Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಹೊಸ ದಿಕ್ಕು ಸಿಕ್ಕಿದೆ, ಗುರಿ ಸ್ಪಷ್ಟವಾಗಿದೆ…

Monday, 29.05.2017, 3:00 AM       No Comments

ಭಾರತ ಹೊಂದಿರುವ ಅಗಾಧ ಸಾಂಸ್ಕೃತಿಕ ವೈವಿಧ್ಯತೆ, ಭೌಗೋಳಿಕ ವೈಶಾಲ್ಯ, ರಾಜ್ಯ-ಪ್ರಾಂತ್ಯಗಳ ವೈಶಿಷ್ಟ್ಯಳು ಅಸಾಧಾರಣ. ಪ್ರಪಂಚದಾದ್ಯಂತ ಓಡಾಡಿಕೊಂಡು ಬನ್ನಿ- ಭಾರತಕ್ಕಿಂತ ಸುಂದರವಾದ ದೇಶ ಎಲ್ಲಾದರೂ ಸಿಗುವುದೇ? ಶಿಲಾಂಗ್​ನಿಂದ ವಾಲೊಂಗ್, ಸಿಕ್ಕಿಂನಿಂದ ಲೇಹ್ ಮತ್ತು ಕಾರ್ಗಿಲ್, ಶ್ರೀನಗರದಿಂದ ಜೈಸಲ್ಮೇರ್, ಅಜಂತಾ-ಎಲ್ಲೋರಾದಿಂದ ರಾಮೇಶ್ವರಂವರೆಗೆ, ಹಂಪಿಯಿಂದ ಲಕ್ಷದ್ವೀಪದವರೆಗೆ, ತಾಜಮಹಲ್ ಹಾಗೂ ಫತೆಪುರ್ ಸಿಕ್ರಿಯಿಂದ ಹಿಡಿದು ಗ್ವಾಲಿಯರ್​ನ ಕೋಟೆಗಳವರೆಗೆ, ಹುಸೇನ್​ಸಾಗರದಿಂದ ಕಟಕ್ ಅಲ್ಲಿಂದ ಜಗನ್ನಾಥ್… ಹೀಗೆ ಏನೆಲ್ಲ ವಿಶ್ವದಲ್ಲಿ ಇದೆಯೋ ಅದೆಲ್ಲ ಭಾರತದಲ್ಲಿದೆ. ಆದರೆ, ಭಾರತದಲ್ಲಿರುವುದೆಲ್ಲ ವಿಶ್ವದ ಬೇರೆಡೆ ಇಲ್ಲ. ಇದು ನಮ್ಮ ವೈಶಿಷ್ಟ್ಯಲ್ಲದೆ ಮತ್ತೇನು?

ಆದರೆ, ಇವುಗಳನ್ನೆಲ್ಲ ಗ್ರಹಿಸಿ ಸಂಪೂರ್ಣ ಭಾರತದ ಬಗ್ಗೆ ಸ್ಪಷ್ಟ ದೃಷ್ಟಿಕೋನ ಹೊಂದುವುದು, ಸಾಮರಸ್ಯ, ಸದ್ಭಾವನೆಯ ಮೌಲ್ಯಗಳನ್ನು ಬೆಳೆಸುವುದು ನಿಜಕ್ಕೂ ದೊಡ್ಡ ಸವಾಲು. ಇದಕ್ಕಾಗಿ ದೇಶದ ಆಡಳಿತಗಾರರಲ್ಲಿ ಪ್ರಬಲ ಇಚ್ಛಾಶಕ್ತಿ, ದೂರದೃಷ್ಟಿ ಎರಡೂ ಬೇಕು. ದುರದೃಷ್ಟವಶಾತ್, ಈಶಾನ್ಯದ ರಾಜ್ಯಗಳನ್ನು ಉಳಿದ ಭಾರತ ನಿರ್ಲಕ್ಷಿಸಿಬಿಟ್ಟಿತು. ಕೇಂದ್ರದಲ್ಲಿ ಅಧಿಕಾರದಲ್ಲಿರುವವರು ಕೂಡ ಇದೇ ನೀತಿ ಅನುಸರಿಸಿದ್ದರಿಂದ ಈಶಾನ್ಯ ರಾಜ್ಯಗಳ ಜನರು ತಾವು ಭಾರತೀಯರೆಂದು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದರು. ಅವರ ಕಷ್ಟ, ನೋವುಗಳಿಗೆ ಸ್ಪಂದಿಸುವುದಿ ರಲಿ, ಬಿಡಿ ಕಿವಿಯಾಗುವ ಕನಿಷ್ಠ ಸೌಜನ್ಯವನ್ನೂ ತೋರದ ಕಾರಣ ಈಶಾನ್ಯ ಭಾರತ ಹಾಗೂ ಉಳಿದ ಭಾರತದ ನಡುವಿನ ಕಂದಕ ಹೆಚ್ಚುತ್ತಲೇ ಹೋಯಿತು.

ಮೂರು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಮೊದಲ ಬಾರಿಗೆ ಈಶಾನ್ಯ ರಾಜ್ಯಗಳ ಮಹತ್ವವನ್ನು, ಉಳಿದ ರಾಜ್ಯಗಳೊಂದಿಗೆ ಅವುಗಳನ್ನು ಬೆಸೆಯುವ ಅಗತ್ಯವನ್ನು ಮನಗಾಣಿಸಿತು. ಅದರ ಫಲಿತಾಂಶ ನಮ್ಮ ಕಣ್ಮುಂದೆ ಇದೆ. ಮೇ 26ರಂದು ಮೋದಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಸಂಭ್ರಮಾಚರಣೆಯನ್ನು ಈಶಾನ್ಯದ ಪ್ರಮುಖ ರಾಜ್ಯ ಅಸ್ಸಾಂನಲ್ಲಿ ಆಚರಿಸಲಾಯಿತು. ಅಷ್ಟೇ ಅಲ್ಲ, ಅಸ್ಸಾಂನಲ್ಲಿ ಲೋಹಿತ್ ನದಿಗೆ ನಿರ್ವಿುಸಲಾಗಿರುವ ಧೋಲಾ ಹಾಗೂ ಸದಿಯಾ ಪ್ರದೇಶವನ್ನು ಸಂರ್ಪಸುವ ದೇಶದ ಅತ್ಯಂತ ಉದ್ದದ ಸೇತುವೆಯನ್ನು ಅಂದು ದೇಶಕ್ಕೆ ಸಮರ್ಪಿಸಲಾಯಿತು. ಇದು ಕೇವಲ ಉದ್ದದ ಸೇತುವೆಯಲ್ಲ, ದೇಶವನ್ನು ಒಂದು ತುದಿಯಿಂದ ಮತ್ತೊಂದು ತುದಿಗೆ ಸಂರ್ಪಸುವ ಮಹತ್ವದ ಬೆಳವಣಿಗೆಯೆಂದರೆ ಅತಿಶಯೋಕ್ತಿಯಲ್ಲ. ಬ್ರಹ್ಮಪುತ್ರ ನದಿಯ ತೀರದಲ್ಲಿ ತಾಯಿ ಕಾಮ್ಯಾಕ ದೇವಿಯ ಆಶೀರ್ವಾದ ಪಡೆದು ಭಾರತದ ಅಷ್ಟಲಕ್ಷ್ಮೀಗಳನ್ನು ಆಹ್ವಾನಿಸುತ್ತ ದೇಶದ ಉದ್ದದ ಸೇತುವೆಯನ್ನು ಉದ್ಘಾಟಿಸಿದ್ದು ಭಾರತದ ಹೆಚ್ಚುತ್ತಿರುವ ಆತ್ಮವಿಶ್ವಾಸ ಹಾಗೂ ಶಕ್ತಿಯ ಪ್ರತೀಕವಾಗಿದೆ. ರಾಷ್ಟ್ರೀಯ ಏಕತೆ ಹಾಗೂ ಈಶಾನ್ಯ ರಾಜ್ಯಗಳ ಬಗ್ಗೆ ಹೆಚ್ಚುತ್ತಿರುವ ಮುತುರ್ವಜಿಯ ಸಾಕ್ಷಿಯಾಗಿದೆ.

ಇಂಜಿನಿಯರಿಂಗ್​ನ ಅದ್ಭುತ ಕೌಶಲಗಳನ್ನು ಬಳಸಿ ಕಟ್ಟಲಾಗಿರುವ ಈ ಸೇತುವೆ ಜನರ ಮನಸ್ಸುಗಳನ್ನೂ ಬೆಸೆಯಲಿದೆ. 9.15 ಕಿ.ಮೀ ಉದ್ದ ಇರುವ ಈ ಸೇತುವೆ ಮೇಲೆ 60 ಟನ್ ತೂಕದ ಯುದ್ಧ ಟ್ಯಾಂಕರ್​ಗಳು ಕೂಡ ಸಂಚರಿಸಬಹುದಾಗಿದೆ. ಹೀಗಾಗಿ ಭಾರತ-ಚೀನಾ ಗಡಿ ಪ್ರದೇಶಕ್ಕೆ ರಕ್ಷಣಾ ಸಾಮಗ್ರಿಗಳನ್ನು ಸಾಗಿಸುವಲ್ಲಿ ಸೇತುವೆ ಪ್ರಮುಖ ಪಾತ್ರ ವಹಿಸಲಿದೆ. ಬ್ರಹ್ಮಪುತ್ರದ ಉಲ್ಲೇಖವಾಗುತ್ತಿದ್ದಂತೆ ಸ್ವಾಭಾವಿಕವಾಗಿಯೇ ಭೂಪೇನ್ ಹಜಾರಿಕಾ ನೆನಪಾಗುತ್ತಾರೆ. ಆ ಕಾರಣಕ್ಕಾಗಿಯೇ ಈ ಸೇತುವೆಗೆ ಹಜಾರಿಕಾ ಹೆಸರು ಇಡುವ ಮೂಲಕ ಉತ್ತಮ ಹೆಜ್ಜೆ ಇರಿಸಲಾಗಿದೆ. ಒಂದರ್ಥದಲ್ಲಿ ಬ್ರಹ್ಮಪುತ್ರ ಪೂರ್ತಿ ಭಾರತದ ಪವಿತ್ರತೀರ್ಥ ಮಾತ್ರವಲ್ಲದೆ, ದೇಶವನ್ನು ರಕ್ಷಿಸುವ ಭುಜಬಲವೂ ಹೌದು. ಬ್ರಹ್ಮಪುತ್ರವನ್ನು ಅರುಣಾಚಲದಲ್ಲಿ ಲೋಹಿತ್ ಎಂದು ಕರೆಯಲಾಗುತ್ತದೆ. ಈ ಅಭಿವೃದ್ಧಿ ಕಾರ್ಯಗಳು ಲೋಹಿತ್ ನದಿತೀರ ಪ್ರದೇಶದ ಜನರಲ್ಲಿ ಹರ್ಷದ ಸಂಚಲನ ಮೂಡಿಸಿವೆ; ಈಶಾನ್ಯದ ಸಪ್ತರಾಜ್ಯಗಳಲ್ಲಿ ಹೊಸ ಭರವಸೆ ಮೂಡಿಸಿದೆ. 7 ದಶಕಗಳ ನಿರ್ಲಕ್ಷ್ಯ ಅವಮಾನ ಕಡೆಗೂ ಅಂತ್ಯಗೊಳ್ಳುತ್ತಿದೆಯಲ್ಲ ಎಂಬ ನಿರಾಳ ಭಾವವೇ ಅಲ್ಲಿನ ಜನರ ಹುಮ್ಮಸ್ಸನ್ನು, ಅಭಿವೃದ್ಧಿ ಕುರಿತಾದ ವಿಶ್ವಾಸವನ್ನು ಹೆಚ್ಚಿಸಿದೆ.

ಇದು, ಈಶಾನ್ಯ ರಾಜ್ಯಗಳ ಚಿತ್ರಣವಾದರೆ ಮತ್ತೊಂದೆಡೆ ಅಂತಾರಾಷ್ಟ್ರೀಯ ವಲಯದಲ್ಲಿ ಭಾರತದ ಸಾಧನೆಯ ಗ್ರಾಫ್ ಏರಿಕೆಯಾಗುತ್ತಿದೆ. ಈ ದೇಶದ ಶಕ್ತಿಯನ್ನು ಅನುಮಾನಿಸುತ್ತಿದ್ದ ದೇಶಗಳೇ ಇದೀಗ ‘ಭಾರತದ ಜಮಾನಾ’ ಎಂದು ಹೇಳುತ್ತಿವೆ! ಹೌದು, ಅಂತಾರಾಷ್ಟ್ರೀಯ ವಲಯದ ಚಿತ್ರಣವನ್ನೊಮ್ಮೆ ಗಮನಿಸಿ. ಭಾರತದ ಸಾಂಪ್ರದಾಯಿಕ ಶತ್ರುರಾಷ್ಟ್ರ ಪಾಕಿಸ್ತಾನವೊಂದನ್ನು ಹೊರತುಪಡಿಸಿದರೆ ಬಹುತೇಕ ಎಲ್ಲ ರಾಷ್ಟ್ರಗಳು ಭಾರತದ ಸ್ನೇಹವನ್ನು ಬಯಸುತ್ತಿವೆ, ಸಂಬಂಧ ಸುಧಾರಣೆಗೆ ಹಾತೊರೆಯುತ್ತಿವೆ. ಇಸ್ರೇಲ್ ಸೇನಾ ಸಹಕಾರ ನೀಡಲು ಮುಂದೆ ಬಂದಿದೆ. ಬಾಂಗ್ಲಾದೇಶ ತನ್ನ ನೆಲದಿಂದ ನಡೆಯುತ್ತಿರುವ ಭಾರತವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿದೆ. ಫ್ರಾನ್ಸ್ ಭಾರತದೊಂದಿಗೆ ಗರಿಷ್ಠ ರಾಜತಾಂತ್ರಿಕ ಸಂಬಂಧ ಬಯಸುತ್ತಿದೆ. ರಷ್ಯಾ ಕೂಡ ನಮ್ಮ ದೇಶದ ಬಲವನ್ನು ಅರಿತಿದೆ. ಮ್ಯಾನ್ಮಾರ್, ಶ್ರೀಲಂಕಾ, ಭೂತಾನ್​ನಂಥ ಪುಟ್ಟ ರಾಷ್ಟ್ರಗಳು ಭಾರತದ ನೆರವಿನೊಂದಿಗೆ ಅಭಿವೃದ್ಧಿ ಹಾಗೂ ಪರಸ್ಪರ ಸಹಕಾರ ನಿಟ್ಟಿನಲ್ಲಿ ಮುಂದಡಿ ಇಟ್ಟಿವೆ. ಈವರೆಗಿನ ಪ್ರಧಾನಿಗಳು ಭೇಟಿ ನೀಡದ ರಾಷ್ಟ್ರಗಳಿಗೂ ಮೋದಿ ತೆರಳಿ ಭಾರತದ ವಿದೇಶಾಂಗ ನೀತಿಯನ್ನು ಬಲಗೊಳಿಸುತ್ತಿದ್ದಾರೆ. ಇದರ ಪರಿಣಾಮವೇ, ಕುಲಭೂಷಣ್ ಯಾದವ್ ಪ್ರಕರಣದಲ್ಲಿ ಭಾರತಕ್ಕೆ ಆರಂಭಿಕ ಯಶಸ್ಸಾದರೂ ಸಿಕ್ಕಿದೆ.

ಭಾರತವೆಂದರೇ ಹಾಗೆ. ತನ್ನ ಶಕ್ತಿ ಮೂಲಕವೇ ಜಗತ್ತನ್ನು ಪ್ರಭಾವಿಸುವಂಥ, ಪ್ರೇರಣೆ ನೀಡುವಂಥ ಶಕ್ತಿ ಅದಕ್ಕಿದೆ. ಹಾಗಾಗಿಯೇ, ಭಾರತ ಭಾರತವಾಗಿ ಉಳಿಯಲು ಸಾಧ್ಯವಾಗಿದೆ. ಜಗತ್ತು ಹಲವು ಬಾರಿ ಭಾರತದ ಶಕ್ತಿಯನ್ನು ಅರ್ಥೈಸಿಕೊಂಡು ಗೌರವಿಸಿದೆ, ಇಲ್ಲಿನ ದನಿಯನ್ನು ಗಂಭೀರವಾಗಿ ಆಲಿಸಿದೆ. ಆದರೆ, ನಮ್ಮಲ್ಲಿನ ರಾಜಕೀಯ ಪಕ್ಷಗಳು, ಈ ಹಿಂದಿನ ಆಳುಗರು ರಾಜಕೀಯ ಹಿತಾಸಕ್ತಿಗೋಸ್ಕರ ದೇಶದ ಬಗ್ಗೆ ಕೀಳರಿಮೆ ಮೂಡಿಸುವಂಥ ಭಾವನೆಗಳನ್ನೇ ಬಿತ್ತುತ್ತಾ ಬಂದರು. ‘ಭಾರತವೆಂದರೆ ಬಡ, ಅಸಹಾಯಕ ದೇಶ’ ಎಂದೇ ಬಿಂಬಿಸಿಕೊಂಡು ಬರಲಾಯಿತು. ಈ ರಹಸ್ಯ ‘ರಾಜಕೀಯ ಕಾರ್ಯಸೂಚಿ’ಯನ್ನು ಅರಿಯದ ಅಂತಾರಾಷ್ಟ್ರೀಯ ಶಕ್ತಿಗಳೂ ಇದನ್ನೇ ನಿಜವೆಂದು ಭಾವಿಸಿದವು. ಹಾಗಾಗಿ, ‘ಭಾರತ ಏನು ಮಾಡಲು ಸಾಧ್ಯ?’ ಎಂಬ ಭಾವನೆಯನ್ನು ತಳೆದವು. ಆದರೆ, ಈ ದೇಶದ ಶಕ್ತಿ ಎಂಥದ್ದು ಎಂಬುದು ಕೇಂದ್ರದಲ್ಲಿ ರಾಷ್ಟ್ರವಾದಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಮತ್ತೆ ಸ್ಪಷ್ಟವಾಗುತ್ತಿದೆ.

ಅಷ್ಟೇ ಅಲ್ಲ, ಭಾರತದೊಳಗೇ ಮೊದಲ ಬಾರಿ ನಡೆಯುತ್ತಿರುವ/ನಡೆದಿರುವ ಸುಧಾರಣೆಗಳನ್ನೂ ಸ್ವಲ್ಪ ಗಮನಿಸಬೇಕು. ಆದರೆ, ಭಾರತದ ಬಗ್ಗೆ ಸದಾ ಕೀಳರಿಮೆಯಿಂದ ಮಾತನಾಡುವ, ಅಂಥ ಸಂಗತಿಗಳನ್ನೇ ಬರೆಬರೆದು ‘ಅಂತಾರಾಷ್ಟ್ರೀಯ ಪ್ರಶಸ್ತಿ’ ಪಡೆಯುವವರಿಗೆ ಇಂಥದ್ದೆಲ್ಲ ಕಾಣುವುದೇ ಇಲ್ಲ. ಇದೇ ಮೊದಲಬಾರಿ ನಮ್ಮ ಆರ್ಥಿಕನೀತಿಗಳು ಹಾಗೂ ವಿಕಾಸದ ದಾರಿಗಳು ಗ್ರಾಮೀಣ ಭಾಗದತ್ತ, ಬಡವರತ್ತ ಸಾಗಿವೆ. ಇಂಥ ಕ್ರಮಗಳು ನಮ್ಮ ಗ್ರಾಮೀಣ ಪ್ರದೇಶದಲ್ಲಿ, ದೇಶದ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆ ತರುವುದಂತೂ ಖರೆ.

ಮಾತ್ರವಲ್ಲ, ಅರುಣಾಚಲದಲ್ಲಿ ಇಟಾನಗರದವರೆಗೆ ರೈಲು ಗಾಡಿ, ಜಮ್ಮು-ಕಾಶ್ಮೀರದಲ್ಲಿ ಕಟ್ರಾ, ಉತ್ತರಾಖಂಡದಲ್ಲಿ ಚಾರ್​ಧಾಮ್ರೆಗೆ ರೈಲುಸೇವೆಯ ಜಾಲ ವಿಸ್ತರಣೆಯಾಗಿರುವುದು ಕಡಿಮೆ ಸಾಧನೆಯೇನಲ್ಲ. ಬಂದರುಗಳನ್ನು ಭಾರತದಲ್ಲಿ ಸಮೃದ್ಧಿ ತರುವ ಮಹಾದ್ವಾರಗಳನ್ನಾಗಿಸಲಾಗುತ್ತಿದೆ. ಇನ್ನು ಆಡಳಿತ ಸುಧಾರಣೆ ನಿಟ್ಟಿನಲ್ಲಿಯೂ ಮಹತ್ವದ ಹೆಜ್ಜೆಗಳನ್ನು ಇರಿಸಲಾಗಿದೆ. ರೈಲು ಹಾಗೂ ರಕ್ಷಣಾ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ಮಿತಿಯನ್ನು ಹೆಚ್ಚಿಸಲಾಗಿದೆ. ಸರ್ಕಾರಿ ಖರ್ಚು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ. ಇದನ್ನೆಲ್ಲ ಕಂಡಾಗ, ಅವಲೋಕಿಸಿದಾಗ ಶ್ರೀಅರಬಿಂದೋ ಅವರ ಮಾತು ನೆನಪಾಗುತ್ತಿದೆ. ‘ಭಾರತ ಶತಮಾನಗಳಿಂದ ಹೋರಾಡುತ್ತಿತ್ತು. ಗೆಲ್ಲುತ್ತಾ ಹಾಗೂ ಸೋಲುತ್ತಾ ಇತ್ತು. ಮತ್ತೆ ಗೆದ್ದಿತು, ಎದ್ದಿತು’ ಎನ್ನುತ್ತಾರೆ ಅರಬಿಂದೋ. ಇಂದಿನ ಸ್ಥಿತಿಯನ್ನು ಕಂಡಾಗ ಈ ಮಾತುಗಳು ಅಕ್ಷರಶಃ ನಿಜವೆನಿಸುತ್ತವೆ. ಸೋತಿರುವ, ಗೆದ್ದಿರುವ, ಬಿದ್ದಿರುವ, ಎದ್ದಿರುವ ಭಾರತ ಮತ್ತೆ ಮೇಲೇಳುತ್ತಿದೆ.

ಮೋದಿ ಸರ್ಕಾರದ 3 ವರ್ಷಗಳು ಮೂರು ದಿನಗಳಂತೆ ಕಳೆದು ಹೋಗಿವೆ. ಮುಂದಿನ ಅಭಿವೃದ್ಧಿ ಹಾದಿಯಲ್ಲಿನ ಪಯಣ ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿದು ಬಲಿಷ್ಠ ಭಾರತ ನಿರ್ವಣವಾಗಲಿ. ಆ ನಿಟ್ಟಿನಲ್ಲಿ ಎಲ್ಲ ಭೇದ-ಭಾವ, ಅಸಮಾಧಾನಗಳು ಮರೆಯಾಗಿ ಸದ್ಭಾವ ನೆಲೆಸಿ ಅಭಿವೃದ್ಧಿ ಮಂತ್ರವೊಂದೇ ಅನುರಣಿಸುವಂತಾಗಲಿ ಎಂಬುದು ಈ ಹೊತ್ತಿನ ಹಾರೈಕೆ.

 

(ಲೇಖಕರು ನಿಕಟಪೂರ್ವ ರಾಜ್ಯಸಭಾ ಸದಸ್ಯರು, ಹಿರಿಯ ಪತ್ರಕರ್ತರು ಹಾಗೂ ರಾಷ್ಟ್ರೀಯ ವಿಚಾರಗಳ ಪ್ರಬಲ ಪ್ರತಿಪಾದಕರು)

Leave a Reply

Your email address will not be published. Required fields are marked *

Back To Top