Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

ಹೇಗಾಯ್ತು ಗೋಲ್ಮಾಲ್?

Friday, 15.06.2018, 3:02 AM       No Comments

ಬೆಂಗಳೂರು: ಅರ್ಹತೆ ಇಲ್ಲದ 100 ಕಾಲೇಜುಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಮಾನ್ಯತೆ ನೀಡಿದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಅಧಿಕಾರಿಗಳಿಂದ ಕಡತ ಸಹಿತ ಮಾಹಿತಿ ಕೇಳಿದ್ದಾರೆ. ಸ್ವಕ್ಷೇತ್ರಕ್ಕೆ ತೆರಳಿದ್ದ ಸಚಿವರು ಗುರುವಾರ ಬೆಂಗಳೂರಿಗೆ ಆಗಮಿಸಿದ್ದು, ಅರ್ಹತೆ ಇಲ್ಲದ ಕಾಲೇಜುಗಳಿಗೆ ಅನುಮತಿ ನೀಡಿರುವ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿದೇರ್ಶಕಿ ಸಿ.ಶಿಖಾ ಸೇರಿ ಕೆಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಇದು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದ್ದಾರೆ. ಸರ್ಮಪಕ ಉತ್ತರ ದೊರೆಯದಿದ್ದರಿಂದ ಶುಕ್ರವಾರ ಸೂಕ್ತ ಕಡತಗಳೊಂದಿಗೆ ಸಭೆಗೆ ಆಗಮಿಸುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.

ಅರ್ಹತೆ ಇಲ್ಲದ ಕಾಲೇಜುಗಳಿಗೆ ಅನುಮತಿ ಏಕೆ ನೀಡಲಾಯಿತು ಎಂದು ಪ್ರಾಥಮಿಕ ವರದಿ ಪಡೆದಿದ್ದೇನೆ. ಶುಕ್ರವಾರ ದೀರ್ಘವಾಗಿ ಚರ್ಚಿಸಿ ಅಗತ್ಯ ಕ್ರಮಕ್ಕೆ ಆದೇಶ ಮಾಡುತ್ತೇನೆ.

| ಎನ್.ಮಹೇಶ್, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Leave a Reply

Your email address will not be published. Required fields are marked *

Back To Top