Monday, 20th August 2018  

Vijayavani

ಕೊಡಗಿನ ಸಂತ್ರಸ್ತರಿಗೆ ಗಾಯದ ಮೇಲೆ ಬರೆ - ಫೈನಾನ್ಸ್​ ಕಂಪನಿಗಳಿಂದ ಕಿರುಕುಳ - ಕೊಟ್ಟ ಸಾಲ ವಾಪಸ್​ ಕೊಡುವಂತೆ ಪಟ್ಟು        ಮಣಿಪಾಲ್ ಆಸ್ಪತ್ರೆ ವೈದ್ಯನ ಹುಚ್ಚಾಟ - ಕುಡಿದ ಮತ್ತಿನಲ್ಲಿ ಬಿಎಂಡಬ್ಲ್ಯೂ ಕಾರು ಚಾಲನೆ - ಪಾದಾಚಾರಿ ಬಲಿ ಪಡೆದ ಡಾಕ್ಟರ್        ಹೋಪ್ ಫಾರಂ ಬಳಿ ಕುಸಿದ ಲೈಟ್ ಕಂಬ - ಸ್ಥಳದಲ್ಲೇ ವಿದ್ಯಾರ್ಥಿನಿ ದುರ್ಮರಣ - ಬಿಬಿಎಂಪಿ, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ        ವೈಮಾನಿಕ ಸಮೀಕ್ಷೆಯಲ್ಲಿ ಸಿಎಂ ಪೇಪರ್ ರೀಡಿಂಗ್ - ಸಂತ್ರಸ್ತರಿಗೆ ಬಿಎಸ್ಕೆಟ್ ಎಸೆದ ರೇವಣ್ಣ - ಸಾರ್ವಜನಿಕರಿಂದ ಆಕ್ರೋಶ        ಮಹಾರಾಷ್ಟ್ರದಲ್ಲಿ ಮಹಾ ಮಳೆಯ ಅಬ್ಬರ - ಚಿಕ್ಕೋಡಿಯಲ್ಲಿ 6 ಸೇತುವೆಗಳು ಮತ್ತೆ ಮುಳುಗಡೆ - ಜನರಿಗೆ ಸಂಕಷ್ಟ        ಮರಿಗೆ ತೊಂದರೆ ನೀಡ್ತಿದ್ದಾರೆಂದು ರೊಚ್ಚಿಗೆದ್ದ ಆನೆ - ಫೋಟೋ ತೆಗೆದ ಪ್ರವಾಸಿರ ಮೇಲೆ ಅಟ್ಯಾಕ್       
Breaking News

ವೀರೂ​ ಪ್ರಕಾರ ಇಂಗ್ಲೆಂಡ್​ ಸರಣಿ ಗೆಲ್ಲೋಕೆ ಈ ಆಟಗಾರ ಬೇಕೆ ಬೇಕಂತೆ?

Monday, 11.06.2018, 10:01 AM       No Comments

ನವದೆಹಲಿ: ಮುಂದಿನ ತಿಂಗಳು ಟೀಂ ಇಂಡಿಯಾ ಟೆಸ್ಟ್​, ಏಕದಿನ ಮತ್ತು ಟಿ-20 ಸರಣಿಗಳಿಗಾಗಿ ಇಂಗ್ಲೆಂಡ್​ಗೆ ಪ್ರವಾಸ ಬೆಳೆಸಲಿದೆ. ಇಂಗ್ಲೆಂಡ್ ಸರಣಿ ಗೆಲ್ಲಲೇಬೇಕೆಂದು ಭಾರತ ಸಾಕಷ್ಟು ತಯಾರಿಯನ್ನು ಕೂಡ ಮಾಡಿಕೊಳ್ಳುತ್ತಿದೆ. ಆದರೆ, ಇಂಗ್ಲೆಂಡ್​ ಪ್ರವಾಸದ ಬಗ್ಗೆ ಸೆಹ್ವಾಗ್​ ಹೇಳಿರುವ ಮಾತು ಟೀಂ ಇಂಡಿಯಾ ಪಾಳಯದಲ್ಲಿ ಭಯ ಹುಟ್ಟಿಸಿದೆ.

ಹೌದು, ವಿರೇಂದ್ರ ಸೆಹ್ವಾಗ್​ ಅವರು ಟೀ ಇಂಡಿಯಾ ಪರ ಸಾಕಷ್ಟು ಪಂದ್ಯಗಳನ್ನಾಡಿದ್ದಾರೆ. ಅದರಲ್ಲೂ ಇಂಗ್ಲೆಂಡ್​ ನೆಲದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಈ ಅನುಭವದಿಂದಲೇ ಸೆಹ್ವಾಗ್​ ಟೀಂ ಇಂಡಿಯಾಕ್ಕೆ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಈ ಒಬ್ಬ ಆಟಗಾರನಿಲ್ಲದೇ ಇಂಗ್ಲೆಂಡ್​ ತಂಡವನ್ನು ಎದುರಿಸಿದ್ದೇ ಆದಲ್ಲಿ ಸರಣಿ ಗೆಲ್ಲೋದು ಕಷ್ಟವಾಗಲಿದೆ ಎಂದು ಸೆಹ್ವಾಗ್​ ಕಡ್ಡಿಮುರಿದಂತೆ ಹೇಳಿದ್ದಾರೆ.

ಯಾರದು ವಿರೂ ಹೇಳಿದ ದಾಂಡಿಗ?
ಇತ್ತೀಚೆಗಷ್ಟೇ ಫೇಸ್​ಬುಕ್​ ಲೈವ್​ ಬಂದಿದ್ದ ಸೆಹ್ವಾಗ್​ಗೆ ಫ್ಯಾನ್​ ಒಬ್ಬರು ಕೊಹ್ಲಿ ಫಿಟ್ನೆಸ್​ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಕೊಹ್ಲಿ ಫಿಟ್ನೆಸ್​ ಸಮಸ್ಯೆ ಎದುರಿಸುತ್ತಿರುವುದು ನಿಜ. ಹೀಗಾಗಿ ಕೌಂಟಿಯಲ್ಲಿ ಆಡುತ್ತಿಲ್ಲ. ಕೌಂಟಿಯಲ್ಲಿ ಆಡದೇ ಇರೋದ್ರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ, ಇಂಗ್ಲೆಂಡ್​ ಪ್ರವಾಸದಲ್ಲಿ ಕೊಹ್ಲಿ ಆಡದೇ ಇದ್ದರೆ ಮಾತ್ರ ತಂಡದ ಗೆಲುವು ಕಷ್ಟವಾಗಲಿದೆ ಎಂದಿದ್ದಾರೆ.

ಇದು ವೀರೂ ಟೀಂ ಇಂಡಿಯಾಗೆ ನೀಡಿರುವ ಎಚ್ಚರಿಕೆಯ ಘಂಟೆ. ಟೀಂ ಇಂಡಿಯಾ ಹುಡುಗರು ಇಂಗ್ಲೆಂಡ್​ನಲ್ಲಿ ಆಡುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಟೀಂ ಇಂಡಿಯಾ ಆಟಗಾರರು ತವರಿನಲ್ಲಿ ಹುಲಿ. ವಿದೇಶದಲ್ಲಿ ಇಲಿ ಎಂಬುವ ಹಣೆಪಟ್ಟಿಯನ್ನ ಅಳಿಸಿಹಾಕಬೇಕಾದರೆ ಕ್ರಿಕೆಟ್ ಜನಕರಿಗೆ ಅವರದ್ದೇ ನಾಡಿನಲ್ಲಿ ಕ್ರಿಕೆಟ್ ಪಾಠ ಮಾಡಬೇಕಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top