More

    ವಿಜಯವಾಣಿ ಸಂಪಾದಕೀಯ: ರಾಜ್ಯದ ಹಿತ ಕಾಪಾಡಿ

    ಪ್ರಸಕ್ತ ವರ್ಷ ತೆರಿಗೆ ಸಂಗ್ರಹದಲ್ಲಿ ಇಳಿಕೆ ಕಂಡುಬಂದಿದೆ. ಅಲ್ಲದೆ, ಜಿಎಸ್​ಟಿ ವ್ಯವಸ್ಥೆ ಜಾರಿಯಾದ ಮೇಲೆ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾತ್ರ ಗಣನೀಯವಾಗಿ ತಗ್ಗಿದೆ. ಅದಕ್ಕೆಂದೆ, ಕೇಂದ್ರ ನೆರವಿನ ರೂಪದಲ್ಲಿ ಎರಡು ತಿಂಗಳಿಗೊಮ್ಮೆ ಜಿಎಸ್​ಟಿ ಸಂಗ್ರಹದ ನಿಗದಿತ ಪಾಲನ್ನು ರಾಜ್ಯಗಳಿಗೆ ಬಿಡುಗಡೆ ಮಾಡುತ್ತಿದೆ. ಆದರೆ, ಈ ಬಾರಿ ಆರ್ಥಿಕ ಹಿಂಜರಿತ, ತೆರಿಗೆ ಸಂಗ್ರಹ ಕುಸಿತ ಮುಂತಾದ ಪರಿಣಾಮದಿಂದ ಕೇಂದ್ರವೂ ಹಲವು ಸಮಸ್ಯೆ ಎದುರಿಸುತ್ತಿರುವುದು ಸ್ಪಷ್ಟಗೋಚರ. ಹಾಗಾಗಿ, ಸಮಯಕ್ಕೆ ಸರಿಯಾಗಿ ಜಿಎಸ್​ಟಿ ಪಾಲು ರಾಜ್ಯಗಳಿಗೆ ಬಿಡುಗಡೆ ಆಗುತ್ತಿಲ್ಲ.

    ಅಷ್ಟಕ್ಕೂ, ಒಕ್ಕೂಟ ವ್ಯವಸ್ಥೆಯಲ್ಲಿ ಮುಂಚೆಯಿಂದಲೂ ಕೇಂದ್ರವು ರಾಜ್ಯಗಳ ಹಿತವನ್ನು ಕಾಯ್ದುಕೊಂಡು ಬಂದಿದೆ. ಈ ಪೈಕಿ ಅನುದಾನ ವಿತರಣೆ ಮುಖ್ಯವಾದದ್ದು. ಕೇಂದ್ರ ನೀಡುವ ಅನುದಾನ ರಾಜ್ಯಗಳಿಗೆ ಪ್ರಾಣವಾಯುವಿನಂತೆ ಕೆಲಸ ಮಾಡುತ್ತ, ಹಲವು ರಂಗಗಳಿಗೆ, ಅಭಿವೃದ್ಧಿ ಯೋಜನೆಗಳಿಗೆ ವಿನಿಯೋಗವಾಗುತ್ತದೆ ಎಂಬುದು ಗೊತ್ತಿರುವಂಥದ್ದೇ. ಆದರೆ, ಹಣಕಾಸು ಆಯೋಗ ಈಗ ರಾಜ್ಯಗಳಿಗೆ ಜನಸಂಖ್ಯೆಯನ್ನು ಮಾನದಂಡವಾಗಿಸಿ ಕೊಂಡು ಅನುದಾನ ಬಿಡುಗಡೆ ಮಾಡುತ್ತಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಬಂದಿದೆ. 14ನೇ ಹಣಕಾಸು ಆಯೋಗಕ್ಕೆ ಹೋಲಿಸಿದರೆ 15ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ನಿಗದಿ ಪಡಿಸಿರುವ ಅನುದಾನ ಪ್ರಮಾಣ ಶೇಕಡ 23 ಕಡಿಮೆಯಾಗಿದೆ. ಈ ಭಾರಿ ಕೊರತೆ ರಾಜ್ಯಕ್ಕೆ ತಲೆನೋವು ಸೃಷ್ಟಿಸಿದ್ದು, ವಿಶೇಷ ಅನುದಾನವನ್ನು ಬಿಡುಗಡೆ ಮಾಡುವಂತೆ ರಾಜ್ಯದ ಕೇಂದ್ರ ಸಚಿವರು ಮತ್ತು ಸಂಸದರ ನಿಯೋಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದೆ.

    15ನೇ ಹಣಕಾಸು ಆಯೋಗ ರಾಜ್ಯಕ್ಕೆ -ಠಿ; 8847 ಕೋಟಿ ಅನುದಾನ ಕಡಿಮೆ ಮಾಡಿದ್ದರೂ, -ಠಿ;5,495 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿರುವುದು ಗಮನಾರ್ಹ. ಈ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರವನ್ನು ಒತ್ತಾಯಿಸಲಾಗಿದ್ದು, ಅದು ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು. ಇದಲ್ಲದೆ, ಜಿಎಸ್​ಟಿ ಪಾಲು ಕೂಡ ರಾಜ್ಯಕ್ಕೆ ಬರಬೇಕಿದೆ. ಈ ಕೊರತೆಗಳ ಸ್ಪಷ್ಟ ಪರಿಣಾಮ ಇತ್ತೀಚೆಗೆ ಮಂಡಿಸಲಾದ ರಾಜ್ಯ ಬಜೆಟ್ ಮೇಲೆ ಕಂಡುಬಂದಿದೆ. ಹಾಗಾಗಿಯೇ ಸಂಪನ್ಮೂಲ ಕ್ರೋಡೀಕರಿಸಲು ರಾಜ್ಯ ಸರ್ಕಾರ ಹೊಸ ದಾರಿಗಳ ಮೊರೆ ಹೋಗಿದೆ. ಪೆಟ್ರೋಲ್, ಡೀಸೆಲ್, ಮದ್ಯ, ಮೋಟಾರು ವಾಹನಗಳ ತೆರಿಗೆ ಹಚ್ಚಿಸುವ ಮೂಲಕ -ಠಿ; 8,989 ಕೋಟಿ ಹೆಚ್ಚು ತೆರಿಗೆ ಸಂಗ್ರಹಿಸಲು ಮುಂದಾಗಿದೆ. ಆದರೆ, ಸವಾಲುಗಳು ಕೂಡ ಹೆಚ್ಚಿದ್ದು ಬಜೆಟ್​ವೆಚ್ಚ ಜಾಸ್ತಿಯಾಗಿದೆ. ರಾಜ್ಯದ ಕ್ರಮಗಳ ಜತೆಗೆ ಕೇಂದ್ರದ ನೆರವು ಸಿಗಬೇಕಾಗಿರುವುದು ಅವಶ್ಯ. ಕೇಂದ್ರ ಸರ್ಕಾರ ತನ್ನ ಆರ್ಥಿಕ ಮಿತಿಗಳ ಚೌಕಟ್ಟಿನಲ್ಲೇ ಕರ್ನಾಟಕಕ್ಕೆ ನ್ಯಾಯಯುತವಾದ ಅನುದಾನ ನೀಡಲಿ ಮತ್ತು ಜಿಎಸ್​ಟಿ ಪಾಲನ್ನು ಬಿಡುಗಡೆ ಮಾಡಲಿ. ಆಗಲೇ, ಅಭಿವೃದ್ಧಿ ಯೋಜನೆಗಳನ್ನು ಸಶಕ್ತವಾಗಿ ನಿರ್ವಹಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ ಎಂಬ ವಾಸ್ತವವನ್ನು ಮನಗಾಣಬೇಕಿದೆ.

    ಗ್ರಾಮೀಣಾಭಿವೃದ್ಧಿ ಇಲಾಖೆ ಅನುದಾನವನ್ನು ಅಕ್ರಮವಾಗಿ ಬ್ಯಾಂಕ್​ಗಳಲ್ಲಿ ಠೇವಣಿ ಇಟ್ಟ ಪ್ರಕರಣ: ತನಿಖೆಗೆ ಸದನ ಸಮಿತಿ ರಚನೆ

    1ರಿಂದ 6ನೇ ತರಗತಿಯವರಿಗೆ ಬೇಸಿಗೆ ರಜೆ ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯ: ಶಿಕ್ಷಣ ಇಲಾಖೆಯ ಹೊಸ ಸುತ್ತೋಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts