Thursday, 19th July 2018  

Vijayavani

ಶಬರಿಮಲೆ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ - ಕೇರಳ ಸರ್ಕಾರದಿಂದ ಗ್ರೀನ್​ಸಿಗ್ನಲ್        ಕೇಂದ್ರದಿಂದ ನೆರವಿನ ಮಹಾಪೂರ - ಕೃಷಿ ಯೋಜನೆ, ಮೆಗಾ ಡೈರಿ ಆರಂಭಕ್ಕೆ 900 ಕೋಟಿ ನೆರವು        ಸ್ಮಶಾನ ಜಾಗದ ವಿಚಾರವಾಗಿ ಜಟಾಪಟಿ - ಎರಡು ಗುಂಪುಗಳ ಮಧ್ಯೆ ಮಾರಾಮಾರಿ - ಘರ್ಷಣೆಯಲ್ಲಿ 50 ಮಂದಿಗೆ ಗಾಯ        ಕೃಷ್ಣಾ ನದಿಯಲ್ಲಿ ಪ್ರವಾಹದ ನರ್ತನ - ಯಾದಗಿರಿಯ ನೀಲಕಂಠನದೊಡ್ಡಿ ಗ್ರಾಮಕ್ಕೆ ಜಲದಿಗ್ಬಂಧನ - ಗ್ರಾಮಸ್ಥರು ತಲ್ಲಣ        ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಜಿಟಿಡಿ - ಬಳ್ಳಾರಿಗೆ ಕಳಿಸೋದಾಗಿ ಅಧಿಕಾರಿಗಳಿಗೆ ವಾರ್ನಿಂಗ್- ಚಪ್ಪಾಳೆ ಹೊಡೆದ ಸ್ಟೂಡೆಂಟ್ಸ್        ಎಲ್ಲೆಡೆ ಕೇಳಿಬರ್ತಿದೆ ಧೋನಿ ನಿವೃತ್ತಿ ವಿಷಯ - ಲೀಡ್ಸ್​​ನಲ್ಲಿ ಅಂಪೈರ್ ಬಳಿ ಬಾಲ್ ಪಡೆದಿದ್ದೇಕೆ - ಕ್ರಿಕೆಟಿಗೆ ಗುಡ್​​ಬೈ ಹೇಳ್ತಾರಾ ಮಾಹಿ       
Breaking News

ಈ ವಾರದ ಸಿನಿಮಾ

Friday, 13.07.2018, 3:01 AM       No Comments

‘ಕರಾಳ ರಾತ್ರಿ’ ಶುರು

ದಯಾಳ್ ಪದ್ಮನಾಭನ್ ನಿರ್ವಣದ ಜತೆಗೆ ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರ ‘ಆ ಕರಾಳ ರಾತ್ರಿ’. ಡಿ ಪಿಕ್ಚರ್ಸ್ ಹಾಗೂ ಓಂ ಪ್ರೊಡಕ್ಷನ್ ಹೌಸ್ ಲಾಂಛನದಲ್ಲಿ ಸಿನಿಮಾ ಸಿದ್ಧಗೊಂಡಿದೆ. ಅವಿನಾಶ್ ಯು ಶೆಟ್ಟಿ ಸಹ ನಿರ್ವಪಕರಾಗಿದ್ದು, ಪಿ.ಕೆ. ಎಚ್ ದಾಸ್ ಛಾಯಾಗ್ರಹಣ, ಗಣೇಶ್ ನಾರಾಯಣ್ ಸಂಗೀತ ನೀಡಿದ್ದಾರೆ. ಜೆಕೆ, ಅನುಪಮಾ ಗೌಡ, ನವೀನ್ ಕೃಷ್ಣ, ರಂಗಾಯಣ ರಘು, ವೀಣಾಸುಂದರ್ ತಾರಾಗಣದಲ್ಲಿದ್ದಾರೆ.

ಚಿತ್ರಮಂದಿರಗಳಲ್ಲಿ ಹಸಿರು ರಿಬ್ಬನ್

ಖ್ಯಾತ ಸಾಹಿತಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕಥೆ, ಚಿತ್ರಕಥೆ, ಹಾಡು ಬರೆದು ‘ಹಸಿರು ರಿಬ್ಬನ್ ಚಿತ್ರ ನಿರ್ದೇಶನ ಮಾಡಿದ್ದಾರೆ. ಆರ್.ಶಿವಕುಮಾರ್ ಬಂಡವಾಳ ಹೂಡಿದ್ದು, ತಾಂತ್ರಿಕ ವರ್ಗದಲ್ಲಿ ಉಪಾಸನ ಮೋಹನ್ (ಸಂಗೀತ), ಪಿ.ವಿ.ಆರ್. ಸ್ವಾಮಿ (ಛಾಯಾಗ್ರಹಣ) ಮತ್ತು ನರಸಿಂಹ ಪ್ರಸಾದ್ (ಸಂಕಲನ) ಇದ್ದಾರೆ. ನಿಖಿಲ್ ಮಂಜು, ಚೈತ್ರಾ, ಸುಪ್ರಿಯಾ ರಾವ್, ಗಿರಿಜಾ ಲೋಕೇಶ್, ಬಿ. ಜಯಶ್ರೀ ಚಿತ್ರದಲ್ಲಿದ್ದಾರೆ.

ಹೆಣ್ಮಕ್ಳ ಎಂಎಂಸಿಎಚ್ ಬಂತು

ಐಶ್ವರ್ಯಾ ಫಿಲ್ಮ್ ಪೊ›ಡಕ್ಷನ್ ಲಾಂಛನದಲ್ಲಿ ಎಸ್.ಪುರುಷೋತ್ತಮ್ ಜೆ.ಜಾನಕಿರಾಮ್ ಅರವಿಂದ್ ನಿರ್ವಣದ ಎಂಎಂಸಿಎಚ್ ಚಿತ್ರಕ್ಕೆ ಮುಸ್ಸಂಜೆ ಮಹೇಶ್ ಕಥೆ-ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ತಾಂತ್ರಿಕ ವರ್ಗದಲ್ಲಿ ನಾಗೇಶ್ ವಿ.ಆಚಾರ್ಯ(ಛಾಯಾಗ್ರಹಣ), ಶ್ರೀಧರ್ ವಿ ಸಂಭ್ರಮ್ (ಸಂಗೀತ) ಇದ್ದಾರೆ. ಮೇಘನಾ ರಾಜ್, ರಾಗಿಣಿ, ದೀಪ್ತಿ, ಪ್ರಥಮಾ ಪ್ರಸಾದ್, ಸಂಯುಕ್ತಾ ಹೊರನಾಡು, ಸುಚೇಂದ್ರಪ್ರಸಾದ್ ಇತರರು ನಟಿಸಿದ್ದಾರೆ.

ತೆರೆದ ‘ಟ್ರಂಕ್’

ಖ್ಯಾತ ನಿರ್ದೇಶಕ ಜಿ.ವಿ. ಅಯ್ಯರ್ ಮೊಮ್ಮಗಳು ರಿಷಿಕಾ ಶರ್ಮಾ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಚಿತ್ರವೇ ‘ಟ್ರಂಕ್’. ವಿ. ಎಸ್. ಮೀಡಿಯಾ ಎಂಟರ್​ಪ್ರೈಸಸ್ ಲಾಂಛನದಲ್ಲಿ ರಾಜೇಶ್ ಭಟ್ ಚಿತ್ರ ನಿರ್ಮಾಣ ಮಾಡಿದ್ದಾರೆ. ಕಾರ್ತಿಕ್, ಪ್ರದೀಪ್, ಗಣೇಶನ್ ಸಂಗೀತ, ಅಲ್ವಿನ್ ಡೊಮಿನಿಕ್ ಹಿನ್ನಲೆ ಸಂಗೀತ, ಭಜರಂಗ್, ಸಂದೀಪ್ ಛಾಯಾಗ್ರಹಣ ನಿಭಾಯಿಸಿದ್ದಾರೆ. ನಿಹಾಲ್, ವೈಶಾಲಿ ದೀಪಕ್, ಅರುಣ ಬಾಲರಾಜ್ ಇತರರು ನಟಿಸಿದ್ದಾರೆ.

ನೀವು ಲವ್ ಯು 2 ಅನ್ನಿ

ಪವನ್ ಚಿತ್ರಾಲಯ ಲಾಂಛನದಲ್ಲಿ ಪವನ್ ಕುಮಾರ್ ನಿರ್ವಿುಸಿರುವ ಚಿತ್ರ ‘ಲವ್ ಯು 2‘. ಜಸ್ಟ್ ಬಿ.ಕೆ. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದು, ಗಂಧರ್ವ ಸಂಗೀತ ನೀಡಿದ್ದಾರೆ. ಜಯಪ್ರಕಾಶ್ ಛಾಯಾಗ್ರಹಣ, ಅರುಣ್ ಥಾಮಸ್ ಸಂಕಲನ, ನಾಗಚೈತನ್ಯ ಸಾಹಸ ನಿರ್ದೇಶನ ಹಾಗೂ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನವಿದೆ. ಪವನ್ ಕುಮಾರ್, ಕೀರ್ತಿಲಕ್ಷ್ಮೀ, ರಘು ಭಟ್, ಮಿಮಿಕ್ರಿ ಗೋಪಿ, ಕೆಂಪೇಗೌಡ, ರಾಮಸ್ವಾಮಿ ತಾರಾಗಣದಲ್ಲಿದ್ದಾರೆ.

Leave a Reply

Your email address will not be published. Required fields are marked *

Back To Top