Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಅವಧೂತರ ಅವಧೂತ ಯು.ಜಿ. ಕೃಷ್ಣಮೂರ್ತಿ

Thursday, 12.07.2018, 3:00 AM       No Comments

ಯು.ಜಿ. ಕೃಷ್ಣಮೂರ್ತಿ ಎಂದು ಪರಿಚಿತರಾಗಿದ್ದ ಉಪ್ಪಲೂರಿ ಗೋಪಾಲ ಕೃಷ್ಣಮೂರ್ತಿ (9 ಜುಲೈ 1918 – 22 ಮಾರ್ಚ್ 2007) ಜಗತ್ತಿನ ಆಧುನಿಕ ತತ್ತ್ವಶಾಸ್ತ್ರದ ಮೇಲೆ ಪ್ರಭಾವ ಬೀರಿದ ತತ್ತ್ವಶಾಸ್ತ್ರಜ್ಞ. ಅವರು ‘ಅತೀತ’ವನ್ನು ಮುಟ್ಟಿದ ದಾರಿಯ ಚಿತ್ರಣವಿದು.

| ಪರೀಕ್ಷಿತ ತೋಳ್ಪಾಡಿ ಎಸ್.

ಅವಧೂತನೆಂದರೆ ಎಲ್ಲವನ್ನೂ ಒದ್ದು, ನಿರ್ಲಕ್ಷಿಸಿ ಎದ್ದುಹೋದವನು ಎಂದರ್ಥವಿದೆ. ಅಂಥ ಅವಧೂತರುಗಳನ್ನೇ ತಿರಸ್ಕರಿಸಿದ, ಟೀಕಿಸಿದ ಓರ್ವ ಮಹಾವಧೂತನ ಬಗೆಗೆ ಈ ಲೇಖನದ ಶೀರ್ಷಿಕೆ ಹೇಳುತ್ತಿದೆ. ಅಧ್ಯಾತ್ಮಲೋಕದ ಎಲ್ಲ ಪರಿಕಲ್ಪನೆಗಳನ್ನು ಜರಿದು, ಎಲ್ಲ ಆಧ್ಯಾತ್ಮಿಕ ಮಹಾಪುರುಷರನ್ನೂ ಇನ್ನಿಲ್ಲದಂತೆ ಲೇವಡಿ ಮಾಡಿ ನಿಜವಾದ ‘ಅವಧೂತ’ತನವನ್ನು ತೋರಿಸಿದ ಓರ್ವ ಮಹಾಗುರುವಿನ ಬಗೆಗೆ, ತೀರ ಇಷ್ಟವಾದ ಓರ್ವ ಅನುಭಾವಿಯ ಕುರಿತು ಭಯದಿಂದಲೇ ನನ್ನ ಅನಿಸಿಕೆಗಳನ್ನು ಇಲ್ಲಿ ತೋಡಿಕೊಂಡಿರುವೆ.

ಯೂಜಿ ವಿವರಣೆಗಳನ್ನು ಇಷ್ಟಪಡದ ವ್ಯಕ್ತಿ. ಆತ ಎಷ್ಟು ಜೀವಂತನೆಂದರೆ ‘ವ್ಯಾಖ್ಯಾನ’ ಎಂದರೆ ಆತನಿಗೆ ಒಂದು ನಿರ್ಜೀವ ಪದಾರ್ಥ. ಆತ ಕೇವಲ ಜೀವಿಸಿದ. ಆ ಜೀವನ ಅದೆಷ್ಟು ರಭಸದ್ದಾಯಿತೆಂದರೆ, ಅದೆಷ್ಟು ಉಗ್ರವಾಯಿತೆಂದರೆ ಆತ ಮುಟ್ಟಿದ್ದು, ಮಾತನಾಡಿದ್ದು ಎಲ್ಲವೂ ಏನೆಂದೇ ತಿಳಿಯದ ಹಾಗೆ, ಬಿರುಗಾಳಿಯೊಂದು ಬಂದು ಬೀಸಿಹೋದಂತೆ ಅವಶೇಷಗಳಷ್ಟೇ ಕಾಣಿಸುತ್ತಿವೆ. ಪ್ರಚಂಡ ಅಗ್ನಿ ಆಕಸ್ಮಿಕದ ನಂತರ ಭಸ್ಮಶೇಷವಷ್ಟೇ ಉಳಿದಂತಿದೆ.

ಕೃಷ್ಣ ಭಗವದ್ಗೀತೆಯಲ್ಲಿ ಒಂದು ಅಪೂರ್ವವಾದ ಎದೆಗೆಡಿಸುವ ಮಾತೊಂದನ್ನು ಹೇಳುತ್ತಾನೆ; ‘ಹತ್ವಾಪಿ ಸ ಇಮಾನ್ ಲೋಕಾನ್ ನಹಂತಿ ನ ನಿಬಧ್ಯತೇ ||’ (ಭ.ಗೀ.: 18.17) ‘ಈ ಲೋಕವನ್ನೆಲ್ಲ ಆತ ಕೊಂದರೂ ಅದು ಕೊಂದಂತಲ್ಲ. ಆತನಿಗೆ ಬಂಧನಗಳೇ ಇಲ್ಲ’. ನಮ್ಮ ಸಂಸ್ಕೃತಿ ಬ್ರಹ್ಮಕ್ಕೂ, ಬ್ರಹ್ಮಜ್ಞಾನಿಗೂ ಕೊಟ್ಟ ಮಹತ್ವಕ್ಕೆ ನೀಡಿದ ದಾಖಲೆಯಿದು. ಆದ್ದರಿಂದಲೇ ನಮ್ಮ ಸಂಸ್ಕೃತಿ ಯಾವುದನ್ನೂ ಒಪ್ಪದ ಬುದ್ಧನನ್ನು ವಿಷ್ಣುವಿನ ದಶಾವತಾರಗಳಲ್ಲಿ ಸೇರಿಸಿತು. ದೇವರ ಕುರಿತಾದ ಬುದ್ಧನ ಪೂರ್ಣ ಮೌನವನ್ನು ಅರ್ಥಪೂರ್ಣವಾಗಿ ಗ್ರಹಿಸಿತು. ಅನಿಸುತ್ತದೆ. ಅನುಭಾವಿಗಳು ಅಪಾರ್ಥಗೊಳ್ಳಲು ಇಷ್ಟಪಡುತ್ತಾರೆ, ಅರ್ಥವಾಗಲಲ್ಲ.

ಲಾವೋತ್ಸೆ ಅನುಭಾವಿಗಳ ನಡೆಯ ಕುರಿತು ಹೀಗೆ ಹಾಡುತ್ತಾನೆ. ಕವಿ ಮಂಜುನಾಥರ ಸಾಲುಗಳು ಹೀಗಿವೆ.

‘ಜೋಗಿ ಆಟವ ಹೂಡುವನು

ಆದರೂ ಏಕಿಂಥ ನಿಷ್ಠುರ, ಎದೆಗೆಡಿಸುವ ಆಟ?

ಅನುಭಾವಿಗಳ ಜೀವನವನ್ನು ಅವಲೋಕಿಸಿದಾಗ ಒಂದು ಅಚ್ಚರಿಯ ಸಂಗತಿ ಕಂಡುಬರುತ್ತದೆ. ಅದೆಂದರೆ ಯಾವ ಒಂದು ದಾರಿಯಿಂದ ರೀತಿಯಿಂದ ಅವರು ಆ ‘ಅತೀತ’ವನ್ನು ಮುಟ್ಟಿದರೋ ಅದೇ ದಾರಿಯನ್ನು ರೀತಿಯನ್ನು ಮಾತ್ರ ಅವರು ಬೋಧಿಸುವರು. ಉದಾಹರಣೆಗೆ ರಾಮಕೃಷ್ಣ ಪರಮಹಂಸರು ದೈವವನ್ನು ವ್ಯಾಕುಲತೆಯಿಂದ ಅತ್ತು ಕರೆದು ಪಡೆದರು. ಅದೇ ಅವರ ಉಪದೇಶದ ಪಲ್ಲವಿಯಾಯಿತು. ರಮಣರು ‘ನಾನು ಯಾರು?’ ಎಂಬ ಪ್ರಶ್ನೆಯನ್ನು ಜೀವಿಸಿದರು. ಅದೇ ಅವರ ಬೋಧನೆಯ ಉಸಿರಾಯಿತು. ಲಾಹಿರಿ ಮಹಾಶಯರು ಕ್ರಿಯಾಯೋಗದ ಮೂಲಕ ‘ಅದನ್ನು’ ಪಡೆದರು. ಅದೇ ಅವರ ಮಾತಿನ ಶ್ರುತಿಯಾಯಿತು. ಅವರ ಭಗವದ್ಗೀತಾ ಭಾಷ್ಯವನ್ನು ಗಮನಿಸಿದರೆ ಈ ಮಾತು ಸ್ಪುಟವಾಗುತ್ತದೆ. ನಮ್ಮ ಯೂಜಿ ‘ಅದನ್ನು’ ಪಡೆದರು ಹೇಗೆ? ಅದೊಂದು ಅಚ್ಚರಿಯ ವಿದ್ಯಮಾನ.

ಯೂಜಿ ತಮ್ಮ ಯೌವನದಿಂದಲೂ ಇನ್ನೋರ್ವ ಶ್ರೇಷ್ಠ ತತ್ವಜ್ಞಾನಿ ಜೆ. ಕೃಷ್ಣಮೂರ್ತಿಯವರ ಒಡನಾಟದಲ್ಲೇ ಬೆಳೆದವರು. ಜೆ.ಕೆ.ಯವರ ನಿಗೂಢವೂ, ಪರಮಸೂಕ್ಷ್ಮವೂ, ಕಾವ್ಯಮಯವೂ ಆದ ವಿಶ್ಲೇಷಣೆಗಳ ಜೊತೆಗೇ ಬದುಕಿದವರು. ಈಗ ಯೂಜಿಗೆ ಒಂದು ಜೀವನ್ಮರಣದ ಪ್ರಶ್ನೆ ಉಂಟಾಯಿತು. ಅದೆಂದರೆ – ಈ ಸಂತರು, ಮಹಾತ್ಮರು, ಅನುಭಾವಿಗಳು ಎಲ್ಲ ಇದ್ದಾರೆ ಎಂದುಕೊಳ್ಳುತ್ತಿರುವ ಆ ‘ಸ್ಥಿತಿ’ ಯಾವುದು? ಅದನ್ನು ಪಡೆಯುವ ಬಗೆ ಹೇಗೆ? ಇದೊಂದು ಪ್ರಶ್ನೆ ಸತತ 28 ವರ್ಷಗಳಷ್ಟು ಕಾಲ ಯೂಜಿಯ ಎದೆಯಾಳದಲ್ಲಿ ಸುಪ್ತ ಕೆಂಡದಂತೆ ಉರಿಯತೊಡಗಿತು.

ಯೂಜಿಯ ನಲವತ್ತೊಂಬತ್ತನೆಯ ಜನ್ಮದಿನದಂದು ‘ಸಾನನ್’ ಎನ್ನುವ ರಮಣೀಯ ಸ್ಥಳವೊಂದರಲ್ಲಿ ಒಂದು ಕಲ್ಲುಬೆಂಚಿನಲ್ಲಿ ಯೂಜಿ ಆ ಪ್ರಶ್ನೆಯೇ ಆಗಿ ಕುಳಿತಿದ್ದರು. ಕೆಂಡ ಒಳಗೇ ಎಲ್ಲವನ್ನೂ ದಹಿಸುತ್ತ ಒಂದು ನಿರ್ಣಾಯಕ ಹಂತಕ್ಕೆ ಬಂದಿತ್ತು. ಆಗ ಬಂದಿತು ಒಂದು ಕೊನೆಯ ಪ್ರಶ್ನೆ.

‘ಹೌದು! ಈ ಪ್ರಶ್ನೆಯನ್ನೇಕೆ ನಾನು ಇಷ್ಟು ವರ್ಷಗಳಿಂದ ಕೇಳಿಕೊಳ್ಳುತ್ತಿದ್ದೇನೆ? ಏಕೆ ಈ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂಬ ಪ್ರಶ್ನೆಯನ್ನೇ ನಾನು ಕೇಳಿಕೊಳ್ಳಲಿಲ್ಲವಲ್ಲ! ನಾನೇಕೆ ಆ ಪ್ರಶ್ನೆಯನ್ನು ಕೇಳಿಕೊಳ್ಳುತ್ತಿದ್ದೇನೆ ಎಂದರೆ ನನಗೆ ಆ ಸ್ಥಿತಿ ಬೇಕಾಗಿದೆ. ಯಾಕೆ ಬೇಕಾಗಿದೆ ಎಂದರೆ ನಾನು ಉಳಿದವರಿಗಿಂತ ಭಿನ್ನ, ಶ್ರೇಷ್ಠ ಎಂದೆನಿಸಿಕೊಳ್ಳಲು ಬೇಕಾಗಿದೆ! ಅಯ್ಯೋ ನನ್ನ ಸ್ಥಿತಿಯೇ! ಕಳೆದ ಅಷ್ಟು ವರ್ಷಗಳ ತೀವ್ರಾತಿತೀವ್ರ ಶೋಧನೆಯ ಹಿಂದೆ ಇದ್ದದ್ದು ಇಷ್ಟು ಅಲ್ಪ ಅಹಂಕಾರವೇ?’

ಯೂಜಿ ಕುಸಿದುಹೋದರು. ಸಂಪೂರ್ಣ ನಿಸ್ಸಹಾಯಕರಾದರು. ಆತ್ಮವಿಶ್ವಾಸದ ಖನಿಯಾಗಿದ್ದ ಯೂಜಿ ತಮ್ಮ ದಾರುಣ ಸ್ಥಿತಿಯನ್ನು ಮೊತ್ತ ಮೊದಲ ಬಾರಿಗೆ ಎದುರ್ಗೆಂಡರು. ಅದೇ ಕೊನೆಯ ಕ್ಷಣ. ಮರುಕ್ಷಣದಲ್ಲಿ ‘ಅದು’ ಸಂಭವಿಸಿತು. ಸಂಪೂರ್ಣ ಶರಣಾಗತಿಯ, ಅನಾಥತೆಯ ಮರುಕ್ಷಣ ಯೂಜಿಯನ್ನು ‘ಅದು’ ತನ್ನ ತೆಕ್ಕೆಗೆ ಎಳೆದೊಯ್ಯಿತು. ಯೂಜಿ ಅಭಿವ್ಯಕ್ತಿಸುವಂತೆ ಅದೊಂದು ಶರೀರದ ಕಣಕಣದಲ್ಲೂ ನಡೆಯುವ ಮಹಾಸ್ಪೋಟ. ಅದೊಂದು ಪ್ರಳಯ. ಇಚ್ಝಚಞಜಿಠಿಢ. ಹಾಗಾಗಿಯೇ ಯೂಜಿ ಪ್ರತಿಯೊಬ್ಬರನ್ನೂ ನಿಸ್ಸಹಾಯಕರನ್ನಾಗಿಸಲು ಬಯಸುತ್ತಿದ್ದಾರೆ. ವ್ಯಕ್ತಿಯ ಎಲ್ಲ ಆಸರೆಗಳನ್ನು ಕಡಿದೊಗೆಯುತ್ತಿದ್ದಾರೆ. ಆತನಲ್ಲಿ ನಿಜವನ್ನು ಎದುರಿಸುವ ಛಲವನ್ನು ಹುಟ್ಟಿಸುತ್ತಿದ್ದಾರೆ.

ಲಾವೋತ್ಸೆಯ ಅವಧೂತನ ನಡೆಯ ಕುರಿತಾದ ಕೊನೆಯ ಸೊಲ್ಲು ಮಂಜುನಾಥರ ಕನ್ನಡದಲ್ಲಿ ಹೀಗಾಗಿದೆ:

‘ಜೋಗಿ ಆಟವ ಹೂಡುವನು.

ತನ್ನ ಕರುಳ ಕುಡಿಗಳೆನುವಂತೆ

ಜನರ ಲಾಲಿಸುವನು’.

Leave a Reply

Your email address will not be published. Required fields are marked *

Back To Top