Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ನ್ಯಾಯಾಧಿಪನ ಹಾದಿ..

Sunday, 22.04.2018, 3:03 AM       No Comments

|ಜ ಉಮೇಶ್ ಕುಮಾರ್ ಶಿಮ್ಲಡ್ಕ

ದ್ಯದ ಪರಿಸ್ಥಿತಿಯಲ್ಲಿ ‘ಮಹಾಭಿಯೋಗ’ ಎಂಬ ಈ ಶಬ್ದ ಕಿವಿಗೆ ಬೀಳುತ್ತಿರುವಂತೆಯೇ ಸ್ಮೃತಿ ಪಟಲದಲ್ಲಿ ಮೂಡುವ ಚಿತ್ರ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರದ್ದು. ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿ ಇನ್ನೂ ವರ್ಷಪೂರ್ತಿ ಆಗಿಲ್ಲ. ಪದಗ್ರಹಣದ ಬೆನ್ನಲ್ಲೇ ಅವರನ್ನು ಪದಚ್ಯುತಗೊಳಿಸುವುದಕ್ಕೆ ಇನ್ನಿಲ್ಲದ ಪ್ರಯತ್ನ ಆರಂಭವಾಗಿದೆ. ಈ ಪ್ರಯತ್ನಕ್ಕೆ ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗುತ್ತಿಲ್ಲವಾದರೂ, ಒಂದಷ್ಟು ಚದುರಿದ ಮಾಹಿತಿಗಳು ಕಣ್ಣ ಮುಂದೆ ನಿಲ್ಲುತ್ತವೆ. ಬಹುಶಃ ಆ ಮಾಹಿತಿಗಳಲ್ಲಿ ಅವರ ವ್ಯಕ್ತಿತ್ವದ ಚಿತ್ರಣವನ್ನೂ ನಾವು ಕಾಣಬಹುದೇನೋ..

ಸಿಜೆಐ ಆಗಿ ಅಧಿಕಾರ ಸ್ವೀಕರಿಸುವ ಮೊದಲೇ ಮಹತ್ವದ ತೀರ್ಪಗಳ ಮೂಲಕ ದೇಶದ ಗಮನಸೆಳೆದವರು ನ್ಯಾಯಮೂರ್ತಿ ದೀಪಕ್ ಮಿಶ್ರಾ. ಮುಂಬೈ ಸ್ಪೋಟದ ಅಪರಾಧಿಗಳಲ್ಲೊಬ್ಬನಾದ ಉಗ್ರ ಯಾಕೂಬ್ ಮೆಮೋನ್​ನನ್ನು ಗಲ್ಲಿಗೇರಿಸಬಾರದು ಎಂದು ಲಾಬಿ ಮಾಡಿ ರಾಷ್ಟ್ರಪತಿಗೆ ಪತ್ರಬರೆದವರ ಪೈಕಿ ಎಚ್.ಎಸ್.ಬೇಡಿ, ಪಿ.ಬಿ.ಸಾವಂತ್, ಎಚ್.ಸುರೇಶ್ ಮತ್ತು ಇತರೆ ನಿವೃತ್ತ ನ್ಯಾಯಮೂರ್ತಿಗಳು, ಸಂಸದರಾದ ಶತ್ರುಘ್ನ ಸಿನ್ಹಾ, ಮಣಿಶಂಕರ್ ಅಯ್ಯರ್, ರಾಮ್ ಜೇಠ್ಮಲಾನಿ, ಸಿಪಿಐಎಂ ಪಾಲಿಟ್ ಬ್ಯೂರೋ ಸದಸ್ಯರಾದ ಪ್ರಕಾಶ್ ಕಾರಟ್, ಬೃಂದಾ ಕಾರಟ್ ಮತ್ತಿತರರು ಇದ್ದರೆಂಬುದನ್ನು ‘ರಾ’ದ ಪಾಕಿಸ್ತಾನ ವಿಭಾಗದ ಮುಖ್ಯಸ್ಥರಾಗಿದ್ದ ಬಿ.ರಾಮನ್ ಲೇಖನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಇಂತಹ ಪ್ರಕರಣದಲ್ಲಿ ಯಾಕೂಬ್ ಸಲ್ಲಿಸಿದ್ದ ದಯಾಅರ್ಜಿಯನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಸುಪ್ರೀಂ ಕೋರ್ಟ್ ನ್ಯಾಯಪೀಠ 2015ರ ಮಧ್ಯಭಾಗದಲ್ಲಿ ತಿರಸ್ಕರಿಸಿತ್ತು. ಇದಕ್ಕೆ ಪ್ರತಿಯಾಗಿ ನ್ಯಾ.ಮಿಶ್ರಾ ಅವರಿಗೆ ಅನಾಮಧೇಯ ‘ಕೊಲೆ ಬೆದರಿಕೆ’ ಪತ್ರ ಬಂದಿತ್ತು. ಹೀಗೆ ಅವರ ಕಠಿಣ ನಿಲುವುಗಳ ಕಾರಣಕ್ಕೆ ಬೆದರಿಕೆಗಳೂ ಸರ್ವೆಸಾಮಾನ್ಯ ಎಂಬ ಭಾವನೆಯೂ ಅಂದೂ ಇತ್ತು, ಇಂದೂ ಇದೆ. ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರಿಂದ ತೆರವಾದ ಸಿಜೆಐ ಸ್ಥಾನಕ್ಕೆ ಕಳೆದ ವರ್ಷ ಆ.28ರಂದು ನಿಯೋಜಿತರಾದವರು ನ್ಯಾ. ದೀಪಕ್ ಮಿಶ್ರಾ. ಅವರ ಅಧಿಕಾರಾವಧಿ ಇರುವುದೇ 13 ತಿಂಗಳು. ಅಂದರೆ ಈ ವರ್ಷ ಅಕ್ಟೋಬರ್ 2ರಂದು ಅವರು ನಿವೃತ್ತರಾಗಲಿದ್ದಾರೆ. ಸಿಜೆಐ ಆಗಿ ಪದಗ್ರಹಣ ಮಾಡುವುದಕ್ಕೂ ಮೊದಲೇ, ಅಯೋಧ್ಯೆ ರಾಮಮಂದಿರ ಪ್ರಕರಣದ ತೀರ್ಪನ್ನು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೀಡುವವರಿದ್ದಾರೆ ಎಂಬರ್ಥದ ಸುದ್ದಿಗಳು ಪ್ರಕಟವಾಗಿದ್ದವು.

ಸಿಜೆಐ ಆಗಿ 4 ತಿಂಗಳಾಗುತ್ತಲೇ ನಾಲ್ವರು ಹಿರಿಯ ನ್ಯಾಯಮೂರ್ತಿಗಳಾದ ಜೆ.ಚೆಲಮೇಶ್ವರ, ರಂಜನ್ ಗೊಗೋಯ್, ಮದನ್ ಲೋಕುರ್, ಕುರಿಯನ್ ಜೋಸೆಫ್ ಜನವರಿ 12ರಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ‘ಸಿಜೆಐ ಆಡಳಿತ ವೈಖರಿ ಮತ್ತು ಕೇಸು ಹಂಚಿಕೆ ವಿಧಾನ ಸರಿ ಇಲ್ಲ. ಅಯೋಧ್ಯೆಯ ರಾಮಜನ್ಮಭೂಮಿ ವಿವಾದ, ಆಧಾರ್, ಭೂಸ್ವಾಧೀನ, ಜಸ್ಟೀಸ್ ಬಿ.ಎಚ್.ಲೋಯಾ ಅಸಹಜ ಸಾವಿನ ಕುರಿತ ಮಹತ್ವದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಗಳನ್ನು ವಿಚಾರಣೆಗಾಗಿ ಹಂಚಿಕೆ ಮಾಡಲು ಅನುಸರಿಸುತ್ತಿರುವ ರೋಸ್ಟರ್ ವಿಧಾನ ಸಮರ್ಪಕವಾದುದಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು. ಈ ಪತ್ರಿಕಾಗೋಷ್ಠಿ ಬೆನ್ನಲ್ಲೇ ನ್ಯಾ.ಚೆಲಮೇಶ್ವರ್ ಮತ್ತು ಸಿಪಿಐ ನಾಯಕ ಡಿ.ರಾಜಾ ಭೇಟಿ ದೇಶದ ಗಮನ ಸೆಳೆದಿತ್ತು. ಈ ಬಗ್ಗೆ ಆ ಸಂದರ್ಭದಲ್ಲಿ ಕರ್ನಾಟಕದ ಮಾಜಿ ಅಡ್ವೋಕೇಟ್ ಜನರಲ್ ಬಿ.ವಿ.ಆಚಾರ್ಯ ನೀಡಿದ ಹೇಳಿಕೆ- ‘ನ್ಯಾಯಮೂರ್ತಿಗಳು ಅನಿವಾರ್ಯವಾಗಿ ಪತ್ರಿಕಾ ಗೋಷ್ಠಿ ನಡೆಸಿದರೂ ಆ ಹೇಳಿಕೆಗೊಂದು ತೂಕ ಇರಬೇಕು. ಆದರೆ, ಇಲ್ಲಿ ಡಿ.ರಾಜಾ ಜತೆಗಿನ ಮಾತುಕತೆ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಇಲ್ಲಿ ರಾಜಕಾರಣಿಗಳು ಏನೋ ಆಟ ಆಡುತ್ತಿದ್ದಾರೆ. ಯಾರೇನೇ ಹೇಳಿದರೂ ಡಿ.ರಾಜಾರನ್ನು ನ್ಯಾ. ಚೆಲಮೇಶ್ವರ್ ಭೇಟಿಯಾಗಲೇಬಾರದಿತ್ತು’ ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ವಿಷಯ ಸ್ಪಷ್ಟತೆ ದೃಷ್ಟಿಯಿಂದ ಅವಶ್ಯ. ಇದರ ಬೆನ್ನಿಗೇ ಜಸ್ಟೀಸ್ ಲೋಯಾ ಪ್ರಕರಣದ ಪಿಐಎಲ್ ಸದ್ದು ಮಾಡಿತು. ಇದು ರಾಜಕೀಯ ತಿರುವು ಪಡೆಯುತ್ತಿರುವಂತೆಯೇ ಜಸ್ಟೀಸ್ ಲೋಯಾ ಪುತ್ರ ಅನುಜ್ ಲೋಯಾ, ‘ತಂದೆಯವರ ನಿಧನ ಹಠಾತ್ ಆಗಿದ್ದಾದರೂ ಅದರ ಹಿಂದೆ ಯಾವುದೇ ಸಂದೇಹ ನಮಗಿಲ್ಲ. ನಮ್ಮ ಕುಟುಂಬದ ಸದಸ್ಯರನ್ನು ಘಾಸಿಗೊಳಿಸಬೇಡಿ’ ಎಂದು ಮನವಿ ಮಾಡಿದ್ದೂ ಸುದ್ದಿಯಾಯಿತು. ಇಷ್ಟಾಗ್ಯೂ, ಸುಪ್ರೀಂ ಕೋರ್ಟ್​ನ ಸಿಜೆಐ ನೇತೃತ್ವದ ನ್ಯಾಯಪೀಠ ಈ ಸಂಬಂಧದ ಪಿಐಎಲ್ ವಿಚಾರಣೆ ನಡೆಸಿ, ಅದರ ಹಿಂದಿನ ರಾಜಕೀಯ ಹಿತಾಸಕ್ತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡು ಅರ್ಜಿಯನ್ನು ವಜಾಗೊಳಿಸಿತ್ತು. ಈ ಇಷ್ಟು ಬೆಳವಣಿಗೆಗಳ ನಡುವೆ ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಪ್ರಕರಣದ ವಿಚಾರಣೆ ವಿಷಯ ಪದೇಪದೆ ವ್ಯಕ್ತವಾಗಿದೆ. ಇದು ಸಿಜೆಐ ನೇತೃತ್ವದ ನ್ಯಾಯಪೀಠದಲ್ಲೇ ನಡೆಯಲಿರುವುದು ಹಲವರ ಆತಂಕಕ್ಕೆ ಕಾರಣ. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಈ ಪ್ರಕರಣದ ವಿಚಾರಣೆಗೆ ಹಾಜರಾಗಿ 2019ರ ಲೋಕಸಭೆ ಚುನಾವಣೆ ನಂತರದಲ್ಲಿ ವಿಚಾರಣೆ ಮುಂದುವರಿಸುವಂತೆ ಮನವಿ ಮಾಡಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಏತನ್ಮಧ್ಯೆ, ಲೋಕಸಭೆಯಲ್ಲಿ ಸಿಜೆಐ ವಿರುದ್ಧ ಮಹಾಭಿಯೋಗ ನಡೆಸುವುದಕ್ಕೆ ಕಾಂಗ್ರೆಸ್ ಪಕ್ಷ ಪ್ರಯತ್ನಿಸಿ ಸೋತಿತ್ತು. ನಂತರ ಸದ್ದಿಲ್ಲದೆ ರಾಜ್ಯಸಭೆಯಲ್ಲಿ ಮಹಾಭಿಯೋಗ ಮಂಡನೆಗೆ ಸಿದ್ಧತೆ ನಡೆಸಿದ್ದು ಈಗ ಮುಂದೇನು ಎಂಬ ಪ್ರಶ್ನೆಯೊಂದಿಗೆ ಎಲ್ಲರೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ನಿರ್ಣಯದತ್ತ ಗಮನಹರಿಸಿದ್ದಾರೆ. ಒಂದೊಮ್ಮೆ ಮಹಾಭಿಯೋಗ ನಿಲುವಳಿ ಸ್ವೀಕೃತವಾದರೆ ಸಿಜೆಐಗೆ ನೋಟಿಸ್ ಜಾರಿಯಾಗುತ್ತದೆ. ಆ ಸಂದರ್ಭ ಎದುರಾದರೆ, ಮಹಾಭಿಯೋಗ ಇತ್ಯರ್ಥವಾಗುವ ತನಕ ಅಯೋಧ್ಯೆ ರಾಮಜನ್ಮಭೂಮಿ ವಿಚಾರಣೆ ಸೇರಿ ಬೇರಾವುದೇ ವಿಚಾರಣೆ ನಡೆಸುವಂತಿಲ್ಲ. ಇದು ಫಲಿಸಿದರೆ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ರಾಜಕೀಯ ಅಜೆಂಡಾ ಕಾರ್ಯಗತವಾದಂತೆ ಎಂಬ ಮಾತೂ ಈಗ ಕೇಳುತ್ತಿದೆ.

ನ್ಯಾಯಾಂಗದ ಇತಿಹಾಸದಲ್ಲಿ ಇಷ್ಟೊಂದು ತೀವ್ರತರದ ರಾಜಕೀಯ ವಿರೋಧ ಕಟ್ಟಿಕೊಂಡ ನ್ಯಾಯಮೂರ್ತಿ ಮಿಶ್ರಾ ಒಡಿಶಾ ಮೂಲದವರು. 1953ರ ಅ.3ರಂದು ಕಟಕ್​ನಲ್ಲಿ ಜನನ. ಕಾನೂನು ವ್ಯಾಸಂಗ ಮಾಡಿದ ಅವರು 1997ರ ಫೆ.14ರಂದು ಒಡಿಶಾ ಹೈಕೋರ್ಟ್​ನ ಬಾರ್​ನಲ್ಲಿ ವಕೀಲಿಕೆಗೆ ನೋಂದಣಿ ಮಾಡಿಕೊಂಡರು. 1996ರಲ್ಲಿ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿ, ಮುಂದೆ ಮಧ್ಯಪ್ರದೇಶ

ಹೈಕೋರ್ಟ್​ನಲ್ಲಿ ಕಾಯಂ ನ್ಯಾಯಮೂರ್ತಿಯಾಗಿ, ನಂತರ ಪಟನಾ ಹೈಕೋರ್ಟ್, ದೆಹಲಿ ಹೈಕೋರ್ಟ್​ಗಳಲ್ಲಿ ಮುಖ್ಯನ್ಯಾಯಮೂರ್ತಿಯಾಗಿ ಕರ್ತವ್ಯ ನಿರ್ವಹಿಸಿದರು. 2011ರ ಅ.10ರಂದು ಸುಪ್ರೀಂ ಕೋರ್ಟ್​ಗೆ ಬಡ್ತಿ ಪಡೆದರು. ವೈಯಕ್ತಿಕ ಬದುಕಿನೆಡೆ ಗಮನಿಸಿದರೆ ಮದುವೆ ಆಗಿದ್ದು, ಉಳಿದ ವಿವರಗಳು ಲಭ್ಯವಿಲ್ಲ. ಸಿನಿಮಾ ಹಾಲ್​ಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಮಾಡಿದ್ದ ನ್ಯಾಯಮೂರ್ತಿ ಮಿಶ್ರಾ ಅವರ ನ್ಯಾಯಪೀಠದ ಎದುರು, ಆಧಾರ್ ಖಾಸಗಿತನದ ಪ್ರಕರಣ, ಕಾವೇರಿ, ಕೃಷ್ಣಾ ನದಿ ನೀರಿನ ಹಂಚಿಕೆ ಸೇರಿ ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದೆ. ಅವರ ಅಧಿಕಾರಾವಧಿ ಮುಗಿಯುವುದರೊಳಗೆ ಕೆಲವು ಪ್ರಕರಣಗಳು ಇತ್ಯರ್ಥಗೊಳ್ಳಬಹುದೆಂಬ ನಿರೀಕ್ಷೆ, ಆಶಾಭಾವನೆ ಹಲವರಲ್ಲಿದೆ.

Leave a Reply

Your email address will not be published. Required fields are marked *

Back To Top