More

    ಏನೇ ಹೇಳಿ, ಕರೊನಾದಿಂದ ತಬ್ಲಿಘಿ ಜಮಾತ್​ನವರ ನಿಜಬಣ್ಣ ಬಯಲಾಯ್ತು- ಹೇಗೆ ವಿವರಿಸಿದ್ದಾರೆ ಚಕ್ರವರ್ತಿ ಸೂಲಿಬೆಲೆ

    ಸದಾ ಉತ್ತರೀಯವನ್ನೇ ಹೊದ್ದು ಪೂಜೆ ಮಾಡುವ ಅರ್ಚಕನಿಗೆ ಸಮಷ್ಟಿಯ ಹಿತಕ್ಕಾಗಿ ರಕ್ಷಣಾಕವಚಗಳನ್ನು ಧರಿಸಿಯೇ ಪೂಜೆ ಮಾಡು ಎಂದರೆ ಆತ ಖಂಡಿತ ಹಿಂದೆ-ಮುಂದೆ ನೋಡಲಾರ. ಏಕೆಂದರೆ ಆತ, ಮೂರ್ತಿಯಲ್ಲಿರಬಹುದಾದ ಭಗವಂತ ತನ್ನ ಹೃದಯದಲ್ಲೂ ಇದ್ದಾನೆ ಎಂದು ನಂಬಿದ್ದಾನೆ.

    ಏನೇ ಹೇಳಿ, ಕರೊನಾದಿಂದ ತಬ್ಲಿಘಿ ಜಮಾತ್​ನವರ ನಿಜಬಣ್ಣ ಬಯಲಾಯ್ತು- ಹೇಗೆ ವಿವರಿಸಿದ್ದಾರೆ ಚಕ್ರವರ್ತಿ ಸೂಲಿಬೆಲೆಏನೇ ಹೇಳಿ ತಬ್ಲಿಘಿ ಜಮಾತ್​ನವರು ನಿಜಬಣ್ಣವನ್ನು ತೋರಿಸಿ ಉಪಕಾರವನ್ನೇ ಮಾಡಿದ್ದಾರೆ. ನಮ್ಮ ನಡುವೆಯೇ ಇದ್ದ ಕೆಲವು ಬುದ್ಧಿಜೀವಿಗಳು ಮಾತನಾಡಲಾಗದೇ ಬಾಯ್ಮುಚ್ಚಿಕೊಂಡು ಕೂರುವಂತೆ ಮಾಡಿರುವುದು ಜಮಾತ್​ನ ಸಾಧನೆಯೇ. ಈ ಜಮಾತ್​ನವರ ಆಳವಿಸ್ತಾರಗಳು ನಮ್ಮೆಲ್ಲರ ಊಹೆಗೂ ನಿಲುಕಲಾರದಂಥದ್ದು! ಮತ್ತೊಮ್ಮೆ ಅದನ್ನು ಬರೆಯುತ್ತೇನೆ. ಸದ್ಯಕ್ಕೆ ಈ ಜಮಾತ್​ನವರು ನಡೆಸುವ ದಾವಾದ ಕುರಿತಂತೆ ನಾಲ್ಕು ಮಾತು ಹೇಳಲೇಬೇಕು.

    ದಾವಾ ಎಂದರೆ ತಮ್ಮ ಪಂಥಕ್ಕೆ ಜನರನ್ನು ಸೆಳೆದುಕೊಳ್ಳಲು ಜಮಾತ್​ನವರು ನಡೆಸುವ ಮನಃಪರಿವರ್ತನೆಯ ಚಟುವಟಿಕೆ. ಬೆಂಗಳೂರು, ಮಂಗಳೂರುಗಳಂತಹ ಜಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಾಗ ಇದನ್ನು ಮಾಡುತ್ತಲೇ ಇರುತ್ತಾರೆ. ಅಲ್ಲಿ ಹಿಂದೂಗಳನ್ನು, ಕ್ರಿಶ್ಚಿಯನ್ನರನ್ನು ತಮ್ಮ ಪಂಥಕ್ಕೆ ಸೆಳೆಯಲು ಬೇಕಾದ ವ್ಯವಸ್ಥೆಗಳಿರುತ್ತವಷ್ಟೇ ಅಲ್ಲದೆ ಮುಸಲ್ಮಾನರ ನಡುವೆಯೇ ಇರುವಂತಹ ಈ ಜಮಾತ್​ನವರನ್ನು ಬಿಟ್ಟು ಇತರೆಯವರನ್ನು ಇತ್ತ ಸೆಳೆಯಲು ಬೇಕಾದ ಚರ್ಚೆಯೂ ನಡೆಯುತ್ತದೆ. ಹಿಂದೂ ತರುಣನೊಬ್ಬ ಒಳಹೊಕ್ಕೊಡನೆ ಅವನನ್ನು ಅನೇಕ ಪ್ರಶ್ನೆಗಳ ಮೂಲಕ ಗೊಂದಲಕ್ಕೆ ತಳ್ಳಲಾಗುತ್ತದೆ. ಇಷ್ಟೊಂದು ದೇವರ ಅಗತ್ಯವಿದೆಯಾ? ದೇವರಿಗೇಕೆ ಇಷ್ಟೊಂದು ಭಿನ್ನಭಿನ್ನ ರೂಪಗಳು? ಸರ್ವಶಕ್ತನಾದ ದೇವರು ಅವತಾರವೆತ್ತಬೇಕಾದರೂ ಏಕೆ? ದೇವರಿಗೆ ಸಾವು ಇದೆಯಾ? ದೇವರು ಹೆಂಡತಿಯನ್ನು ಕಳೆದುಕೊಂಡು ಕಣ್ಣೀರಿಡಬೇಕಾ? ಹೀಗೆ ನೂರೆಂಟು ಬಗೆಯ ಪ್ರಶ್ನೆಗಳು. ಪಶ್ಚಿಮದ ಚಿಂತನೆಗಳಿಗೆ ವಿಜ್ಞಾನದ ದ್ವಾರದ ಮೂಲಕ ತಮ್ಮನ್ನು ತೆರೆದುಕೊಂಡಿರುವ ಹೊಸ ಪೀಳಿಗೆಯ ತರುಣರಿಗೆ ಈ ಪ್ರಶ್ನೆ ಒಗಟಾಗಿ ಕಾಣುವುದಲ್ಲದೇ ಅವರು ಉತ್ತರ ಕಂಡುಕೊಳ್ಳುವಲ್ಲಿ ಸೋತು ನಿಧಾನವಾಗಿ ಜಮಾತಿಗಳ ಚಿಂತನೆಗೆ ತಮ್ಮನ್ನು ಒಡ್ಡಿಕೊಳ್ಳುತ್ತಾರೆ. ಆಮೇಲೆ ಹೇಗೆ ಬದಲಾಗುತ್ತಾರೆಂದರೆ ಮೀಸೆ ತೆಗೆದು, ಗಡ್ಡಬಿಟ್ಟು, ಇವರೂ ಮೌಲಾನಾಗಳೇ ಆಗಿ ಮತ್ತಷ್ಟು ಹಿಂದೂಧರ್ವಿುಯರ ಪರಿವರ್ತನೆಗೆ ಟೊಂಕಕಟ್ಟಿ ನಿಂತುಬಿಡುತ್ತಾರೆ. ಹಿಂದೂಧರ್ಮದ ಸಂಸ್ಕಾರಗಳು ಬಲವಾಗಿದ್ದ ಎಲ್ಲೋ ಕೆಲವರಿಗೆ ಮಾತ್ರ ಆಲೋಚನಾಶಕ್ತಿ ಬೆಳೆದು ಅಲ್ಲಿಂದ ಮರಳಿ ಬರುವ ಸಾಹಸವನ್ನು ಮಾಡುತ್ತಾರೆ! ಇದೆಲ್ಲವೂ ಮತ್ತೊಮ್ಮೆ ವಿಸ್ತಾರವಾಗಿ ರ್ಚಚಿಸಬೇಕಾದ ವಿಷಯವೇ.

    ಈಗಿನ ಪ್ರಮುಖ ಸಂಗತಿ ಏನೆಂದರೆ ಯಾವ ಹಿಂದೂಧರ್ಮವನ್ನು ಇವರುಗಳೆಲ್ಲ ಇಷ್ಟು ಆಡಿಕೊಳ್ಳುತ್ತಾರೋ ಕರೊನಾದ ಸಂದರ್ಭದಲ್ಲಿ ಅದು ತನ್ನನ್ನು ತಾನು ಜಗತ್ತಿನ ಮುಂದೆ ಪ್ರಸ್ತುತಪಡಿಸಿಕೊಂಡ ರೀತಿ ಅತಿ ವಿಶಿಷ್ಟವಾಗಿತ್ತು ಎನ್ನುವುದು. ಹಾಗೆ ಸುಮ್ಮನೆ ಗಮನಿಸಿ ನೋಡಿ. ದೇವರಿಗೆ ಆಕಾರವಿಲ್ಲ, ಆತ ಎಲ್ಲೆಡೆಯೂ ವ್ಯಾಪ್ತಗೊಂಡಿರುವವನು, ಆತನಿಗೆ ಭಿನ್ನಭಿನ್ನ ರೂಪಗಳನ್ನು ಕೊಟ್ಟು ದೇವಸ್ಥಾನಗಳನ್ನು ಕಟ್ಟುವುದು ಮೂರ್ಖತನ, ಅಲ್ಲಿಗೇ ಹೋಗಿ ಪೂಜೆ ಮಾಡಿ ನೈವೇದ್ಯವನ್ನೆಲ್ಲ ಕೊಡುವ ಈ ಪ್ರಕ್ರಿಯೆಗಳಿಗಿಂತ ಬಡವರಿಗೆ ಎರಡು ಹೊತ್ತಿನ ಊಟ ಹಾಕಿದರೆ ಹೆಚ್ಚು ಒಳಿತಾಗುವುದು ಎಂದೆಲ್ಲ ಹೇಳಿದವರು ಕಳೆದ ಒಂದು ತಿಂಗಳಿಂದ ಕಾಣೆಯಾಗಿಬಿಟ್ಟಿದ್ದಾರೆ. ಏಕೆ ಗೊತ್ತೇ? ಕರೊನಾ ಸೋಂಕು ದಾಳಿ ಮಾಡುತ್ತಿದ್ದಂತೆ ದೇವಸ್ಥಾನಕ್ಕೆ ಹೋಗುತ್ತಿದ್ದ ಹಿಂದೂಗಳು ಸಮಷ್ಟಿಯ ಹಿತಕ್ಕೋಸ್ಕರ ಅದನ್ನು ನಿಲ್ಲಿಸಿದರು. ತಿರುಪತಿಯಿಂದ ಹಿಡಿದು ವೈಷ್ಣೋದೇವಿಯವರೆಗೂ ಎಲ್ಲ ದೇವಸ್ಥಾನಗಳೂ ಬೀಗ ಹಾಕಲ್ಪಟ್ಟವು. ಹಾಗಂತ ದೇವರ ಪೂಜೆಗಳೇನೂ ನಿಲ್ಲಲಿಲ್ಲ. ಅದಕ್ಕೆ ಸಂಬಂಧಪಟ್ಟ ಅರ್ಚಕರು ಪ್ರತಿನಿತ್ಯ ಈಗಲೂ ಆ ಕೆಲಸಗಳನ್ನು ಮಾಡುತ್ತಲೇ ಇದ್ದಾರೆ. ನಂಜನಗೂಡಿನಲ್ಲಂತೂ ಬೃಹತ್ ರಥೋತ್ಸವವನ್ನು ಸಾಂಕೇತಿಕವಾದ ಪುಟ್ಟ ರಥವನ್ನಿಟ್ಟು ಶಾಸ್ತೊŠೕಕ್ತವಾಗಿಯೇ ಆಚರಿಸಲಾಯ್ತು. ಇದೇ ವೇಳೆ ದೇವರ ಮೂರ್ತಿಯನ್ನು ಧಿಕ್ಕರಿಸಿದ್ದ, ಮಂದಿರಕ್ಕೆ ಹೋಗುವುದನ್ನು ತಪ್ಪೆಂದು ವಾದಿಸುತ್ತಿದ್ದ ಜನರು ನಾಲ್ಕು ಗೋಡೆಗಳ ಮಧ್ಯೆ ಪ್ರಾರ್ಥನೆ ಸಲ್ಲಿಸಿದರೆ ಮಾತ್ರ ಭಗವಂತನಿಗೆ ತಲುಪುವುದು ಎಂಬ ವಾದ ಮಂಡಿಸಿದ್ದು ವೈಜ್ಞಾನಿಕ ಪ್ರಜ್ಞೆ ಎಷ್ಟಿದೆ ಎಂಬುದನ್ನು ಎತ್ತಿ ಹಿಡಿಯುವಂತಿತ್ತು. ಪ್ರಾರ್ಥನೆ ಎಂಬುದು ಭಗವಂತನಿಗೆ ಕೇಳಲೆಂದು ಜೋರಾಗಿ ಹೇಳಬೇಕಾಗೇನಿಲ್ಲ. ಇರುವೆಯ ಪ್ರಾರ್ಥನೆಯನ್ನೂ ಕೇಳಬಲ್ಲ ಭಗವಂತ ಹೃದಯದ ಕೂಗನ್ನು ಕೇಳಲಾರನೇ ಎಂಬ ಮಾತನ್ನು ಶ್ರದ್ಧೆಯಿಂದ ನಂಬಿರುವ ಸಮಾಜ ಹಿಂದೂಗಳದ್ದು. ಹೀಗಾಗಿ ಅವರ ಪ್ರಾರ್ಥನೆಗೆ ಮೈಕು, ಸ್ಪೀಕರು ಬೇಕಿಲ್ಲ, ಜನಜಂಗುಳಿ ಬೇಕಿಲ್ಲ, ಕೊನೆಗೆ ನಾಲ್ಕು ಗೋಡೆಗಳ ಆವರಣವೂ ಬೇಕಿಲ್ಲ. ಎಲ್ಲಿದ್ದಾರೋ ಅಲ್ಲಿಂದಲೇ ಭಗವಂತನ ಅನುಸಂಧಾನ ಮಾಡಬಲ್ಲ ಆಧ್ಯಾತ್ಮಿಕ ಶುದ್ಧತೆ ಧರ್ಮ ಒದಗಿಸಿಕೊಟ್ಟಿದೆ. ಹೀಗಾಗಿಯೇ ಹಿಂದೂಧರ್ಮವನ್ನು ಸನಾತನಧರ್ಮ ಎಂಬ ಹೆಸರಿನಿಂದಲೂ ಕರೆಯೋದು. ಏಕೆಂದರೆ ಇದು ಅತ್ಯಂತ ಪ್ರಾಚೀನವಾದರೂ ಆಯಾ ಕಾಲಘಟ್ಟಕ್ಕೆ ತಕ್ಕಂತೆ ತನ್ನನ್ನು ನವೀನಗೊಳಿಸಿಕೊಳ್ಳಬಲ್ಲ ಸಾಮರ್ಥ್ಯವನ್ನು ಅದು ಪಡೆದುಕೊಂಡಿದೆ!

    ಜ್ಞಾನವೆಂಬುದು ಎಲ್ಲದರ ಮೂಲವಾಗಿರಬೇಕು. ಯಾವಾಗ ಮನುಷ್ಯ ಅಜ್ಞಾನದ ದಾಸನಾಗುತ್ತಾನೋ ಸಹಜವಾಗಿಯೇ ಮೂರ್ಖನೂ ಆಗಿರುತ್ತಾನೆ. ಹಿಂದೂಧರ್ಮ ಸಾಮಾನ್ಯ ಜನತೆಗಾಗಿ ಆಚರಣೆಗಳ ಚೌಕಟ್ಟನ್ನು ಹಾಕಿಕೊಟ್ಟಿತಾದರೂ ಅದಕ್ಕೆ ಜೋತುಬೀಳದಂತೆ ಬೇಕಾಗಿರುವಷ್ಟು ಜ್ಞಾನವನ್ನೂ ಹುದುಗಿಸಿಟ್ಟಿತು. ಹೀಗಾಗಿಯೇ ನಮ್ಮಲ್ಲಿ ವಾರಕ್ಕೊಂದೇ ದಿನ ಪ್ರಾರ್ಥನೆಗೆಂದು ಸೇರುವ, ಒಂದೇ ಪುಸ್ತಕವನ್ನು ಶ್ರೇಷ್ಠವೆಂದು ಭಾವಿಸುವ ಧಾರ್ವಿುಕ ಪ್ರಜ್ಞೆ ರೂಪುಗೊಳ್ಳಲೇ ಇಲ್ಲ. ಸ್ಥೂಲದೃಷ್ಟಿಗೆ ಕಾಣುವ ಪ್ರತಿಯೊಬ್ಬರ ದೇಹವೇ ಭಿನ್ನಭಿನ್ನ ರೂಪಗಳನ್ನು ಹೊಂದಿರುವಾಗ ಕಣ್ಣಿಗೇ ಕಾಣದ ಮನಸ್ಸಿನ ಕಥೆಯೇನು? ಜಗತ್ತಿನ ಜನಸಂಖ್ಯೆ ಎಷ್ಟಿದೆಯೋ ಅಷ್ಟೂ ಬಗೆಯ ಮನಸ್ಸುಗಳಿವೆ. ಹೀಗಾಗಿ ದೇವರನ್ನು ಅರಸುವ ಮಾರ್ಗವಿರಬಹುದು, ಪಡೆದುಕೊಳ್ಳುವ ವಿಧಾನವಿರಬಹುದು ಹೆಚ್ಚೂಕಡಿಮೆ ಪ್ರತಿಯೊಬ್ಬರಿಗೂ ಭಿನ್ನವೇ. ಒಂದೇ ಕಥೆಯನ್ನು ಕೇಳಿದಾಗ ಅದನ್ನು ಕೇಳಿದ ನಾಲ್ಕೂ ಜನ ನಾಲ್ಕು ವಿಭಿನ್ನ ಬಗೆಯಲ್ಲಿ ಅದನ್ನು ಗ್ರಹಿಸಬಲ್ಲರಾದರೆ ಇನ್ನು ಅಗೋಚರ ಶಕ್ತಿಯಾಗಿ ನಮ್ಮನ್ನೆಲ್ಲ ಕಾಪಾಡುತ್ತಿರುವ ಭಗವಂತನನ್ನು ಎಲ್ಲರೂ ಒಂದೇ ಬಗೆಯಲ್ಲಿ ಅರಿಯಬೇಕು ಎನ್ನುವುದೇ ದೊಡ್ಡ ಪ್ರಮಾದ! ಅನೇಕ ಮತಪಂಥಗಳು ಈ ತಪ್ಪು ಮಾಡಿದ್ದಲ್ಲದೆ ಅದನ್ನೇ ಮುಂದುವರಿಸಿಕೊಂಡು ಬಂದು ತಮ್ಮದ್ದೇ ಸತ್ಯವೆಂದು ವಾದಿಸಿದವು. ಸಾವಿರ ವರ್ಷಗಳ ಹಿಂದೆ ಹೇಗೆ ಬಟ್ಟೆ ಧರಿಸುತ್ತಿದ್ದರೋ ಇಂದೂ ಹಾಗೆಯೇ ಧರಿಸುವ, ಅದೇ ಬಗೆಯಲ್ಲಿ ಊಟ ಮಾಡುವ, ಅದೇ ರೀತಿಯಲ್ಲಿ ಮಾತುಗಳನ್ನಾಡುವ ಪರಂಪರೆ ಉಳಿಸಿಕೊಂಡು ಬರಬೇಕೆಂದು ಜೋತು ಬಿದ್ದಿದ್ದಾರೆ. ಹಿಂದೂಧರ್ಮ ಹಾಗೆಂದೂ ಒತ್ತಾಯ ಹೇರಲೇ ಇಲ್ಲ. ಹೀಗಾಗಿಯೇ ಇಲ್ಲಿ ಭಗವಂತನ ಹುಡುಕಾಟಕ್ಕೆ ಮಹಾತ್ಮರು ತಮ್ಮದೇ ಆದ ಮಾರ್ಗಗಳನ್ನು ಹುಡುಕಿಕೊಂಡು ಅದನ್ನು ಪ್ರತಿಪಾದಿಸಿದಾಗ ಈ ಹಿಂದೆ ಮತ್ತೊಂದು ಮಾರ್ಗವನ್ನು ಅನುಸರಿಸುತ್ತಿದ್ದವರು ಇತ್ತ ವಾಲಿದ್ದುಂಟು. ತನ್ನ ವ್ಯಕ್ತಿತ್ವಕ್ಕೆ ಈ ಪಥ ಸೂಕ್ತವಾದದ್ದೆಂದು ಆತ ಭಾವಿಸಿದರೆ ವಾಲುವುದರಲ್ಲಿ ತಪ್ಪೇನೂ ಇಲ್ಲ. ಅಂತಿಮವಾಗಿ ಜೀವನದ ಗುರಿಯೇ ಸಾಧನೆ ಮಾಡುತ್ತ ಮೋಕ್ಷವನ್ನು ಪಡೆಯೋದು ಮಾತ್ರ. ಹೀಗಾಗಿ ಭಾರತ ಇದೊಂದೇ ಮಾರ್ಗ ಸರಿ ಎಂದು ಎಂದಿಗೂ ಹೇಳಲಿಲ್ಲ. ಅದಕ್ಕಾಗಿಯೇ ನಮಗೆ ಒಬ್ಬನೇ ದೇವರು, ಒಂದೇ ಪವಿತ್ರಕ್ಷೇತ್ರ, ಒಂದೇ ಧರ್ಮಗ್ರಂಥ, ಒಂದೇ ಬಗೆಯ ಆಚರಣೆ, ಒಂದೇ ಬಗೆಯ ಉಪಾಸನೆ, ಒಂದೇ ಬಗೆಯ ವಸ್ತŠವಿನ್ಯಾಸ, ಕೊನೆಗೆ ಒಂದೆಡೆಯಲ್ಲೇ ಎಲ್ಲ ಸೇರಿ ಪ್ರಾರ್ಥನೆ ಮಾಡಬೇಕು ಎಂಬ ಯಾವ ಕಟ್ಟುಕಟ್ಟಳೆಗಳೂ ಇಲ್ಲ. ಇದು ಹೀಗೇ ಹೇಳಿದ್ದರೆ ಯಾರಿಗೂ ಅರ್ಥವಾಗುತ್ತಿರಲಿಲ್ಲ. ಕರೊನಾ ಅದನ್ನು ಹಂಸಕ್ಷೀರನ್ಯಾಯದಂತೆ ಸ್ಪಷ್ಟಪಡಿಸಿಬಿಟ್ಟಿದೆ. ಸದಾ ಉತ್ತರೀಯವನ್ನೇ ಹೊದ್ದು ಪೂಜೆ ಮಾಡುವ ಅರ್ಚಕನಿಗೆ ಸಮಷ್ಟಿಯ ಹಿತಕ್ಕಾಗಿ ರಕ್ಷಣಾಕವಚಗಳನ್ನು ಧರಿಸಿಯೇ ಪೂಜೆ ಮಾಡು ಎಂದರೆ ಆತ ಖಂಡಿತ ಹಿಂದೆ-ಮುಂದೆ ನೋಡಲಾರ. ಏಕೆಂದರೆ ಆತ, ಮೂರ್ತಿಯಲ್ಲಿರಬಹುದಾದ ಭಗವಂತ ತನ್ನ ಹೃದಯದಲ್ಲೂ ಇದ್ದಾನೆ ಮತ್ತು ತನ್ನ ಹೃದಯದಲ್ಲಿ ನೆಲೆಸಿರುವಂತೆ ಆತ ಭಕ್ತರ ಹೃದಯದಲ್ಲೂ ನೆಲೆಸಿದ್ದಾನೆ ಎಂಬುದನ್ನು ಧರ್ಮದ ಮೂಲಕವೇ ಕಲಿತಿದ್ದಾನೆ. ಹೀಗಾಗಿಯೇ ಗರ್ಭಗುಡಿಯಲ್ಲಿರುವ ದೇವರನ್ನು ಪೂಜಿಸಿದಷ್ಟೇ ಪ್ರತಿಯೊಬ್ಬ ಜೀವಿಯ ಹೃದಯದಲ್ಲೂ ಅಡಗಿರುವ ಭಗವಂತನ ಪೂಜೆಯನ್ನು ಶ್ರದ್ಧೆಯಿಂದ ಮಾಡುತ್ತಾನೆ. ಅದಕ್ಕೇ 30 ಕೋಟಿ ದೇವತೆಗಳು ನಮಗೆಂದೂ ಭಾರವೆನಿಸಲಿಲ್ಲ. ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ 300 ಕೋಟಿ ದೇವತೆಗಳಾದರೂ ಹಿಂದೂವಾದವನು ತಲೆ ಕೆಡಿಸಿಕೊಳ್ಳುವುದಿಲ್ಲ. ಈ ವಿಚಾರವನ್ನು ಬೇರೆ ಮತದವರ ಕುರಿತಂತೆ ದೃಢವಾಗಿ ಹೇಳುವುದು ಖಂಡಿತ ಸಾಧ್ಯವಿಲ್ಲ!

    ತಬ್ಲಿಘಿ ಜಮಾತ್​ನ ಮುಸಲ್ಮಾನರು ಕರೊನಾ ಸೋಂಕಿನ ಆಕ್ರಮಣ ತಿಳಿದಿದ್ದಾಗ್ಯೂ ದೆಹಲಿಯ ನಿಜಾಮುದ್ದೀನ್​ನಲ್ಲಿ ಸೇರಿದ್ದು ದೊಡ್ಡ ಪ್ರಮಾದವಾದರೆ 800ಕ್ಕೂ ಹೆಚ್ಚು ವಿದೇಶಿಗರನ್ನು ಬೇರೆಬೇರೆ ರಾಜ್ಯಗಳಲ್ಲಿ ಅಡಗಿಸಿಟ್ಟಿದ್ದು ಮತ್ತೂ ದೊಡ್ಡ ತಪ್ಪು. ಜಮಾತ್​ನ ಮುಖ್ಯಸ್ಥರೇ ‘ಕರೊನಾ ಮುಸಲ್ಮಾನರ ವಿರುದ್ಧ ಜಾಗತಿಕ ಷಡ್ಯಂತ್ರ. ನಾವು ಇದಕ್ಕೆ ಹೆದರಬೇಕಿಲ್ಲ. ಪ್ರಾಣ ಹೋಗುತ್ತದೆ ಎನ್ನುವುದು ನಿಜವೇ ಆದರೆ ಪ್ರಾರ್ಥನೆ ಮಾಡುವಾಗಲೇ ಹೋದರೆ ಒಳಿತು’ ಎಂದು ಹೇಳಿ ಜನರನ್ನು ಪ್ರಚೋದಿಸಿಯೇ ಅಲ್ಲಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಯೂ ಇವುಗಳ ಬಗ್ಗೆ ಅದೆಷ್ಟು ಉಗ್ರವಾಗಿ ಮಾತನಾಡಲಾಯ್ತೆಂದರೆ ಕೇರಳಕ್ಕೆ ಮರಳಿ ಬಂದ ತಬ್ಲಿಘಿನ ಸದಸ್ಯನೊಬ್ಬ ವೈದ್ಯರಿಂದ ಪರೀಕ್ಷೆಗೊಳಗಾಗಲು ನಿರಾಕರಿಸಿಬಿಟ್ಟ. ಏಕೆಂದು ಕೇಳಿದ್ದಕ್ಕೆ ‘ನೂರಾರು ದೇಶಗಳಿಗೆ ತಿರುಗಾಡಿದ ಮೋದಿಯನ್ನು ಪರೀಕ್ಷಿಸಿ, ಉಳಿದದ್ದು ಆಮೇಲೆ’ ಎಂದ. ಟಿಕ್​ಟಾಕ್​ನಲ್ಲಿ ಓಡಾಡಿದ ವಿಡಿಯೊಗಳೇನೂ ಕಡಿಮೆಯಲ್ಲ. ತಬ್ಬಿಕೊಳ್ಳುವುದು ಭ್ರಾತೃತ್ವದ ಶ್ರೇಷ್ಠ ಸಂದೇಶ. ಕರೊನಾದಿಂದ ಸತ್ತರೂ ಪರವಾಗಿಲ್ಲ ಇದನ್ನು ಬಿಡಲಾರೆ ಎಂದರು ಕೆಲವರು. ಐದು ಬಾರಿ ನಮಾಜ್ ಮಾಡುವವನಿಗೆ ಕರೊನಾ ಹರಡಲು ಸಾಧ್ಯವೇ ಇಲ್ಲ ಎಂಬ ವಿಡಿಯೋ ಹರಿದಾಡಿತು. ಪಾರಿವಾಳದ ಹಿಕ್ಕೆಯನ್ನು ತಿಂದರೆ ಕರೊನಾ ಬಾಧಿಸಲಾರದು ಎಂದು ಮೌಲ್ವಿಯೊಬ್ಬ ಹೇಳಿದ್ದು ಸಾಕಷ್ಟು ವೈರಲ್ ಆಯ್ತು. ಕೊನೆಗೆ ಶಾಹೀನ್​ಬಾಗಿನ ಪುಣ್ಯಾತ್ಗಿತ್ತಿಯೊಬ್ಬಳು, ‘ನಮ್ಮ ಧರ್ಮಗ್ರಂಥದಲ್ಲಿ ಕರೊನಾದ ವಿವರಣೆ ಇದೆ, ಅದು ಭಗವಂತ ಭೂಮಿಯ ಮೇಲೆ ಯಾರು ಇರಬೇಕು, ಯಾರು ಇರಬಾರದು ಎಂದು ನಿರ್ಧರಿಸುವ ಎನ್​ಆರ್​ಸಿ’ ಎಂದೂ ಫಮಾನು ಹೊರಡಿಸಿಬಿಟ್ಟಳು! ಇದನ್ನು ನೋಡಿ ನಗುವುದು ಬಿಟ್ಟರೆ ಬೇರೆ ಮಾರ್ಗವಿರಲಿಲ್ಲ. ಈ ಬಗೆಯ ತಬ್ಲಿಘಿನ ಮಾತುಗಳನ್ನು ನಂಬಿ ಅದಕ್ಕೆ ಬದ್ಧವಾಗಿ ನಡೆದುಕೊಳ್ಳುವ ಜನ ಈ ದೇಶದಲ್ಲಿ ಕನಿಷ್ಠಪಕ್ಷ 30 ರಿಂದ 40 ಪ್ರತಿಶತದಷ್ಟಿದ್ದಾರೆ. ಇದಕ್ಕೆ ಶೇಕಡ 10ರಷ್ಟು ವಹಾಬಿಗಳನ್ನೂ ಸೇರಿಸಿದರೆ ಅಷ್ಟೇ ಕಥೆ. ವಿಚಾರವಾದಿ, ಚಿಂತಕ, ಸಜ್ಜನ ಮುಸಲ್ಮಾನರ ಕೂಗು ಸಮಾಧಿಯೇ ಆಗಿಹೋಗುತ್ತದೆ. ಆ ಬಗೆಯ ಮುಸಲ್ಮಾನರಿದ್ದರೂ ಅವರು ಮಾತನಾಡಲಾರರು. ಏಕೆಂದರೆ ಆನಂತರ ಹಲವು ಕಷ ್ಟ ಎದುರಿಸಬೇಕಾಗುತ್ತದೆ ಎಂಬುದು ಅವರಿಗೂ ಗೊತ್ತು!

    ಈ ಹೊತ್ತಲ್ಲೇ ನಾನು ಹಿಂದೂವಾಗಿದ್ದಕ್ಕೆ ನನಗೆ ಹೆಮ್ಮೆ ಎನಿಸುವುದು. ನಮ್ಮಲ್ಲೂ ಅನೇಕ ಮೌಢ್ಯತೆ ಇವೆ ನಿಜ. ಆದರೆ, ಒಳಗಿಂದೊಳಗೇ ಅದನ್ನು ತಿದ್ದುವ ವ್ಯಕ್ತಿಗಳು ಬಂದಾಗ ನಾವು ಅವರನ್ನು ಕೊಲ್ಲುವುದಿಲ್ಲ. ಆಕ್ರಮಣಕಾರಿಗಳ ಕಾರಣದಿಂದಾಗಿ ಸತಿ ಪದ್ಧತಿ ಇಣುಕಿ ಕಾಲಕ್ರಮದಲ್ಲಿ ಧರ್ಮದ್ದೇ ಭಾಗವಾಗಿ ಮಾರ್ಪಟ್ಟಿತ್ತು. ಸಾಮಾಜಿಕ ಚಳವಳಿಗಾರರು ಅದರ ವಿರುದ್ಧ ದನಿಯೆತ್ತಿದಾಗ ಆರಂಭದಲ್ಲಿ ಕೆಲವರು ಪ್ರತಿಭಟಿಸಿದಂತೆ ಕಂಡರೂ ಕ್ರಮೇಣ ಸಮಾಜ ಅದನ್ನು ಒಪ್ಪಿಕೊಂಡಿತು. ಶಾಸ್ತೊŠೕಕ್ತವಾದ ಹೋಮವನ್ನು ಮಾಡುವುದಕ್ಕೆ ಎಷ್ಟು ಆದ್ಯತೆ ಕೊಡುತ್ತೇವೆಯೋ ಆನಂತರ ಊರಿನವರಿಗೆಲ್ಲರಿಗೂ ಬಡವಬಲ್ಲಿದರೆಂಬ ಭೇದವಿಲ್ಲದೇ ಪ್ರಸಾದ ವಿತರಿಸುವ ಸಂಪ್ರದಾಯವಿದೆಯಲ್ಲ ಹೆಮ್ಮೆ ತರುವಂಥದ್ದು. ನಮ್ಮಲ್ಲಿ ವೈಚಾರಿಕ ಭೇದಕ್ಕೆ ಅವಕಾಶವಿದೆ. ಆ ಭೇದದ ಕಾರಣಕ್ಕೆ ಕೊಲೆ ಮಾಡುವುದಕ್ಕೆ ಅನುಮತಿಯಿಲ್ಲ. ಕೋಟ್ಯಂತರ ಜನ ರಾಮನ ಗುಣಗಾನ ಮಾಡುವಾಗ ಬೆರಳೆಣಿಕೆಯಷ್ಟು ಜನ ಅವನನ್ನು ಪ್ರಶ್ನಿಸುತ್ತಾರೆ, ಧಿಕ್ಕರಿಸುತ್ತಾರೆ, ಕೆಲವೊಮ್ಮೆ ನಿಂದಿಸುತ್ತಾರೆ. ಅಷ್ಟಾದಾಗ್ಯೂ ದೊಡ್ಡ ಸಂಖ್ಯೆಯ ಉಳಿದವರು ಅವರ ಮೇಲೆ ಮುಗಿಬಿದ್ದು ಸಾಯಿಸಿಬಿಡುವುದಿಲ್ಲ. ಅತ್ಯಂತ ಶ್ರದ್ಧೆಯಿಂದ ನಾವು ನಂಬಿಕೊಂಡು ಬಂದ ಉಪನಿಷತ್ತುಗಳನ್ನು ಟೀಕಿಸಲಾಗುತ್ತದೆ. ಅನ್ಯಮತೀಯರು ನಮ್ಮ ದೇವರುಗಳನ್ನು ಸಾರ್ವಜನಿಕವಾಗಿ ಆಡಿಕೊಳ್ಳುತ್ತಾರೆ. ದೇವರ ಚಿತ್ರಗಳನ್ನು ಕಾಲೊರಸಿಗೆ ಬಳಸಿ ವಿಕೃತವಾಗಿ ಸುಖಿಸುತ್ತಾರೆ. ನಮ್ಮದ್ದೊಂದು ಸಣ್ಣ ಪ್ರತಿಭಟನೆಯಷ್ಟೇ. ಅದೂ ಬೀದಿಗಿಳಿದು ಕೂಗಾಟರಂಪಾಟವಲ್ಲ. ಕಲ್ಲೆಸೆಯುವುದಂತೂ ಗಾವುದ ದೂರ.

    ಕೆಲವೊಮ್ಮೆ ಇಷ್ಟು ಸ್ವಾತಂತ್ರ್ಯ ಕೆಟ್ಟದ್ದೆನಿಸಿದರೂ ಈ ಪರಿಯ ವೈಚಾರಿಕವಾದ ಸ್ವಾತಂತ್ರ್ಯವೇ ಪ್ರಗತಿಗೆ ಪೂರಕವಾಗಿರುವ ಸಮಾಜದ ಲಕ್ಷಣ. ಇಲ್ಲವಾದರೆ ಅದು ಪ್ರಗತಿ ವಿಮುಖವಾದ ಆಧುನಿಕಯುಗದ ಚಿಂತನೆಗಳಿಗೆ ಹೊಂದದ ಗುರಿಯೆಡೆಗೆ ಓಡುತ್ತಿರುವ ಸಮಾಜದ ಅಗತ್ಯಗಳಿಗೆ ಸ್ಪಂದಿಸದ ಮೃತಪಂಥವಾಗಿ ಉಳಿದುಬಿಡುತ್ತದೆ. ಈ ದೃಷ್ಟಿಯಿಂದ ನೋಡಿದಾಗ ನಾನು ಪ್ರಾಚೀನವಾದ ಇಂದಿಗೂ ಜೀವಂತಿಕೆಯ ಕಳೆಯಿಂದ ಕೂಡಿರುವ ಧರ್ಮವೊಂದರ ಇಂದಿನ ಪೀಳಿಗೆಯವ. ಹೆಮ್ಮೆ ಎನಿಸಲು ಇಷ್ಟು ಸಾಕಲ್ಲವೇನು?!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    LIVE| ದೇಶಾದ್ಯಂತ ದೀಪ ಹಚ್ಚಿ ಕರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ ದೇಶಪ್ರೇಮಿಗಳು: ದೀಪ ಬೆಳಗಿದ ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts