Wednesday, 19th September 2018  

Vijayavani

ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ ಡೆಪಾಸಿಟ್ ಆಗ್ತಿದೆ ಹವಾಲಾ ಹಣ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಡಿಕೆಶಿ ಮನೆಯಲ್ಲಿ ಸಿಕ್ಕಿದೆ 20 ಕೋಟಿ ಹಣ - ಡಿಕೆಶಿ ಆಪ್ತ ಆಂಜನೇಯ ತಪ್ಪೊಪ್ಪಿಗೆ ಹೇಳಿಕೆ ಬಿಡುಗಡೆ - ಸಂಬಿತ್ ಪಾತ್ರ ಆರೋಪ        ರಾಜ್ಯ ಬಿಜೆಪಿ ಶಾಸಕರ ಸಭೆ ಆರಂಭ - ಗಾಯತ್ರಿ ವಿಹಾರದಲ್ಲಿ ಮೀಟಿಂಗ್ - ತೀವ್ರ ಕುತೂಹಲ ಕೆರಳಿಸಿದ ಬಿಎಸ್​ವೈ ಮೀಟಿಂಗ್        ನನಗೂ 2 ಮುಖಗಳಿವೆ, ಆದ್ರೂ ಶಾಂತವಾಗಿರ್ತೀನಿ - ಒಂದು ವಾರ ನೋಡಿ ಚಾಟಿ ಬೀಸ್ತೀನಿ - ಸಿಎಂ ಗುಡುಗು        ಶಕ್ತಿಕೇಂದ್ರವಾದ ರಮೇಶ್ ನಿವಾಸ - ಮಿನಿಸ್ಟರ್ ಮನೆಗೆ ಶಾಸಕರ ದಂಡು - ಎಂಟಿಬಿ, ರಾಮಪ್ಪ, ಅಬ್ಬಯ್ಯ ಸೇರಿ ಹಲವರ  ಮಾತುಕತೆ        ಜಾರಕಿಹೊಳಿ ಆಯ್ತು, ಈಗ ಬಳ್ಳಾರಿ ಹುಳಿ - ನಾಗೇಂದ್ರ ಪರ ಬ್ಯಾಟ್ ಬೀಸಿದ್ದ ರಮೇಶ್ ವಿರುದ್ಧ ಗರಂ       
Breaking News

ಬುದ್ಧಿ ಹಾಲಿನಂತೆ!

Thursday, 12.07.2018, 3:00 AM       No Comments

| ಡಾ. ನಾಗಪತಿ ಎಮ್ಮೆಗುಂಡಿ

ಹಾಲನ್ನು ಶುಚಿಯಾಗಿಟ್ಟುಕೊಂಡು ಸರಿಯಾದ ಸಮಯಕ್ಕೆ ಹೆಪ್ಪು ಹಾಕಿದಾಗ ಮೊಸರಾಗುವುದು. ಮೊಸರನ್ನು ಶ್ರಮವಹಿಸಿ ಕಡೆದಾಗ ಬೆಣ್ಣೆ ಬರುವುದು. ಅದನ್ನು ಕೆಡದಂತೆ ರಕ್ಷಿಸಿಕೊಂಡು ಕಾಸಿದಾಗ ತುಪ್ಪ ಸಿಗುವುದು. ಇಲ್ಲಿ ನಾವು ಗಮನಿಸಬೇಕಾದದ್ದು ಏನೆಂದರೆ; ಕಾಲ-ದೇಶವನ್ನು ಸರಿಯಾದ ರೀತಿಯಲ್ಲಿ ಅನುಕರಿಸಿ ಸಂಸ್ಕಾರವನ್ನು ನೀಡಿದರೆ ಆ ವಸ್ತುವಿನಿಂದ ಒಳ್ಳೆಯ ಫಲವನ್ನು ಪಡೆಯಬಹುದು.

ನಮ್ಮ ಬುದ್ಧಿಯೂ ಹಾಲಿನ ಹಾಗೆ. ಬುದ್ಧಿಗಾದರೂ ಕಾಲಕ್ಕೆ-ದೇಶಕ್ಕೆ ತಕ್ಕುದಾದ ಸಂಸ್ಕಾರ ಅನಿವಾರ್ಯ ಮತ್ತು ಆವಶ್ಯಕ. ಬಾಲ್ಯದ ಅವಸ್ಥೆಯಲ್ಲಿಯೇ ನಮ್ಮ ಬುದ್ಧಿಗೆ ಉನ್ನತವಾದ ಸಂಸ್ಕಾರ ದೊರಕಿದರೆ ಮುಂದಿನ ಜೀವನದಲ್ಲಿ ಒಳ್ಳೆಯ ಫಲವನ್ನೇ ಪಡೆಯಬಹುದು. ನಮ್ಮ ಇಂದ್ರಿಯಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕು. ಇಂದ್ರಿಯಗಳು ನಮ್ಮನ್ನು ಎತ್ತೆತ್ತೆಲೋ ಎಳೆದುಕೊಂಡು ಹೋಗುತ್ತಲೇ ಇರುತ್ತವೆ. ಇವನ್ನು ಸರಿದಾರಿಯಲ್ಲಿ ಮುಂದೆ ನಡೆಸಲು ಬುದ್ಧಿಯೆಂಬ ಸಾರಥಿ ಸರಿಯಾಗಿರಬೇಕು. ಈ ಬುದ್ಧಿ ಸರಿ-ತಪ್ಪುಗಳ ವಿಮರ್ಶೆಯನ್ನು ಸರಿಯಾಗಿ ಮಾಡಬೇಕು. ಬುದ್ಧಿ ಬೆಳಕಿನಡೆಗೆ ಸಾಗಬೇಕು.

ತೆಂಗಿನಗಿಡಕ್ಕೆ ನೀರು ಗೊಬ್ಬರಗಳ ಜೊತೆಗೆ ಬೆಳಕು ಅತ್ಯಗತ್ಯವಾಗಿ ಬೇಕು. ಅದು ಬೇರೆ ಗಿಡಗಳ ನೆರಳನ್ನು ಬಯಸುವುದಿಲ್ಲ. ಬೆಳಕನ್ನೇ ಬಯಸುತ್ತದೆ, ಬೆಳಕಿನೆಡೆಗೇ ಸಾಗುತ್ತದೆ. ಬೇರೆ ಗಿಡಗಳ ನೆರಳಿನಲ್ಲಿ ನೆಟ್ಟರೂ ಅದು ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿಕೊಂಡು ಸೂರ್ಯನ ಬೆಳಕಿನೆಡೆಗೆ ಬಾಗುವುದು. ನಮ್ಮ ಬುದ್ಧಿಯನ್ನೂ ಹೀಗೆ ಸಂಸ್ಕರಿಸಿಕೊಳ್ಳಬೇಕು. ನೆರೆಹೊರೆಯ ಕೆಟ್ಟದಾದ ನೆರಳಿನಲ್ಲಿ ನಾವಿರಬೇಕಾಗಿ ಬಂದರೂ ಬೆಳಕಿನಡೆಗೆ ಸಾಗುವ ಪ್ರವೃತ್ತಿಯನ್ನು ನಾವು ಬೆಳೆಸಿಕೊಳ್ಳಬೇಕು. ಒಳ್ಳೆಯ ಶಾಸ್ತ್ರಾಭ್ಯಾಸ, ಸತ್ಸಂಗ ಇವುಗಳನ್ನು ಬಳಸಿಕೊಳ್ಳಬೇಕು. ಕೆಟ್ಟದ್ದನ್ನು ಕಳೆದುಕೊಂಡು ಒಳ್ಳೆಯದನ್ನು ಉಳಿಸಿಕೊಳ್ಳಬೇಕು. ಇದೇ ಪುರುಷಾರ್ಥಗಳ ಸಾಧನೆಗೆ ದಾರಿ. ಕಠೋಪನಿಷತ್ತಿನಲ್ಲಿ ಈ ಮಾತಿದೆ:

ಯಸ್ತು ವಿಜ್ಞಾನವಾನ್ ಭವತಿ ಸಮನಸ್ಕಃ ಸದಾಶುಚಿಃ | ಸ ತು ತತ್ಪದಮಾಪ್ನೋತಿ ಯಸ್ಮಾದ್ ಭೂಯೋ ನ ಜಾಯತೇ ||. ‘ಬುದ್ಧಿಯೆಂಬ ಸಾರಥಿ ಯಾರಿಗೆ ವಿವೇಕವೆಂಬ ಸಂಪತ್ತಿನಿಂದ ಕೂಡಿಕೊಂಡು ಮನಸ್ಸು ಶುದ್ಧವಾಗಿದ್ದು ಇಂದ್ರಿಯಗಳ ಹಿಡಿತವೂ ಸರಿಯಾಗಿರುವುದೋ ಅಂತಹ ಸತ್ಪುರುಷನು ಮಾತ್ರ ಎಂದಿಗೂ ಹಿಂದಿರುಗದ ಪರಮಾತ್ಮನ ಪದವನ್ನು ಹೊಂದುತ್ತಾನೆ.’

Leave a Reply

Your email address will not be published. Required fields are marked *

Back To Top