Saturday, 22nd September 2018  

Vijayavani

ಸಿಎಂ ಜನತಾ ದರ್ಶನದಲ್ಲಿ ಸಿಗಲಿಲ್ಲ ನ್ಯಾಯ - ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ - ಸಿಎಂಗೆ ಪತ್ರ ಬರೆದು ನಾಲ್ವರು ಸುಸೈಡ್‌        ಬಿಎಸ್‌ವೈ ನಿವಾಸದಲ್ಲಿ ಬಿಗ್‌ ಮೀಟಿಂಗ್‌ - ಮೈತ್ರಿ ಸರ್ಕಾರದ ವಿರುದ್ಧ ಹೋರಾಟಕ್ಕೆ ರಣತಂತ್ರ        ಶೃಂಗೇರಿಯಲ್ಲಿ ಸಿಎಂ ಶತ್ರುಸಂಹಾರ ಯಾಗ - ಕಾರವಾರದಲ್ಲಿ ಡಿಸಿಎಂ ದೇವಿ ದರ್ಶನ - ಸಂಕಷ್ಟ ನಿವಾರಣೆಗೆ ದೇವರ ಮೊರೆ        ಜೆಡಿಎಸ್‌ಗೂ ಕಾಡ್ತಿದೆ ಅಪರೇಷನ್‌ ಭಯ - ಹಾಸನದಲ್ಲಿ ಜೆಡಿಎಲ್‌ಪಿ ಮೀಟಿಂಗ್‌ - ಶಾಸಕರನ್ನ ಹಿಡದಿಟ್ಟುಕೊಳ್ಳ ಗೌಡರ ತಂತ್ರ        ಒಡಿಸ್ಸಾದಲ್ಲಿ ಪ್ರಧಾನಿ ರೌಂಡ್ಸ್‌ - ವಿವಿದ ಅಭಿವೃದ್ಧಿಕಾರ್ಯಗಳಿಗೆ ಮೋದಿ ಚಾಲನೆ - ಹೊಸ ಒಡಿಸ್ಸಾ ಕಟ್ಟೋಣ ಎಂದ ಪ್ರಧಾನಿ        ರಫೇಲ್‌ ಯುದ್ಧ ವಿಮಾನಕ್ಕೆ ಓಕೆ ಎಂದ ಐಎಎಫ್‌- ಮೊದಲ ಪರೀಕ್ಷೆಯಲ್ಲಿ ಯಶಸ್ವಿ ಹಾರಾಟ - ಮೋದಿ ಸರ್ಕಾರಕ್ಕೆ ಬಿಗ್‌ ಬೂಸ್ಟ್‌       
Breaking News

ಶೋನಾರ್ ಬಂಗಾಳ ಹೇಗಾಗಿ ಹೋಯಿತು…

Monday, 23.04.2018, 3:04 AM       No Comments

ಶ್ಚಿಮ ಬಂಗಾಳ ಅಂದಾಕ್ಷಣ ಭಾರತದ ಚಾರಿತ್ರಿಕ ಘಟನೆಗಳು, ಹೋರಾಟಗಳು, ಅಲ್ಲಿಯ ಜನರ ಧೀರೋದಾತ್ತ ಸಂಘರ್ಷಗಳು ಕಣ್ಮುಂದೆ ಬರುತ್ತವೆ. ಏಕೆಂದರೆ, ಬಂಗ್ (ಬಂಗಾಳ) ಭೂಮಿ ಹಿಂದೂಸ್ಥಾನದ ಜಾಗೃತಿಯ ಸಂಕೇತವಾಗಿದೆ. ಬಂಗಾಳವು ದೇಶವನ್ನು ಜಾಗೃತಗೊಳಿಸಿತಲ್ಲದೆ 3 ದಶಕಗಳ ಕಮ್ಯೂನಿಸ್ಟ್ ಆಡಳಿತದ ಕ್ರೌರ್ಯ, ದಬ್ಬಾಳಿಕೆಗೂ ಸಾಕ್ಷಿಯಾಯಿತು. ಪ್ರಖರ ಕ್ರಾಂತಿಕಾರಿಗಳು, ಆಧ್ಯಾತ್ಮಿಕ ನಾಯಕರು, ಸಾಮಾಜಿಕ ಹೋರಾಟಗಾರರ ಈ ದಿವ್ಯಭೂಮಿ ತನ್ನ ಅಸ್ಮಿತೆಗಾಗಿ ನಿರಂತರ ಸಂಘರ್ಷ ಮಾಡುತ್ತ ಬಂದಿದೆ. ಅಷ್ಟೇ ಅಲ್ಲ ವಿಜ್ಞಾನ, ಸಾಹಿತ್ಯ, ಸಂಸ್ಕೃತಿಯ ದಿಗ್ಗಜರು ಈ ನಾಡನ್ನು ಶೋನಾರ್ (ಬಂಗಾರದ) ಬಂಗಾಳ ಆಗಿಸಿ, ಹೆಮ್ಮೆ ಮೂಡುವಂತೆ ಮಾಡಿದರು. ಇಷ್ಟೆಲ್ಲ ಭವ್ಯ ಇತಿಹಾಸ, ವಿಶಿಷ್ಟ ಸಂಸ್ಕೃತಿ ಹೊಂದಿದ ಬಂಗಾಳದ ಈಗಿನ ಸ್ಥಿತಿ ಅವಲೋಕಿಸಿದರೆ ಮನಸ್ಸು ವೇದನೆಯಲ್ಲಿ ಮುಳುಗುತ್ತದೆ. ಆ ಎಲ್ಲ ಕ್ರಾಂತಿಕಾರಿಗಳ ಹೋರಾಟ ವ್ಯರ್ಥವಾಗಿ ಹೋಯಿತೆ ಎಂಬ ವ್ಯಥೆ ಕಾಡುತ್ತದೆ. ಸಾಮರಸ್ಯ, ಸಹಬಾಳ್ವೆಯಿಂದ ಹೆಸರುವಾಸಿಯಾದ ಬಂಗಾಳ ಇಂದು ಹಿಂಸೆ, ಕ್ರೌರ್ಯದ ಮಡುವಿನಲ್ಲಿ ಒದ್ದಾಡುತ್ತಿದೆ. ಪಶ್ಚಿಮ ಬಂಗಾಳದ ಈ ಅವಧಿ ಹಿಂದೂಗಳ ಮೇಲೆ ನಡೆದ ಘೊರ ಅನ್ಯಾಯ, ಶೋಷಣೆಗಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಿದೆ ಎಂಬುದು ನೋವಿನ ಸಂಗತಿ. ಮೊಹರಮ್ ಹಬ್ಬಕ್ಕಾಗಿ ದುರ್ಗಾ ವಿಸರ್ಜನೆಯನ್ನೇ ತಡೆದ ಮಮತಾ ಬ್ಯಾನರ್ಜಿ ಸರ್ಕಾರ ರಾಜಕೀಯ ಓಲೈಕೆಯ, ಸಭ್ಯತೆಯ ಎಲ್ಲ ಎಲ್ಲೆಗಳನ್ನೂ ಮೀರಿದೆ.

ಹಿಂದೂಗಳ ಮೇಲೆ ನಡೆಯುತ್ತಿರುವ ಈ ಆಘಾತವನ್ನು ನೋಡಿದರೆ ಬ್ರಿಟಿಷರ ಅವಧಿಯಲ್ಲಿನ ಕರಾಳ ಹಾಗೂ ಮಾನವನಿರ್ವಿುತ ಬರಗಾಲ ನೆನಪಾಗುತ್ತದೆ. ರ್ಚಚಿಲ್ ಹಾಗೂ ಆತನ ಬ್ರಿಟಿಷ್ ಅನುಯಾಯಿಗಳು ಬರಗಾಲದ ನೆಪದಲ್ಲಿ 30 ಲಕ್ಷ ಭಾರತೀಯರು ನರಳಿ ನರಳಿ ಸಾಯುವಂತೆ ಮಾಡಿದರು. ಪ್ರಾಯಶಃ ಇದು ಜಗತ್ತಿನ ಅತಿದೊಡ್ಡ ಮಾನವನಿರ್ವಿುತ ಬರಗಾಲ ಇರಬಹುದು. ಆ ಸಂದರ್ಭದಲ್ಲಿ ರ್ಚಚಿಲ್ ಧಾಷ್ಟರ್್ಯದಿಂದ ಹೇಳಿದ್ದ- ‘ನಾನು ಭಾರತೀಯರನ್ನು ದ್ವೇಷಿಸುತ್ತೇನೆ ಹಾಗೂ ಈಗ ಬಂಗಾಳದಲ್ಲಿ ಏನೆಲ್ಲ ನಡೆಯುತ್ತಿದೆಯೋ ಆ ಬಗ್ಗೆ ನನಗೆ ಒಂಚೂರೂ ವ್ಯಥೆಯಿಲ್ಲ’. ಈಗಿನ ಬಂಗಾಳದ ಆಡಳಿತದ ವೈಖರಿ ನೋಡಿದರೆ ಒಂದು ಧರ್ಮದವರ ಹತ್ಯೆ, ಶೋಷಣೆಗೆ ಅದಕ್ಕೆ ಯಾವುದೇ ವ್ಯಥೆ ಇದ್ದಂತೆ ಕಾಣುತ್ತಿಲ್ಲ.

ಚುನಾವಣೆ ವೇಳೆ ‘ಪರಿವರ್ತನೆ’ ಘೊಷಣೆ ಮೊಳಗಿಸಿ, ‘ಮಾ, ಮಾಟಿ, ಮಾನುಷ’ ಎಂಬ ಭರವಸೆ ನೀಡಿ ಕಮ್ಯೂನಿಸ್ಟ್ ಆಡಳಿತದ ವಿರುದ್ಧ ಸಮರ ಸಾರಿದ ಮಮತಾ ಬ್ಯಾನರ್ಜಿ ಅಧಿಕಾರಕ್ಕೆ ಬರುತ್ತಿದ್ದಂತೆ ಒಂದಿಷ್ಟು ಭರವಸೆ, ಆಶಾವಾದ ಮೂಡಿಸಿದ್ದು ಸುಳ್ಳಲ್ಲ. ಏಕೆಂದರೆ, ಮಾವೋವಾದದ ರಕ್ತರಂಜಿತ ಅಧ್ಯಾಯದಲ್ಲಿ 3 ಸಾವಿರ ಬಂಗಾಳಿಗರು ಪ್ರಾಣ ಕಳೆದುಕೊಂಡಿದ್ದರು, 3 ಲಕ್ಷ ಜನರು ವಲಸೆ ಹೋಗಿದ್ದರು. ಈ ಸ್ಥಿತಿಯನ್ನು ಮಮತಾ ಬದಲಾವಣೆ ಮಾಡಿ, ಶಾಂತಿ, ನೆಮ್ಮದಿ ಸ್ಥಾಪಿಸಬಹುದು ಎಂಬ ನಿರೀಕ್ಷೆ ಮೂಡಿತ್ತು. ಆದರೆ, ಪರಿವರ್ತನೆ ಬರೀ ಘೊಷಣೆಯಾಗಿ ಉಳಿಯಿತು. ‘ಮಾ, ಮಾಟಿ, ಮಾನುಷ’ ಕಡೆಗಣಿಸಲ್ಪಟ್ಟವು. ಸ್ವಾತಂತ್ರ್ಯಪೂರ್ವದಲ್ಲಿ ಹೇಗೆ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿತ್ತೋ ಮಮತಾ ಆಡಳಿತದಲ್ಲೂ ಅದೇ ಇತಿಹಾಸ ಮರುಕಳಿಸುತ್ತಿದೆ. ಮೊದಲು ಬ್ರಿಟಿಷರು, ಆಮೇಲೆ ಮುಸ್ಲಿಂ ಮೂಲಭೂತವಾದಿಗಳು, ನಂತರದ 33 ವರ್ಷಗಳ ಕಮ್ಯೂನಿಸ್ಟ್ ಆಡಳಿತವು ಈ ನೆಲದ ಧರ್ಮ, ಸಂಸ್ಕೃತಿ, ಪರಂಪರೆಗಳ ಮೇಲೆ ನಿರಂತರ ಆಘಾತ ಮಾಡಿತು, ಬಡವರನ್ನು ಶೋಷಿಸಿತು. ಹೀಗೆ ಬಂಗಾಳ ಹಿಂದೂಗಳ ಪಾಲಿಗೆ ದುಃಸ್ವಪ್ನವಾಗಿಯೇ ಕಾಡುತ್ತ ಬಂದಿದ್ದು, ಮಮತಾ ಅವಧಿಯಲ್ಲಿ ಈ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂಬುದು ಶೋಚನೀಯ. ಅಷ್ಟೇ ಅಲ್ಲ, ಮಮತಾ ನೀಡಿದ ಪರಿವರ್ತನೆ ಘೊಷಣೆ ಬರೀ ಘೊಷಣೆಯಾಗಿ ಉಳಿದಿದೆ. ಹಿಂಸೆ, ಭ್ರಷ್ಟಾಚಾರ, ಅಹಿಂದುಗಳ ಆಕ್ರಮಣಗಳಿಂದ ಅವರು ಬಂಗಾಳವನ್ನು ರಕ್ಷಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಬದಲಿಗೆ ನಿರುದ್ಯೋಗ, ಬಡತನ, ಭ್ರಷ್ಟಾಚಾರ ಮತ್ತು ಜಿಹಾದಿ ಶಕ್ತಿಗಳಿಂದ ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಿತು. ಹುಗಲಿ ಪ್ರದೇಶದ ಚಿತ್ರಣವನ್ನು ಒಮ್ಮೆ ನೋಡಿದರೆ ಪಶ್ಚಿಮ ಬಂಗಾಳದ ಹಿಂದೂಗಳ ಸ್ಥಿತಿ ಅರಿವಿಗೆ ಬರುತ್ತದೆ. ಹರಿದ ಬಟ್ಟೆಗಳ, ಹಸಿದ ಮುಖಗಳ ಮಕ್ಕಳು, ವೃದ್ಧರು, ಹರಿದ ಜೋಪಡಿಗಳ, ಕೊಳಕು ಪರಿಸರದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಜನರು- ಇದು 2018ರ ಬಂಗಾಳದ ಕಟುಸತ್ಯ.

ರಾಜ್ಯದ 43 ಸಾವಿರ ಪಂಚಾಯತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಸೋಲಿನ ಭಯದಿಂದಾಗಿ ತೃಣಮೂಲ ಕಾಂಗ್ರೆಸ್​ನ ಕಾರ್ಯಕರ್ತರು ಪೊಲೀಸ್ ಬಲವನ್ನು ಲೆಕ್ಕಿಸದೆ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಏಪ್ರಿಲ್ 9ರಂದು ದಕ್ಷಿಣ 24 ಪರಗಣ ಜಿಲ್ಲೆಯ ಬರುಝುಪುರ ತಾಲೂಕಿನಲ್ಲಿ ಬಿಜೆಪಿಗೆ ಸೇರಿದ ಕುಟುಂಬವೊಂದರ ಮಹಿಳೆ ಮೇಲೆ ಮಾರುಕಟ್ಟೆಯಲ್ಲೇ, ಹಾಡಹಗಲಲ್ಲೇ ಹಲ್ಲೆ ನಡೆಸಲಾಯಿತು. ಆದರೆ ತಥಾಕಥಿತ ಜಾತ್ಯತೀತ ಮಾಧ್ಯಮಗಳು ಇಂಥ ಘಟನೆಯ ಬಗ್ಗೆ ಸುದ್ದಿಯನ್ನೂ ಮಾಡಲಿಲ್ಲ. ನಿಜಕ್ಕೂ ಬಂಗಾಳಕ್ಕೀಗ ಪರಿವರ್ತನೆ ಬೇಕಾಗಿದೆ. ಮಾನವತಾವಾದಿ ಮತ್ತು ಅಮಾನವತಾವಾದಿ ಶಕ್ತಿಗಳ ಸಂಘರ್ಷದಲ್ಲಿ ದುರ್ಗೆ, ವಿವೇಕಾನಂದರ ಭಕ್ತರಿಗೆ ಗೆಲುವು ದೊರೆಯಬೇಕಾಗಿದೆ. ಬಂಗಾಳದ ಮಾನವೀಯತೆ, ಸಂಸ್ಕೃತಿ, ಅಂತಃಶಕ್ತಿ ಮತ್ತೆ ತಲೆ ಎತ್ತಬೇಕಿದೆ.

ಅಭಿವೃದ್ಧಿಗೆ ಹೆಸರುವಾಸಿಯಾಗಿದ್ದ ಪಶ್ಚಿಮ ಬಂಗಾಳ ಈಗ ಹಿಂದುಳಿದ, ಉದ್ಯಮವಿಹೀನ ರಾಜ್ಯವಾಗಿ ಗುರುತಿಸಲ್ಪಡುತ್ತಿದೆ. ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿರುವ ಇನ್ಪೋಸಿಸ್, ಟಾಟಾ ಮುಂತಾದ ಸಂಸ್ಥೆಗಳು ಬಂಗಾಳವನ್ನು ತೊರೆದಿವೆ. ‘ಶೋನಾರ್ ಬಾಂಗ್ಲಾ’ ಅನ್ನು ಮತ್ತೆ ಜಾಗೃತ ಭೂಮಿಯಾಗಿಸು ಎಂದು ಆ ಸರ್ವಶಕ್ತ ಭಗವಂತನಲ್ಲಿ ಪ್ರಾರ್ಥಿಸುತ್ತ, ಅರಾಜಕ, ಹಿಂಸಾ ತತ್ತ್ವಗಳನ್ನು ಸೋಲಿಸಲು ರಾಷ್ಟ್ರವಾದಿ ಶಕ್ತಿಗಳು ಒಗ್ಗೂಡಬೇಕಾಗಿದೆ. ಆಗ ಮಾತ್ರ ನಿಜವಾದ ಪರಿವರ್ತನೆ ಸಾಕಾರಗೊಳ್ಳಲು ಸಾಧ್ಯ.

33 ವರ್ಷಗಳ ಕಮ್ಯೂನಿಸ್ಟ್ ಆಡಳಿತದಿಂದ ರೋಸಿದ್ದ ಬಂಗಾಳಿಗರು ಈಗ ಮಮತಾ ಸರ್ಕಾರದ ವಿರುದ್ಧ ಮಾತನಾಡಲೂ ಹೆದರುತ್ತಿದ್ದಾರೆ. ಸರ್ಕಾರವನ್ನು ವಿರೋಧಿಸಿದರೆ ತೃಣಮೂಲ ಕಾಂಗ್ರೆಸ್ ಪಕ್ಷದ ಹಿಂಸಾಚಾರಕ್ಕೆ ಎಲ್ಲಿ ಗುರಿಯಾಗಬೇಕಾಗುತ್ತದೋ ಎಂಬ ಆತಂಕ ಅವರನ್ನು ಕಾಡುತ್ತಿದೆ. ಯುವಕರು ಉದ್ಯೋಗ ಸಿಗದೆ ಭಾರಿ ಸಂಖ್ಯೆಯಲ್ಲಿ ಬೇರೆ ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಹೊಸ ಕೈಗಾರಿಕೆಗಳು ಸ್ಥಾಪನೆಗೊಳ್ಳುತ್ತಿಲ್ಲ. ಸಂಸ್ಕೃತಿನಿಷ್ಠ ಸಮಾಜ ಮುಂದೇನು ಎಂದು ತಿಳಿಯದೆ ರೋಸಿಹೋಗಿದೆ. ಅಭಿವೃದ್ಧಿಯ ಹಸಿವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹವಾಯಿ ಚಪ್ಪಲಿ ಹಾಕಿಕೊಂಡು ಸರಳತೆ ಮೆರೆಯುವ ಮಮತಾ, ಆಡಳಿತದಲ್ಲಿನ ಭ್ರಷ್ಟಾಚಾರಕ್ಕೆ ಕಿವುಡಾಗಿದ್ದಾರೆ. ವಿಚಿತ್ರವೆಂದರೆ, ರಾಜ್ಯದಲ್ಲೇ ಇಷ್ಟೊಂದು ಅಪಸವ್ಯಗಳು ಇರುವಾಗ ರಾಷ್ಟ್ರ ರಾಜಕಾರಣದಲ್ಲಿ ಮಿಂಚುವ ಭ್ರಮೆಯಲ್ಲಿ ಮಮತಾ ಮುಳುಗಿದ್ದಾರೆ. ಇದಕ್ಕಾಗಿ ಬಿಜೆಪಿಯೇತರ ಪಕ್ಷಗಳ ಕೆಲ ಮುಖಂಡರನ್ನು ಭೇಟಿ ಮಾಡುತ್ತ ಮಾತುಕತೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿನ ಹಿಂಸೆ, ಭ್ರಷ್ಟಾಚಾರದ ಮೇಲೆ ಕಡಿವಾಣ ಹಾಕಲು ವಿಫಲರಾಗಿರುವ ಮಮತಾ, ಮೋದಿಯನ್ನು ತೆಗಳುವಲ್ಲಿ ಹಿಂದೆ ಬೀಳುವುದಿಲ್ಲ. ರಾಜಕೀಯವು ಜನರ ಹಿತದೃಷ್ಟಿಯಿಂದ ಕೂಡಿರಬೇಕು. ಅಷ್ಟಕ್ಕೂ ರಾಜ್ಯದ ಮುಖ್ಯಮಂತ್ರಿ ಆದವರಿಗೆ ಎಲ್ಲ ಪ್ರಜೆಗಳು ಸಮಾನರು. ಎಲ್ಲರ ಅಭಿವೃದ್ಧಿಯೊಂದಿಗೆ ರಾಜ್ಯವನ್ನು, ದೇಶವನ್ನು ಮುಂಚೂಣಿಗೆ ತಂದು ನಿಲ್ಲಿಸುವ ಕನಸು, ಶ್ರಮ ಆಡಳಿತಗಾರರದ್ದಾಗಿರಬೇಕು. ಆದರೆ, ಬಂಗಾಳದಲ್ಲಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಇಂಥ ಆಡಳಿತಗಳನ್ನು ಕಿತ್ತೊಗೆಯಲು ಜನ ಹಿಂದೆ-ಮುಂದೆ ನೋಡುವುದಿಲ್ಲ ಎಂಬುದಕ್ಕೆ ಭಾರತೀಯ ರಾಜನೀತಿಯಲ್ಲಿ ಸಾಕಷ್ಟು ನಿದರ್ಶನಗಳು ಸಿಗುತ್ತವೆ. ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದಲ್ಲದೆ ಅದನ್ನು ಸಮರ್ಥನೆ ಮಾಡಿಕೊಂಡ ಇಂದಿರಾ ಗಾಂಧಿ ಅವರೂ ಸೋಲಿನ ರುಚಿ ಕಾಣಬೇಕಾಯಿತು. ‘ಶೋನಾರ್ ಬಾಂಗ್ಲಾ’ವನ್ನು ‘ದಯನೀಯ ಬಾಂಗ್ಲಾ’ ಆಗಿಸಿದ ಮಮತಾ ಬ್ಯಾನರ್ಜಿಯವರು ಇನ್ನು ಮುಂದಾದರೂ ತಪ್ಪುಗಳನ್ನು ಸರಿಪಡಿಸಿಕೊಂಡು, ಜನಹಿತದ ದಾರಿಯಲ್ಲಿ ನಡೆಯಲು ಮುಂದಾಗಲಿ. ಹಿಂಸೆ, ಭ್ರಷ್ಟಾಚಾರ, ಬಡತನದ ಕಳಂಕವನ್ನು ನಿವಾರಿಸಲಿ ಎಂಬುದೇ ಆಶಯ.

Leave a Reply

Your email address will not be published. Required fields are marked *

Back To Top