Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ವೀರಶೈವ ಲಿಂಗಾಯತ ಹೋರಾಟ ವೇದಿಕೆ ವಿಜಯೋತ್ಸವ

Tuesday, 12.06.2018, 6:00 AM       No Comments

ವಿಜಯಪುರ: ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತಾ ಶಿಫಾರಸು ಮಾನ್ಯ ಮಾಡದೆ ಹಿಂದಕ್ಕೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮ ಸ್ವಾಗತಿಸಿ ಇಲ್ಲಿನ ವೀರಶೈವ ಲಿಂಗಾಯತ ಹೋರಾಟ ವೇದಿಕೆ ಮುಖಂಡರು ವಿಜಯೋತ್ಸವ ಆಚರಿಸಿದರು.

ಸ್ಥಳೀಯ ಗಣೇಶ ನಗರದ ಜಗದ್ಗುರು ರೇಣುಕಾಚಾರ್ಯರ ವೃತ್ತದಲ್ಲಿ ಜಮಾಯಿಸಿದ ವೀರಶೈವ ಹೋರಾಟ ಸಮಿತಿ ಮುಖಂಡರು ಪ್ರತ್ಯೇಕ ಲಿಂಗಾಯತ ಶಿಫಾರಸಿಗೆ ಮಾನ್ಯ ಮಾಡದೆ ಮರಳಿ ಕಳುಹಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು. ಪರಸ್ಪರ ಸಿಹಿ ಹಂಚಿ ಘೊಷಣೆ ಕೂಗಿ ಸಂಭ್ರಮಾಚರಿಸಿದರು.

ನೇತೃತ್ವ ವಹಿಸಿದ್ದ ವೀರಶೈವ ಮುಖಂಡ ಮಲ್ಲಿಕಾರ್ಜುನ ಭೃಂಗಿಮಠ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ 5ನೇ ಶತಮಾನಗಳಿಗಿಂತಲೂ ಹಳೆಯ ಧರ್ಮ. ಹಸಿರು ಕ್ರಾಂತಿ, ಮಾನವೀಯತೆ ಸಾರಿದ ಧರ್ಮ ಇದಾಗಿದೆ. ಇಂತಹ ಧರ್ಮ ಒಡೆದು ಹಾಳಾಗಲು ಎಂದೂ ಬಿಡಲಾರೆವು ಎಂದರು.

ಈಚೆಗೆ ಕರ್ನಾಟಕದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕೇಂದ್ರಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ಶಿಫಾರಸು ಮಾಡಿತ್ತು. ಅದನ್ನು ಬಲವಾಗಿ ಖಂಡಿಸಿ ಯಾವುದೇ ಕಾರಣಕ್ಕೂ ಲಿಂಗಾಯತ ಪ್ರತ್ಯೇಕ ಧರ್ಮವೆಂದು ಘೊಷಿಸಬಾರದೆಂದು ಒತ್ತಾಯಿಸಲಾಗಿತ್ತು. ವೀರಶೈವ ಲಿಂಗಾಯತ ಎರಡೂ ಒಂದೇ ಎಂದು ಪ್ರತಿಪಾದಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಕೂಡ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮದ ಶಿಫಾರಸು ಮರಳಿ ಕಳುಹಿಸಿದ್ದು ಸ್ವಾಗತಾರ್ಹ ಎಂದರು.

ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಚಂದ್ರಕಾಂತ ಹಿರೇಮಠ ಮಾತನಾಡಿ, ವೀರಶೈವ ಲಿಂಗಾಯತ ಎರಡೂ ಒಂದೇ. ರಾಜಕೀಯ ಕುಮ್ಮಕ್ಕಿನಿಂದ ಕೆಲವರು ಲಿಂಗಾಯತ ಪ್ರತ್ಯೇಕತೆ ಪ್ರತಿಪಾದಿಸಿದ್ದು ಖಂಡನೀಯ. ಕೇಂದ್ರ ಸರ್ಕಾರ ಶಿಫಾರಸು ಹಿಂತಿರುಗಿಸಿದ ಕ್ರಮಕ್ಕೆ ನಮ್ಮ ಸಂಘಟನೆ ಸ್ವಾಗತಿಸುತ್ತದೆ. ಈಗಲಾದರೂ ವೀರಶೈವ ಲಿಂಗಾಯತ ಒಂದೇ ಎಂದು ಒಪ್ಪಿಕೊಳ್ಳಲು ಪ್ರತ್ಯೇಕವಾದಿಗಳು ದೊಡ್ಡ ಮನಸ್ಸು ಮಾಡಬೇಕೆಂದರು.

ಚನ್ನಬಸಯ್ಯ ಹಿರೇಮಠ ಜೈನಾಪುರ ಮಾತನಾಡಿದರು. ಶೈಲಾ ನಂದಿಕೋಲಮಠ, ಪ್ರೇಮ ಗಿರಿಮಲ್ಲಯ್ಯ ಹೊಸಮಠ, ರೇಣುಕಾಚಾರ್ಯ ಶಾಲೆ ಅಧ್ಯಕ್ಷ ಎಸ್.ಜಿ.ಗುತ್ತರಗಿಮಠ ಅಭಿಪ್ರಾಯ ಹಂಚಿಕೊಂಡರು.

ದಾನೇಶ್ವರಿ ಮಠಪತಿ, ದಾಕ್ಷಾಯಿಣಿ ಹಿರೇಮಠ, ಶಾಂತಾಬಾಯಿ ನಂದಿಕೋಲಮಠ, ಮಹಾದೇವಿ ಹಿರೇಮಠ, ಶೈಲಾ ಸ್ವಾಮಿ, ಭೌರಮ್ಮ ವಿರಕ್ತಮಠ, ಸುನಂದಾ ಮಠಪತಿ, ಗಿರಿಮಲ್ಲಯ್ಯ ಹೊಸಮಠ, ಶಂಕ್ರಯ್ಯ ಶಾಸ್ತ್ರೀ, ಚಿದಾನಂದ ಹಿರೇಮಠ, ನಿಂಗಯ್ಯ ಬೆಲ್ಲದ ,ಪ್ರಭಯ್ಯ ಉಮಚಗಿಮಠ, ಶ್ರೀಶೈಲ ವಿರಕ್ತಮಠ, ಸಂಗಯ್ಯ ಮಠಪತಿ, ಮಡಿವಾಳಯ್ಯ ಹಿರೇಮಠ, ಪಂಚಾಕ್ಷರಿ ಚಿಕ್ಕಮಠ, ಬಸಯ್ಯ ಹಿರೇಮಠ, ಸಿ.ಎಸ್. ಹಿರೇಮಠ, ಉಮೇಶ ಹಿರೇಮಠ, ಮಹೇಶ ಹಿರೇಮಠ, ಕೆ.ಎಂ. ಅವಟಿ, ಅಭಿಷೇಕ ಪಾಟೀಲ್, ಗಂಗಾಧರ ಹಿರೇಮಠ ಇತರರಿದ್ದರು.

Leave a Reply

Your email address will not be published. Required fields are marked *

Back To Top