Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಮೂರರ ಮೆಲುಕು

Thursday, 12.07.2018, 3:00 AM       No Comments

ಸನಾತನಧರ್ಮದ ದೈನಂದಿನ ನಡೆ-ನುಡಿಗಳಲ್ಲಿ ಸಂಖ್ಯೆಗಳು ಹಾಸುಹೊಕ್ಕಾಗಿವೆಯಷ್ಟೆ. ವೇದ-ಶಾಸ್ತ್ರಗಳ ಹಿನ್ನೆಲೆಯಲ್ಲೂ ಮೂರು ಮಹತ್ವಪೂರ್ಣ ಪಾತ್ರ ವಹಿಸುವ ಸಂಖ್ಯೆ. ಈ ಸಂಖ್ಯೆಯ ವೈಶಿಷ್ಟ್ಯವನ್ನು ಅವಲೋಕಿಸೋಣ.

| ಕೋಟೇಶ್ವರ ಸೂರ್ಯನಾರಾಯಣ ರಾವ್

ಸತ್ವ-ರಜ- ತಮಗಳೆಂಬವು ಮೂರು ಗುಣಗಳು. ಸತ್ವ ಸರ್ವಶ್ರೇಷ್ಠ. ರಾಜಸವು ಮಧ್ಯಮ. ತಮಸ್ಸು ಕನಿಷ್ಠ ಗುಣ. ಗುಣತ್ರಯಗಳು ಮಾನವನಲ್ಲೂ ದೇವತೆಗಳಲ್ಲೂ, ರಾಕ್ಷಸರಲ್ಲೂ ಹಂಚಿ ಹೋಗಿರುತ್ತವೆ. ಮೇಲ್ನೋಟಕ್ಕೆ ಉತ್ತಮನಂತೆ ಕಂಡ ಮಾನವನೋರ್ವ ಅಂತರಂಗದಲ್ಲಿ ತಾಮಸ ಗುಣದವನಾಗಿರಬಹುದು. ಸಾಮಾನ್ಯವಾಗಿ ದೈತ್ಯರೆಂದರೆ ತಾಮಸ ಗುಣವುಳ್ಳವರೆಂದರೂ ಅವರಲ್ಲೂ ಸಾತ್ವಿಕ ಗುಣದವರಿರುತ್ತಾರೆ. ಉದಾ: ವಿಭೀಷಣ, ಬಲಿ, ಪ್ರಹ್ಲಾದ ಇತ್ಯಾದಿ.

ಕಾಯ-ವಾಕ್-ಮನ: ದೇಹ, ಮಾತು, ಮನಸ್ಸು ಇವುಗಳೇ ತ್ರಿಕರಣಗಳು. ಇವು ಮೂರೂ ಒಂದಾಗಿ ಕಾರ್ಯ ಮಾಡಬೇಕೆಂದು ಜ್ಞಾನಿಗಳು ಹೇಳುತ್ತಾರೆ.

ಪ್ರಾರಬ್ಧ-ಸಂಚಿತ- ಆಗಾಮಿ ಇವು ಮೂರು ಕರ್ಮದ ವಿಧಗಳು. ಪ್ರಾರಬ್ಧವೆನ್ನುವುದು ಜನ್ಮಜನ್ಮಾಂತರದ ಫಲ. ಓರ್ವ ಜೀವಿ ತನ್ನ ಕಳೆದ ಜನ್ಮದಲ್ಲಿ ಮಾಡಿದ ಪಾಪವನ್ನು ಈ ಜನ್ಮದಲ್ಲಿ ಭೋಗಿಸುವುದೇ ಪ್ರಾರಬ್ಧಕರ್ಮಭೋಗ. ಸಂಚಿತವೆಂದರೆ ಹಿಂದಿನ ಯಾವುದೋ ಜನ್ಮದಲ್ಲಿ ಮಾಡಿದ ಕರ್ಮವನ್ನು ಪರಿಚಯಿಸಿಕೊಂಡು ಮುಂದೆ ಅದರ ಫಲವನ್ನು ಉಣ್ಣುವುದು. ಆಗಾಮಿಯೆಂದರೆ ಮುಂದೆ ಮಾಡಲಿರುವ ಕರ್ಮಗಳು.

ಜಾಗೃತ್-ಸ್ವಪ್ನ-ಸುಷುಪ್ತಿ ಇವು ಪ್ರಸಿದ್ಧ ಮೂರು ಅವಸ್ಥೆಗಳಾಗಿವೆ. ಜಾಗೃತಾವಸ್ಥೆಯಲ್ಲಿ ಯಾವುದೇ ಜೀವಿಯು ಮಾಡುವ ಕರ್ಮ ಕ್ರಿಯೆಗಳಿಗೆ ಜೀವಿಯೇ ಹೊಣೆ. ಜೀವಿಯ ಯೋಗ್ಯತೆಗೆ ತಕ್ಕಂತೆ ದೇವನು ಕರ್ಮ ಮಾಡಿಸುತ್ತಾನೆ. ಜಾಗೃತಾವಸ್ಥೆ ಮತ್ತು ನಿದ್ದೆಯ ನಡುವೆ ಸ್ವಪ್ನಜಗತ್ತನ್ನು ಪ್ರವೇಶಿಸುತ್ತೇವೆ. ಜೀವಿಯು ಮನಸ್ಸಿನ ಹಿಡಿತದಿಂದ ಹೊರಹೋಗಿದ್ದಾಗಿನ ಅವಸ್ಥೆಯೇ ಸುಷುಪ್ತಿ.

ಸ್ವರ್ಗ, ಮರ್ತ್ಯ, ಪಾತಾಳ – ಇವು ತ್ರಿಲೋಕಗಳು. ಗ್ರಂಥಗಳಲ್ಲಿ ಉಲ್ಲೇಖವಿರುವಂತೆ ಸ್ವರ್ಗದಲ್ಲಿ ಇರುವ ದೇವತೆಗಳಿಗೆ ಮರಣವಿಲ್ಲ. ಕಾರಣ ಅವರು ಅಮೃತಪಾನ ಮಾಡಿದವರು. ಮರ್ತ್ಯಲೋಕ ಅರ್ಥಾತ್ ಭೂಲೋಕವು ನಾವು ಹುಟ್ಟಿ ಬೆಳೆದು ನಲಿದು ಬಾಳುವಂತಹ ಸ್ಥಳವೇ ಮರ್ತ್ಯಲೋಕ. 84ಲಕ್ಷ ಯೋನಿಗಳಲ್ಲಿ ಜೀವಿಗಳು ಹುಟ್ಟಿ ಸಾವು ಪಡೆಯುತ್ತಿರುವ ಲೋಕವಿದು. ನಾವಿರುವ ಭೂಮಿಯ ತಳಭಾಗದಲ್ಲಿ ಲೋಕವೊಂದಿದೆಯೆಂಬ ಕಲ್ಪನೆಯಿದೆ. ಅದೇ ಪಾತಾಳ. ಅಲ್ಲಿಯೂ ವಿವಿಧ ಜೀವಿಗಳಿವೆಯೆಂದು ಪುರಾಣೋಲ್ಲೇಖವಿದೆ.

ಬೆಳಗ್ಗೆ, ಮಧ್ಯಾಹ್ನ, ಸಂಜೆ – ಇವು ತ್ರಿಸಂಧ್ಯೆಗಳು. ಈ ಬಗೆಯಲ್ಲಿ ಮೂರು ಸಂಧ್ಯಾಕಾಲಗಳನ್ನು ವಿಂಗಡಿಸಬಹುದು. ರಾತ್ರಿ ಕಳೆದು ಬೆಳಗಾಗುವ ಸಂಧಿಯೇ ಪ್ರಥಮ ಸಂಧ್ಯಾಕಾಲ. ಸೂರ್ಯನು ನಡುನೆತ್ತಿಯ ಮೇಲೆ ಪ್ರಜ್ವಲಿಸುವ ಕಾಲ ಮತ್ತೊಂದು ಸಂಧ್ಯಾಕಾಲ. ಮೂರನೆಯದು ಸಾಯಂಕಾಲ. ಹಗಲು ಕಳೆದು ಇರುಳು ಆವರಿಸುತ್ತಿರುವ ಕಾಲ.

Leave a Reply

Your email address will not be published. Required fields are marked *

Back To Top