Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಶ್ರೀರಾಮಚಂದ್ರನ ವಿಶ್ವರೂಪದ ಸಂದೇಶ

Thursday, 14.06.2018, 3:04 AM       No Comments

|ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ

ಭೀಷ್ಮಾಚಾರ್ಯರು ಕೃಷ್ಣ, ಪರಶುರಾಮ ಹಾಗೂ ದತ್ತಾತ್ರೇಯ ರೂಪಗಳ ಮಹಿಮೆಯನ್ನು ವರ್ಣಿಸಿದ ಬಳಿಕ ಶಿಶುಪಾಲನಿಗೆ ನೇರವಾಗಿ ಅನ್ವಯವಾಗಬೇಕೆಂದು, ‘ಹಿಂದೆ ರಾವಣನಾಗಿ ಹುಟ್ಟಿದ್ದ ತನ್ನನ್ನು ಕೃಷ್ಣನೇ ರಾಮನಾಗಿ ಸಂಹರಿಸಿದ ಸ್ಮರಣೆ ಶಿಶುಪಾಲನಿಗೆ ಬರಲಿ’ ಎಂದು ರಾಮನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವರ್ಣಿಸಲು ಆರಂಭಿಸಿದರು.

ರಾಮರಾಜ್ಯದಲ್ಲಿ ಪ್ರಜೆಗಳೆಲ್ಲರೂ ಸಂತೃಪ್ತಿಯಿಂದ ಸುಖವಾಗಿ ಬಾಳುತ್ತಿದ್ದರು. ಪ್ರತಿಯೊಬ್ಬರ ಬಾಯಿಯಲ್ಲೂ ರಾಮನದೇ ಹೆಸರು! ಆಧ್ಯಾತ್ಮಿಕ ಹಾಗೂ ಭೌತಿಕ ಉನ್ನತಿಗಳ ನೇತಾರನಾಗಿ ಶ್ರೀರಾಮಚಂದ್ರ ರಾಜ್ಯವನ್ನು ಆಳುತ್ತಿದ್ದ. ದಂಡಕಾರಣ್ಯದಲ್ಲಿ ಹಾಗೂ ಲಂಕಾಪಟ್ಟಣದಲ್ಲಿ ಕೋಟಿಕೋಟಿ ಸಂಖ್ಯೆಯಲ್ಲಿದ್ದ ರಾಕ್ಷಸರನ್ನು ರಾಮಚಂದ್ರ ಒಬ್ಬನೇ ಹೇಗೆ ಕೊಂದನು? ಎಂಬ ಪ್ರಶ್ನೆಗೆ ನಮ್ಮ ಪ್ರಾಚೀನರು ನೀಡಿದ ಉತ್ತರ; ‘ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲೆಲ್ಲಿ ನೋಡಿದರು ಅಲ್ಲಿ ಶ್ರೀರಾಮ. ಅವನಿಗೆ ಇವ ರಾಮ ಇವನಿಗೆ ಅವ ರಾಮ…’

– ಹೀಗೆ ರಾಮಚಂದ್ರ ಅನಂತರೂಪಗಳನ್ನು ಧರಿಸಿ ಅಷ್ಟೂ ಮಂದಿ ರಾಕ್ಷಸರನ್ನು ತಾನೊಬ್ಬನೇ ಲೀಲಾಜಾಲವಾಗಿ ಸಂಹರಿಸಿದ.

ಅಂದು ರಾಕ್ಷಸರು ಕಾಡಿನಲ್ಲಿ ಮಾತ್ರ ಇದ್ದರೆ ಇಂದು ನಾಡಿನಲ್ಲಿಯೇ ಎಲ್ಲೆಡೆಯೂ ತುಂಬಿಹೋಗಿದ್ದಾರೆ. ಎಲ್ಲಿದ್ದಾರೆ? ಪ್ರತಿಯೊಬ್ಬರ ಹೃದಯದಲ್ಲಿಯೂ ಭ್ರಷ್ಟಾಚಾರ, ಹಿಂಸೆ, ದೌರ್ಜನ್ಯ, ವಂಚನೆ ಮುಂತಾದ ನಾನಾ ರೂಪಗಳಿಂದ ತುಂಬಿದ್ದಾರೆ. ಅಂದು ರಾಮ ವಿಶ್ವರೂಪ ಧರಿಸಿ ಹೊರಗಿದ್ದ ರಾಕ್ಷಸರನ್ನು ಸಂಹರಿಸಿದನು. ಆದರೆ ಇಂದು ಹೊರಗಲ್ಲ! ಎಲ್ಲರ ಹೃದಯದಲ್ಲಿಯೂ ರಾಮ ವಿಶ್ವರೂಪ ಧರಿಸಿ ನೆಲೆನಿಲ್ಲಬೇಕಾಗಿದೆ. ಆಗ ಮಾತ್ರ ನಮ್ಮ ರಾಕ್ಷಸೀಪ್ರವೃತ್ತಿ ನಾಶವಾಗಿ ಉತ್ತಮ ಸಮಾಜ ನಿರ್ವಣವಾಗಲು ಸಾಧ್ಯ. ಅದಕ್ಕಾಗಿ ನಾವೆಲ್ಲರೂ ಶ್ರೀರಾಮಚಂದ್ರನ ಬಳಿ, ‘ಅಂದು ವಿಶ್ವರೂಪ ಧರಿಸಿ ವಿಶ್ವದ ಪ್ರತಿಯೊಬ್ಬ ಪ್ರಜೆಯನ್ನೂ ರಾಕ್ಷಸರಿಂದ ರಕ್ಷಿಸಿದಂತೆ ಇಂದು ನಮ್ಮೆಲ್ಲರ ಹೃದಯದಲ್ಲಿಯೂ ವಿಶ್ವರೂಪ ಧರಿಸಿ ಅಂತರಂಗದ ರಾಕ್ಷಸೀಪ್ರವೃತ್ತಿಯಿಂದ ನಮ್ಮನ್ನು ಅನುಗ್ರಹಿಸು’ ಎಂದು ಪ್ರಾರ್ಥನೆ ಸಲ್ಲಿಸಬೇಕು.

ಅಂದು ರಾಮನಂತಹ ಒಬ್ಬ ರಾಜ ಇದ್ದುದರಿಂದಲೇ ದೇಶದಲ್ಲಿ ರಾಮರಾಜ್ಯ ನಿರ್ವಣವಾಯಿತು. ಇಂದು ರಾಮರಾಜ್ಯ ನಿರ್ವಣವಾಗಬೇಕಿದ್ದರೆ ಒಬ್ಬ ರಾಜನಿಂದ ಸಾಧ್ಯವಿಲ್ಲ. ಏಕೆಂದರೆ ಇದು ಪ್ರಜಾರಾಜ್ಯ. ಪ್ರತಿಯೊಬ್ಬ ಪ್ರಜೆಯೂ ರಾಮನಂತೆ ತನ್ನಲ್ಲಿ ಆದರ್ಶಗುಣಗಳನ್ನು ಅಳವಡಿಸಿಕೊಂಡರೆ ಮಾತ್ರ ರಾಮರಾಜ್ಯ ನಿರ್ವಣವಾಗಲು ಸಾಧ್ಯ. ‘ಯಥಾ ರಾಜಾ ತಥಾ ಪ್ರಜಾ’ ಎಂಬುದು ಹಳೆಯ ಮಾತಾಯಿತು. ಈಗ ‘ಯಥಾ ಪ್ರಜಾ ತಥಾ ರಾಜಾ’ – ಪ್ರಜೆಗಳಂತೆ ರಾಜರು, ರಾಜನಂತೆ ಪ್ರಜೆಗಳಲ್ಲ.

ರಾಮನ ಅನುಗ್ರಹವಿಲ್ಲದೆ ನಮ್ಮ ದೇಶ ರಾಮರಾಜ್ಯವಾಗಲು ಸಾಧ್ಯವಿಲ್ಲ. ರಾಮನ ಆದರ್ಶ ಗುಣಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳದ ತನಕ ರಾಮನ ಅನುಗ್ರಹವಾಗಲು ಸಾಧ್ಯವಿಲ್ಲ. ರಾವಣನನ್ನು ನಿಗ್ರಹಿಸಿದ ಶ್ರೀರಾಮಚಂದ್ರನೇ ಈಗ ಕೃಷ್ಣನಾಗಿ ಶಿಶುಪಾಲನನ್ನು ನಿಗ್ರಹಿಸಿ ಅವನಿಗೆ ಉತ್ತಮ ಸ್ಥಾನವಾದ ಮೋಕ್ಷವನ್ನು ನೀಡಬೇಕಿದೆ. ಅದಕ್ಕಾಗಿಯೇ ಭೀಷ್ಮಾಚಾರ್ಯರು ಕೃಷ್ಣನೇ ರಾಮಚಂದ್ರನಾಗಿ ರಾವಣನಾಗಿದ್ದ ಶಿಶುಪಾಲನನ್ನು ಸಂಹರಿಸಿದ ಮಹಿಮೆಯನ್ನು ವರ್ಣಿಸಿದರು. ಭೀಷ್ಮಾಚಾರ್ಯರು ಕೃಷ್ಣನ ಅನೇಕ ಅವತಾರಗಳ ಅದ್ಭುತ ಮಹಿಮೆಯನ್ನು ವರ್ಣಿಸಿದ ಬಳಿಕ ಧರ್ಮರಾಜನು ಕೃಷ್ಣನ ಮಹಿಮೆಯನ್ನು ಮತ್ತಷ್ಟು ವರ್ಣಿಸುವಂತೆ ಪ್ರಾರ್ಥಿಸಿದನು.

ಭಾಗವತ ಹಾಗೂ ಹರಿವಂಶಾದಿಗಳಲ್ಲಿ ಕೃಷ್ಣನ ಮಹಿಮೆಯು ವಿಸ್ತ ೃವಾಗಿ ವರ್ಣಿಸಲ್ಪಟ್ಟಿದ್ದರೂ ಭೀಷ್ಮಾಚಾರ್ಯರು ಈ ಸಂದರ್ಭದಲ್ಲಿ ಕೃಷ್ಣನ ಕೆಲವು ಅಪೂರ್ವ ಮಹಿಮೆಗಳನ್ನು ವರ್ಣಿಸಲು ತೊಡಗಿದರು.

 

Leave a Reply

Your email address will not be published. Required fields are marked *

Back To Top