುಸಂಸ್ಕೃತ ವ್ಯಕ್ತಿ ಆ ಸಮಾಜದ ಸೃಷ್ಟಿ. ಇಲ್ಲಿ ಸುಸಂಸ್ಕೃತ ಸಮಾಜವೆಂದರೆ ಸಚ್ಚಾರಿತ್ರ್ಯಂತರ ಸಮೂಹ. ಇಂತಹ ವ್ಯಕ್ತಿತ್ವನಿರ್ವಣದ ಮೊದಲ ಪಾಠಶಾಲೆ ಮನೆಯೇ. ಅದರಲ್ಲೂ ಮಗುವಿನ ತಾಯಿಯ ಪ್ರಭಾವ ಅತುಲ್ಯವಾದುದು.

ಮನು ಮಹರ್ಷಿ ಹೇಳುತ್ತಾನೆ:

ಉಪಾಧ್ಯಾಯಾನ್ ದಶಾಚಾರ್ಯಃ ಆಚಾರ್ಯಾಣಾಂ ಶತಂ ಪಿತಾ|

ಸಹಸ್ರಂ ತು ಪಿತೃನ್ ಮಾತಾ ಗೌರವೇಣಾತಿರಿಚ್ಯತೇ||

ರಾಮಕೃಷ್ಣ ಪರಂಪರೆಯ ಸ್ವಾಮಿ ಬುಧಾನಂದಜೀ ಹೇಳುತ್ತಾರೆ, ‘ಜೀವನಪರ್ಯಂತ ತಮ್ಮ ಸ್ವಂತ ಚಾರಿತ್ರ್ಯನ್ನು ರೂಪಿಸಿಕೊಳ್ಳಲು ಸತತ ಪ್ರಯತ್ನಿಸುವ ತಂದೆ ತಾಯಿಗಳು ಮಾತ್ರವೇ ತಮ್ಮ ಮಕ್ಕಳ ನಿಜವಾದ ಚಾರಿತ್ರ್ಯನ್ನು ರೂಪಿಸಬಲ್ಲರು.’ ಸ್ವಾಮಿ ವಿವೇಕಾನಂದರ ಜೀವನದಲ್ಲಿ ಅವರ ಜನ್ಮದಾರಭ್ಯ ಪ್ರತಿ ಹಂತದಲ್ಲಿಯೂ ಚಾರಿತ್ರ್ಯರ್ವಣದ ಪರಿ ಅಧ್ಯಯನ ಯೋಗ್ಯ; ಅಷ್ಟೇ ಅಲ್ಲ, ಅದು ನಮ್ಮ ಮತ್ತು ನಮ್ಮ ಮಕ್ಕಳಿಗೊಂದು ಪಥದರ್ಶಿ.

ಭುವನೇಶ್ವರಿದೇವಿ ಹಾಗೂ ವಿಶ್ವನಾಥದತ್ತರ ವಿಶೇಷ ಪ್ರಾರ್ಥನೆಯ ಫಲವಾಗಿ ಕಾಶಿ ವಿಶ್ವೇಶ್ವರನ ಶಿವನ ವರಪ್ರಸಾದವಾಗಿ ಜನಿಸಿದವನೇ ನರೇಂದ್ರ. ಭಗವಂತನಲ್ಲಿ ಶರಣಾಗಿದ್ದುಕೊಂಡು ಜೀವನದ ಸಂಕಷ್ಟಗಳನ್ನು ಎದುರಿಸಬೇಕೆಂಬುದೇ ಭುವನೇಶ್ವರಿದೇವಿಯ ಧ್ಯೇಯಮಂತ್ರ. ಅವಳಿಂದ ‘ಮಗೂ, ನೀನು ನಿನ್ನ ಜೀವನದುದ್ದಕ್ಕೂ ಪರಿಶುದ್ಧನಾಗಿರಬೇಕು, ಆತ್ಮಗೌರವವನ್ನು ಯಾವಾಗಲೂ ಕಾಪಾಡಿಕೋ; ಹಾಗೆಯೇ ಇತರರ ಗೌರವಕ್ಕೆ ಧಕ್ಕೆ ತರದಂತೆ ನೋಡಿಕೋ. ಯಾವಾಗಲೂ ಸಮಾಧಾನದಿಂದ ಇರುವುದನ್ನು ಅಭ್ಯಾಸಮಾಡು. ಆದರೆ ಸಮಯ ಬಂದಾಗ ಕಲ್ಲೆದೆಯವನಾಗಿರುವುದಕ್ಕೂ ಸಿದ್ಧನಾಗಿರು’ ಎನ್ನುವ ಮಾತುಗಳನ್ನು ಕೇಳುತ್ತಾ ಬೆಳೆದ ನರೇಂದ್ರ ಮುಂದೆ ಸ್ವಾಮಿ ವಿವೇಕಾನಂದರಾಗಿ ಆ ಮಾತುಗಳ ಮೂರ್ತರೂಪವೇ ಆದದ್ದು ಇತಿಹಾಸ.

ಇನ್ನು ವಿಶ್ವನಾಥದತ್ತ ತನ್ನ ಮಗನ ವ್ಯಕ್ತಿತ್ವವನ್ನು ರೂಪಿಸಿದ ರೀತಿ ಜಗತ್ತಿನ ಪ್ರತಿಯೊಬ್ಬ ತಂದೆಗೂ ಆದರ್ಶಪ್ರಾಯವೆಂದೇ ಹೇಳಬೇಕು. ತನ್ನ ಮಕ್ಕಳಿಗಾಗಿ ಹಣವನ್ನು ಕೂಡಿಡುವುದರಲ್ಲಿ ನಂಬಿಕೆ ಇಟ್ಟವನಲ್ಲ ಆತ. ಮಕ್ಕಳನ್ನು ಗುಣವಂತರನ್ನಾಗಿ ಮಾಡಬೇಕೇ ಹೊರತು ಧನವಂತರನ್ನಾಗಿ ಅಲ್ಲ ಎಂದು ನಂಬಿದವ. ಜೊತೆಗೆ, ಯಾವುದಕ್ಕೂ ಆಶ್ಚರ್ಯಪಡದಿರುವುದೇ ಉತ್ತಮ ನಡವಳಿಕೆಯ ಲಕ್ಷಣ ಎಂದು ತಂದೆ ಕಲಿಸಿದ ಮಹತ್ತರವಾದ ಪಾಠವು ಸ್ವಾಮಿ ವಿವೇಕಾನಂದರಿಗೆ ಜೀವನದುದ್ದಕ್ಕೂ ಅನುಭವ ವೇದ್ಯವಾದ ಸಂದರ್ಭಗಳು ಅಸಂಖ್ಯ.

ಬಡತನವೆಂಬುದು ಮಾನವನನ್ನು ಕ್ರೂರಿಯಾಗಿಸಿದರೆ ಸಿರಿತನವು ಆತನನ್ನು ಧೂರ್ತನನ್ನಾಗಿಸುತ್ತದೆ ಎನ್ನುವ ಮಾತಿದೆ. ಸುತ್ತಮುತ್ತಲ ವಾತಾವರಣ ನೋಡಿದರೆ ಇದು ನಿಜ ಎಂಬಂತೆ ಕಂಡರೂ, ಗಮನಿಸಿ ನೋಡಿದರೆ, ಈ ಎರಡೂ ರೀತಿಯ ಅತಿರೇಕಗಳು ಚಾರಿತ್ರ್ಯೕನತೆಯ ದುಷ್ಪಲಗಳು ಎಂಬುದು ವೇದ್ಯವಾಗುತ್ತದೆ. ಆದರೆ ಇದೇ ಸಿರಿತನ ಬಡತನಗಳು ಸಚ್ಚಾರಿತ್ರ್ಯಂತನ ವಿಷಯದಲ್ಲಿ ಅವನ ವ್ಯಕ್ತಿತ್ವವನ್ನು ಪುಟಕ್ಕಿಟ್ಟು ಅಪರಂಜಿಯನ್ನಾಗಿಸುವ ಕುಲುಮೆಗಳು. ಮಹಾನ್ ದಾರ್ಶನಿಕ ಕನ್​ಫ್ಯೂಷಿಯಸ್ ಹೇಳುತ್ತಾನೆ- ‘ಯಾವ ವ್ಯಕ್ತಿ ನಿಜವಾದ ಮನುಷ್ಯನಲ್ಲವೋ, ಅರ್ಥಾತ್ ಸಚ್ಚಾರಿತ್ರ್ಯಂತನಲ್ಲವೋ ಆತ ದೀರ್ಘಕಾಲ ಬಡತನವನ್ನು ಸಹಿಸಲಾರ, ಸಿರಿವಂತಿಕೆಯನ್ನೂ ಸಹಿಸಲಾರ.’

ಹುಟ್ಟಿನಿಂದಲೇ ಅರಮನೆಯಂತಹ ಮನೆಯಲ್ಲಿ ಶ್ರೀಮಂತಿಕೆಯ ವೈಭವವನ್ನಷ್ಟೇ ಕಂಡಿದ್ದ ನರೇಂದ್ರ ಮತ್ತು ಅವನ ಕುಟುಂಬ ವಿಶ್ವನಾಥದತ್ತನ ಅಕಾಲಿಕ ಮರಣದ ತರುವಾಯ ಅಪಾರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಯಿತು. ಸಾವಿರಾರು ಜನರಿಗೆ ಅನ್ನದಾನ ಮಾಡಿದ್ದ ಮನೆತನ ಹೊತ್ತೊಪ್ಪತ್ತಿನಲ್ಲಿ ಹಿಡಿ ಅನ್ನಕ್ಕಾಗಿ ಪರಿತಪಿಸುವಂತಾಯಿತು. ಆಗ ನರೇಂದ್ರನು ಕೌಟುಂಬಿಕ ಹೊಣೆಗಾರಿಕೆಯನ್ನು ಹೊತ್ತು, ಕಷ್ಟಪಟ್ಟು, ಅದನ್ನು ನಿರ್ವಹಿಸುತ್ತಾ ಬಂದ. ಅನ್ಯಾಯದ ಮಾರ್ಗಗಳಿಂದ ಹಣ ಸಂಪಾದನೆ ಮಾಡಿದ್ದ ಹಲವಾರು ಮಿತ್ರರು ಆತನ ಆರ್ಥಿಕ ಮುಗ್ಗಟ್ಟನ್ನು ಕಂಡು ಮರುಗಿ ತಮ್ಮೊಂದಿಗೆ ಕೈ ಜೋಡಿಸಲು ಆಹ್ವಾನವಿತ್ತಾಗ ನರೇಂದ್ರ ಸ್ಪಷ್ಟವಾಗಿ ನಿರಾಕರಿಸಿದ. ನರೇಂದ್ರನ ನೈತಿಕತೆಯೆಂಬುದು ಮರಳಿನ ಮೇಲೆ ಕಟ್ಟಿದ ಕಟ್ಟಡವಲ್ಲ ಎಂಬುದನ್ನು ಆ ಸ್ನೇಹಿತರಿಗೆ ಮನದಟ್ಟಾಯಿತು.

ನರೇಂದ್ರನ ಮೇಲೆ ಕಣ್ಣಿಟ್ಟಿದ್ದ ಶ್ರೀಮಂತ ಮಹಿಳೆಯೊಬ್ಬಳು ಆರ್ಥಿಕ ಸಂಕಷ್ಟದಲ್ಲಿದ್ದ ಆತನಿಗೆ ಅನೈತಿಕ ಸಲಹೆಯನಿತ್ತು ಅದನ್ನು ಪೂರೈಸಿದರೆ ಆತನ ಸಂಕಷ್ಟಗಳನ್ನೆಲ್ಲ ಪರಿಹರಿಸುವುದಾಗಿ ಸೂಚಿಸಿದಾಗ ಆತ ಆಕೆಯ ಸಲಹೆಯನ್ನು ಕಟುವಾಗಿ ತುಚ್ಛೀಕರಿಸಿದ.

ಮನೆಯವರ ಕಣ್ಣುತಪ್ಪಿಸಿಯಾದರೂ ಕೈಗೆ ಸಿಕ್ಕಿದ್ದನ್ನು ದೀನ ದಲಿತರಿಗೆ ದಾನಮಾಡಿಬಿಡುತ್ತಿದ್ದ ನರೇಂದ್ರನಿಗೆ ಸಿರಿತನವು ಹೇಗೆ ಅಮಲೇರಿಸಲಿಲ್ಲವೋ ಬದುಕಿನಲ್ಲಿ ಎದುರಾದ ಕಷ್ಟಗಳು ಆತನನ್ನು ನೈತಿಕ ಶಿಖರದಿಂದ ಜಾರಿಸಲೂ ಸಾಧ್ಯವಾಗಲಿಲ್ಲ. ಇದು ನಿಜವಾದ ಸಚ್ಚರಿತನ ಲಕ್ಷಣ. ದಾರಿದ್ರ್ಯಲ್ಲೂ ಪ್ರಕಾಶಿಸುವ ದಿವ್ಯತೇಜಸ್ಸು ಚಾರಿತ್ರ್ಯ

ಮುಂದೆ ವಿವೇಕಾನಂದರೇ ಹೇಳುತ್ತಾರೆ- ‘ಕಷ್ಟಗಳ ಪರಂಪರೆಯಿಂದ ನಮ್ಮನ್ನು ದಾಟಿಸುವುದು ಹಣವಲ್ಲ, ಹೆಸರಲ್ಲ ಅಥವಾ ಪ್ರಸಿದ್ಧಯೂ ಅಲ್ಲ, ಅದು ಚಾರಿತ್ರ್ಯ’ ಮತ್ತೊಮ್ಮೆ ಸ್ವಾಮೀಜಿ ಹೇಳಿದ್ದುಂಟು- ‘ಅಮೇರಿಕಾ ದೇಶದಲ್ಲಿ ನನ್ನ ಮೊದಲ ಉಪನ್ಯಾಸದಲ್ಲಿ ಶೋತೃಗಳನ್ನು ಕುರಿತು ‘ಸೋದರ ಸೋದರಿಯರೇ…’ ಎಂದು ಸಂಬೋಧಿಸಿದೆ. ನೆರೆದಿದ್ದವರೆಲ್ಲಾ ಹಷೋದ್ಗಾರಗೈದರು. ಉತ್ಸಾಹ ಹಾಗೂ ಭಾವನೆಗಳು ಪುಟಿದೆದ್ದು ಅವರುಗಳನ್ನು ತುದಿಗಾಲ ಮೇಲೆ ನಿಲ್ಲಿಸಿತು. ಅವರ ಈ ನಡವಳಿಕೆಗೆ ಕಾರಣವೇನಿರಬಹುದು? ನನ್ನಲ್ಲಿರಬಹುದಾದ ಯಾವ ವಿಶೇಷ ಶಕ್ತಿಯು, ಅಪರೂಪವಾದ ಶಕ್ತಿಯು ಅವರುಗಳನ್ನು ಈ ರೀತಿಯಲ್ಲಿ ಪ್ರತಿಕ್ರಿಯಿಸಲು ಪ್ರೇರೇಪಿಸಿರಬಹುದು? ನನ್ನಲ್ಲಿರುವ ವಿಶೇಷ ಶಕ್ತಿಯ ಬಗ್ಗೆ ನೀವು ತಿಳಿಯಬಯಸಿದರೆ ಆಶ್ಚರ್ಯವಾಗಬಹುದು. ನಿಜ! ಇದುವರೆಗೂ ಯಾವುದೇ ಲೈಂಗಿಕ ಆಲೋಚನೆಯು ಮನಸ್ಸಿನಲ್ಲಿಯೂ ಸುಳಿಯಲು ಆಸ್ಪದ ನೀಡಲಿಲ್ಲ. ನನ್ನ ಮನಸ್ಸು, ಆಲೋಚನೆ ಮತ್ತು ಸಾಮರ್ಥ್ಯಗಳನ್ನು ಉನ್ನತ ಸ್ತರದಲ್ಲಿ ಸುಶಿಕ್ಷಿತಗೊಳಿಸಿದ್ದರಿಂದ ನನ್ನನ್ನು ಯಾವ ಪ್ರಲೋಭನೆಗಳೂ ನಿಯಂತ್ರಿಸಲಾರದವು.’ ‘ಪರಿಪೂರ್ಣ ಬ್ರಹ್ಮಚರ್ಯವು ವ್ಯಕ್ತಿಯಲ್ಲಿ ಅತ್ಯುತ್ತಮವಾದ ಬೌದ್ದಿಕ ಹಾಗೂ ಆಧ್ಯಾತ್ಮಿಕ ಸಾಮರ್ಥ್ಯಗಳನ್ನು ದೊರಕಿಸಿಕೊಡುತ್ತದೆ ಎನ್ನುತ್ತಾರೆ.

ನರೇಂದ್ರನ ಹಾಡುಗಾರಿಕೆ, ವಾದ್ಯನುಡಿಸುವಿಕೆ, ಅವುಗಳಿಗಷ್ಟೇ ಅಲ್ಲದೆ ಜಿತೇಂದ್ರಿಯನಾದ ಆತನ ಮನಸ್ಸು ಸದಾಕಾಲ ಭಗವಂತನೆಡೆಗೇ ಇರುವುದನ್ನು ರಾಮಕೃಷ್ಣರು ಗುರುತಿಸಿದ್ದರು. ‘ನರಕದ ಭೀತಿಗಾಗಿ ದೇವರನ್ನು ನಂಬುವ ಹೇಡಿಯಲ್ಲ ನಾನು’ ಎಂಬ ನರೇಂದ್ರನ ಮಾತು ಅವನು ನಿರ್ಭಯತೆಯ ಮೂರ್ತರೂಪದಂತಿದ್ದ ಎಂಬುದನ್ನು ತೋರಿಸುತ್ತದೆ. ನರೇಂದ್ರನನ್ನು ಕುರಿತು ಯಾರಾದರೂ ಟೀಕಿಸಿ ಮಾತನಾಡಿದರೆ, ರಾಮಕೃಷ್ಣರು ‘ಏನು ಮಾತನಾಡುತ್ತಿದ್ದೀಯೆ ನೀನು? ಶಿವನಿಂದೆ! ಶಿವನಿಂದೆ ಮಾಡುತ್ತಿದ್ದೀ!’ ಎಂದು ಗದರುತ್ತಿದ್ದುದು ನರೇಂದ್ರನ ಶುದ್ಧಚಾರಿತ್ರ್ಯ ಬಗ್ಗೆ ಅವರಿತ್ತ ಯೋಗ್ಯತಾಪತ್ರವಲ್ಲದೆ ಮತ್ತೇನು?

ಸ್ವಾಮಿ ವಿವೇಕಾನಂದರು ಹೇಳುತ್ತಾರೆ- ‘ಯಾವುದೇ ವ್ಯಕ್ತಿಯ ಚಾರಿತ್ರ್ಯು ಆತನ ಒಲವು, ಸ್ವಭಾವಗಳ ಸಮಷ್ಟಿಯಲ್ಲದೆ ಬೇರೆ ಅಲ್ಲ. ನಮ್ಮ ಆಲೋಚನೆಗಳೇ ನಮ್ಮನ್ನು ಈ ರೀತಿಯಾಗಿ ರೂಪಿಸಿವೆ. ಭಾವನೆಗಳು ಬದುಕುತ್ತವೆ! ಅವು ದೂರ ಸಾಗುತ್ತವೆ. ಈ ಕಾರಣದಿಂದ ನೀವು ಏನನ್ನು ಆಲೋಚಿಸುವಿರಿ ಎಂಬುದರ ಬಗ್ಗೆ ಎಚ್ಚರವಾಗಿರಿ. ನಾವು ಮಾಡುವ ಪ್ರತಿಯೊಂದು ಕೆಲಸ, ಶರೀರದ ಪ್ರತಿಯೊಂದು ಚಲನೆ, ಭಾವಿಸುವ ಪ್ರತಿಯೊಂದು ಭಾವನೆ ಚಿತ್ತದಲ್ಲಿ ಮುದ್ರೆಯನ್ನೊತ್ತುತ್ತವೆ. ಮನಸ್ಸಿನ ಮೇಲಿನ ಈ ಸಂಸ್ಕಾರಗಳ ಒಟ್ಟು ಮೊತ್ತವೇ ಚಾರಿತ್ರ್ಯ ಪ್ರತಿಯೊಬ್ಬ ವ್ಯಕ್ತಿಯ ಚಾರಿತ್ರ್ಯ ಈ ಸಂಸ್ಕಾರಗಳ ಒಟ್ಟು ಮೊತ್ತದಿಂದ ನಿರ್ಧಾರವಾಗುತ್ತದೆ. ಉತ್ತಮ ಭಾವನೆಗಳು ಮೇಲುಗೈ ಸಾಧಿಸಿದರೆ ಚಾರಿತ್ರ್ಯು ಉತ್ತಮಗೊಳ್ಳುತ್ತದೆ. ಕೆಟ್ಟವಾದರೆ ಅದೂ ಕೆಟ್ಟದಾಗುತ್ತದೆ.’

‘ಜೀವನದ ಯಾವುದೇ ಗೂಢ ಸಮಸ್ಯೆಯ ಕೀಲಿಕೈ ಚಾರಿತ್ರ್ಯ ಅದು ಪ್ರತಿಯೊಂದು ದುಷ್ಟತನದ ಎಲ್ಲೆಯನ್ನು ಭೇದಿಸಬಲ್ಲದು. ಚಾರಿತ್ರ್ಯಂದ ಬಿಡಿಸಲಾಗದ ರಹಸ್ಯವಿಲ್ಲ, ವಾಸಿ ಮಾಡಲಾಗದ ಗಾಯವಿಲ್ಲ, ತುಂಬಲಾರದ ಕೊರತೆ ಹಾಗೂ ನಷ್ಟವಿಲ್ಲ. ಈ ಕಾರಣದಿಂದ ಜೀವನದ ಎಲ್ಲಾ ಕ್ರಿಯಾತ್ಮಕ ಪ್ರಯತ್ನಗಳಲ್ಲಿ ತನ್ನ ಸ್ವಂತ ಚಾರಿತ್ರ್ಯ ನಿರ್ವಿುಸುವ ವಿಧಾನವನ್ನು ತಿಳಿದುಕೊಳ್ಳುವುದು ಹಾಗೂ ತನ್ನ ಜೊತೆಯಲ್ಲಿರುವವರ ಚಾರಿತ್ರ್ಯ ನಿರ್ವಣಕ್ಕೆ ನೆರವಾಗುವುದು ಅತಿ ಮುಖ್ಯವಾಗಿ ಆಗಬೇಕಾದ ಕೆಲಸ’ ಎನ್ನುತ್ತಾರೆ, ಸ್ವಾಮಿ ಬುಧಾನಂದಜೀ.

ಶಿಕ್ಷಣವೇ ಸರ್ವ ಸಮಸ್ಯೆಗಳಿಗೆ ರಾಮಬಾಣ ಎಂದರಿತಿದ್ದ ಸ್ವಾಮಿ ವಿವೇಕಾನಂದರು, ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ವಣ, ವ್ಯಕ್ತಿತ್ವ ನಿರ್ವಣವೆಂದರೆ ಚಾರಿತ್ರ್ಯ ನಿರ್ಮಾಣ ಮತ್ತು ಚಾರಿತ್ರ್ಯ ನಿರ್ವಣದ ಮೂಲಕ ಮಾತ್ರವೇ ರಾಷ್ಟ್ರನಿರ್ವಣವನ್ನು ಸಾಧಿಸಬಹುದು ಎಂಬ ಹೇಳಿದರು. ಅವರ ಪ್ರಕಾರ ಶಿಕ್ಷಣವು ಚಾರಿತ್ರ್ಯಂತರನ್ನು ರೂಪಿಸಬೇಕು.

ಸ್ವಾಮಿ ವಿವೇಕಾನಂದರ ಸಂದೇಶಗಳಲ್ಲಿ ಆಛಿ ಚ್ಞಛ Mಚkಛಿ ಎಂಬುದು ಜನಜನಿತವಾದುದು. ಶುದ್ಧ ಚಾರಿತ್ರ್ಯ ಮೂರ್ತರೂಪವೇ ಅವರಾಗಿದ್ದರಲ್ಲದೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅವರು ಸೂಚಿಸಿದ ವಿಚಾರಗಳು ಸಾರ್ವಕಾಲಿಕವಾಗಿವೆ.

Leave a Reply

Your email address will not be published. Required fields are marked *

Back To Top