Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಒಂದೇ ದಿನದಲ್ಲಿ ಸಾಗರಿಯೇ ಹಾಡಿನಿಂದ ವೈರಲ್​ ಆದ ಕುರಿಗಾಹಿ ಹನುಮಂತಪ್ಪ

Saturday, 09.06.2018, 12:43 PM       No Comments

ಗದಗ: ಆಡು-ಕುರಿ ಮೇಯಿಸುತ್ತಲೇ ಶಿವರಾಜ್​ಕುಮಾರ್​ ಅಭಿನಯದ ಸಾಗಿಯೇ ಸಾಗರಿಯೇ…ಹಾಡನ್ನು ಸೆಲ್ಫೀ ವೀಡಿಯೊ ಮೂಲಕ ಹಾಡಿರುವ ಕುರಿಗಾಹಿ ಹನುಮಂತ ಬಟ್ಟೂರ ಅವರ ಹಾಡು ವಾಟ್ಸ್​ಆ್ಯಪ್​ನಲ್ಲಿ ವೈರಲ್​ ಆಗಿದೆ.

ಗದಗ ಜಿಲ್ಲೆಯ ಶಿರಹಟ್ಟಿಯ ಹನುಮಂತ ಕೇವಲ ಸಾಮಾನ್ಯ ಹಾಡುಗಾರನಾಗಿದ್ದರೆ ಇಷ್ಟೊಂದು ಗಮನ ಸೆಳೆಯುತ್ತಿರಲಿಲ್ಲವೇನೋ ಆದರೆ ಈತ ಕುರಿಗಾಹಿ. ವಿಶೇಷ ಇರೋದೇ ಇಲ್ಲಿ. ಆಡು- ಕುರಿ ಕಾಯಲು ಹೋದಾಗ ವೀಡಿಯೋದಲ್ಲಿ ಆಡು-ಕುರಿಗಳು ಬರುವಂತೆ ಮೊಬೈಲ್ ಕ್ಯಾಮೆರಾ ಆನ್ ಮಾಡಿಕೊಂಡು ತಾನೇ ವೀಡಿಯೊ ಮಾಡಿಕೊಳ್ಳೋ ಮೂಲಕ ಹಾಡು ಹಾಡಿ ಇಡೀ ರಾಜ್ಯಕ್ಕೆ ಚಿರಪರಿಚಿತನಾಗುತ್ತಿದ್ದಾನೆ.

ಚಿಕ್ಕಂದಿನಿಂದ ಸಿನಿಮಾ ನೋಡುವ ಗೀಳು. ಆರಂಭದಿಂದ ಡಾ. ರಾಜ್ ಕುಮಾರ್ ಅವರ ಅಭಿಮಾನಿ ಆಗಿದ್ದೆ ಎಂದು ಹೇಳುವ ಹನುಮಂತ ನಂತರದಲ್ಲಿ ಎಲ್ಲಾ ನಾಯಕರ ಚಿತ್ರಗಳನ್ನೂ ಅಭಿಮಾನದಿಂದಲೇ ನೋಡುತ್ತಿರುವುದಾಗಿ ಹೇಳುತ್ತಾನೆ. ಹನುಮಂತ ಹೈಸ್ಕೂಲ್​ವರೆಗೂ ಮಾತ್ರ ವಿದ್ಯಾಭ್ಯಾಸ ಮಾಡಿದ್ದು ಅನಿವಾರ್ಯವಾಗಿ ಕುಲವೃತ್ತಿ ಮುಂದುವರಿಸುತ್ತಿದ್ದಾನೆ. ಇನ್ನೂ ಈತನಿಗೆ ಸಂಗೀತ ಇಷ್ಟ. ಹಾಗಾಗೇ ಸರಿಗಮಪದಂತಹ ಸಂಗೀತಕ್ಕೆ ಸಂಬಂಧಪಟ್ಟ ರಿಯಾಲಿಟಿ ಶೋಗಳು ಅಚ್ಚುಮೆಚ್ಚು. (ದಿಗ್ವಿಜಯ ನ್ಯೂಸ್​)

Gadag: Shepherd Famous for Singing

Gadag: Shepherd Famous for Singing #Gadag #ShepherdFamous #Singing #DighvijayNews

Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ 9 ಜೂನ್ 2018

Leave a Reply

Your email address will not be published. Required fields are marked *

Back To Top