Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

15 ವರ್ಷದಲ್ಲಿ ಭಾರತದ ಬೆಸ್ಟ್ ಟೀಂ ಯಾವುದು?: ಹೀಗಿತ್ತು ಕೊಹ್ಲಿ ಉತ್ತರ…

Wednesday, 12.09.2018, 2:47 PM       No Comments

ನವದೆಹಲಿ: ಐದು ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್​​ ವಿರುದ್ಧ 4-1 ಅಂತರದಲ್ಲಿ ಟೀಂ ಇಂಡಿಯಾ ಸೋತಿದ್ದರೂ ನಾಯಕ ವಿರಾಟ್​ ಕೊಹ್ಲಿಗೆ ಪ್ರಸ್ತುತ ಟೀಂ ಇಂಡಿಯಾ ತಂಡವೇ ಉತ್ತಮವಂತೆ.

ಇಂಗ್ಲೆಂಡ್​ನಿಂದ ತೆಗೆದುಕೊಂಡು ಹೋಗಲು ಏನು ಇಲ್ಲ. ಬದಲಾಗಿ ಉತ್ತಮ ಪ್ರಯಾಣ ಮಾಡಬಹುದು ಹಾಗೂ ಸ್ಪರ್ಧಿಸಿ ಜಯ ಸಾಧಿಸಬಹುದಷ್ಟೇ. ಮೂರು ವರ್ಷಗಳನ್ನು ನೀವು ಗಮನಿಸಿದರೆ, ವಿದೇಶಿ ನೆಲದಲ್ಲಿ ನಾವು 9 ಪಂದ್ಯಗಳನ್ನು ಹಾಗೂ ಮೂರು ಸರಣಿಗಳನ್ನು ಗೆದ್ದಿದ್ದೇವೆ. ಅಲ್ಪಾವಧಿಯಲ್ಲಿ ಇಂತಹ ಸಾಧನೆಯನ್ನು 15-20 ವರ್ಷದ ಹಿಂದೆ ಇದ್ದ ತಂಡಗಳು ಮಾಡಿಲ್ಲ. ಈ ವೇಳೆ ಅತ್ಯುತ್ತಮ ಆಟಗಾರರು ಸಹ ತಂಡದಲ್ಲಿದ್ದರೂ ಎಂದು ಕೊನೆಯ ಟೆಸ್ಟ್​​ ಪಂದ್ಯದ ವೇಳೆ ತಂಡ ಕೋಚ್​ ರವಿಶಾಸ್ತ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಶಾಸ್ತ್ರಿ ಅವರ ಹೇಳಿಕೆಗೆ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್​ ಗಂಗೂಲಿ ಹಾಗೂ ಸುನೀಲ್​ ಗವಾಸ್ಕರ್​ ವಿರೋಧ ವ್ಯಕ್ತಪಡಿಸಿದ್ದರು.

ಪಂದ್ಯಾನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು ರವಿಶಾಸ್ತ್ರಿ ಅವರ ಹೇಳಿಕೆಯನ್ನು ಉದ್ದೇಶಿಸಿ 15 ವರ್ಷಗಳಲ್ಲಿ ಭಾರತದ ಅತ್ಯುತ್ತಮ ತಂಡ ಯಾವುದು ಎಂದು ಕೊಹ್ಲಿಯನ್ನು ಪ್ರಶ್ನಿಸಿದ್ದರು. ಅಲ್ಲದೆ, ಇಂತಹ ಪ್ರಶ್ನೆ ನಿಮಗೆ ಒತ್ತಡವನ್ನು ಉಂಟು ಮಾಡುತ್ತವೆಯೇ? ಉತ್ತಮ ತಂಡ ಯಾವುದೆಂಬುದನ್ನು ನೀವು ನಂಬುತ್ತೀರ ಎಂದು ಕೇಳಿದ್ದರು.

ಇದಕ್ಕೆ ಗಲಿಬಿಲಿಗೊಂಡ ಕೊಹ್ಲಿ, ಯಾಕಿಲ್ಲ? ನಮ್ಮ ಕಡೆಯಿಂದ ನಾವು ಅತ್ಯುತ್ತಮರು ಎಂದು ನಂಬಿದ್ದೇವೆ ಎಂದು ಉತ್ತರಿಸಿದ್ದರು. ಹಾಗಾದರೆ, ನಿಮ್ಮ ದೃಷ್ಟಿಯಲ್ಲಿ ಯಾವುದು ಉತ್ತಮ ತಂಡ ಎಂದು ಮರಳಿ ಪತ್ರಕರ್ತರನ್ನೇ ಕೊಹ್ಲಿ ಪ್ರಶ್ನಿಸಿದ್ದರು. ಅದಕ್ಕೆ ಪತ್ರಕರ್ತ ನನಗೆ ಖಚಿತವಾಗಿ ಗೊತ್ತಿಲ್ಲ ಎಂಬ ಉತ್ತರ ನೀಡಿದ್ದ.

ಕೊನೆಯಲ್ಲಿ ಪ್ರತಿಕ್ರಿಯಿಸಿದ ಕೊಹ್ಲಿ ನಿಮಗೆ ಖಚಿತವಾಗಿ ಗೊತ್ತಿಲ್ವಾ? ಅದು ನಿಮ್ಮ ಅಭಿಪ್ರಾಯ. ಧನ್ಯವಾದಗಳು ಎಂದು ಖಾರವಾಗಿ ಪ್ರತಿಕ್ರಿಯಿಸಿ ಮಾತು ಮುಗಿಸಿದ್ದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top