Sunday, 19th August 2018  

Vijayavani

ರಣಚಂಡಿ ಮಳೆಗೆ ಕುಸಿಯುತ್ತಿದೆ ಕೊಡಗು - ಮತ್ತೆ ಜೋರಾಯ್ತು ಮಳೆ ಅಬ್ಬರ - ಮುಕ್ಕೋಡ್ಲು ಗ್ರಾಮದಲ್ಲಿ 80 ಜನರ ರಕ್ಷಣೆ        ಕ್ಷಣ ಕ್ಷಣಕ್ಕೂ ಆತಂಕ, ಬಿರುಕು ಬಿಟ್ಟ ಧರೆ - ಪ್ರವಾಹದಲ್ಲಿ ಕೊಚ್ಚಿ ಹೋಗ್ತಿದೆ ಬೆಟ್ಟ,ಗುಡ್ಡ - ಕಣ್ಮುಂದೆಯೇ ನೆಲಸಮ ವಾಗ್ತಿದೆ ಬದುಕು        ಕೊಡಗಲ್ಲಿ ಇಂದು ಸಿಎಂ ಎಚ್​ಡಿಕೆ ಪ್ರವಾಸ - ಸಂತ್ರಸ್ಥರ ನೋವು ಆಲಿಸಲಿರುವ ಬಿಎಸ್​ವೈ - ನಿರಾಶ್ರಿತರಿಗೆ ನೆರವು ಅಂದ್ರು ರೇವಣ್ಣ        ಸಂತ್ರಸ್ಥರಿಗೆ ಸ್ಯಾಂಡಲ್​ವುಡ್​​​​​​​​​ ನೆರವಿನ ಹಸ್ತ - ಅಗತ್ಯವಸ್ತುಗಳ ಪೂರೈಸಿದ ಸ್ಟಾರ್ಸ್​​​​​​​​​​​ - ಕೈಲಾದ ಸಹಾಯ ಮಾಡ್ತಿದ್ದಾರೆ ಕರುನಾಡ ಜನರು        ಕೇರಳದಲ್ಲಿ ಕಡಿಮೆಯಾಗ್ತಿಲ್ಲ ನೆರೆ ಅಬ್ಬರ - ಸಾವಿನ ಸಂಖ್ಯೆ 357ಕ್ಕೇ ಏರಿಕೆ - ದೇವರನಾಡಿಗೆ ಹರಿದು ಬರ್ತಿದೆ ನೆರವಿನ ಮಹಾಪೂರ        ಭಾರತ - ಇಂಗ್ಲೆಂಡ್​ ನಡುವಿನ 3ನೇ ಟೆಸ್ಟ್​​​​ ಪಂದ್ಯ - ಬೃಹತ್ ಮೊತ್ತದತ್ತ ಟೀಂ ಇಂಡಿಯಾ - ಶತಕದ ಗಡಿಯಲ್ಲಿ ಎಡವಿದ ಕೊಹ್ಲಿ       
Breaking News

ಉದ್ಯಮಿಯಿಂದ ಹಸಿರಾಯ್ತು ಬರಡು ಭೂಮಿ

Monday, 11.06.2018, 3:00 AM       No Comments

| ಸಂದೀಪ್ ಸಾಲ್ಯಾನ್ ಬಂಟ್ವಾಳ

ಹುಟ್ಟೂರಿನಲ್ಲಿ ಸಾಕಷ್ಟು ಕೃಷಿ ಯೋಗ್ಯ ಭೂಮಿಯಿದ್ದರೂ ಉದ್ಯೋಗ ನಿಮಿತ್ತ ಹಲವು ಮಂದಿ ಮುಂಬೈ, ವಿದೇಶಗಳಿಗೆ ಹೋಗಿ ನೆಲೆ ಕಂಡುಕೊಳ್ಳುತ್ತಾರೆ. ಹೀಗಾಗಿ, ಉದ್ಯೋಗದ ವಲಸೆಯಿಂದಲೂ ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಭೂಮಿಗಳು ಬರಡಾಗುತ್ತಿರುವುದನ್ನು ಈಗ ಕಾಣಬಹುದು. ಆದರೆ ಇಲ್ಲೊಬ್ಬರು ಉದ್ಯೋಗ ನಿಮಿತ್ತ ಮುಂಬೈಯಲ್ಲಿ ನೆಲೆಸಿದ್ದರೂ, ಕಳೆದ ಹಲವು ವರ್ಷಗಳಿಂದ ಬರಡು ಬಿದ್ದಿದ್ದ ಜಮೀನಿನಲ್ಲಿ ತೋಟಗಾರಿಕಾ ಬೆಳೆ ಬೆಳೆಸಿ ಮತ್ತೆ ಹಸಿರು ಕಂಗೊಳಿಸುವಂತೆ ಮಾಡಿದ್ದಾರೆ.

ಮಂಗಳೂರು ತಾಲೂಕಿನ ಇರುವೈಲು ದೊಡ್ಡಗುತ್ತುವಿನ ದೇವರಾಜ ರೈ ಉದ್ಯೋಗ ನಿಮಿತ್ತ ಮುಂಬೈಯಲ್ಲಿ ನೆಲೆಸಿ ಬಳಿಕ ಅಲ್ಲೇ ಉದ್ಯಮಿಯಾಗಿ ಬೆಳೆದವರು. ಮುಂಬೈಯಲ್ಲಿ ನೆಲೆಸಿದ ಪರಿಣಾಮ ಊರಲ್ಲಿದ್ದ ಹಿರಿಯರ 10 ಎಕರೆ ಕೃಷಿ ಭೂಮಿ ಬೆಳೆಯಿಲ್ಲದೆ ಬರಡಾಗಿತ್ತು. ಪಾಳು ಭೂಮಿ ಹಾಗೂ ಗುಡ್ಡ ಪ್ರದೇಶವನ್ನು ಮತ್ತೆ ಕೃಷಿ ಭೂಮಿಯನ್ನಾಗಿ ಪರಿವರ್ತಿಸಬೇಕೆಂದು ಪಣತೊಟ್ಟ ಅವರು ಅಡಕೆ, ತೆಂಗು, ಬಾಳೆ ಮತ್ತಿತರ ತೋಟಗಾರಿಕಾ ಬೆಳೆ ಬೆಳೆದು ಕೃಷಿಯತ್ತ ಮುಖ ಮಾಡಿದ್ದಾರೆ. ಬರಡಾಗಿದ್ದ ಭೂಮಿಯಲ್ಲಿ 1,200 ಅಡಕೆ, 400 ಹೈಬ್ರೀಡ್ ಕೆಂದಾಳೆ, ಬಾಳೆ ಬೆಳೆಸಿದ್ದಾರೆ. ಮೀನು ಸಾಕಾಣಿಕೆಯನ್ನೂ ಆರಂಭಿಸಿದ್ದಾರೆ. ಸ್ಥಳೀಯ ಶಾಸಕರ ಅನುದಾನದಡಿ ನಿರ್ವಣಗೊಂಡಿರುವ ಕಿಂಡಿ ಅಣೆಕಟ್ಟು ಕೃಷಿಗೆ ನೀರಿನ ಆಸರೆಯಾಗಿದೆ.

ರೈತ ಸಂಘ ಪ್ರೇರಣೆ

ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ದೇವರಾಜ ರೈ ಅವರಿಗೆ ಕೃಷಿಯಲ್ಲಿ ಆಕರ್ಷಣೆ ಮೂಡುವಂತೆ ಮಾಡಿದ್ದು ರೈತ ಸಂಘ. ರೈತಸಂಘ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಮನೋಹರ ಶೆಟ್ಟಿ ಅವರ ಸಂಪರ್ಕದಿಂದಾಗಿ ಊರಲ್ಲಿದ್ದ ಹಡೀಲು ಭೂಮಿಯಲ್ಲಿ ಕೃಷಿ ಮಾಡಲು ದೇವರಾಜ ರೈ ಮನಸ್ಸು ಮಾಡಿದರು. ಅವರ ಸಹಕಾರ ಪಡೆದುಕೊಂಡು ತೋಟಗಾರಿಕಾ ಬೆಳೆ ಬೆಳೆಯಲು ಮುಂದಾದರು. ಮಂಗಳೂರು ತೆಂಗು ಉತ್ಪಾದಕರ ಫೆಡರೇಷನ್ ಮೂಲಕ ತೆಂಗಿನ ಗಿಡಗಳು ದೊರೆತವು. ಸಿಪಿಸಿಆರ್​ಐ ಕೃಷಿ ವಿಜ್ಞಾನಿಗಳಾದ ಡಾ. ಸಿರಿಲ್ ಹಾಗೂ ಡಾ. ವಿನಾಯಕ ಹೆಗ್ಡೆ ಅವರು ದೇವರಾಜ ರೈ ಕೃಷಿ ಆಸಕ್ತಿಗೆ ಪ್ರೋತ್ಸಾಹ ನೀಡಿದರು. ಸೂಕ್ತ ಮಾರ್ಗದರ್ಶನ ನೀಡಿ ಬರಡು ನೆಲ ಹಸಿರಿನಿಂದ ನಳನಳಿಸುವಂತೆ ಮಾಡುವಲ್ಲಿ ನೆರವಾದರು. ದೇವರಾಜ್ ಅವರ ಸಂಪರ್ಕಕ್ಕೆ: 9082622588.

ಮುಂಬೈಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಕಾರಣ ಊರಿನಲ್ಲಿದ್ದ ಹಿರಿಯರ ಕೃಷಿ ಜಮೀನು ಹಡೀಲು ಬಿದ್ದಿತ್ತು. ರೈತ ಸಂಘ ಸಹಕಾರ ಹಾಗೂ ಸಿಪಿಸಿಆರ್​ಐ ಕೃಷಿ ವಿಜ್ಞಾನಿಗಳ ಮಾರ್ಗದರ್ಶನ ದಿಂದ ತೋಟಗಾರಿಕಾ ಬೆಳೆ ಬೆಳೆಸಲಾಗಿದೆ. ಹೊರ ಊರುಗಳಲ್ಲಿರುವ ಅನೇಕ ಜನರಿಗೆ ಅವರ ಸ್ವಂತ ಊರಲ್ಲಿ ಕೃಷಿ ಭೂಮಿಯಿರುತ್ತದೆ. ಎಲ್ಲರೂ ಕೃಷಿ ಮಾಡುವತ್ತ ಮನಸ್ಸು ಮಾಡಿದರೆ ಕರಾವಳಿ ಭೂಮಿ ಹಸಿರುಮಯವಾಗಲಿದೆ.

| ದೇವರಾಜ ರೈ ದೊಡ್ಡಗುತ್ತು

ಅನೇಕ ಮಂದಿ ಜೀವನ ನಿರ್ವಹಣೆಗಾಗಿ ಹೊರ ಊರುಗಳಿಗೆ ಹೋಗಿ ನೆಲೆಸುತ್ತಾರೆ. ಕೆಲವರ ಜಮೀನಿನಲ್ಲಿ ಕೃಷಿ ಆಗುತ್ತಿದ್ದರೆ ಬಹುತೇಕರ ಜಮೀನು ಬರಡಾಗಿರುತ್ತದೆ. ಆದರೆ ಬಂಜರು ನೆಲವನ್ನು ಹಸನುಗೊಳಿಸುವುದು ಪುಣ್ಯದ ಕೆಲಸ. ದೇವರಾಜ ರೈ ಅವರು ಕೃಷಿಯಲ್ಲಿ ಆಸಕ್ತಿ ಹೊಂದಿದ್ದು, ಅವರ ಹಿರಿಯರಿಂದ ಬಳವಳಿಯಾಗಿ ಬಂದಿರುವ ಜಮೀನಿನಲ್ಲಿ ಕೃಷಿ ಆರಂಭಿಸಿರುವುದು ಖುಷಿಯ ವಿಚಾರ.

| ಮನೋಹರ ಶೆಟ್ಟಿ ಪ್ರಧಾನ ಕಾರ್ಯದರ್ಶಿ ರೈತಸಂಘ ದ.ಕ. ಜಿಲ್ಲಾ ಸಮಿತಿ

Leave a Reply

Your email address will not be published. Required fields are marked *

Back To Top