Friday, 25th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ವೀರೇಂದ್ರ ಸೆಹ್ವಾಗ್​ರನ್ನು ಕೊಂಡಾಡಿದ ಕ್ರಿಸ್​ ಗೇಲ್​

Friday, 20.04.2018, 8:18 AM       No Comments

ಮೊಹಾಲಿ: ಈ ಬಾರಿಯ ಐಪಿಎಲ್​ ಹರಾಜಿನಲ್ಲಿ ಕೊನೆಯವರೆಗೂ ಹರಾಜಾಗದೇ ನಂತರ ಅನ್​ ಸೋಲ್ಡ್​ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ಮೊತ್ತಕ್ಕೆ ಬಿಕರಿಯಾಗಿದ್ದ ವೆಸ್ಟ್​ ಇಂಡೀಸ್​ ದೈತ್ಯ ಕ್ರಿಕೆಟಿಗೆ ಕ್ರಿಸ್​ ಗೇಲ್ ಅವರು ವೀರೇಂದ್ರ ಸೆಹ್ವಾಗ್​ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.​

ನನ್ನನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸೆಹ್ವಾಗ್​ ಐಪಿಎಲ್​ ಉಳಿಸಿಕೊಂಡಿದ್ದಾರೆ ಎಂದು ಕ್ರಿಸ್​ ಗೇಲ್​ ಧನ್ಯವಾದಗಳನ್ನು ತಿಳಿಸಿದ್ದಾರೆ.​

ಅಷ್ಟಕ್ಕೂ ಗೇಲ್​, ವೀರೂಗ್ಯಾಕೆ ಧನ್ಯವಾದ ಹೇಳ್ತಿದ್ದಾರೆ ಅಂತಿರಾ…ಹೌದು, ಐಪಿಎಲ್‌ ಹರಾಜು ಪ್ರಕ್ರಿಯೆ ವೇಳೆ ವಿರೇಂದ್ರ ಸೆಹ್ವಾಗ್‌ ಮನಸು ಮಾಡದಿದ್ದರೆ ಗುರುವಾರ ನಡೆದ ಪಂದ್ಯದಲ್ಲಿ ಗೇಲ್‌ ಅಬ್ಬರಿಸುತ್ತಿರಲಿಲ್ಲ ಮತ್ತೊಂದು ಶತಕ ದಾಖಲೆ ಮಾಡುತ್ತಿರಲಿಲ್ಲ.

ಕಳಪೆ ಬ್ಯಾಟಿಂಗ್ ಪ್ರದರ್ಶನ, ಕಳಪೆ ಫಿಟ್ನೆಸ್ ಮಟ್ಟ ಹಾಗೂ ಮೈದಾನದ ಹೊರಗಿನ ವಿಷಯಗಳಲ್ಲಿ ಪದೇ ಪದೇ ವಿವಾದಕ್ಕೊಳಗಾಗಿದ್ದ ಗೇಲ್​ರನ್ನು ಖರೀದಿಸಲು ಯಾವ ತಂಡವೂ ಮುಂದೆ ಬಂದಿರಲಿಲ್ಲ. ಆದರೆ, ಕೊನೆ ಘಳಿಗೆಯಲ್ಲಿ ಸೆಹ್ವಾಗ್​ ಅವರ ಸಲಹೆಯಂತೆ ಗೇಲ್​ ಪಂಜಾಬ್‌ ತಂಡ ಸೇರಿಕೊಂಡರು. ಆದರೂ ಮೊದಲು ಎರಡು ಪಂದ್ಯಗಳಿಂದ ಗೇಲ್‌ ಹೊರಗೆ ಉಳಿದಿದ್ದರು.

ಚೆನ್ನೈ ಸೂಪರ್‌ ಕಿಂಗ್ಸ್‌‌ ತಂಡದ ವಿರುದ್ಧ ಕಣಕ್ಕಿಳಿದಿದ್ದ ಗೇಲ್‌ ಅದ್ಭುತ ಪ್ರದರ್ಶನ ನೀಡಿದ್ದರು. 33 ಎಸೆತಗಳನ್ನು ಎದುರಿಸಿದ ಗೇಲ್‌ 7 ಫೋರ್‌, 4 ಸಿಕ್ಸ್‌ಗಳನ್ನು ಸಿಡಿಸಿ 63 ರನ್‌ಗಳನ್ನು ಕಲೆ ಹಾಕಿದ್ದರು. ಜತೆಗೆ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು.

ಹೈದರಾಬಾದ್‌ ವಿರುದ್ಧದ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಗೇಲ್​ ಕೇವಲ 63 ಎಸೆತಗಳಲ್ಲಿ 11 ಸಿಕ್ಸರ್‌, 1ಫೋರ್‌ ನೆರವಿನೊಂದಿಗೆ ಅಜೇಯ 104ರನ್‌ ಗಳಿಸಿದ್ದಾರೆ. ಇದು ಐಪಿಎಲ್‌‌ನ 11ನೇ ಆವೃತ್ತಿಯಲ್ಲಿ ಮೂಡಿ ಬಂದ ಮೊದಲ ಶತಕವಾಗಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top