More

    ಚಕ್ರವರ್ತಿ ಸೂಲಿಬೆಲೆ ಅಂಕಣ, ವಿಶ್ದಗುರು; ದಂಗೆಯಲ್ಲಿ ಪಾಲ್ಗೊಂಡ್ರೆ ಸ್ವರ್ಗ ಖಾತ್ರಿನಾ?!

    ಕಾಶ್ಮೀರದ 370ನೇ ವಿಧಿಯನ್ನು ತೆಗೆಯುವ ಕೇಂದ್ರ ಸರ್ಕಾರದ ನಿರ್ಣಯಕ್ಕೆ ಯಾರೂ ತುಟಿಪಿಟಿಕ್ ಎಂದಿರಲಿಲ್ಲ! ಆದರೆ ಈಗ ಬಲುಬೇಗ ಸಿಎಎ ಕುರಿತಂತೆ ತಪ್ಪು ಮಾಹಿತಿಗಳನ್ನು ಮುಸಲ್ಮಾನರ ನಡುವೆ ಹಬ್ಬಿಸಲಾಯ್ತು. ಅನೇಕ ಮಾಧ್ಯಮಗಳು ಸುಳ್ಳುಸುದ್ದಿಗಳನ್ನು ವ್ಯಾಪಕವಾಗಿ ಹಬ್ಬಿಸಿ ದೆಹಲಿ, ಉತ್ತರಪ್ರದೇಶ, ಕರ್ನಾಟಕದಲ್ಲೂ ದಂಗೆಗಳಾಗಲು ಪ್ರಚೋದಿಸಿದರು. ಸರ್ಕಾರ ಒಂದಿನಿತೂ ಜಗ್ಗಲಿಲ್ಲ.

    ಚಕ್ರವರ್ತಿ ಸೂಲಿಬೆಲೆ ಅಂಕಣ, ವಿಶ್ದಗುರು; ದಂಗೆಯಲ್ಲಿ ಪಾಲ್ಗೊಂಡ್ರೆ ಸ್ವರ್ಗ ಖಾತ್ರಿನಾ?!ಆತನನ್ನು ಮುಸಲ್ಮಾನರು ಸುತ್ತುವರಿದುಬಿಟ್ಟಿದ್ದರು. ಹೊಡೆಯುವುದೂ ಆರಂಭವಾಗಿಬಿಟ್ಟಿತ್ತು. ಇನ್ನೇನು ದುರುಳರ ಕೈಲಿ ಸಿಕ್ಕು ಸತ್ತೇ ಹೋಗಬೇಕು ಎನ್ನುವಾಗ ಜೇಬಿನಿಂದ ಟೋಪಿ ತೆಗೆದು ಅವರೆದುರು ಹಿಡಿದ ಆ ವ್ಯಕ್ತಿ ‘ನನ್ನ ಹೆಸರು ಇಮ್ರಾನ್’ ಎಂದುಬಿಟ್ಟ. ಸುತ್ತುವರಿದಿದ್ದ ಗುಂಪು, ‘ಈತ ನಮ್ಮವನೇ ಬಿಟ್ಟುಬಿಡಿ’ ಎನ್ನುತ್ತ ಹೊರಟುಹೋಯ್ತು. ಇದು ಯಾವುದೋ ಸಿನಿಮಾದ ಕಥೆಯ ಎಳೆಯಲ್ಲ.

    ದೆಹಲಿಯ ದಂಗೆಯಿಂದ ಬಚಾವಾಗಿ ಬಂದ ವ್ಯಕ್ತಿಯೊಬ್ಬ ಪತ್ರಕರ್ತರ ಮುಂದೆ ಹೇಳಿಕೊಂಡ ಘಟನೆ. ಶಾಹೀನ್​ಬಾಗ್​ನಲ್ಲಿ ಬೆಳಗಿನ ಹೊತ್ತಿಗೆ 500 ರೂಪಾಯಿ, ಸಂಜೆಯೂ ಮುಂದುವರಿದರೆ 800 ರೂಪಾಯಿ, ರಾತ್ರಿಯೂ ಉಳಿದುಕೊಂಡರೆ 1000 ರೂಪಾಯಿ ತೆಗೆದುಕೊಂಡು ಪ್ರತಿಭಟನೆ ಮಾಡುತ್ತಿದ್ದ ಬಾಡಿಗೆ ಹೋರಾಟಗಾರರ ಮುಂದಿನ ಹಂತವಾಗಿ ವ್ಯವಸ್ಥಿತ ದಂಗೆಗಳು ನಡೆದವಲ್ಲಾ, ಅದರದ್ದೇ ಒಂದು ಸಣ್ಣ ಘಟನೆ ಇದು.

    ಈ ಬಗೆಯ ನೂರಾರು ಎಳೆಗಳು ಮೂರು ದಿನಗಳ ಕಾಲ ಹಬ್ಬಿದ ಈ ದಂಗೆಯೊಳಗೆ ಕಂಡುಬಂದಿವೆ. ಟ್ರಂಪ್ ಬರುವವೇಳೆಗೆ ದೇಶದ ಮಾನವನ್ನು ಹರಾಜು ಹಾಕಬೇಕೆಂದು ಅನೇಕ ದಿನಗಳಿಂದ ಆಲೋಚಿಸಿ ತಯಾರಿ ಮಾಡಿಕೊಂಡಿದ್ದ ಈ ಪ್ರತಿಭಟನಾಕಾರರು ಕೊನೆಗೂ ಆ ದಿನ ದೆಹಲಿಯಲ್ಲಿ ಮಾರಣ

    ಹೋಮವನ್ನೇ ನಡೆಸಿ ಭಾರತ ಶತಶತಮಾನಗಳಿಂದಲೂ ಕಾಪಾಡಿಕೊಂಡು ಬಂದಿದ್ದ ಗೌರವವನ್ನು ನುಚ್ಚುನೂರು ಮಾಡಿಬಿಟ್ಟರು. ಆದರೆ ಅವರಿಗೆ ಸಹಿಸಲಾಗದ ವೇದನೆ ಯಾವುದು ಗೊತ್ತೇ?! ಮುಸಲ್ಮಾನರ ರಕ್ತಪಿಪಾಸುತನಕ್ಕೆ ಬಲಿಯಾಗಿ ರಸ್ತೆಯಲ್ಲಿ ಹತ್ತಕ್ಕೂ ಹೆಚ್ಚು ಜನರ ಹೆಣ ಬಿದ್ದಿದ್ದಾಗಲೂ ಅಮೆರಿಕದ ಅಧ್ಯಕ್ಷ ಟ್ರಂಪ್ ಅದರ ಕುರಿತು ಒಂದಿನಿತೂ ಮಾತನಾಡಲಿಲ್ಲ. ಪತ್ರಕರ್ತರು ಪ್ರಶ್ನೆ ಕೇಳಿದಾಗಲೂ ‘ಅದು ಭಾರತದ ಆಂತರಿಕ ವಿಷಯ’ ಎಂದುಬಿಟ್ಟರು. ಜಿಹಾದಿ ಮಾನಸಿಕತೆಯ ಕುರಿತಂತೆ ಭರ್ಜರಿಯಾಗಿಯೇ ಮಾತನಾಡಿ ಜಗತ್ತಿಗೆ ಸ್ಪಷ್ಟ ಸಂದೇಶವನ್ನೇ ಕೊಟ್ಟರು!

    ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್​ರ ಬಲಗೈ ಬಂಟ ತಾಹಿರ್ ಹುಸೇನ್ ತನ್ನ ಇಡಿಯ ಮನೆಯನ್ನೇ ದಂಗೆಯ ಕಾರ್ಖಾನೆಯನ್ನಾಗಿ ರೂಪಿಸಿ ಕಲ್ಲುಗಳನ್ನು, ಪೆಟ್ರೋಲ್ ಬಾಂಬ್​ಗಳನ್ನು ಮುಂಚಿತವಾಗಿಯೇ ಶೇಖರಿಸಿಟ್ಟುಕೊಂಡು ನಡೆಸಿದ ರುದ್ರನರ್ತನ ಮೊಬೈಲ್ ವಿಡಿಯೊಗಳಲ್ಲಿ ಸೆರೆಯಾಗದೇ ಹೋಗಿದ್ದರೆ ನಿಜಕ್ಕೂ ಅನ್ಯಾಯವಾಗಿಬಿಟ್ಟಿರುತ್ತಿತ್ತು.

    ಈ ಘಟನೆಯ ಹಿಂದೆ ಅರವಿಂದ್ ಕೇಜ್ರಿವಾಲ್ ಕೈವಾಡ ಎಷ್ಟಿತ್ತೆಂಬುದು ಜನರಿಗೆ ತಿಳಿಯುತ್ತಲೇ ಇರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಪೊಲೀಸರ ಬಳಿ ತನ್ನನ್ನು ಉಳಿಸುವಂತೆ ನಾಟಕದ ಕರೆ ಮಾಡಿದ್ದ ತಾಹಿರ್ ಹುಸೇನ್ ಜನರೆದುರು ಹಿಂದೂಕ್ರೌರ್ಯಕ್ಕೆ ನೋವುಂಡ ಮಹಾನ್ ವ್ಯಕ್ತಿಯಾಗಿ ರೂಪುಗೊಂಡುಬಿಟ್ಟಿರುತ್ತಿದ್ದ. ಹೊರಬರುತ್ತಿರುವ ದೆಹಲಿಯ ಒಂದೊಂದು ವಿಡಿಯೋಗಳನ್ನು ನೀವು ನೋಡಿದರೆ ಗಾಬರಿಯಾಗಿಬಿಡುತ್ತೀರಿ. ಪುಟ್ಟ-ಪುಟ್ಟ ಮಕ್ಕಳು ಕೈಲಿ ಕಲ್ಲು ಹಿಡಿದು ತೂರಾಟಕ್ಕೆ ಹೊರಡುವುದನ್ನು ಕಂಡಾಗ ಜಿಹಾದಿ ಮಾನಸಿಕತೆಯ ವಿಷ ಹಬ್ಬುತ್ತಿರುವ ಪರಿ ಹೆದರಿಕೆ ಹುಟ್ಟಿಸುತ್ತದೆ.

    ಮತವೊಂದು ಹೀಗೆ ಭ್ರಾಂತರನ್ನು ಸೃಷ್ಟಿಸುವ ಪರಿ ಕಣ್ಣೆದುರಿಗೇ ನೋಡುತ್ತಿದ್ದೇವೆ. ಎಲ್ಲಕ್ಕೂ ಹೆಚ್ಚಿನ ದುರದೃಷ್ಟಕರ ಸಂಗತಿ ಎಂದರೆ ಒಬ್ಬನಾದರೂ ಸಜ್ಜನ ಮುಸಲ್ಮಾನ ಮನೆಯಿಂದ ಹೊರಗೆ ಬಂದು ಹೀಗೆ ಮಾಡಿದ್ದು ತಪ್ಪು ಎಂದು ಹೇಳಲೇ ಇಲ್ಲ. ಇದೇ ಜಾಗದಲ್ಲಿ ಹಿಂದೂಗಳಿದ್ದಿದ್ದರೆ ಅದಾಗಲೇ ನಾವೂ-ನೀವೂ ಸೇರಿದಂತೆ ಎಲ್ಲರೂ ಇಂತಹ ದಂಗೆಗಳಿಂದ ದೂರ ಕಾಯ್ದುಕೊಂಡು ಅವಮಾನಿತರಾಗಿ ಸಮಾಜದ ಮುಂದೆ ತಲೆತೋರಿಸಲಾಗದೆ ನಿಲ್ಲುತ್ತಿದ್ದೆವು. ಧರ್ಮ ಸಂಸ್ಕಾರ ಕೊಡುವುದು ಹೀಗೇ!

    ಇಡಿಯ ಈ ಪ್ರಕರಣದಲ್ಲಿ ನಾವು ಸೋತಿದ್ದೆಲ್ಲಿ ಎಂಬುದು ವಿಶ್ಲೇಷಣೆಗೆ ಒಳಗಾಗಲೇಬೇಕು. ಮೊದಲನೆಯದಾಗಿ ಶಾಹೀನ್​ಬಾಗ್​ನಲ್ಲಿ ಪ್ರತಿಭಟನೆ ನಡೆಯುವಾಗ ಕೇಂದ್ರದಲ್ಲಿರುವ ಮೋದಿ ಸರ್ಕಾರ ಅದನ್ನು ತೀವ್ರವಾಗಿ ಪರಿಗಣಿಸಲಿಲ್ಲ. ಹೀಗೆ ಮುಸಲ್ಮಾನ ಟೋಳಿ ಬೀದಿಯಲ್ಲಿ ಕುಳಿತಿದ್ದರೆ ಬಹುಸಂಖ್ಯಾತ ಹಿಂದೂಗಳು ರೊಚ್ಚಿಗೇಳುತ್ತಾರೆಂದು ಅವರು ಭಾವಿಸಿದ್ದರು. ಚುನಾವಣೆಯಲ್ಲಿ ಅದರ ಬಲುದೊಡ್ಡ ಪ್ರಭಾವವೇನೂ ಗೋಚರಿಸಿದಂತೆ ಕಾಣಲಿಲ್ಲ. ಉಲ್ಟಾ ಮತಾಂಧರೇ ಸಂಘಟಿತರಾಗಿ ದೊಡ್ಡ ಪ್ರಮಾಣದಲ್ಲಿ ಗೆಲ್ಲುವುದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಟ್ಟರು.

    ಈ ವೇಳೆಗಾಗಲೇ ಸರ್ಕಾರದ ಪ್ರತಿಕ್ರಿಯೆ ಇಲ್ಲದೆ ಚಡಪಡಿಸಿಹೋಗಿದ್ದ ಜಿಹಾದಿಗಳು ಬಲುದೊಡ್ಡ ಕಾರ್ಯವೊಂದಕ್ಕೆ ಕೈಹಾಕಲು ಸಿದ್ಧರಾಗಿಬಿಟ್ಟಿದ್ದರು. ಕಲ್ಲೆಸೆಯಲು ಅವರು ಮಾಡಿಕೊಂಡಿರುವ ತಯಾರಿಗಳನ್ನು ನೋಡಿದರೆ ಇದು ಒಂದೆರಡು ದಿನಗಳ ಪೂರ್ವತಯಾರಿ ಅಲ್ಲವೆಂಬುದು ಎಂಥವನಿಗೂ ಅರಿವಾಗುತ್ತದೆ. ಅನೇಕರು ಈಗ ಹೇಳುವ ಪ್ರಕಾರ ಶಾಹೀನ್​ಬಾಗ್ ಅನ್ನು ಅಷ್ಟು ದಿನ ಇರಲು ಬಿಡದೇ ನಾಲ್ಕೇ ದಿನಗಳಲ್ಲಿ ಅವರನ್ನು ಎಬ್ಬಿಸಿ ಓಡಿಸಿದ್ದರೆ ಈ ಪರಿಸ್ಥಿತಿ ಖಂಡಿತ ಬರುತ್ತಿರಲಿಲ್ಲ ಅಂತ. ಬಹುಶಃ ಪ್ರತಿಭಟನೆಗೆ ಕುಳಿತವರು ಹೆಂಗಸರು ಮತ್ತು ಮಕ್ಕಳಾದ್ದರಿಂದ ಸರ್ಕಾರ ಎಚ್ಚರಿಕೆಯಿಂದಲೇ ಹೆಜ್ಜೆ ಇಟ್ಟಿತೆಂಬುದನ್ನು ಒಪ್ಪಿಕೊಳ್ಳಬೇಕು.

    ಹಾಗೇನಾದರೂ ಸ್ವಲ್ಪ ಎಡವಟ್ಟು ಮಾಡಿಕೊಂಡು ನಾಲ್ಕು ಜನ ಮುಸಲ್ಮಾನ ಹೆಂಗಸರಿಗೆ ಮತ್ತು ಮಕ್ಕಳಿಗೆ ಏಟು ಬಿದ್ದಿದ್ದರೆ ಜಾಗತಿಕ ಮಟ್ಟದಲ್ಲಿ ಅದನ್ನು ಬೇರೊಂದು ರೀತಿಯಲ್ಲೇ ಬಿಂಬಿಸಲಾಗುತ್ತಿತ್ತು. ಆ ದಿನಗಳ ಹತಾಶೆಯಿಂದಲೇ ಮುಸಲ್ಮಾನರು ಇಂಥದ್ದೊಂದು ಕ್ರಮಕ್ಕೆ ಕೈಹಾಕಿದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅವರ ಮಾನಸಿಕತೆಯನ್ನು ಕಂಡಾಗ ಇಂದು ಇತರೆ ಭಾರತೀಯರಿಗೆಲ್ಲ ಅಸಹ್ಯವೆನಿಸುವಂತಾಗುತ್ತಿದೆ. ದಂಗೆಗಳನ್ನು ಸಮರ್ಥಿಸಿಕೊಳ್ಳಬಲ್ಲವರು ಮಾನವತೆಗೆ ಲಾಯಕ್ಕೇ ಇಲ್ಲದವರು ಮಾತ್ರ.

    ಅಂಥವರನ್ನು ಹತ್ತಿರಕ್ಕೆ ಸೇರಿಸುವುದು ಬಿಡಿ ಅವರೊಂದಿಗೆ ಮಾತುಕತೆ, ವ್ಯವಹಾರ ಇಟ್ಟುಕೊಳ್ಳುವುದೂ ಭಾರತೀಯತೆಗೇ ಕಂಟಕ! ಅಂಕಿತ್ ಶರ್ಮಾ ಮತ್ತು ರತನ್​ಲಾಲ್ ಮೇಲಿನ ಹಲ್ಲೆಯನ್ನು ಕಂಡಾಗ ಎಂಥವನೊಳಗೂ ಎದೆಯುರಿಯಾಗುವುದು ಸಹಜವೇ. ಅಂಕಿತ್ ಶರ್ವರ ದೇಹಕ್ಕೆ 400 ಬಾರಿ ಇರಿದ ಗುರುತುಗಳಿವೆಯಂತೆ. ಅಷ್ಟೇ ಅಲ್ಲ, ತಾಹಿರ್ ಹುಸೇನನ ದಂಗೆಯ ಕಾರ್ಖಾನೆಯಲ್ಲಿ ರಕ್ತಸಿಕ್ತವಾದ ಹೆಣ್ಣುಮಗಳೊಬ್ಬಳ ಒಳಉಡುಪುಗಳು ಸಿಕ್ಕಿದ್ದು ಮನೆಯ ಹೊರಗಿನ ಚರಂಡಿಯಲ್ಲಿ ಹುಡುಗಿಯೊಬ್ಬಳ ಶವವೂ ದೊರೆತಿದೆ. ಮತಾಂಧ ಜಿಹಾದಿ ಕಾಮುಕರು ಆ ಹೆಣ್ಣುಮಗಳನ್ನು ಏನು ಮಾಡಿರಬಹುದೆಂಬುದನ್ನು ಪೊಲೀಸರು ಹೊರಹೇಳಲು ಸಿದ್ಧರಿಲ್ಲ. ಛೀ, ಇದು ಮನುಕುಲಕ್ಕೆ ನಾಚಿಕೆಯಾಗುವಂತಹ ಸಂಗತಿಗಳು!

    ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ದೆಹಲಿ ಒಂದು ರೀತಿ ಮೌನಕ್ಕೆ ಶರಣಾಗಿಬಿಟ್ಟಿದೆ. ಅಲ್ಲಿನ ಹಿಂದೂಗಳಿಗೆ ಮನೆಯಿಂದ ಹೊರಬರುವ ಧೈರ್ಯವೇ ಇಲ್ಲ. ಅಕ್ಕಪಕ್ಕದಲ್ಲೇ ಇದ್ದ ಕಾಶ್ಮೀರಿ ತರುಣರು ಹಳೆಯದನ್ನು ಮೆಲುಕು ಹಾಕಿ ತುಲನೆ ಮಾಡಿ ನೋಡುತ್ತಿದ್ದಾರೆ. 30 ವರ್ಷದ ಹಿಂದೆ ಕಾಶ್ಮೀರದ ಪಂಡಿತರ ಮನೆಯೊಳಗೆ ಹಿರಿಯರು ‘ಮಗು, ಹೊರಗೆ ಹೋಗಬೇಡ, ದಂಗೆಗಳು ನಡೆಯುತ್ತಿವೆ’ ಎಂದು ಮಕ್ಕಳಿಗೆ ಹೇಳುತ್ತಿದ್ದರಂತೆ.

    ಈಗ ದೆಹಲಿಯಲ್ಲಿ ಅದೇ ಮಾತನ್ನು ಹಿಂದೂಗಳು ಮಕ್ಕಳಿಗೆ ಹೇಳುತ್ತಿದ್ದಾರೆ. ಕಾಶ್ಮೀರದ ಕದನವನ್ನು ಮುಸಲ್ಮಾನರು ದೆಹಲಿಗೆ ತಂದುಬಿಟ್ಟರಾ? ಇದಕ್ಕೆ ಕಾರಣ ಸಿಎಎ ಮಾತ್ರವಾ? ಅನ್ನೋದು ಪ್ರಶ್ನೆ. ಖಂಡಿತ ಇಲ್ಲ. ಸಿಎಎ ನೆಪವಷ್ಟೇ. ಇದರಿಂದ ಭಾರತೀಯ ಮುಸಲ್ಮಾನರಿಗೆ ಎಳ್ಳಷ್ಟೂ ಸಮಸ್ಯೆಯಿಲ್ಲವೆಂಬುದು ಎಲ್ಲರಿಗಿಂತ ಚೆನ್ನಾಗಿ ಗೊತ್ತಿರೋದು ಇಲ್ಲಿನ ಮುಸಲ್ಮಾನರಿಗೇ. ಅವರಿಗೆ ಸಮಸ್ಯೆ ಇರೋದು ಮೋದಿಯೊಂದಿಗೆ ಮಾತ್ರ!

    2014ರಲ್ಲಿ ಮೋದಿಯ ಗೆಲುವಿನೊಂದಿಗೆ ಭಾರತದಲ್ಲಿ ಹಿಂದೂ ಪುನರ್​ಜಾಗೃತಿಯಾಗುತ್ತಿರುವ ಸಂದೇಶ ಜಿಹಾದಿಗಳಿಗೆ ಸಿಕ್ಕೊಡನೆ ಅವರೊಳಗೆ ಉತ್ಪಾತವಾಗಲಾರಂಭಿಸಿತು. ಆದರೆ ಮೋದಿ ಆರಂಭದಿಂದಲೂ ‘ಸಬ್​ಕಾ ಸಾಥ್ ಸಬ್​ಕಾ ವಿಕಾಸ್’ ಎನ್ನುತ್ತ ನಿಧಾನಗತಿಯಲ್ಲಿ ಸಾಗುತ್ತಿದ್ದುದರಿಂದ ಇದು ವಾಜಪೇಯಿಯವರಂಥದ್ದೇ ಇನ್ನೊಂದು ಸರ್ಕಾರವೆಂದು ಅವರು ಒಪ್ಪಿಕೊಂಡರು. ಮರು ಚುನಾವಣೆಯಲ್ಲಿ ಮೋದಿ ಸೋತು ತಮ್ಮದ್ದೇ ಸರ್ಕಾರಗಳು ಅಧಿಕಾರಕ್ಕೆ ಬರುತ್ತವೆಂಬ ಕನಸನ್ನೂ ಕಂಡರು. 2019ರಲ್ಲಿ ಮೋದಿಯ ಪುನರಾಗಮನ ಮತ್ತು ಅವರು ದೇಶವನ್ನು ಕಾಡುತ್ತಿದ್ದ ಸಮಸ್ಯೆಗಳನ್ನೆಲ್ಲ ಏಕಕಾಲಕ್ಕೆ ಪರಿಹರಿಸಲು ತೋರಿಸುತ್ತಿರುವ ಧಾವಂತ ಇವೆಲ್ಲವೂ ಆ ಜನಾಂಗದೊಳಗೆ ಆಕ್ರೋಶವನ್ನು ಹೆಚ್ಚಿಸಿತು.

    ಅದಕ್ಕೆ ಪೂರಕವಾಗಿ ಮುಸಲ್ಮಾನ್ ಗಂಡಸರಿಗೆ ತಮ್ಮ ಹೆಂಗಸರ ಮೇಲೆ ಅಧಿಕಾರ ಹೊಂದಲು ಪೂರ್ಣ ತಾಕತ್ತನ್ನು ಕೊಟ್ಟಿದ್ದ ಟ್ರಿಪಲ್ ತಲಾಕ್ ಅನ್ನು ಗೊಂದಲವೇ ಇಲ್ಲದಂತೆ ನಿಷೇಧಿಸಲಾಗಿತ್ತು. ಸ್ವಾತಂತ್ರ್ಯ ಬಂದಾಗಿನಿಂದಲೂ ತಮ್ಮ ಹೆಂಗಸರ ಮೇಲೆ ಅವರು ಹೊಂದಿದ್ದ ಪ್ರಭುತ್ವವನ್ನು ಮೋದಿ ಒಂದು ನಿರ್ಣಯದೊಂದಿಗೆ ತೆಗದುಬಿಸಾಡಿಬಿಟ್ಟರಲ್ಲಾ ಸಹಿಸಿಕೊಳ್ಳುವುದಾದರೂ ಹೇಗೆ? ಇಲ್ಲಿನ ಬಹುತೇಕ ಮುಸಲ್ಮಾನರು ಸ್ವಾತಂತ್ರ್ಯ ಬಂದಾಗ ಉಳಿದುಕೊಂಡಿದ್ದೇ ಮತ್ತೊಂದು ಪಾಕಿಸ್ತಾನದ ಕಲ್ಪನೆಗೆ ನೀರೆರೆಯಲು.

    ಆದರೆ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಪಾಕಿಸ್ತಾನ ಅಸಮರ್ಥ ರಾಷ್ಟ್ರವೆಂಬುದು ಸಾಬೀತಾಗುತ್ತಿದೆಯಲ್ಲದೆ ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ವಾಯುದಾಳಿ ನಂತರ ಇಲ್ಲಿನ ಜಿಹಾದಿಗಳ ಹೊಟ್ಟೆಯಲ್ಲಿ ತಳಮಳ ಶುರುವಾಗಿಬಿಟ್ಟಿದೆ. ಇಲ್ಲಿನ ತರುಣರನ್ನು ಸಂಘಟಿಸಲು ಇದ್ದ ಅವರ ಏಕೈಕ ಮಾರ್ಗವೂ ಮುಚ್ಚಿಹೋದಂತಾಗಿಬಿಟ್ಟಿದೆ. ಹಾಗಾಗಿ, ಅವರಿಗೆ ಈಗ ಗೊತ್ತಿರೋದು ಮೋದಿಯನ್ನು ಮುಗಿಸುವುದು ಮಾತ್ರ. ಅವಕಾಶಕ್ಕಾಗಿ ಕಾಯುತ್ತಲೇ ಇದ್ದರು. ಆ ಅವಕಾಶವನ್ನು ರಾಮಮಂದಿರದ ಕುರಿತಂತ ನಿರ್ಣಯ ಒದಗಿಸಿಕೊಡಬಹುದೆಂದು ಭಾವಿಸಿದರೆ ದೇಶದ ಬಹುತೇಕ ಜನ ಆ ಕುರಿತಂತೆ ಮಾತನಾಡಲೂ ಸಿದ್ಧರಾಗಲಿಲ್ಲ. ಮುಸಲ್ಮಾನರಲ್ಲೇ ಭಿನ್ನ ಭಿನ್ನ ಪಂಗಡಗಳಾಗಿ ಅನೇಕರು ನ್ಯಾಯದ ನಿರ್ಣಯವನ್ನು ಒಪ್ಪಬೇಕೆಂಬ ಹಂತಕ್ಕೆ ಬಂದುಬಿಟ್ಟಿದ್ದರು.

    ಇಷ್ಟೂ ದಿನ ತಮಗೆ ತಪ್ಪು ಮಾಹಿತಿ ಕೊಟ್ಟ ಸರ್ಕಾರಗಳನ್ನು, ರಾಜಕೀಯ ನಾಯಕರುಗಳನ್ನು ಬೈದುಕೊಂಡೇ ಮುಸಲ್ಮಾನರು ಶಾಂತವಾಗಿಬಿಟ್ಟರು. ಆಗ ಬಂದ ನಿರ್ಣಯ ಪೌರತ್ವ ಕಾಯ್ದೆ. ಕಾಶ್ಮೀರದ 370ನೇ ವಿಧಿಯನ್ನು ತೆಗೆಯುವ ಕೇಂದ್ರ ಸರ್ಕಾರದ ನಿರ್ಣಯಕ್ಕೆ ಯಾರೂ ತುಟಿಪಿಟಿಕ್ ಎಂದಿರಲಿಲ್ಲ! ಆದರೆ ಈಗ ಬಲುಬೇಗ ಸಿಎಎ ಕುರಿತಂತೆ ತಪ್ಪು ಮಾಹಿತಿಗಳನ್ನು ಮುಸಲ್ಮಾನರ ನಡುವೆ ಹಬ್ಬಿಸಲಾಯ್ತು.

    ಅನೇಕ ಮಾಧ್ಯಮಗಳು ಸುಳ್ಳುಸುದ್ದಿಗಳನ್ನು ವ್ಯಾಪಕವಾಗಿ ಹಬ್ಬಿಸಿ ದೆಹಲಿ, ಉತ್ತರಪ್ರದೇಶವೇ ಮೊದಲಾಗಿ ತೀರಾ ಕರ್ನಾಟಕದಲ್ಲೂ ದಂಗೆಗಳಾಗಲು ಪ್ರಚೋದಿಸಿದರು. ಸರ್ಕಾರ ಒಂದಿನಿತೂ ಜಗ್ಗಲಿಲ್ಲ. ಉಲ್ಟಾ ಸಮಾಜದಲ್ಲಿ ಮತಾಂಧರ ಕುರಿತಂತೆ ಅಭಿಪ್ರಾಯ ಕೆಟ್ಟದಾಗಿ ಹೊಮ್ಮಲಾರಂಭಿಸಿತು. ಆಗ ಅವರು ತಿರಂಗಾ ಹಿಡಿದು ಪ್ರತಿಭಟನೆ ಮಾಡುವ ಹೊಸರೂಪದ ಗಲಾಟೆಗೆ ಕೈಹಾಕಿದರು. ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲವೆಂದು ಗೊತ್ತಾದ ಮೇಲೆ ನಡೆದದ್ದೇ ದೆಹಲಿಯ ದಂಗೆಗಳು!

    ನಾವೀಗ ಹೋರಾಟ ಮಾಡಬೇಕಾದ ಶೈಲಿ ಭಿನ್ನವಾಗಿದೆ. ಈ ಹಿಂದೆ 2001ರಲ್ಲಿ ಅಮೆರಿಕದ ಕಟ್ಟಡದ ಮೇಲೆ ದಾಳಿಯಾದಾಗ ಅಲ್ಲಿಯೂ ಹೀಗೇ ಮುಸಲ್ಮಾನರು ಅವಕಾಶವನ್ನು ಬಳಸಿಕೊಳ್ಳಲೆಂದು ಬೀದಿಗಿಳಿದಿದ್ದರು. ಮೊದಲ ಒಂದು ತಿಂಗಳುಗಳ ಕಾಲ ಸಣ್ಣಪುಟ್ಟ ಪ್ರತಿಕ್ರಿಯೆಯ ಮೂಲಕ

    ದಂಗೆಕೋರರನ್ನು ತಹಬಂದಿಗೆ ತರಲೆತ್ನಿಸಿದ ಅಮೆರಿಕ ಕೊನೆಗೊಮ್ಮೆ ಕೈಚೆಲ್ಲಿತು. ವಾಲ್​ಸ್ಟ್ರೀಟ್​ನಲ್ಲಿ ಪ್ರತಿಭಟನಾಕಾರರ ಮೇಲೆ ಮೆಣಸಿನಪುಡಿ ಎರಚಿ ಅದಕ್ಕೂ ಬಾಗದವರನ್ನು ಮನಸೋ ಇಚ್ಛೆ ಬಡಿಯಲಾಯ್ತು. ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮುಖಕ್ಕೆ ಖಾರದಪುಡಿ ಎರಚಲಾಗಿತ್ತು. ನ್ಯೂಯಾರ್ಕ್​ನಲ್ಲಿ 700ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿ ಒಳತಳ್ಳಲಾಗಿತ್ತು. ಅಟ್ಲಾಂಟಾದಿಂದ ಹಿಡಿದು ಪೋರ್ಟ್​ಲ್ಯಾಂಡ್​ನವರೆಗೂ ಪ್ರತಿಭಟನಾಕಾರರ ಮೇಲೆ ಅಶ್ರುವಾಯು ಬಳಸಿದ್ದಲ್ಲದೆ ರಬ್ಬರ್ ಬುಲೆಟ್​ಗಳ ಮೂಲಕ ಮುಲಾಜಿಲ್ಲದೆ ದಾಳಿ ಮಾಡಲಾಗಿತ್ತು. ಕೆಲವೇ ದಿನಗಳಲ್ಲಿ

    ಅಮೆರಿಕವನ್ನು ಶಾಂತಸ್ಥಿತಿಗೆ ತಂದ ಬಗೆ ಇದು. ನಮಗೂ ಈಗ ಆ ಮಾರ್ಗವೊಂದೇ ಬಾಕಿ! ಪಾಕಿಸ್ತಾನದ ಎಂಜಲು ಕಾಸಿಗೆ ಬಲಿಬಿದ್ದು ಒಂದಷ್ಟು ಜನ ಇಲ್ಲಿನವರನ್ನು ಭಡಕಾಯಿಸುತ್ತಾರೆ. ಈ ರೀತಿ ಬ್ರೈನ್​ವಾಶ್​ಗೆ ಒಳಗಾದವರು ನಮ್ಮವರು ತಮ್ಮವರೆನ್ನದೇ ವಿಧ್ವಂಸಕವೃತ್ತಿಗಿಳಿದು ಅವರನ್ನು ಕೊಲ್ಲುತ್ತಾರೆ. ಇವಿಷ್ಟನ್ನೂ ಮಾಡುವಾಗ ಈ ಕಾರ್ಯವನ್ನು ಭಗವಂತ ಮೆಚ್ಚುತ್ತಾನೆ ಎಂದೂ ನಂಬಿಕೊಂಡಿರುತ್ತಾರೆ. ಇಂತಹ ಕಾರ್ಯವನ್ನು ಮೆಚ್ಚುವ ದೇವರೂ ಇರುತ್ತಾರಾ?! ನಮ್ಮಂಥವರಲ್ಲಿ ಪ್ರಶ್ನೆ ಹಾಗೆಯೇ ಉಳಿಯುತ್ತದೆ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts