Saturday, 21st July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಗುಣಮಟ್ಟದ ನಿವೇಶನ ನಿರ್ಮಾಣ ಶಿವ ಡೆವಲಪರ್ಸ್ ಹೆಗ್ಗಳಿಕೆ

Saturday, 10.03.2018, 3:03 AM       No Comments

ಗ್ರಾಹಕರ ಹೂಡಿಕೆಗೆ ತಕ್ಕುದಾದ ಹಾಗೂ ವಿಶ್ವದರ್ಜೆಯ ಗುಣಮಟ್ಟದ ನಿವೇಶನಗಳನ್ನು ನೀಡುವುದು ಶಿವ ಡೆವಲಪರ್ಸ್ ಸಂಸ್ಥೆಯ ಧ್ಯೇಯ. ನಗರದ ಪ್ರಮುಖ ಹೂಡಿಕೆಯ ಭಾಗಗಳಾಗಿ ಗುರುತಿಸಿಕೊಂಡಿರುವ ಮಾಗಡಿ ರಸ್ತೆಯ ತಾವರೆಕೆರೆ, ದೊಡ್ಡ ಆಲದಮರ ಭಾಗದಲ್ಲಿ ಅತ್ಯುತ್ತಮ ಬಡಾವಣೆಗಳನ್ನು ನಿರ್ವಿುಸುತ್ತಿದೆ. ಬೇಡಿಕೆಯ ವಲಯವಾಗಿರುವ ಮೈಸೂರು ರಸ್ತೆ ಭಾಗದಲ್ಲಿ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ನೀಡುತ್ತಿರುವ ಸಂಸ್ಥೆ, ತನ್ನದೇ ಆದ ಶೈಲಿ ಹಾಗೂ ವಿಭಿನ್ನತೆಯನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಮಾಗಡಿ ರಸ್ತೆಯಲ್ಲಿರುವ ತಾವರೆಕೆರೆಯಲ್ಲಿ ಶೇ.100 ಅಭಿವೃದ್ಧಿಪಡಿಸಲಾದ ಲೋಟಸ್ ಸಿಟಿ ಬಡಾವಣೆ ನೋಂದಣಿ ಹಾಗೂ ಕಟ್ಟಡ ನಿರ್ವಣಕ್ಕೆ ಅನುಕೂಲಕರವಾಗಿದೆ. ಶಿವ ಡೆವಲಪರ್ಸ್ ಈ ಹಿಂದೆ 3 ಹಂತಗಳಲ್ಲಿ ವಿವಿಧ ಶೈಲಿಯಲ್ಲಿ ಬಡಾವಣೆ ಅಭಿವೃದ್ಧಿ ಪಡಿಸಿ ಮಾರಾಟ ಮಾಡಿದೆ. ಇದೀಗ 4ನೇ ಹಂತದಲ್ಲಿ ಬಡಾವಣೆಯ ಮೂಲಕ ಮತ್ತಷ್ಟು ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ವಿವಿಧ ಅಳತೆಯ 40 ನಿವೇಶನಗಳು ಖರೀದಿಗೆ ಲಭ್ಯವಿದೆ.

ಬಿಎಂಆರ್​ಡಿಎನಿಂದ ಅನುಮೋದನೆ ಪಡೆದಿರುವ ಬಡಾವಣೆಯಲ್ಲಿ ವಿಶ್ವದರ್ಜೆಯ ಗುಣಮಟ್ಟದ ಸೌಲಭ್ಯಗಳಿದ್ದು, ಆಧುನಿಕ ಜೀವನಶೈಲಿಗೆ ಅನುಗುಣವಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸುಸಜ್ಜಿತ ಪಾರ್ಕ್, ಬಡಾವಣೆ ಸುತ್ತ ವ್ಯವಸ್ಥಿತ ಕಾಂಪೌಂಡ್, ಬ್ಯಾಡ್​ವಿುಂಟನ್ ಕೋರ್ಟ್, ಮಕ್ಕಳ ಆಟದ ಸ್ಥಳ ಸೇರಿ ಇನ್ನಿತರ ಸೌಲಭ್ಯಗಳನ್ನು ಒದಗಿಸಸಲಾಗಿದೆ. ಅಂಡರ್​ಗ್ರೌಂಡ್ ವಿದ್ಯುತ್ ಕೇಬಲ್ ಹಾಗೂ ವೈಜ್ಞಾನಿಕ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಬಡಾವಣೆಯಲ್ಲಿ ಕಾಣಬಹುದಾಗಿದೆ. ಒಟ್ಟಾರೆ 10 ಎಕರೆ ಪ್ರದೇಶದಲ್ಲಿ ಸುಂದರ ಬಡಾವಣೆ ಹೂಡಿಕೆದಾರರನ್ನು ಆಕರ್ಷಿಸುತ್ತಿರುವುದಾಗಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಬಸವರಾಜ್ ತಿಳಿಸಿದ್ದಾರೆ.

ರಾಜರಾಜೇಶ್ವರಿ ರೆಸಿಡೆನ್ಸಿ 2: ಚಂದ್ರಪ್ಪ ಸರ್ಕಲ್ ಬಳಿಯ ದೊಡ್ಡ ಆಲದ ಮರದಿಂದ ಕೇವಲ 1 ಕಿ.ಮೀ. ದೂರದಲ್ಲಿ ವಿಲ್ಲಾ ನಿರ್ವಣಕ್ಕೆ ಹೇಳಿ ಮಾಡಿಸಿದ ರಾಜರಾಜೇಶ್ವರಿ ಬಡಾವಣೆ ಕಾಣಬಹುದು. ರಾಜರಾಜೇಶ್ವರಿ ದಂತ ವೈದ್ಯಕೀಯ ಕಾಲೇಜು ಸನಿಹದಲ್ಲಿರುವ ಪ್ರದೇಶ ಇದಾಗಿದೆ. ಬಿಎಂಆರ್​ಡಿಎನಿಂದ ಅನುಮೋದನೆ ಪಡೆದ ಬಡಾವಣೆಯಲ್ಲಿ ಎಲ್ಲ ಮೂಲಸೌಕರ್ಯಗಳು ಸಿಗಲಿವೆ. ಒಟ್ಟಾರೆ 2 ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಮೊದಲ ಹಂತದಲ್ಲಿ 70 ಹಾಗೂ 2ನೇ ಹಂತದಲ್ಲಿ 40 ವಿವಿಧ ಅಳತೆಯ ನಿವೇಶನಗಳು ಖರೀದಿಗೆ ಲಭ್ಯವಿವೆ. ಬಡಾವಣೆಯಲ್ಲಿ ವಿವಿಧ ಸಮಾರಂಭಗಳಿಗೆ ಮಲ್ಟಿಪರ್ಪಸ್ ಹಾಲ್ ಹಾಗೂ ಬ್ಯಾಡ್​ವಿುಂಟನ್ ಕೋರ್ಟ್ ಸೇರಿ ಇನ್ನಿತರ ಸೌಲಭ್ಯಗಳನ್ನು ಒಳಗೊಂಡಿದೆ. ಸುಸಜ್ಜಿತ ಒಳಚರಂಡಿ ವ್ಯವಸ್ಥೆ, ಅಗಲವಾದ ರಸ್ತೆ, ಪಾರ್ಕ್, ಗೇಟೆಡ್ ಕಮ್ಯುನಿಟಿ ಹಾಗೂ 24 ಗಂಟೆ ಸಿಸಿ ಟಿವಿಸಹಿತ ಭದ್ರತೆಗಳುಳ್ಳ ಗುಣಮಟ್ಟದ ಬಡಾವಣೆ ನಿರ್ಮಾಣ ಮಾಡಲಾಗಿದೆ.

3 ಯೋಜನೆಗಳಲ್ಲಿ 3040, 3050, 4060, 5080 ಇನ್ನಿತರ ಅಳತೆಯ ನಿವೇಶನಗಳನ್ನು ಖರೀದಿಸಬಹುದು. ಪ್ರತಿದಿನ ನೌಕರಿಗೆ ಸಾಗುವ ವರ್ಗಕ್ಕೆ ಹೂಡಿಕೆಗಾಗಿ ಅತ್ಯಂತ ಉತ್ತಮ ಸೌಲಭ್ಯಗಳುಳ್ಳ ನಿವೇಶನಗಳನ್ನು ಶಿವ ಡೆವಲಪರ್ಸ್ ಸಂಸ್ಥೆ ನೀಡುತ್ತಿದೆ.

ಗುಣಮಟ್ಟ ಹಾಗೂ ಗ್ರಾಹಕರ ಹೂಡಿಕೆಗೆ ಯೋಗ್ಯವಾದ ಯೋಜನೆಗಳನ್ನು ಸಂಸ್ಥೆ ನಿರ್ಮಾಣ ಮಾಡಿದೆ. ಪ್ರಸ್ತುತ ಬಿಡದಿ ಭಾಗಕ್ಕೆ ಸಂಪರ್ಕ ವ್ಯವಸ್ಥೆ ಉತ್ತಮವಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆಗೆ ವಿಪುಲ ಅವಕಾಶ ಸಿಕ್ಕಿದೆ. ಗ್ರಾಹಕರು ಇಂತಹ ಅವಕಾಶಗಳ ಸದುಪಯೋಗ ಪಡಿಸಿಕೊಳ್ಳಬೇಕು

| ಬಸವರಾಜು ಶಿವ ಡೆವಲಪರ್ಸ್ ಎಂಡಿ

Leave a Reply

Your email address will not be published. Required fields are marked *

Back To Top