Sunday, 21st October 2018  

Vijayavani

ಚಡಚಣ ಸೋದರರ ಹತ್ಯೆ ಪ್ರಕರಣ-ಸಿಪಿಐ ಅಸೋದೆ 10 ದಿನ ಕಸ್ಟಡಿಗೆ-ಸಂಬಂಧಿಕರ ಮೇಲೂ ದೂರು ದಾಖಲು        ಸಿಸಿಬಿಯಿಂದ ಮುತ್ತಪ್ಪ ರೈಗೆ 8 ಗಂಟೆ ಡ್ರಿಲ್​-ಸೂಕ್ತ ದಾಖಲೆಗಳಿಂದ ಮಾಜಿ ಡಾನ್​​ ಬಚಾವ್​-ಇಂದು ಪೊಲೀಸರಿಂದ ಗನ್​​ಮ್ಯಾನ್​​ಗಳ ವಿಚಾರಣೆ        ಆ್ಯಕ್ಷನ್​​​ಕಿಂಗ್​​​ ವಿರುದ್ಧ ಶೃತಿ ಹರಿಹರನ್​ ಮೀಟು ಏಟು-ನಟಿ ವಿರುದ್ಧ ಸರ್ಜಾ ಫ್ಯಾಮಿಲಿ ಟಾಕ್​​ಫೈಟ್​​-ಆರೋಪಕ್ಕೆ ಸ್ಪಷ್ಟನೆ ನೀಡಲು ಇಂದು ಪ್ರೆಸ್​​ಮೀಟ್​​​        ಸಂಸದರ ನಿಧಿ ಹೊಡೆಯಲು ಮೆಗಾ ಪ್ಲಾನ್​-ನಕಲಿ ಲೆಟರ್​​​​​ಹೆಡ್​​​ ಮೂಲಕ ಲಕ್ಷ ಲಕ್ಷ ಗುಳುಂ-26 ಲಕ್ಷ ನುಂಗಿದ ಭೂಪ ಪೊಲೀಸರ ವಶಕ್ಕೆ        ರಂಗೇರಿತು ಉಪಚುನಾವಣೆ ಅಖಾಡ-ಇಂದು ಪಂಚ ಕ್ಷೇತ್ರಗಳಲ್ಲೂ ನಾಯಕರ ಪ್ರಚಾರ-ದೋಸ್ತಿಗೆ ಹುರುಪು ತಂದ ಗುರು-ಶಿಷ್ಯರ ಮಿಲನ        ಮಡಿಕೇರಿ ಸಂತ್ರಸ್ತರಿಗೆ ಮಾದರಿ ಮನೆಗಳ ನಿರ್ಮಾಣ-5 ರಿಂದ 10 ಲಕ್ಷದೊಳಗೆ ಮೂರು ರೀತಿಯ ಮನೆ-ಜನರು ಕೇಳಿದ ಮನೆ ಎರಡು ತಿಂಗಳೊಳಗೆ ರೆಡಿ       
Breaking News

ಸುಪ್ರೀಂಗೇ ಗಣಿ ಸೆಡ್ಡು!

Monday, 23.07.2018, 3:05 AM       No Comments

| ಬೇಲೂರು ಹರೀಶ

ಬೆಂಗಳೂರು: ಗಣಿಗಾರಿಕೆಗೆ ಸುಪ್ರೀಂಕೋರ್ಟ್ ಅಂಕುಶ ಬಿದ್ದ ಬಳಿಕ ಹಸಿರುಹೊದ್ದ ಬಳ್ಳಾರಿ ಹಾಗೂ ಚಿತ್ರದುರ್ಗದ ಮಣ್ಣಿನಡಿಯಿಂದ ಅಚ್ಚರಿಯ ರಹಸ್ಯವೊಂದು ಮೇಲೆ ಬಂದಿದೆ. ಗಣಿಗಾರಿಕೆಗೆ ಸವೋಚ್ಚ ನ್ಯಾಯಾಲಯದ ಅನುಮತಿ ಕಡ್ಡಾಯವೆಂಬ ಆದೇಶವನ್ನು ಉಲ್ಲಂಘಿಸಿ ಹಿಂದಿನ ಕಾಂಗ್ರೆಸ್ ಸರ್ಕಾರ, ಸಿ ಕೆಟಗರಿ ಅನ್ವಯ ಎರಡೂ ಜಿಲ್ಲೆಗಳಲ್ಲಿ ಹೊಸದಾಗಿ 8 ಕಡೆ ಗಣಿಗಾರಿಕೆಗೆ 20,481 ಕೋಟಿ ರೂ. ಮೊತ್ತದ ಗುತ್ತಿಗೆ ಕೊಡುವ ಮೂಲಕ ಭೂಸಂಪತ್ತಿಗೆ ಕುತ್ತು ತರುವ ನಿರ್ಣಯ ಕೈಗೊಂಡ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಬಳ್ಳಾರಿಯಲ್ಲಿ 6 ಹಾಗೂ ಚಿತ್ರದುರ್ಗದಲ್ಲಿ 2 ಕಡೆ ನಿಯಮ ಉಲ್ಲಂಘಿಸಿ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಎರಡೂ ಜಿಲ್ಲೆಗಳಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ನಡೆಸುವ ಜಾಗಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಗಣಿಗಾರಿಕೆ ಆರಂಭಿಸಲು ಸಿದ್ಧತೆ ಪೂರ್ಣಗೊಂಡಿದೆ. ರಾಜ್ಯದಲ್ಲಿ ‘ಎ’ ಮತ್ತು ‘ಬಿ’ ಕೆಟಗರಿ ಪ್ರಕಾರ ಗಣಿ ಗುತ್ತಿಗೆ ಸಂಸ್ಥೆಗಳಿಂದ ಗುತ್ತಿಗೆ ಆಧಾರದಲ್ಲಿ ಈಗಾಗಲೇ ಅದಿರು ಗಣಿಗಾರಿಕೆ ನಡೆಯುತ್ತಿದೆ.

ಸುಪ್ರೀಂ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲ. ರಾಜ್ಯದಲ್ಲಿ 8 ಕಡೆ ಹೊಸದಾಗಿ ಗಣಿಗಾರಿಕೆ ನಡೆಸಲು ಅನುಮತಿ ಕೊಟ್ಟಿರುವ ವಿಚಾರ ಈಗಾಗಲೇ ಸುಪ್ರೀಂ ಗಮನಕ್ಕೆ ಬಂದಿದೆ. ನಿಯಮ ಉಲ್ಲಂಘಿಸಿರುವುದು ಸಾಬೀತಾದರೆ ರದ್ದಾಗಲಿದೆ.

| ಪ್ರಸನ್ನ ಕುಮಾರ, ನಿರ್ದೇಶಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ

 

ನ್ಯಾಯಾಲಯ ಹೇಳಿದ್ದೇನು?

ಆಯಾ ರಾಜ್ಯಗಳು ಅದಿರು ಗಣಿಗಾರಿಕೆ ನಡೆಸಲು ತನ್ನ ಅನುಮತಿ ಪಡೆಯುವುದು ಕಡ್ಡಾಯ. ಈ ಹಿಂದೆ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸಿದ ಕಂಪನಿಗಳಿಂದ ಪರಿಸರ ಹಾಳಾಗಿತ್ತು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂಕೋರ್ಟ್, ಕೇಂದ್ರೀಯ ಉನ್ನತಾಧಿಕಾರ ಸಮಿತಿ ರಚಿಸುವ ಮೂಲಕ ಹೊಸ ನಿಯಮ ಜಾರಿಗೆ ತಂದಿತ್ತು. ನಿಯಮದ ಪ್ರಕಾರ, ಯಾವುದೇ ಗಣಿಗಾರಿಕೆ ನಡೆಸುವ ಗಣಿ ಗುತ್ತಿಗೆ ಸಂಸ್ಥೆಗಳು ಪರಿಸರ ಪುನರುಜ್ಜೀವನ ಮತ್ತು ಪುನರ್ವಸತಿ ಕಾರ್ಯದ ಬಗ್ಗೆ ಸಮಿತಿಗೆ ಸ್ಪಷ್ಟ ಮಾಹಿತಿ ನೀಡಬೇಕು. ಈ ಅಂಶಗಳನ್ನು ಪರಿಶೀಲಿಸಿದ ನಂತರವೇ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತದೆ. ಈ ಎಲ್ಲ ನಿಯಮಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪಾಲಿಸುವುದು ಕಡ್ಡಾಯ. ಇಲ್ಲದಿದ್ದರೆ ನಿಯಮ ಉಲ್ಲಂಘನೆ ಮಾಡಿದ ರಾಜ್ಯಗಳಿಗೆ ಭಾರಿ ದಂಡ ವಿಧಿಸುವುದಾಗಿ ಎಚ್ಚರಿಸಿತ್ತು.

ಹರಾಜು ಮೂಲಕ ಗುತ್ತಿಗೆ ನೀಡಿದ ಕಾಂಗ್ರೆಸ್ ಸರ್ಕಾರ

ಸಿದ್ದರಾಮಯ್ಯ ಸರ್ಕಾರ 2018ರ ಜ.30ರಂದು 20,481 ಕೋಟಿ ರೂ. ಮೌಲ್ಯದ ಅದಿರು ಗಣಿಗಾರಿಕೆಗೆ ಹರಾಜು ಮೂಲಕ ಗುತ್ತಿಗೆ ನೀಡಿದೆ. ಗಣಿಗಾರಿಕೆಯಿಂದ ರಾಜ್ಯ ಸರ್ಕಾರಕ್ಕೆ ಶೇ.25 ರಾಜಸ್ವ ಬರಲಿದೆ. ಉಳಿದ ಮೊತ್ತ ಆಯಾ ಗಣಿ ಗುತ್ತಿಗೆ ಸಂಸ್ಥೆಗಳಿಗೆ ಸಿಗುತ್ತದೆ. ಆದರೆ, ಸುಪ್ರೀಂಕೋರ್ಟ್ ನಿಯಮ ಉಲ್ಲಂಘಿಸಿ ಗಣಿಗಾರಿಕೆಗೆ ಹೇಗೆ ಅನುಮತಿ ನೀಡಲಾಯಿತೆಂಬ ಬಗ್ಗೆ ಮಾಹಿತಿ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಸುಪ್ರೀಂಕೋರ್ಟ್ ಅನುಮತಿ ನೀಡದಿದ್ದರೆ ಟೆಂಡರ್ ರದ್ದಾಗಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಯಾವ ಕಂಪನಿಗೆ ಗುತ್ತಿಗೆ?

  • ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂ.ಎಲ್. ನಂ.995). ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಉಬ್ಬಲಗುಂಡಿ ಹಳ್ಳಿಯ 32 ಹೆಕ್ಟೇರ್ ಗಣಿಗಾರಿಕೆಗೆ ಅನುಮತಿ. 9.708(ಎಂಎಂಟಿ )ಮಿಲಿಯನ್ ಮೆಟ್ರಿಕ್ ಟನ್ ಅದಿರು ಉತ್ಪಾದನೆ ಮಾಡಲು 1522 ಕೋಟಿ ರೂಪಾಯಿಗೆ ಟೆಂಡರ್ ಕೊಡಲಾಗಿದೆ.
  • ಎಚ್.ಜಿ.ರಂಗನ್​ಗೌಡ (ಎಂ.ಎಲ್ ನಂ.2148) ಎಂಬುವರಿಗೆ ಬಳ್ಳಾರಿಯ ಧರ್ವಪುರ್ ಹಳ್ಳಿಯಲ್ಲಿ 60.66 ಹೆಕ್ಟೇರ್ ಜಾಗದಲ್ಲಿ ಗಣಿಗಾರಿಕೆಗೆ ಅನುಮತಿ. 63.33 ಎಂಎಂಟಿ ಅದಿರು ಉತ್ಪಾದನೆಗೆ 13,374 ಕೋಟಿ ರೂ.ಗೆ ಟೆಂಡರ್.
  • ಮಿನರಲ್ಸ್ ಮೈನರ್ಸ್ ಆಂಡ್ ಟ್ರೇಡರ್ಸ್ (ಎಂ.ಎಲ್.ನಂ.2185ಎ)ಗೆ ಬಳ್ಳಾರಿಯ ಜನಿಕುಂಟ ಬಳಿ 44.42 ಹೆಕ್ಟೇರ್ ಜಾಗದಲ್ಲಿ 9.224 ಎಂಎಂಟಿ ಅದಿರು ಉತ್ಪಾದನೆಗೆ ಅನುಮತಿ. 905 ಕೋಟಿ ರೂ.ಗೆ ಟೆಂಡರ್ ನೀಡಲಾಗಿದೆ.
  • ಭರತ್ ಮೈನ್ಸ್ ಆಂಡ್ ಮಿನರಲ್ಸ್ (ಎಂ.ಎಲ್.ನಂ.2245)ಗೆ ಬಳ್ಳಾರಿಯ ನಂದಿಹಳ್ಳಿ ಬಳಿ 24.47 ಹೆಕ್ಟೇರ್ ಜಾಗದಲ್ಲಿ 7.577 ಎಂಎಂಟಿ ಅದಿರು ಗಣಿಗಾರಿಕೆಗೆ 763 ಕೋಟಿ ರೂ.ಗೆ ಅನುಮತಿ.
  • ನಿಧಿ ಮೈನಿಂಗ್ ಕಂಪನಿಗೆ ಬಳ್ಳಾರಿಯ ಉಬ್ಬಾಲ್​ಗುಂಡಿ ಬಳಿ 29.49 ಹೆಕ್ಟೇರ್ ಜಮೀನಿನಲ್ಲಿ 10.024 ಎಂಎಂಟಿ ಅದಿರು ಗಣಿಗಾರಿಕೆಗೆ 2,097 ಕೋಟಿ ರೂ.ಗೆ ಟೆಂಡರ್ ಕೊಡಲಾಗಿದೆ.
  • ಕನ್ಹಯ್ಯಲಾಲ್ ದುದೇರಿಯಾ (ಎಂ.ಎಲ್.ನಂ.2563)ಗೆ ಬಳ್ಳಾರಿಯ ರಾಮನದುರ್ಗ ಬಳಿ 30.9 ಹೆಕ್ಟೇರ್ ಜಾಗದಲ್ಲಿ 9.26 ಎಂಎಂಟಿ ಅದಿರು ಗಣಿಗಾರಿಕೆಗೆ 903 ಕೋಟಿ ರೂ.ಗೆ ಟೆಂಡರ್ ನೀಡಲಾಗಿದೆ.
  • ಎಂ.ಚನ್ನಕೇಶವರೆಡ್ಡಿ (ಎಂ.ಎಲ್.ನಂ.2566) ಎಂಬುವರಿಗೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಂಕೆರೆ/ಲಕ್ಕಿಹಳ್ಳಿ ಸಮೀಪ 7.57 ಹೆಕ್ಟೇರ್ ಜಾಗದಲ್ಲಿ 3179 ಎಂಎಂಟಿ ಅದಿರು ಉತ್ಪಾದನೆಗೆ 296 ಕೋಟಿ ರೂ.ಗೆ ಅನುಮತಿ ನೀಡಲಾಗಿದೆ.
  • ಎಂ.ಶ್ರೀನಿವಾಸಲು (ಎಂಎಲ್ ನಂ:2631)ಗೆ ಚಿತ್ರದುರ್ಗದ ಕೆ.ಕೆ.ಕಾವಲ್ ಸಮೀಪ 75.14 ಹೆಕ್ಟೇರ್ ಜಾಗದಲ್ಲಿ 9.88 ಎಂಎಂಟಿ ಅದಿರು ಗಣಿಗಾರಿಕೆಗೆ 1617 ಕೋಟಿ ರೂ.ಗೆ ಟೆಂಡರ್ ನೀಡಲಾಗಿದೆ.

Leave a Reply

Your email address will not be published. Required fields are marked *

Back To Top