Thursday, 20th September 2018  

Vijayavani

Breaking News

ಈ ವಾರದ ನಿಮ್ಮ ಭವಿಷ್ಯ ಹೇಗಿದೆ ನೋಡಿ

Sunday, 09.09.2018, 3:03 AM       No Comments

| ಎಂ. ಎಂ. ಕೆ. ಶರ್ಮ ಬೆಂಗಳೂರು, 94483 13270

<< 09-09-2018ರಿಂದ 15-09-2018 >>

ಮೇಷ

ಬೌದ್ಧಿಕ ಶ್ರೀಮಂತಿಕೆಯನ್ನು ಕುಜನು ಅಸ್ತವ್ಯಸ್ತಗೊಳಿಸುವುದು ಖಾತ್ರಿ. ಅತಿಯಾದ ಧೈರ್ಯವನ್ನು ವಾಸ್ತವವಾಗಿ ತೋರಬೇಕಾದುದು ಅನಿವಾರ್ಯ ಹೌದಾದರೂ ಕುಜನು ತುಸುವಾದರೂ ಅತಿ ಧೈರ್ಯ ಸೃಷ್ಟಿಸಿ ಸ್ವಲ್ಪ ಮಟ್ಟಿಗಿನ ಗೊಂದಲ ನಿರ್ಮಾಣ ಮಾಡಬಹುದು, ಎಚ್ಚರ. ಗುರುಬಲ ಇಲ್ಲದಿರುವಾಗ ಬುದ್ಧಿಬಲವೇ ಶ್ರೇಷ್ಠವಾದುದು ಎಂಬುದನ್ನು ತಿಳಿದಿರಿ. ಶೇರು, ರತ್ನಾಭರಣದ ವಿಚಾರದಲ್ಲಿ ಅವಸರ ಬೇಡ. ಮಾರುಕಟ್ಟೆಯ ಏರಿಳಿತಗಳ ನಾಡಿ ಸೂಕ್ತವಾಗಿ ಅರಿತು ಹೆಜ್ಜೆ ಇಡಿ. ಕಟ್ಟಡಗಳ ರಚನೆಯಲ್ಲಿ ನಷ್ಟವಾದೀತು. ನರಸಿಂಹ ಅಷ್ಟೋತ್ತರ ಓದಿ.

ಶುಭದಿಕ್ಕು: ಈಶಾನ್ಯ, ಶುಭಸಂಖ್ಯೆ: 5


ವೃಷಭ

ಸ್ಥಿರ ಸ್ವಭಾವದ ನಿಮ್ಮ ಮನಸ್ಸನ್ನು ಚಂದ್ರ ಗೊಂದಲಕ್ಕೀಡು ಮಾಡುತ್ತಾನೆ. ರವಿಯ ಜತೆಗಿನ ಶುಕ್ರನು ನಿಮ್ಮ ದೈಹಿಕ ಕ್ಷಮತೆಯನ್ನೂ ಸೂಕ್ತವಾಗಿರಿಸಿ ಕೊಳ್ಳಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತಾನೆ. ಬುದ್ಧಿ ಬಲದಿಂದ ಗೆಲ್ಲಲು ಹರಸಾಹಸ ಮಾಡುತ್ತೀರಿ. ಆದರೆ ಎದುರಾಳಿಯು ನೀವು ಚಾಪೆಯ ಕೆಳಗೆ ನುಸುಳಿದರೆ, ಅವನು ರಂಗೋಲಿಯ ಕೆಳಗೆ ನುಸುಳುತ್ತಾನೆ. ರಾಮರಕ್ಷಾ ಸ್ತೋತ್ರ ಪಠಿಸಿ. ಆದಿತ್ಯ ಹೃದಯ ಮಂತ್ರ ಭಾಗ ಪಠಿಸಿ. ಅರಿಷಿಣ ಮತ್ತು ಜೇನನ್ನು ತೆಂಗಿನ ಮರಕ್ಕೆ ಲೇಪಿಸಿ. ಗುರುಬಲದ ದಿವ್ಯ ಶಕ್ತಿ ಹೊರಚಿಮ್ಮಲು ಇದರಿಂದ ದಾರಿ.

ಶುಭದಿಕ್ಕು: ದಕ್ಷಿಣ, ಶುಭಸಂಖ್ಯೆ: 1


ಮಿಥುನ

ಒಂದೋ ದುಬೋಧನೆ ಮಾಡುವ ಜನ ಸಿಗುತ್ತಾರೆ. ಇಲ್ಲ ನೀವೇ ಇಲ್ಲದ ಸಲ್ಲದ ತಪ್ಪು ದಾರಿಗೆ ಹೆಜ್ಜೆ ಇರಿಸುವ ಸಂಕಲ್ಪ ಮಾಡುತ್ತೀರಿ. ಅಲ್ಪಕಾಲದ ಲಾಭ ಕಂಡು ಬಂದರೂ ಕಾಯಿದೆಯ ತೊಡಕುಗಳನ್ನು ಎದುರಿಸುವ ತೊಂದರೆ ಎದುರಾದೀತು, ಎಚ್ಚರ. ಸರ್ವಮಂಗಳೆಯಾದ ಸ್ಕಂದ ಮಾತೆಯನ್ನು ಸ್ತುತಿಸಿ. ಇದರಿಂದ ನಿತ್ಯ ಶೋಭಿತನಾದ ಬುಧನಿಂದ ಬೌದ್ಧಿಕ ಯೋಚನೆಗಳು ಪ್ರಾಮಾಣಿಕವಾದ ದಾರಿಯಲ್ಲೇ ಒದಗಿ ಹೇಗೆ ಸಾಗಿ ಒಳ್ಳೆಯದಾದ ಲಾಭ ಪಡೆಯಬೇಕೆಂಬ ಅಂಶಗಳು ನಿಮಗೆ ಸ್ಪಷ್ಟವಾಗುತ್ತದೆ. ಮನೆ ಕಟ್ಟಲೂ ಅವಕಾಶ ಲಭ್ಯ.

ಶುಭದಿಕ್ಕು: ಪೂರ್ವ, ಶುಭಸಂಖ್ಯೆ: 6


ಕಟಕ

ಆರ್ಥಿಕ ವಿಚಾರಗಳ ಕುರಿತು ಅಲಕ್ಷ್ಯ ಮಾಡಲೇಬೇಡಿ. ಅನಾವಶ್ಯಕವಾದ ಜನರು ನಿಮ್ಮ ಕ್ರಿಯಾಶೀಲತೆಯಿಂದ ನಿಮ್ಮನ್ನು ವಿಮುಖಗೊಳಿಸದಂತೆ ಪ್ರಯತ್ನಿಸಿ. ರಾಹು ಗ್ರಹದಿಂದ ವಿವಿಧ ರೀತಿಯ ನಕಾರಾತ್ಮಕ ಸುಳಿ ನಿಮ್ಮನ್ನು ಸುತ್ತದಂತೆ ಮಲ್ಲಿಗೆ ಹೂವಿಗೆ ಚಂದನ ಲೇಪವನ್ನೂ ಮಾಡಿ ಶ್ರೀಲಲಿತಾಂಬಿಕೆಯನ್ನು ಆರಾಧಿಸಿ. ಲಲಿತಾ ತ್ರಿಶತ ನಾಮಾವಳಿ ಓದಿ. ಪಾಟರ್°ರ್ಸ್ ಜತೆ ಏರುಧ್ವನಿಯ ವಿವಾದ ಬೇಡ. ನಿಮ್ಮ ತರ್ಕಬದ್ಧ ಮಾತು, ಆತ್ಮೀಯ ಧ್ವನಿ ನಿಮ್ಮನ್ನು ಅವರು ವಿಶ್ವಾಸಕ್ಕೆ ಪಡೆಯುವ ಸುಸಂದರ್ಭವನ್ನು ಸೃಷ್ಟಿಸುತ್ತದೆ.

ಶುಭದಿಕ್ಕು: ಉತ್ತರ, ಶುಭಸಂಖ್ಯೆ: 2


ಸಿಂಹ

ಗುರುಬಲವನ್ನು ಹೆಚ್ಚು ಹೆಚ್ಚು ಬಲಗೊಳಿಸಿಕೊಳ್ಳಿ. ಶಿವ ಸಹಸ್ರ ನಾಮಾವಳಿ ಅಥವಾ ವಿಷ್ಣು ಸಹಸ್ರ ನಾಮಾವಳಿ ಓದಿ. ಅಷ್ಟಮ ಶನಿಕಾಟದ ವಿಷಮ ಸುಳಿ ಮೊಟಕುಗೊಳಿಸಲು ದಶರಥ ರಾಜವಿರಚಿತ ಶನೈಶ್ಚರ ಸ್ತೋತ್ರ ಓದಿ. ಮನುಷ್ಯ ಪ್ರಯತ್ನಗಳು ಸೋತಾಗ ದೈವ ಬಲದ ದಿವ್ಯವೇ ಕಾಪಾಡಬೇಕು. ವ್ಯಕ್ತಿತ್ವ ಎಲ್ಲಕ್ಕಿಂತ ದೊಡ್ಡದು. ಸರಳತೆಯಿಂದ ವರ್ಚಸ್ಸನ್ನು ಸಂವರ್ಧಿಸಬಹುದು. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಪರಿಶ್ರಮವು ನಿಮ್ಮನ್ನು ಹೆಚ್ಚಿನ ಎತ್ತರಕ್ಕೆ ಒಯ್ಯಲು ಅನುಕೂಲ ಮಾಡಿಕೊಡುತ್ತದೆ.

ಶುಭದಿಕ್ಕು: ನೈಋತ್ಯ, ಶುಭಸಂಖ್ಯೆ: 7


ಕನ್ಯಾ

ನಿಮ್ಮನ್ನು ಗ್ರಹಗಳು ಗೆಲ್ಲುವ ಕುದುರೆಯ ಮೇಲೆರಲು ಅವಕಾಶ ಕಲ್ಪಿಸಿ ಕೊಡುತ್ತದೆ. ಬಾಳ ಸಂಗಾತಿಯ ಸಲಹೆ ಸೂಚನೆಗಳನ್ನೂ ಅಲಕ್ಷಿಸದೆ ಪಾಲಿಸಿ. ಮಕ್ಕಳನ್ನೂ ವಿಶ್ವಾಸಕ್ಕೆ ಪಡೆಯಿರಿ. ನಿಮ್ಮನ್ನು ವ್ಯಾಜ್ಯದ ಕೂಪ ಕೈತಳ್ಳದಂತೆ ಗಣಪತಿಯ ದಿವ್ಯಾನುಗ್ರಹ ಒದಗಿ ಬಂದಿದೆ. ಗಕಾರಪೂರ್ವಕ ಗಣಪತಿ ಅಷ್ಟೋತ್ತರ ಓದಿ. ಗರಿಕೆಯನ್ನು ಇರಿಸಿ ಆರಾಧಿಸಿ. ಆರೋಗ್ಯಕ್ಕೆ ಸಂಬಂಧಿಸಿದ ವಿಚಾರ ಅಲಕ್ಷಿಸದಿರಿ. ಧನಲಾಭಕ್ಕೆ ಬುಧನು ದಾರಿ ತೋರಿಸುತ್ತಾನೆ. ಧಾನ್ಯ ವಿಲೇವಾರಿ, ಶಿಕ್ಷಣ ಸಂಸ್ಥೆಯ ನಿರ್ವಹಣೆಗಳಿಂದ ಶುಭಫಲ ಇದೆ.

ಶುಭದಿಕ್ಕು: ವಾಯವ್ಯ, ಶುಭಸಂಖ್ಯೆ: 9


ತುಲಾ

ನಷ್ಟವನ್ನು ತುಂಬಿಕೊಳ್ಳುತ್ತ ಸಾಗುವ ಪರಿಣಾಮಕಾರಿಯಾದ ಕಾರ್ಯಯೋಜನೆಗೆ ಮುಂದಾಗುತ್ತೀರಿ. ಕುಜಗ್ರಹದ ಅಡ್ಡ ಪರಿಣಾಮ ನಿಯಂತ್ರಿಸಲು ಮಂಗಳ ಚಂಡಿಕಾ ಸ್ತೋತ್ರ ಪಠಿಸಿ. ಅನುಭವಗಳಿರುವ ಯಾವುದೇ ಕೆಲಸವನ್ನೂ ಅಚ್ಚಕುಕಟ್ಟಾಗಿ ನಿರ್ವಹಿಸಿ. ಸುಸ್ಥಿರನಾಗಿರುವ ಶನೈಶ್ಚರನಿಂದ ಧೈರ್ಯವೂ, ಆರ್ಥಿಕ ದಾರ್ಢ್ಯತೆಯೂ ನಿಮ್ಮ ಪಾಲಿಗೆ ತಡೆಯಿರದೆ ಲಭ್ಯ. ಆಳುಮಕ್ಕಳನ್ನೂ, ಕೈಕೆಳಗಿನವರನ್ನೂ ಉತ್ತೇಜಿಸಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಅವರು ಹೆಚ್ಚಿನ ನಿಗಾವಹಿಸಿ ಸಫಲತೆಗೆ ಕಾರಣರಾಗುತ್ತಾರೆ.

ಶುಭದಿಕ್ಕು: ಪೂರ್ವ, ಶುಭಸಂಖ್ಯೆ: 3


ವೃಶ್ಚಿಕ

ನೀವು ಅಪಾರವಾದ ಬುದ್ಧಿ ಬಲದಿಂದಲೂ, ಕುಜನ ಅನುಗ್ರಹದಿಂದಲೂ ಸಿದ್ಧಿಯ ದಾರಿಗೆ ಅವಶ್ಯಕವಾದ ಜಾಣ ನಡೆಯನ್ನು ಇಡಬಹುದಾಗಿದೆ. ಹಳೆಯ ತಪ್ಪುಗಳು ಪುನರಾವರ್ತನೆಗೊಳ್ಳದಂತೆ ಎಚ್ಚರ ಇರಲಿ. ನಿಮ್ಮನ್ನು ಕೇತುವು ಶನೈಶ್ಚರನ ನಕಾರಾತ್ಮಕ ಶಕ್ತಿಯನ್ನು ಮೂಲ ಮಾಡಿಕೊಂಡು, ಭಾಗ್ಯಕ್ಕೆ ಶಕ್ತಿ ಒದಗಿಸುವ ಚಂದ್ರನನ್ನು ದುರ್ಬಲ ಗೊಳಿಸಿಕೊಂಡು ವಿಘ್ನಗಳನ್ನೇ ತರಲು ಶಪಥ ಮಾಡಿರುತ್ತಾನೆ. ಗುರು ಬಲವು ಸಂಪಾದಿಸಿ. ಕುಸುಮಾಲೆ ಹೂಗಳಿಂದ ಶಿವನನ್ನು, ಗಣಪತಿಯನ್ನು ಆರಾಧಿಸಿ.

ಶುಭದಿಕ್ಕು: ಪಶ್ಚಿಮ, ಶುಭಸಂಖ್ಯೆ: 8


ಧನು

ಎಡಬಿಡದೆ ಬೆಂಕಿಯ ಮೇಲೆ ನಿಂತ ಅನುಭವ ಹೊಂದಹತ್ತಿದ್ದೀರಿ. ವಾಹನಗಳ ಕುರಿತು ಎಚ್ಚರ ಇರಲಿ. ಚಂದ್ರಚೂಡ ಅಷ್ಟೋತ್ತರ, ಧನ್ವಂತರಿ ಸ್ತೋತ್ರ, ಪಂಚಮುಖಿ ಹನುಮಂತ ಕವಚ ಓದಿ. ದೊಡ್ಡ ಬಂಡವಾಳ ಹಾಕಿ ಹೊಸದೇ ವಹಿವಾಟು ನಡೆಸುವ ಅವಸರಕ್ಕೆ ನಿಯಂತ್ರಣವಿರಲಿ. ಏರುಬಿಸಿಲಿನ ಸಮಯದಲ್ಲಿ ಗುಡ್ಡ ಹತ್ತುವ ಕೆಲಸ ಬೇಡ. ಸುಸ್ತು ಹೊಡೆಯುವುದು ನಿಶ್ಚಿತ. ಧೈರ್ಯದಿಂದ ಕೆಲವು ಕೆಲಸಗಳಲ್ಲಿ ಸಫಲತೆ ಪಡೆಯುವಿರಿ. ಆದರೆ ಸಾಡೇಸಾತಿ ಶನಿಕಾಟ ಸುಖವನ್ನು ಕತ್ತರಿಸುತ್ತಲೇ ಇರುತ್ತದೆ.

ಶುಭದಿಕ್ಕು: ಉತ್ತರ, ಶುಭಸಂಖ್ಯೆ: 2


ಮಕರ

ಜನಾನುರಾಗಿಗಳಾದ ನಿಮ್ಮ ಬಳಿ ಕಷ್ಟದ ಹೊರೆಹೊರೆ ತಂದು ಸಮಸ್ಯೆ ನೀಗಿಸಿ ಎಂದು ಜನ ಮುಗಿಬೀಳುತ್ತಾರೆ. ನಿಮಗೂ ಕಷ್ಟವಿದೆ ಎಂಬ ಅರಿವನ್ನು ಅವರು ಹೊಂದಲಾರರು. ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗದಂತೆ ಖರ್ಚು ವೆಚ್ಚ ತೂಗಿಸಲು ತೊಂದರೆಗಳು ಎದುರಾಗುತ್ತಿವೆ. ಸಾಡೇಸಾತಿ ಕಾಟದ ತೊಂದರೆ ಎದುರಿಸುತ್ತಿದ್ದೀರಿ. ಪ್ರಯತ್ನಗಳನ್ನು ಕೈಬಿಡದಿರಿ. ಒಳ್ಳೆಯ ಗುರುಬಲದಿಂದಾಗಿ ಕೆಲವು ವಿಚಾರಗಳನ್ನು ನೀವು ತೂಗಿಸಿಕೊಂಡು ಹೋಗಬಹುದಾಗಿದೆ. ನೀರಿನಂತೆ ಖರ್ಚಾಗುತ್ತಿರುವ ಹಣದ ಬಗ್ಗೆ ನಿಯಂತ್ರಣ ಇರಲಿ.

ಶುಭದಿಕ್ಕು: ಆಗ್ನೇಯ, ಶುಭಸಂಖ್ಯೆ: 6


ಕುಂಭ

ಭದ್ರತೆಯ ದೃಷ್ಟಿಯಿಂದ ರಾಶ್ಯಾಧಿತ ಶನೈಶ್ಚರ ಉತ್ತಮ ಬಲ ಪಡೆದಿದ್ದಾನೆ. ನಿಮ್ಮನ್ನು ಅವಲಂಬಿಸಿ ಪ್ರಾಮಾಣಿಕವಾಘಿ ನಿಮ್ಮಿಂದ ಸಲಹೆ ಪಡೆಯುವ ಜನರಿಗೆ ಮಾರ್ಗದರ್ಶನ ಮಾಡಿ. ಇದರಿಂದ ನಿಮ್ಮ ಉತ್ಕರ್ಷಗಳಿಗೂ ದಾರಿ ಇದೆ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರಲು ಅವಕಾಶಗಳಿವೆ. ಹೊಸದೇ ಆದ, ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವ ನೂತನ ಅಧಿಕಾರ ಸಂಪಾದಿಸಲಿದ್ದೀರಿ. ತಪ್ಪಿಯೂ ವೈಢಊರ್ಯ ಧರಿಸದಿರಿ. ನಿಮ್ಮ ಘನತೆಗೆ ಧಕ್ಕೆ ಬರುವ ತೊಂದರೆ ಎದುರಾಗಿಬಿಡಬಹುದು. ಶ್ರೀ ವಿಷ್ಣು ಸಹಸ್ರನಾಮಾವಳಿ ಓದಿ.

ಶುಭದಿಕ್ಕು: ನೈಋತ್ಯ, ಶುಭಸಂಖ್ಯೆ: 4


ಮೀನ

ಒಳ್ಳೆಯ ಮಾತು, ಚಾತುರ್ಯದ ನಡೆ ನಿಮ್ಮನ್ನು ಅಧಿಕ ಶ್ರೇಣಿಯ ಉನ್ನತ ಸ್ಥಾನಕ್ಕೆ ಕೈ ಹಿಡಿದು ನಡೆಸಲಿದೆ. ನಿಮ್ಮಲ್ಲಿ ಒಂದು ರೀತಿಯ ಘನವಂತಿಕೆಯನ್ನು ನಿರ್ವಿುಸಿಕೊಡುವ ಅಭಯ ಹಸ್ತ ಶಿವನಿಂದಲೇ ಲಭ್ಯ. ಉಷ್ಣ ಪ್ರಕೃತಿ, ವಾಯು ಪ್ರಕೋಪಗಳು ಆಗಾಗ ತಲೆ ತಿನ್ನಬಹುದು. ಕಶ್ಯಪ ಆರಾಧನೆ, ಸೂರ್ಯ ಯಂತ್ರ ಅಥವಾ ಚಕ್ರೋಪಾಸನೆಯಿಂದ ಆಲಸ್ಯ, ದೇಹಬಾಧೆ ದೂರ. ಚಿಂತನಶೀಲರಾದ ನಿಮ್ಮಿಂದ ಅನೇಕ ಹೊಸ ಯೋಜನೆಗಳಿಗೆ ಪ್ರಾರಂಭ ಸಾಧ್ಯ. ಕ್ರಿಯಾಶೀಲತೆ ನಿಮ್ಮ ವಜ್ರಾಯುಧ, ಶ್ರೀ ದೇವಿ ದುರ್ಗಾ ಅಷ್ಟೋತ್ತರ ಪಠಿಸಿ.

ಶುಭದಿಕ್ಕು: ದಕ್ಷಿಣ, ಶುಭಸಂಖ್ಯೆ: 9

Leave a Reply

Your email address will not be published. Required fields are marked *

Back To Top