More

    ಮೋದಿ ಅವಧಿಯಲ್ಲೇ ಕಾಶಿಯಲ್ಲೂ ಮೂಲಮಂದಿರ?

    ಏನೇ ಹೇಳಿ, ನರೇಂದ್ರ ಮೋದಿ ವಾರಾಣಸಿಯ ಸಂಸದರಾಗಿದ್ದು ಸಾರ್ಥಕವಾಯ್ತು. ಇತಿಹಾಸ ಇವರನ್ನು ಈ ದೇಶದ ಹಿಂದುತ್ವದ ಸಂರಕ್ಷಕ ಎಂದು ಖಂಡಿತವಾಗಿಯೂ ಸುದೀರ್ಕಾಲ ಸ್ಮರಿಸಿಕೊಳ್ಳುತ್ತದೆ. ಇವಿಷ್ಟನ್ನೂ ಈಗೇಕೆ ಹೇಳಬೇಕಾಯ್ತೆಂದರೆ ಕಾಶಿಯಲ್ಲಿ ನಿಧಾನವಾಗಿ ಜ್ಞಾನವಾಪಿ ಮಸೀದಿಯನ್ನು ಮರಳಿ ಪಡೆದುಕೊಳ್ಳುವ ಪ್ರಯತ್ನ ಆರಂಭವಾಗಿಬಿಟ್ಟಿದೆ. ನಿಮಗೆ ಗೊತ್ತಿರುವಂತೆ ಕಾಶಿ ವಿಶ್ವನಾಥನ ಮೂಲಮಂದಿರ ಈ ಮಸೀದಿಯ ಸ್ಥಳದಲ್ಲೇ ಇದ್ದದ್ದು. 1669ರಲ್ಲಿ ಔರಂಗಜೇಬ ಇದನ್ನು ಕೆಡವಿ ಅಲ್ಲಿ ಮಸೀದಿಯನ್ನು ಕಟ್ಟಿಸಿ “ಜ್ಞಾನವಾಪಿ ಮಸೀದಿ’ ಎಂದೇ ಕರೆಯುವ ಧಾಷ್ಯ $್ಟರ್ವನ್ನೂ ತೋರಿದ. ಬಾಬರ್​ನ ಸೇನಾಪತಿ ಮೀರ್​ ಬಾಕಿ ರಾಮಮಂದಿರವನ್ನು ಕೆಡವಿದ ನಂತರ ಅಲ್ಲಿ ಕಟ್ಟಿದ ಮಸೀದಿಗೆ “ಜನ್ಮಸ್ಥಾನ್​ ಮಸೀದಿ’ ಎಂದು ಹೆಸರಿಟ್ಟ, ಈತ “ಜ್ಞಾನವಾಪಿ ಮಸೀದಿ’ ಎಂದ. ನಿಮ್ಮ ಮಂದಿರವನ್ನು ಕೆಡವಿ, ನಿಮ್ಮ ದೇವರುಗಳನ್ನು ನಿಸ್ಸಹಾಯಕಗೊಳಿಸಿ ಈ ಕಟ್ಟಡಗಳನ್ನು ಕಟ್ಟಲಾಗಿದೆ ಎಂದು ಸದಾ ನೆನಪಿಸುವ ಪ್ರಯತ್ನ ಅದು!

    ಮೋದಿ ಅವಧಿಯಲ್ಲೇ ಕಾಶಿಯಲ್ಲೂ ಮೂಲಮಂದಿರ?ಹಿಂದೂಗಳಲ್ಲಿ ಯಾವ ಮತ&ಪಂಥದವರೇ ಇರಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಹೋಗಲು ಬಯಸುವ ತಾಣ ಕಾಶಿ. ಅಲ್ಲಿಗೆ ಹೋಗಲಿಲ್ಲವೆಂದು ಬೇಸರಿಸಿಕೊಳ್ಳುವವರಿಗೆಂದೇ ದೇಶದ ಅಸಂಖ್ಯ ಸ್ಥಳಗಳಲ್ಲಿ ಕಾಶಿ ವಿಶ್ವೇಶ್ವರ ದೇವಾಲಯಗಳಿವೆ. ಊರಿನ ಯಾರೋ ಹಿರಿಯರು ಕಾಶಿಯಿಂದ ಲಿಂಗವನ್ನು ತಂದು ಪ್ರತಿಷ್ಠಾಪಿಸಿ ವಿಶ್ವನಾಥನ ದರ್ಶನ ಇಲ್ಲಿಯೇ ಮಾಡಿರೆಂದು ಹೇಳಿದ ನೆನಪಿಗಾಗಿ ಅದು. ಕಾಶಿಯ ವಿಶ್ವನಾಥನ ದರ್ಶನ ಪುಣ್ಯದ ಒಂದಂಶವಾದರೆ ಕಾಶಿಯಲ್ಲಿ ಪ್ರಾಣತ್ಯಾಗ ಮಾಡುವುದಕ್ಕೂ ಅಷ್ಟೇ ಬೆಲೆಯಿದೆ. ಇದು 12 ಜ್ಯೋರ್ತಿಲಿಂಗಗಳಲ್ಲಿ ಒಂದಾಗಿದ್ದು, ಅಧ್ಯಾತ್ಮ ಸಾಧನೆಯನ್ನು ಬಯಸಿ ಬರುವ ಪ್ರತಿಯೊಬ್ಬರೂ ಒಂದಿಲ್ಲ ಒಂದು ಸಂದರ್ಭದಲ್ಲಿ ಕಾಶಿಗೆ ಭೇಟಿ ನೀಡಿಯೇ ನೀಡುತ್ತಾರೆ. ಹಿಂದೂಗಳ ಜೀವನದ ಅವಿಭಾಜ್ಯ ಅಂಗವಾಗಿರುವ ಕಾಶಿಯ ಮೇಲೆ ಸಾಮಾನ್ಯ ಶಕವರ್ಷ 1194ರಲ್ಲಿ ಮೊಹಮ್ಮದ್​ ೂರಿಯ ಸೇನಾನಾಯಕ ಕುತುಬ್​&ಉದ್​&ದೀನ್​ ಐಬಕ್​ ಮೊದಲ ಬಾರಿಗೆ ದಾಳಿ ಮಾಡಿದ ಎಂದು ಇತಿಹಾಸ ಹೇಳುತ್ತದೆ. ಆಕ್ರಮಣಕಾರಿಗಳದ್ದು ಹೋದೆಡೆಯಲ್ಲೆಲ್ಲ ಇದೇ ಪದ್ಧತಿ. ಜನರನ್ನು ಬಲಾತ್ಕಾರದಿಂದ ಮತಾಂತರಿಸುವುದು, ಅವರ ಪೂಜಾಸ್ಥಾನಗಳನ್ನು ಧ್ವಂಸಗೊಳಿಸಿ ಇಸ್ಲಾಂ ಪ್ರದೇಶವನ್ನಾಗಿ ನಿರ್ಮಾಣ ಮಾಡಿ, ಸಂತಸದಿಂದ ಬೀಗುವುದು. ನಮ್ಮ ಇತಿಹಾಸಕಾರರಲ್ಲಿ ಕೆಲವರು ಇದಕ್ಕೂ ಇಸ್ಲಾಂಗೂ ಸಂಬಂಧವೇ ಇಲ್ಲವೆಂತಲೂ ಮಂದಿರಗಳಲ್ಲಿರುವ ಸಂಪತ್ತನ್ನು ಲೂಟಿ ಮಾಡಲು ಮಂದಿರ ಧ್ವಂಸಗೊಳಿಸಲಾಗುತ್ತಿತ್ತೆಂತಲೂ ತೇಪೆ ಹಚ್ಚಲು ಪ್ರಯತ್ನಿಸುತ್ತಾರೆ. ಹಾಗಿದ್ದಮೇಲೆ ಮಂದಿರವನ್ನು ಲೂಟಿ ಮಾಡಿ ಅದನ್ನು ಉರುಳಿಸಬೇಕಾದ ಅಗತ್ಯ ಬರುತ್ತಿರಲಿಲ್ಲ. ಅಲ್ಲಿರುವ ಮೂರ್ತಿಯನ್ನು ಧ್ವಂಸಗೊಳಿಸಿ ಅವಶೇಷಗಳನ್ನು ತುಳಿದು ಸಂಭ್ರಮಿಸುವ ವಿಕೃತ ಮನಸ್ಥಿತಿಯೂ ಬೇಕಿರಲಿಲ್ಲ. ಕೊನೆಗೆ ಇಲ್ಲಿದ್ದದ್ದು ಮೂಲತಃ ಮಂದಿರವೆಂದು ಗೊತ್ತಾದಾಗಲೂ ಅದನ್ನು ಮರಳಿ ಹಿಂದೂಗಳಿಗೆ ಕೊಡುವುದಿಲ್ಲ ಎಂದು ಇಂದಿನವರು ಹಠ ಮಾಡುವ ಅಗತ್ಯವೂ ಇರಲಿಲ್ಲ.

    ಕಾಶಿ ಅದೆಷ್ಟು ಪವಿತ್ರವಾಗಿತ್ತೆಂದರೆ ಕುತುಬ್​&ಉದ್​&ದೀನ್​ ಐಬಕ್​ ಇದನ್ನು ಉರುಳಿಸಿದ ಕೆಲವೇ ವರ್ಷಗಳಲ್ಲಿ ವ್ಯಾಪಾರಿಯೊಬ್ಬ ಇದನ್ನು ಮರು ನಿರ್ಮಿಸಿದನಂತೆ. ಅದಾದ 200 ವರ್ಷಗಳ ಕಾಲ ಅಬಾಧಿತವಾಗಿ ಜನರಿಗೆ ಆಧ್ಯಾತ್ಮಿಕ ಅನುಭೂತಿ ನೀಡುತ್ತಿದ್ದ ವಿಶ್ವನಾಥ ಮತ್ತೆ 15ನೇ ಶತಮಾನದಲ್ಲಿ ಇಬ್ರಾಹಿಂ ಲೋಧಿಯ ಆಕ್ರಮಣಕ್ಕೆ ತುತ್ತಾದ. ಮಂದಿರ ಮತ್ತೆ ಕೆಡವಲಾಯ್ತು. ಅನೇಕ ದಶಕಗಳ ನಂತರ ರಾಜಾ ಮಾನ್​ಸಿಂಗರು ಇದನ್ನು ಮರುನಿರ್ಮಾಣ ಮಾಡಿದರು. ಮತ್ತೆ ಜನರು ಶ್ರದ್ಧೆಯಿಂದಲೂ, ಭಕ್ತಿಯಿಂದಲೂ ಮಂದಿರಕ್ಕೆ ಭೇಟಿಕೊಡುತ್ತ ಹಿಂದೂಧರ್ಮದ ಮೂಲಸತ್ವ $್ತವನ್ನು ಭದ್ರಗೊಳಿಸುತ್ತ ನಡೆದರು. ಇಡಿಯ ಭಾರತವನ್ನು ತನ್ನ ಅವಧಿಯಲ್ಲಿ ಪೂರ್ಣ ಇಸ್ಲಾಮೀಕರಣಗೊಳಿಸಬೇಕೆಂಬ ತುಡಿತದಿಂದ ಕಾರ್ಯನಿರ್ವಹಿಸುತ್ತಿದ್ದ ಮತಾಂಧ ಔರಂಗಜೇಬ ಇದನ್ನು ಕೆಡವಿದ್ದು ಆಗಲೇ. ಅಲ್ಲಿಯೇ ಮಸೀದಿಯನ್ನು ನಿರ್ಮಿಸಿದ. ಅದೇ ವಿಶ್ವನಾಥ ಮಂದಿರದ ಅವಶೇಷಗಳನ್ನು ಬಳಸಿ ಕಟ್ಟಿದ ಈ ಮಸೀದಿ ಮುಸಲ್ಮಾನರ ಪಾಲಿಗೆ ಪವಿತ್ರ ಮಸೀದಿ ಏನೂ ಆಗಿರಲಿಲ್ಲ. ಕಾಫಿರರು ಪೂಜೆ ಸಲ್ಲಿಸುತ್ತಿದ್ದ ಕಟ್ಟಡಗಳ ಅವಶೇಷಗಳಿಂದ ಕಟ್ಟಿದ ಮಸೀದಿ ಪವಿತ್ರವಾಗುವುದು ಹೇಗೆ ಸಾಧ್ಯ ಹೇಳಿ? ಕುರಾನ್​ ಕೂಡ ಅದನ್ನು ಒಪ್ಪುವುದಿಲ್ಲ. ಆದರೂ ಹಿಂದೂಗಳಿಗೆ ಅವಮಾನ ಮಾಡಲು ಅವರಿಗೆ ಅದು ಬೇಕಾಗಿತ್ತು. ಮುಂದೆ ಅಹಲ್ಯಾಬಾಯಿ ಹೋಳ್ಕರ್​ ಒಂದು ಶತಮಾನದ ನಂತರ ತಂಟೆಯೇ ಬೇಡವೆಂದು ಮಸೀದಿಯ ಪಕ್ಕದಲ್ಲಿ ಸುಂದರವಾದ ಮಂದಿರವೊಂದನ್ನು ಕಟ್ಟಿ ಅದನ್ನು ರಾಷ್ಟ್ರಕ್ಕೆ ಸಮರ್ಪಿಸಿದಳು. ಆ ತಾಯಿಯನ್ನು ಎಷ್ಟು ಸ್ಮರಿಸಿಕೊಂಡರೂ ಕಡಿಮೆಯೇ. ಮುಸಲ್ಮಾನರ ಆಕ್ರಮಣಕ್ಕೆ ತುತ್ತಾಗಿದ್ದ ಅನೇಕ ಮಂದಿರಗಳನ್ನು ಪುನರ್​ ನಿರ್ಮಿಸಿ ಆಕೆ ರಾಷ್ಟ್ರಕ್ಕೆ ಸಮರ್ಪಿಸಿದಳು.

    ನರೇಂದ್ರ ಮೋದಿ ತಾವು ಸಂಸದರಾದ ಮೇಲೆ ಶತಾಯ&ಗತಾಯ ಶ್ರಮಿಸಿ ತಮ್ಮದೇ ಸರ್ಕಾರವನ್ನು ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ತಂದರು. ಯೋಗಿ ಆದಿತ್ಯನಾಥರಂತಹ ಖಡಕ್ಕು ಮನುಷ್ಯನ ಕೈಯ್ಯಲ್ಲಿ ರಾಜ್ಯವನ್ನು ಸಂಭಾಳಿಸಲು ಕೊಟ್ಟರು. ಕಾಶಿಯ ಸ್ವರೂಪ ಬದಲಾಯಿಸುವುದು ಅವರ ಮುಂದಿರುವ ಸವಾಲಾಗಿತ್ತು. ಯೋಗಿ ಆದಿತ್ಯನಾಥರು 2017ರಲ್ಲಿಯೇ ಇದಕ್ಕೆ ಬೇಕಾದ ಚಟುವಟಿಕೆ ಆರಂಭಿಸಿಬಿಟ್ಟರು. ಅಹಲ್ಯಾಬಾಯಿ ಹೋಳ್ಕರ್​ ಕಟ್ಟಿಸಿದ ಮಂದಿರವು ಮಸೀದಿಯ ಎದುರಿಗೆ ಕುಬ್ಜವಾಗಿ ಕಾಣುತ್ತಿತ್ತಲ್ಲದೆ ಸುತ್ತಲೂ ಮನೆಗಳ ರಾಶಿಯಿಂದಾಗಿ ಮಂದಿರವನ್ನು ಹುಡುಕಬೇಕಾದ ಸ್ಥಿತಿಯಿತ್ತು. ಯೋಗಿ ಈ ಮನೆಗಳನ್ನು ಊಹಿಸಲಾಗದ ಬೆಲೆಕೊಟ್ಟು ಸರ್ಕಾರದ ಮೂಲಕ ಕೊಂಡುಕೊಂಡರು. ಮೂಲ ಮಂದಿರದ ಸುತ್ತಮುತ್ತಲೂ ಇದ್ದ ಕೆಲವು ಮಂದಿರಗಳನ್ನು ತೆಗೆದು ವಿಶ್ವನಾಥ ಮಂದಿರಕ್ಕೆ ಉಸಿರಾಡಲು ಬೇಕಾದಷ್ಟು ಜಾಗವನ್ನು ಕೊಡಿಸಿದರು. 2019ರಲ್ಲಿ ಈ ವಿಶ್ವಾಸದ ಆಧಾರದ ಮೇಲೆಯೇ ಮೋದಿ ಕಾಶಿ ಕಾರಿಡಾರ್​ನ ೂಷಣೆ ಮಾಡಿದ್ದು. ಇತ್ತೀಚೆಗೆ ಈ ಕಾರಿಡಾರ್​ ನಿರ್ಮಾಣವಾಗಿ ಸಮಾಜಕ್ಕೆ ಸಮರ್ಪಣೆಯಾದಾಗ ದೇಶದ ಮತ್ತು ಜಗತ್ತಿನ ಮೂಲೆ&ಮೂಲೆಯಲ್ಲಿರುವ ಹಿಂದೂಗಳ ಆನಂದಕ್ಕೆ ಮಿತಿಯೇ ಇರಲಿಲ್ಲ. ಈಗ ಮಸೀದಿ ವಿಶ್ವನಾಥ ಮಂದಿರಕ್ಕೆ ಹೊಂದಿಕೊಂಡಂತೆ ಕಾಣುತ್ತಿತ್ತು. ಜೊತೆಗೆ ಮೂಲ ಮಂದಿರದ ಭಾಗವಾಗಿದ್ದ ನಂದಿ ಇಷ್ಟು ದಿನ ಮಸೀದಿಯ ಭಾಗವಾಗಿದ್ದು ಕಾರಿಡಾರ್​ನ ಕಾರಣದಿಂದಾಗಿ ಮಂದಿರದ ಭಾಗವಾಯ್ತು. ಪ್ರತಿ ಯಾತ್ರಿಕನೂ ವಿಶ್ವನಾಥನ ದರ್ಶನದ ನಂತರ ಈಗ ನಂದಿಯ ದರ್ಶನ ಪಡೆದೇ ಬರುತ್ತಾನೆ. ಆ ನಂದಿ ಅಹಲ್ಯಾಬಾಯಿ ಹೋಳ್ಕರ್​ ಕಟ್ಟಿಸಿದ ಮಂದಿರದೆಡೆಗೆ ತಿರುಗಿರದೇ ಜ್ಞಾನವಾಪಿ ಮಸೀದಿಯೆಡೆಗೆ ಮುಖಮಾಡಿ ನಿಂತಿರುವುದು ಆಕ್ರಮಣದ ಅಷ್ಟೂ ಕಥೆಯನ್ನು ವಿವರಿಸುತ್ತದೆ. ಶತಾಯ&ಗತಾಯ ವಿಶ್ವನಾಥ ಮಂದಿರವನ್ನು ಮರಳಿ ಪಡೆಯಬೇಕೆನ್ನುವ ಇಚ್ಛೆಯನ್ನು ಪ್ರತಿಯೊಬ್ಬ ಭಕ್ತನಲ್ಲಿಯೂ ಜಾಗೃತಗೊಳಿಸುತ್ತದೆ.

    ರಾಮಮಂದಿರವನ್ನು ಮರಳಿ ಪಡೆದಮೇಲೆ ಹಿಂದೂಗಳಲ್ಲಿ ಈ ಮಂದಿರವನ್ನೂ ಮರಳಿ ಪಡೆಯುವ ಆಸಕ್ತಿ ತೀವ್ರವಾಯ್ತು. 1991ರಲ್ಲಿ ಪಂಡಿತ್​ ಸೋಮನಾಥ್​ ವ್ಯಾಸ್​ ಈ ಕುರಿತಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. 1991ರಲ್ಲಿ ಕಾಂಗ್ರೆಸ್ಸು ಈ ಎಲ್ಲ ಗಲಾಟೆಗಳನ್ನು ನಿಯಂತ್ರಿಸಲೆಂದೇ “ಪ್ಲೇಸಸ್​ ಆ್​ ವರ್ಶಿಪ್​ ಆ್ಯಕ್ಟ್​’ ಜಾರಿಗೆ ತಂದು ಎಲ್ಲ ಪೂಜಾಸ್ಥಳಗಳೂ 1947 ಆಗಸ್ಟ್​ 15ಕ್ಕೆ ಹೇಗಿದ್ದವೋ ಹಾಗೆಯೇ ಇರಬೇಕು. ಅದನ್ನು ಬದಲಾಯಿಸುವಂತಿಲ್ಲ ಎಂದುಬಿಟ್ಟಿತು. ಇದು ಕಾಶಿ ಮತ್ತು ಮಥುರಾವನ್ನು ಮುಸಲ್ಮಾನರಿಗೇ ಉಳಿಸಿಕೊಡುವ ಸ್ಪಷ್ಟ ಪಿತೂರಿಯಾಗಿತ್ತು. ಇದರ ಆಧಾರದ ಮೇಲೆಯೇ ಅಲಹಾಬಾದ್​ ಹೈಕೋರ್ಟ್​ ಈ ಬಗೆಯ ಎಲ್ಲ ಪಿಟೀಶನ್ನುಗಳನ್ನು ಮೂಲೆಗುಂಪು ಮಾಡಿತು. ರಾಮಮಂದಿರ ರ್ನಿಣಯದ ನಂತರ ವಕೀಲ ರಸ್ತೋಗಿ ಮತ್ತೆ ವಿಚಾರಣೆಗೆ ಎತ್ತಿಕೊಳ್ಳುವಂತೆ ಮನವಿ ಮಾಡಿದರು. ಜ್ಞಾನವಾಪಿ ಮಸೀದಿ ಕಾನೂನುಬಾಹಿರವಾಗಿರುವುದರಿಂದ ಅದನ್ನು ಮರಳಿ ಹಿಂದೂಗಳಿಗೆ ಬಿಟ್ಟುಕೊಡಬೇಕೆಂಬುದು ಅವರ ವಾದ. ಕಾಶಿಯ ನ್ಯಾಯಾಲಯ ಈ ವಾದವನ್ನು ಪುರಸ್ಕರಿಸಿ ಪುರಾತತ್ತ$$$್ವ ಇಲಾಖೆಗೆ ಉತ್ಖನನ ನಡೆಸಿ ವರದಿ ಕೊಡುವಂತೆ ಕೇಳಿಕೊಂಡಿತು. ಮಸೀದಿ ಕಮಿಟಿ ಮತ್ತು ಸುನ್ನಿ ವಕ್ಫ್​ ಬೋರ್ಡ್​ ಇದರ ವಿರುದ್ಧ ಹೈಕೋರ್ಟ್​ಗೆ ಹೋಗಿ ಕಾಂಗ್ರೆಸ್ಸು ತಂದ 1991ರ ಕಾನೂನನ್ನೇ ಮುಂದಿಟ್ಟುಕೊಂಡು ತಡೆಯಾೆ ಪಡೆದವು. ಸರಿಸುಮಾರು ಇದೇ ಹೊತ್ತಿನಲ್ಲಿ ದೆಹಲಿ ಮೂಲದ ರಾಖಿ ಸಿಂಗ್​ ನೇತೃತ್ವದಲ್ಲಿ ಐದು ಜನರು ವಾರಾಣಸಿ ನ್ಯಾಯಾಲಯಕ್ಕೆ ಮನವಿ ಕೊಟ್ಟಿದ್ದರು. ಜ್ಞಾನವಾಪಿ ಮಸೀದಿಯ ಹೊರಗೋಡೆಯಲ್ಲಿರುವ ಶೃಂಗಾರಗೌರಿ, ಗಣೇಶ, ಹನುಮಂತ ಮತ್ತು ನಂದಿಯ ಪೂಜೆಗೆ ಅವಕಾಶ ಕೊಡಬೇಕೆಂದು ಮತ್ತು ವಿರೋಧಿ ಗುಂಪು ಈ ವಿಚಾರಣೆಯ ಅವಧಿಯಲ್ಲಿ ಈ ಮೂರ್ತಿಗಳನ್ನು ಹಾಳುಮಾಡದಂತೆ ನೋಡಿಕೊಳ್ಳಬೇಕೆಂದೂ ಕೇಳಿಕೊಂಡರು. ಈ ಕುರಿತಂತೆ ಸಾಕಷ್ಟು ಚರ್ಚೆಗಳು ನಡೆದವು. ಮೊನ್ನೆ ಏಪ್ರಿಲ್​ 26ಕ್ಕೆ ಅಲ್ಲಿನ ನ್ಯಾಯಾಧೀಶರಾದ ರವಿಕುಮಾರ್​ ದಿವಾಕರ್​ ಈ ಮಸೀದಿ ಆವರಣದಲ್ಲಿರುವ ಶೃಂಗಾರಗೌರಿಯೇ ಮೊದಲಾದ ಮಂದಿರಗಳ ವಿಡಿಯೋ ಚಿತ್ರೀಕರಣ ಮಾಡಬೇಕೆಂದು ಆದೇಶ ನೀಡಿದರು. ಆದೇಶ ನೀಡುವಾಗ ಮುಸಲ್ಮಾನರ ಈದ್​ ಅನ್ನು ತೊಂದರೆಗೊಳಪಡಿಸದಂತೆ, ಅದು ಮುಗಿದ ನಂತರ ಮೇ 10ರೊಳಗೆ ವಿಚಾರಣೆಗೆ ವಿಡಿಯೋದೊಂದಿಗೆ ಹಾಜರಾಗಬೇಕೆಂದು ಹೇಳಿದರು. ಈ ಹಿನ್ನೆಲೆಯಲ್ಲಿಯೇ ಮಸೀದಿಯ ನಿರ್ವಹಣಾ ಸಮಿತಿ ರಂಪಾಟ ಆರಂಭಿಸಿಬಿಟ್ಟಿತು. ಎಸ್​.ಎಮ್​ ಯಾಸಿನ್​, “ನಾವು ಮಸೀದಿಯೊಳಗೆ ಯಾರನ್ನೂ ಬಿಡುವುದಿಲ್ಲ. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಉಂಟಾಗಬಹುದಾದ ಪರಿಣಾಮವನ್ನೆದುರಿಸಲು ಸಜ್ಜಾಗಿರುತ್ತೇವೆ’ ಎಂದುಬಿಟ್ಟ. ಇದು ಸ್ಥಳಿಯ ಮುಸಲ್ಮಾನರನ್ನು ಪ್ರಚೋದಿಸುವ ಯತ್ನ. ಆಗ ಇತರ ಮುಸಲ್ಮಾನರ ಕೂಗು ಆರಂಭವಾಯ್ತು. ವಾಸ್ತವವಾಗಿ ಈ ಜಾಗವೂ ಮುಸಲ್ಮಾನರದ್ದಲ್ಲ, ಕಟ್ಟಡವೂ ಅವರದ್ದಲ್ಲ. ಬೇರೆಯವರ ಕಟ್ಟಡವನ್ನು ಬಲವಂತದಿಂದ ಕಸಿದು, ನುಗ್ಗಿ ನಿಜವಾದ ಮಾಲೀಕನಿಗೆ ಒಳ ಬಿಡಲಾರೆವು ಎಂಬ ಧಾಷ್ಟ$್ಯರ್ವಿದೆಯಲ್ಲ ಇದು ಅವರಿಗೆ ಸಹಜಸಿದ್ಧವಾದದ್ದು. ಆದರೆ ಅಲ್ಲಿರುವುದು ಬೊಮ್ಮಾಯಿಯ ಸರ್ಕಾರವಲ್ಲ, ಯೋಗಿಯ ಸರ್ಕಾರ ಎಂಬುದನ್ನು ಮುಸಲ್ಮಾನರು ಒಂದು ಕ್ಷಣ ಮರೆತಿದ್ದರು ಅಷ್ಟೇ! ಮೊದಲಿಗೆ ಮುಸಲ್ಮಾನರನ್ನು ನ್ಯಾಯಾಲಯದ ಆದೇಶ ಪಾಲಿಸಲು ಓಲೈಸುವ ಯತ್ನ ಮಾಡಿದ ಸರ್ಕಾರ ಕೇಳವುದಿಲ್ಲವೆಂದು ಗೊತ್ತಾದಾಗ ಪೊಲೀಸರನ್ನು ಕಾವಲಿಗೆ ಹಾಕಿತು. ಶುಕ್ರವಾರವೇ ವಿಡಿಯೋ ಚಿತ್ರೀಕರಣ ಮಾಡುವ ಆದೇಶ ದಕ್ಕಿದ್ದರಿಂದ ಅಂದು ನಮಾಜಿಗೆ ಬರುವ ದೊಡ್ಡ ಸಂಖ್ಯೆಯ ಮುಸಲ್ಮಾನರನ್ನು ಎದುರಿಸಬೇಕೆಂದೂ ಅವರಿಗೆ ಗೊತ್ತಿತ್ತು. ಆರಂಭದಲ್ಲಿ ಸ್ವಲ್ಪ ಅರಚಾಟ ನಡೆಸಿದ ಮಂದಿ ಪೊಲೀಸರ ಕೈಲಿದ್ದ ವಿಡಿಯೋ ಕ್ಯಾಮೆರಾಗಳನ್ನು ನೋಡಿ ತೆಪ್ಪಗಾದರು. ಮುಖ್ಯಮಂತ್ರಿಗಳು ಹುಡು&ಹುಡುಕಿ ಮನೆಗಳನ್ನು ಬುಲ್ಡೋಜ್​ ಮಾಡಿಬಿಟ್ಟಾರು ಎಂಬ ಭಯ ಅವರಿಗೆ. ಕಾಶಿಯಲ್ಲಿರುವ ಬಹುತೇಕ ಮನೆಗಳು ಕಾನೂನುಬಾಹಿರ ನಿರ್ಮಿತಿಗಳೇ. ಒಡೆದರೆ ಯಾರೂ ಕೇಳುವವರೂ ಇಲ್ಲ. ಸಹಜವಾಗಿಯೇ ಇವರ ನಡುವೆಯೇ ನ್ಯಾಯಾಲಯ ನೇಮಿಸಿದ್ದ ವಕೀಲರು ಜ್ಞಾನವಾಪಿ ಮಸೀದಿಯ ವಿಡಿಯೋ ಚಿತ್ರೀಕರಣ ಆರಂಭಿಸಿದರು. ಮರುದಿನವೂ ಇದು ಮುಂದುವರಿದಿದೆ. 10ನೇ ತಾರೀಖಿನಿಂದ ವಿಚಾರಣೆ ಆರಂಭವಾಗಬೇಕಿದೆ ಅಷ್ಟೇ.

    ವಿಚಾರಣೆಯ ಫಲಿತಾಂಶ ಹೇಗೇ ಇರಲಿ. ಆದರೆ ಸತ್ಯವನ್ನು ಮುಲಾಜಿಲ್ಲದೆ ಹೇಳುವ, ಆಚರಣೆಗೆ ತರುವ ಧೈರ್ಯವಂತೂ ಈಗ ಭಾರತೀಯ ಸಮಾಜಕ್ಕೆ ಬಂದಿದೆ. ಆದರೆ ನನಗಿರುವ ಪ್ರಶ್ನೆ ಸಂವಿಧಾನಕ್ಕೆ ಬದ್ಧರೆಂದು ಪದೇಪದೆ ಹೇಳಿಕೊಳ್ಳುವ ಮುಸಲ್ಮಾನರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುತ್ತಿರುವುದಾದರೂ ಏಕೆ? ಮಸೀದಿಯನ್ನು ಮಂದಿರ ಒಡೆದು ನಿರ್ಮಿಸಿದ್ದಲ್ಲ ಎನ್ನುವುದಾದರೆ ವಿಡಿಯೋ ಚಿತ್ರೀಕರಣ ನಡೆಯಲಿ ಬಿಡಿ, ಹೆದರಿಕೆ ಏಕೆ? ಒಡೆದು ನಿರ್ಮಿಸಿದ್ದೇ ನಿಜ ಎನ್ನುವುದಾದರೆ ಸೌಹಾರ್ದ ಕಾರಣಕ್ಕೆ ಅದನ್ನು ಬಿಟ್ಟುಕೊಡುವ ಜವಾಬ್ದಾರಿ ಮುಸಲ್ಮಾನರದ್ದಲ್ಲವೇನು? ಮತ್ತು ಈ ರೀತಿ ಮಂದಿರದ ಅವಶೇಷಗಳೊಂದಿಗೆ ಕಟ್ಟಿದ ಮಸೀದಿ ಪ್ರಾರ್ಥನೆಗೆ ಯೋಗ್ಯವಲ್ಲವೆಂದು ಅವರ ಮತಗ್ರಂಥವೇ ಹೇಳುತ್ತದಲ್ಲ, ಮತ್ತೇಕೆ ಅದನ್ನು ಉಳಿಸಿಕೊಂಡಿದ್ದಾರೆ? 36 ಸಾವಿರ ದೇವಾಲಯಗಳನ್ನು ಮುಸಲ್ಮಾನರು ಕೆಡವಿದ್ದಾರೆ ಅಥವಾ ಮಸೀದಿಯಾಗಿ ಪರಿವರ್ತಿಸಿದ್ದಾರೆ. ಹಿಂದೂಗಳು ಪ್ರೀತಿಯಿಂದ ಕೇಳಿರುವುದು ಅಯೋಧ್ಯೆ, ಕಾಶಿ ಮತ್ತು ಮಥುರಾ ಮಾತ್ರ. ಅದನ್ನೂ ನ್ಯಾಯಾಲಯದಲ್ಲಿ ಬಡಿದಾಡಿಯೇ ಪಡೆದುಕೊಳ್ಳಬೇಕೆನ್ನುವುದಾದರೆ 36 ಸಾವಿರ ಮಂದಿರಕ್ಕೂ ಕೈ ಹಾಕೋಣ. ಏನಂತೀರಿ?
    ಅಂದಹಾಗೆ, ನೂರು ವರ್ಷಗಳ ಹಿಂದೆ ಕೆನಡಾಕ್ಕೆ ಕದ್ದೊಯ್ಯಲ್ಪಟ್ಟಿದ್ದ ಅನ್ನಪೂರ್ಣೆಯೂ ಕಾಶಿಗೆ ಮರಳಿ ಬಂದಿದ್ದಾಳೆ. ಅನ್ನಪೂರ್ಣೆ ಕಾಶಿಯ ಸಮೃದ್ಧಿಯ ಸಂಕೇತ. ಅಂದರೆ, ಕಾಶಿಗೆ ಆ ಸಮೃದ್ಧಿ ಮರುಕಳಿಸಿದೆ ಅಂತ ಅರ್ಥ. ಹೀಗಾಗಿಯೇ ಕನಸುಗಳ ಭೂಮಿಕೆ ವಿಸ್ತಾರವಾಗಿದೆ. ಭವ್ಯವಾಗಿರುವ ಮೂಲ ಕಾಶಿ ದೇವಾಲಯ ಬಲುಬೇಗ ನಿರ್ಮಾಣಗೊಂಡರೆ ಅಚ್ಚರಿ ಪಡಬೇಡಿ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts