Wednesday, 19th September 2018  

Vijayavani

ಆಸ್ಪತ್ರೆಯಿಂದ ಸಚಿವ ಡಿ.ಕೆ. ಶಿವಕುಮಾರ್​​ ಡಿಸ್ಚಾರ್ಜ್ - ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ - ಎಟಿಎಂ ಆರೋಪಕ್ಕೆ ಉತ್ತರಿಸ್ತಾರಾ?        ಗಾಂಧಿ ಕುಟುಂಬಕ್ಕೆ ಎಟಿಎಂ ಅಂತೆ ಡಿಕೆಶಿ - ಎಐಸಿಸಿಗೆ 600 ಕೋಟಿ ಆಗಿದ್ಯಂತೆ ಡೆಪಾಸಿಟ್ - ಡಿಕೆಶಿ ವಿರುದ್ಧ ಆರೋಪಗಳ ಪಟ್ಟಿ        ಇಡಿ ಪ್ರಕರಣದಲ್ಲಿ ಡಿಕೆಶಿ ಬಂಧನ ಖಚಿತ - ಅರೆಸ್ಟ್‌ ಬೆನ್ನಲ್ಲೇ ಮೈತ್ರಿ ಸರ್ಕಾರ ಖತಂ - ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ವೈ ಭವಿಷ್ಯ        ಬೆಂಗ್ಳೂರು ರಸ್ತೆ ಗುಂಡಿಗೆ ಹೈಕೋರ್ಟ್ ಗರಂ - ಬೆಳಗ್ಗೆಯೊಳಗೆ ಗುಂಡಿ ಮುಚ್ಚಿಸಿ - ಕೆಲ್ಸ ಮಾಡದಿದ್ರೆ ಬಿಬಿಎಂಪಿ ಬಂದ್ ಅಂದ್ರು ಸಿಜೆ        ನವಾಜ್​​ ಷರೀಫ್​ಗೆ ರಿಲೀಫ್ - ಜೈಲಿನಿಂದ ಪಾಕ್ ಮಾಜಿ ಪ್ರಧಾನಿ, ಪುತ್ರಿ ಬಿಡುಗಡೆ - ಇಸ್ಲಾಮಾಬಾದ್ ಹೈಕೋರ್ಟ್ ಆದೇಶ        ದುಬೈನಲ್ಲಿ ಏಷ್ಯಾಕಪ್ ಹಣಾಹಣಿ - ಹೈವೋಲ್ಟೇಜ್ ಮ್ಯಾಚ್​ಗೆ ಬದ್ಧ ವೈರಿಗಳು ಸಜ್ಜು - ಟಾಗ್‌ಗೆದ್ದ ಪಾಕ್‌ ಬ್ಯಾಟಿಂಗ್‌ ಆಯ್ಕೆ       
Breaking News

ಕಾದುನೋಡಿ, ಸಿನಿಮಾ ಇನ್ನೂ ಬಾಕಿಯಿದೆ..

Friday, 22.06.2018, 3:04 AM       No Comments

ದಾಳಿ ವೇಳೆ ಸಿಕ್ಕ ಎಲ್ಲ ದಾಖಲೆಗಳನ್ನು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಲಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಸಂಸದ ಡಿ.ಕೆ.ಸುರೇಶ್ ಸವಾಲು ಹಾಕಿದ್ದಾರೆ. ಕಾನೂನು ಹೋರಾಟದಲ್ಲಿ ಜಯ ನಮ್ಮದೇ ಅಂತಲೂ ಅವರು ದಿಗ್ವಿಜಯ ನ್ಯೂಸ್247ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅದರ ಸಂಕ್ಷಿಪ್ತ ಪ್ರಶ್ನೋತ್ತರ ಇಲ್ಲಿದೆ.

# ಐಟಿ ಅಧಿಕಾರಿಗಳು ಕೋರ್ಟ್​ಗೆ ನೀಡಿರುವ ದೂರಿನಲ್ಲಿ ಸಾಕಷ್ಟು ದಾಖಲೆಗಳಿವೆ. ಹಣದ ವಹಿವಾಟಿನಲ್ಲಿ ಡಿಕೆಶಿ ಹಾಗೂ ನಿಮ್ಮ ಹೆಸರಿದೆ.

-ಯಾರ್ಯಾರದೋ ಮನೆ ಮೇಲೆ ದಾಳಿ ಮಾಡಿದ್ದಾರೆ. ಅಲ್ಲಿ ಸಿಕ್ಕಿರುವ ಹಣ, ಆಸ್ತಿ ನಮಗೆ ಸಂಬಂಧಪಟ್ಟಿದಲ್ಲ. ಅದಕ್ಕೆ ಉತ್ತರ ಕೊಡಲಿಕ್ಕೆ ಸಿದ್ದವಿದ್ದೇವೆ. ಬಲವಂತವಾಗಿ ಬೇರೆಯವರ ಕಡೆಯಿಂದ ನಮ್ಮ ಹೆಸರನ್ನು ಹೇಳಿಸಲು ಯತ್ನಿಸಿದರೆ ನ್ಯಾಯಾಲಯದಲ್ಲಿ ಉತ್ತರ ಕೊಡುತ್ತೇವೆ.

# ಡಿಕೆಶಿಗೆ ಸಿಎಂ ಕನಸು ಭಗ್ನವಾಗುವ ಆತಂಕವಿದೆಯೇ?

– ನನ್ನಣ್ಣ ಸಿಎಂ ಆಗಬೇಕು ಎನ್ನುವುದು ಎಲ್ಲರ ಆಸೆ. ದೇವರಿದ್ದಾನೆ, ಜನರಿದ್ದಾರೆ. ಮುಂದೆ ಸಿಎಂ ಆಗುತ್ತಾರೆ, ಅದಕ್ಕಿನ್ನೂ ಕಾಲವಿದೆ.

# ನಿಮ್ಮ ವಿರೋಧಿಗಳು ಯಾರು. ಅವರ ಬಗ್ಗೆ ನಿಮ್ಮ ಹತ್ತಿರ ದಾಖಲೆ ಏನಿದೆ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುತ್ತಿದ್ದೀರಾ?

– ಕಾದುನೋಡಿ, ಸಿನಿಮಾ ಇನ್ನು ಬಾಕಿಯಿದೆ. ಎಲ್ಲ ಈಗಲೇ ಹೇಳಿದರೆ ಹೇಗೆ..

# ನೇರವಾಗಿ ಹೇಳಿ ಇದರ ಹಿಂದೆ ಯಾರಿದ್ದಾರೆ?

– ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಪ್ರಧಾನಿ ಮೋದಿ. ಈ ಹಿಂದೆ ನಮಗೆ ಯಾವ ರೀತಿ ಕರೆಗಳು ಬಂದಿದ್ದವು ಎನ್ನುವುದೂ ಗೊತ್ತಿದೆ.

# ಡಿಕೆ ಸಹೋದರರಿಗೆ ಭಯವಿದೆ. ಜೈಲಿಗೆ ಹೋಗುವ ಸಾಧ್ಯತೆಯಿದೆ ಎನ್ನುವ ಮಾತಿದೆ..

– ನಮಗೆ ಯಾವುದೇ ಭಯವಿಲ್ಲ. ಜೈಲಿಗೆ ಹೋಗುವಂತಹ ಅಕ್ರಮ ಮಾಡಿಲ್ಲ. ಒಂದು ವೇಳೆ ಜೈಲಿಗೆ ಕಳುಹಿಸಿದರೆ ಹೋಗಲು ಸಿದ್ಧ. ಯಾವುದೇ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುವುದಿಲ್ಲ. ಅಂಥಾ ಶ್ರೀಕೃಷ್ಣ ಪರಮಾತ್ಮನೇ ಜೈಲಿಗೆ ಹೋಗಿ ಬಂದಿದ್ದ ಅಲ್ವಾ..

# ಐಟಿ ಇಲಾಖೆ ಸುಖಾಸುಮ್ಮನೆ ದಾಖಲೆಯಿಲ್ಲದೆ ನಿಮ್ಮ ಹೆಸರನ್ನು ಯಾಕೆ ಹೇಳುತ್ತದೆ?

– ರಾಜಕೀಯವಾಗಿ ತುಳಿಯಲು ನಮ್ಮ ಮೇಲೆ ಏನಾದರೂ ಕೇಸು ದಾಖಲಿಸಲು ಕೇಂದ್ರ ಸರ್ಕಾರದಿಂದ ಅಧಿಕಾರಿಗಳ ಮೇಲೆ ಒತ್ತಡ ಬರುತ್ತಿದೆ. ಇದನ್ನು ನಮ್ಮ ಬಳಿ ಅಧಿಕಾರಿಗಳೇ ಹೇಳಿದ್ದಾರೆ. ಐಟಿ ಅಧಿಕಾರಿಗಳ ದಾಳಿ ವೇಳೆ ಸಿಕ್ಕಿರುವ ಎಲ್ಲ ದಾಖಲಾತಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿ. ಇಲ್ಲ, ಬಹಿರಂಗಪಡಿಸಲಿ. ಆಗ ಗೊತ್ತಾಗಲಿದೆ, ಯಾರ ಬಂಡವಾಳ ಏನು ಅಂತ.

# ಯಾವ ರೀತಿ ಕರೆ ಬಂದಿತ್ತು. ಬಿಜೆಪಿಗೆ ಬರುವಂತೆ ಆಫರ್ ಬಂದಿತ್ತಾ..

– ಹೌದು ಈ ಮುಂಚೆ, ಸರ್ಕಾರ ರಚನೆ ವೇಳೆ ಬಿಜೆಪಿಗೆ ಬರುವಂತೆ ಆಫರ್ ಬಂದಿತ್ತು. ನಮಗೆ ಬೇಕಾದ ಅನುಕೂಲ ಮಾಡಿ ಕೊಡಿ, ನೀವು ನಮ್ಮ ಜತೆ ಸೇರಿದರೆ ಎಲ್ಲ ರೀತಿಯ ಸ್ಥಾನಮಾನಗಳು ಸಿಗುತ್ತವೆ ಎನ್ನುವ ಆಫರ್ ನೀಡಲಾಗಿತ್ತು. ಪಕ್ಷ ನಿಷ್ಠೆಯಿಂದ ತಿರಸ್ಕರಿಸಿದೆವು.

# ತಪ್ಪು ಮಾಡದಿದ್ದರೆ ಯಾಕೆ ಭಯ ಬೀಳಬೇಕು, ನಿಮ್ಮ ಆರೋಪ ಆಧಾರ ರಹಿತವಾಗಿದೆಯಲ್ಲ?

– ನಮ್ಮದು ಅದೇ ಪ್ರಶ್ನೆ. ತಪ್ಪು ಮಾಡಿಲ್ಲ. ಷಡ್ಯಂತ್ರದಿಂದ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಹಿಂದೆ ಸರ್ಕಾರವನ್ನು ಅಸ್ಥಿ್ಥಗೊಳಿಸುವ ಸಂಚಿರಬಹುದು. ವಿರೋಧಿಗಳು ಯಾರು ಅಂತಲೂ ಗೊತ್ತು.

ಐಟಿ ಇಲಾಖೆಯಿಂದ ನೋಟಿಸ್ ಪಡೆದಿರುವ ಡಿಕೆಶಿ ಅವರಿಂದ ರಾಜೀನಾಮೆ ಪಡೆಯುವ ಅವಶ್ಯಕತೆ ಈಗಿಲ್ಲ. ದ್ವೇಷ ರಾಜಕಾರಣದಿಂದ ಸಮಸ್ಯೆ ಎದುರಿಸು ತ್ತಿರುವ ಅವರು ಕಾನೂನು ಹೋರಾಟ ಮೂಲಕ ಬಗೆಹರಿಸಿಕೊಳ್ಳುವರು.

| ಎಚ್.ಡಿ. ಕುಮಾರಸ್ವಾಮಿ ಸಿಎಂ


ಮತ್ತೆ ಮೌನ ವಹಿಸಿದ ಬಿಜೆಪಿ?

ಬೆಂಗಳೂರು: ಸಚಿವ ಡಿ.ಕೆ. ಶಿವಕುಮಾರ್ ಐಟಿ ವಂಚನೆ ಪ್ರಕರಣದಲ್ಲಿ ಸಿಲುಕಿದ್ದರೂ, ಪ್ರತಿಪಕ್ಷ ಬಿಜೆಪಿ ವಹಿಸಿರುವ ಗಾಢ ಮೌನ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಬಿಜೆಪಿ ಭವಿಷ್ಯದ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದು, ಮೈತ್ರಿ ಸರ್ಕಾರ ಕುಸಿದು ತಮಗೆ ಅವಕಾಶ ಸಿಗುವ ವಾತಾವರಣ ನಿರ್ವಣವಾಗಲು ಡಿಕೆಶಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಕಾರಣಕ್ಕೆ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.

2017ರ ಆಗಸ್ಟ್​ನಲ್ಲಿ ಡಿ.ಕೆ. ಶಿವಕುಮಾರ್ ಐಟಿ ದಾಳಿಗೆ ಒಳಗಾಗಿದ್ದರು. ಇದೇ ವೇಳೆ ಗುಜರಾತ್​ನಲ್ಲಿ ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆ ನಡೆಯುತ್ತಿತ್ತು. ಈ ವೇಳೆ ಗುಜರಾತ್ ಕಾಂಗ್ರೆಸ್ ಶಾಸಕರು ಬಿಜೆಪಿಯತ್ತ ವಾಲದಂತೆ ಹಿಡಿದಿಟ್ಟುಕೊಳ್ಳುವಲ್ಲಿ ಡಿಕೆಶಿ ಅಪಾರ ಶ್ರಮವಹಿಸಿದ್ದರು. ‘ಬಿಜೆಪಿ ಗೆಲುವಿಗೆ ಡಿಕೆಶಿ ತಡೆಯಾಗಿರುವ ಕಾರಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗಪಡಿಸಿಕೊಂಡು ದಾಳಿ ನಡೆಸಿದ್ದಾರೆ’ ಎಂದು ಅಂದಿನ ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ಮುಖಂಡರು ವಾಗ್ದಾಳಿ ನಡೆಸಿದ್ದರು. ‘ಇದರಲ್ಲಿ ರಾಜಕೀಯ ಬೆರೆಸಬೇಕಿಲ್ಲ, ಆದಾಯ ತೆರಿಗೆ ಇಲಾಖೆ ತನ್ನ ಕಾರ್ಯ ಮಾಡುತ್ತಿದೆ. ಅಮಿತ್ ಷಾ ಅವರ ಕೈವಾಡ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದು ಬಿಟ್ಟರೆ ಬಿಜೆಪಿ ನಾಯಕರು ಚಕಾರ ಎತ್ತಿರಲಿಲ್ಲ.

ಇಂದಿಗೂ ಡಿಕೆಶಿ ಆಶಾಕಿರಣ?: ಬಿಜೆಪಿ ನಾಯಕರಿಗೆ ಈಗಲೂ ಸರ್ಕಾರ ರಚನೆಗೆ ಡಿಕೆಶಿ ಆಶಾಕಿರಣವಾಗಿದ್ದಾರೆ. ಸರ್ಕಾರ ರಚನೆ ವೇಳೆ ಇರುಸುಮುರುಸು ಆಗಿರುವುದನ್ನು ಸ್ವತಃ ಶಿವಕುಮಾರ್ ಅನೇಕ ಬಾರಿ ತೋರಿಸಿಕೊಂಡಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದು ಸರ್ಕಾರ ಅಸ್ಥಿರವಾಗಬಹುದು. ಕೆಲ ಕಾಂಗ್ರೆಸ್ ಶಾಸಕರನ್ನು ಶಿವಕುಮಾರ್ ತಮ್ಮೊಡನೆ ಕರೆತಂದು ಬಿಜೆಪಿ ಸರ್ಕಾರ ರಚನೆಗೆ ಸಹಕಾರಿಯಾಗಬಹುದು. ಆಗ ಅವರಿಗೆ ಉಪಮುಖ್ಯಮಂತ್ರಿಯಂತಹ ಉತ್ತಮ ಸ್ಥಾನ ನೀಡಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ನಾಯಕರಿದ್ದಾರೆ.

ನಾನೇನೂ ಪ್ರತಿಕ್ರಿಯಿಸಲ್ಲ

ಶಿವಕುಮಾರ್ ಮತ್ತು ನನ್ನ ನಡುವೆ ಉತ್ತಮ ಸಂಬಂಧವಿದೆ. ಮಾಧ್ಯಮದವರೇ ಪುಕ್ಕಟೆ ಪ್ರಚಾರ ಕೊಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು. ಶಿವಕುಮಾರ್ ಅವರ ಐಟಿ ಪ್ರಕರಣ ನ್ಯಾಯಾಲಯದಲ್ಲಿದ್ದು, ನಾನೇನೂ ಪ್ರತಿಕ್ರಿಯಿಸುವುದಿಲ್ಲ ಎಂದು ಸಚಿವ ಎಚ್.ಡಿ. ರೇವಣ್ಣ ಹೇಳಿದರು.


ಡಿಕೆಶಿ ಬೆನ್ನಿಗೆ ನಿಂತ ಕೆಪಿಸಿಸಿ

ಬೆಂಗಳೂರು: ಆರ್ಥಿಕ ಅಪರಾಧ ಪ್ರಕರಣಕ್ಕೆ ಸಿಲುಕಿರುವ ಸಚಿವ ಡಿ.ಕೆ.ಶಿವಕುಮಾರ್ ಬೆನ್ನಿಗೆ ಕೆಪಿಸಿಸಿ ನಿಂತಿದೆ. ಗುರುವಾರದ ಬೆಳವಣಿಗೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹಾಗೂ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಡಿಕೆಶಿ ಪರ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಫ್ರೀಡಂಪಾರ್ಕ್ ಬಳಿ ಮಾತನಾಡಿದ ಜಿ.ಪರಮೇಶ್ವರ್, ಸುಮ್ಮನೆ ರಾಜಕೀಯಕ್ಕಾಗಿ ಚುನಾವಣೆ ಮೊದಲು ಮತ್ತು ನಂತರ ನಮ್ಮ ಮುಖಂಡರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ. ಹೀಗಾಗಿ ನಾವು ಡಿಕೆಶಿ ಬೆಂಬಲಕ್ಕೆ ನಿಂತಿದ್ದೇವೆ ಎಂದರು. ದಿನೇಶ್ ಗುಂಡೂರಾವ್ ಮಾತನಾಡಿ, ‘ಚುನಾವಣೆ ಮುಂದಿಟ್ಟುಕೊಂಡು ಇಂತಹ ಕೆಲಸ ಮಾಡುತ್ತಿದ್ದಾರೆ. ಕಾನೂನು ಮೂಲಕ ಡಿಕೆಶಿ ಉತ್ತರ ಕೊಡುತ್ತಾರೆ. ಅವರಿಗೆ ನಾವು ಬೆಂಬಲವಾಗಿದ್ದೇವೆ’ ಎಂದು ಹೇಳಿದರು.

ನಿಯಮಾನುಸಾರ ತೆರಿಗೆ ಪಾವತಿಸಿದ್ದರೆ ಯಾರೂ ಐಟಿ, ಇಡಿಗೆ ಭಯಪಡುವ ಅಗತ್ಯವಿಲ್ಲ, ಯಾರಿಗೆ ಭಯ ಇದೆಯೋ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರಾಜ್ಯದಲ್ಲಿ ಅವರದ್ದೇ ಸರ್ಕಾರವಿದ್ದು, ಯಾರದ್ದೇ ಡೈರಿ ಇರಲಿ ತನಿಖೆ ಮಾಡಿಸಲಿ. ಕೇಂದ್ರದಲ್ಲಿ ಕಾಂಗ್ರೆಸ್ ಸುದೀರ್ಘ ವರ್ಷಗಳ ಕಾಲ ಆಡಳಿತ ನಡೆಸಿದ್ದು, ಈ ಅವಧಿಯಲ್ಲಿ ನಡೆದಿರುವ ದಾಳಿಗಳೆಲ್ಲವೂ ರಾಜಕೀಯ ಪ್ರೇರಿತವೇ?

| ಶೋಭಾ ಕರಂದ್ಲಾಜೆ ಸಂಸದೆ

ನೋಟಿಸ್ ಬಂದಿಲ್ಲ

‘ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನಾನು ಯಾವ ನೋಟೀಸನ್ನೂ ತೆಗೆದುಕೊಂಡಿಲ್ಲ. ಆಂಜನೇಯ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವ ಸಂಬಂಧವೂ ಇಲ್ಲ. ನೀವೇ ಜನರಿಗೆ ಬೇಕಾದ ರಂಜನೆ ಕೊಡುತ್ತಿದ್ದೀರಾ’ ಎಂದು ಡಿ.ಕೆ.ಶಿವಕುಮಾರ್ ಮಾಧ್ಯಮದವರನ್ನು ಟೀಕಿಸಿದರು. ನಿಜಕ್ಕೂ ಇದೆಲ್ಲ ನನಗೆ ಶಾಕ್ ಎನಿಸಿದೆ. ಬಿಜೆಪಿಯಲ್ಲಿ ಸಾಕಷ್ಟು ಉದ್ಯಮಿಗಳು, ಹೋಟೆಲ್ ಮಾಲೀಕರಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರೂ ಇದ್ದಾರೆ. ಎಲ್ಲದಕ್ಕೂ ಶುಭಕಾಲ, ಶುಭಮಹೂರ್ತ ಬರಬೇಕು ಎಂದರು. ದೆಹಲಿಯಲ್ಲಿ ಎರಡು ಬೆಡ್ ರೂಂ ಫ್ಲ್ಯಾಟ್ ಇದೆ. ಶೀಘ್ರದಲ್ಲೇ ಇನ್ನೊಂದು ಮನೆ ಉದ್ಘಾಟನೆ ಇದೆ. ಅಲ್ಲಿ ಯಾವುದೇ ಹವಾಲಾ ದಂಧೆ ನಡೆಸಿಲ್ಲ ಎಂದರು.

Leave a Reply

Your email address will not be published. Required fields are marked *

Back To Top