Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಅಯೋಧ್ಯೆ ಎಂದರೆ ನಿರ್ಮಲ ಸವೋಚ್ಚ ಅಭಿವ್ಯಕ್ತಿ

Monday, 15.05.2017, 3:04 AM       No Comments

ನಮ್ಮ ದೇಶದ ಹೃದಯದಂತಿರುವ ಅಯೋಧ್ಯೆಯ ವಿಚಾರ ಪದೇಪದೆ ವಿವಾದಿತ ಕಟ್ಟಡದ ಕಾರಣಕ್ಕೆ ಚರ್ಚೆಗೆ ಬರುತ್ತಿದೆ. ಆದರೆ, ಅಯೋಧ್ಯೆ ಎಂದರೆ ಅದೊಂದೇ ವಿಚಾರವೇ? ಅದರ ಹಿಂದಿರುವ ನೈಜಭಾವ ಯಾವುದು? ಅದೇಕೆ ಇಡೀ ದೇಶವನ್ನು ಒಗ್ಗೂಡಿಸುತ್ತದೆ? ಇವನ್ನೆಲ್ಲ ಅವಲೋಕಿಸಿದರೆ ಅಯೋಧ್ಯೆ ಒಂದು ಸೀಮಿತ ಪ್ರದೇಶವಾಗದೇ ನಮ್ಮ ಭಾರತದ ಭಾವವೇ ಆಗಿ ಗೋಚರಿಸುತ್ತದೆ.

ಹೌದು.. ಅಯೋಧ್ಯೆ ಮತ್ತೆ ಮತ್ತೆ ಸುದ್ದಿಯಾಗುತ್ತಿದೆ. ಅಲ್ಲಿನ ವಿವಾದಿತ ಕಟ್ಟಡ ಧ್ವಂಸ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಲಾಲ್​ಕೃಷ್ಣ ಆಡ್ವಾಣಿ, ಡಾ.ಮುರಳೀಮನೋಹರ ಜೋಷಿ, ಉಮಾಭಾರತಿ ಸೇರಿ 13 ಆರೋಪಿಗಳ ವಿರುದ್ಧದ ಪಿತೂರಿ ಆರೋಪದ ವಿಚಾರಣೆಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಹಸಿರು ನಿಶಾನೆ ತೋರಿಸಿತ್ತು. ಈ ಮೂಲಕ ಸುಮಾರು 25 ವರ್ಷಗಳಷ್ಟು ಹಳೆಯ ಪ್ರಕರಣ ಮರುಜೀವ ಪಡೆದುಕೊಂಡಂತಾಗಿದೆ. ಆದರೆ, ಅಯೋಧ್ಯೆಗೂ ಭಾರತಕ್ಕೂ ಇರುವ ಸಂಬಂಧ ಇಷ್ಟು ಮಾತ್ರಕ್ಕೆ ಸೀಮಿತವೇ? ಭಾರತೀಯರಿಗೆ ಅಯೋಧ್ಯೆ ಕೇವಲ ಒಂದು ನಗರವಲ್ಲ. ಸರಯೂ ನದಿ ಪ್ರವಾಹವೂ ಅಲ್ಲ, ಕೃಷಿ, ರೈತ, ಮಂದಿರ, ಆಶ್ರಮ ಯಾವುದೂ ಅಲ್ಲ. ಅಯೋಧ್ಯೆ ಎನ್ನುವುದು ಒಂದು ಭಾವ. ಅಯೋಧ್ಯೆ ಪದದ ಅರ್ಥವೆ ಭಾರತಭಾವ. ದೇಶದೊಂದಿಗೆ ಬಾಂಧವ್ಯ ಹೊಂದಿರುವವರಲ್ಲಿ ಕಾಣುವ ಸಭ್ಯತೆ, ವಿಚಾರವಂತಿಕೆ, ಜ್ಞಾನಸಂಪತ್ತು ಮತ್ತು ಆ ಪರಂಪರೆಯ ಇನ್ನೊಂದು ಹೆಸರೇ ಅಯೋಧ್ಯೆ. ಹೀಗಾಗಿ ಅಯೋಧ್ಯೆ ಎನ್ನುವುದನ್ನು ನಾವು ‘ಸೀಮಿತ ಪ್ರದೇಶ’ ಎಂದು ಬಣ್ಣಿಸಲು ಸಾಧ್ಯವಿಲ್ಲ.

ಅಯೋಧ್ಯೆ ಹಿಂದುಗಳ ಮನಸ್ಸಿನ ಸವೋಚ್ಚ, ನಿರ್ಮಲ ಮತ್ತು ಸುಖದಾಯಕ ಅಭಿವ್ಯಕ್ತಿ. ಕಳೆದ ನಾಲ್ಕೈದು ಶತಮಾನಗಳಿಂದ ಹಿಂದುಗಳು ಅಯೋಧ್ಯೆಯ ಸ್ಮರಣೆ ಮಾಡುತ್ತಿದ್ದಾರೆ ಎಂದರೆ ಆ ಹೆಸರಿಗೂ ನಮಗೂ ಅದೇನೋ ಒಂದು ಬಂಧ ಇರಲೇಬೇಕಲ್ಲವೇ? ಸರಯೂ ನದಿಯಲ್ಲಿ ಕರಸೇವಕರ ರಕ್ತವಲ್ಲ, ಅಲ್ಲಿ ಸಣ್ಣ ಸಣ್ಣ ದೀಪಗಳು ಉರಿಯಬೇಕು, ಜಲ ಆರತಿ ನಡೆಯಬೇಕು ಎಂಬುದು ಹಿಂದುಗಳ ಕನಸು.

ಇತಿಹಾಸದ ಪುಟಗಳನ್ನೊಮ್ಮೆ ತಿರುವಿಹಾಕಿ ನೋಡಿದರೆ, ಅಲ್ಲಿ ನಮಗೆ ಎಷ್ಟೊ ಘಟನೆಗಳು ಕಾಣಸಿಗುತ್ತವೆ. ಒಬ್ಬರಿಗೊಬ್ಬರ ಮೇಲಿನ ದ್ವೇಷ ಸಾಧನೆ, ಯುದ್ಧ ಮುಂತಾದವುಗಳು ಅಂದಿನ ದಿನಗಳಲ್ಲಿ ಸಾಮಾನ್ಯವಾಗಿತ್ತು. ದಾಳಿಕೋರರು ಅದೆಷ್ಟು ದೇವಾಲಯಗಳನ್ನು ಧ್ವಂಸ ಮಾಡಿಲ್ಲ? ನರಸಂಹಾರಗಳೂ ಸಾಮಾನ್ಯ ಎನ್ನುವಂತಾಗಿದ್ದವು. ಅಕ್ಬರ್ – ರಾಣಾ ಪ್ರತಾಪ್ ಹಲ್ದಿಘಾಟಿಯಲ್ಲಿ, ಆಗಿಂದ್ದಾಗ್ಗೆ ಸಂಘರ್ಷದಲ್ಲಿ ತೊಡಗಿರುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಾಗಿತ್ತು. ಅಂದು ಕಾಶ್ಮೀರದ ಪಂಡಿತರು ರಕ್ಷಣೆ ಕೋರಿ ಪಂಡಿತ್ ಗುರುತೇಗ್ ಬಹದೂರ್ ಸಾಹೇಬ್ ಅವರ ಬಳಿ ತೆರಳುತ್ತಿದ್ದರು. ಮೊಘಲ್ ದೊರೆಗಳು ಪ್ರತಿಯೊಬ್ಬ ಸಿಖ್ಖನ ತಲೆಗೂ ಬಹುಮಾನ ಘೊಷಣೆ ಮಾಡಿದ್ದರು. ಆ ದಿನಗಳನ್ನು ನೆನಪಿಸಿಕೊಳ್ಳಿ- ಪಾಣಿಪತ್ ಕದನ ಯಾಕಾಯಿತು? ಅಗಾಧ ಸಂಪತ್ತು ಹೊಂದಿದ್ದ ರಾಜ್ಯ, ವಿದೇಶಿ ಪ್ರವಾಸಿಗರಿಂದ ಅದ್ಭುತ ನಗರಿ ಎಂದೇ ಕರೆಸಿಕೊಂಡಿದ್ದ ಹಂಪಿ ಯಾಕೆ ಧ್ವಂಸವಾಗಿ ಹೋಯಿತು. ಛತ್ರಪತಿ ಶಿವಾಜಿ ಅವರು ಮಿರ್ಜಾ ರಾಜ ಜಯಸಿಂಹನಿಗೆ ಕೋರಿಕೆಗಳಿರುವ ಪತ್ರವನ್ನು ಯಾಕೆ ಬರೆದರು? ಈ ಎಲ್ಲ ಘಟನಾವಳಿಗಳನ್ನು, ಇತಿಹಾಸವನ್ನು ಮೆಲುಕು ಹಾಕಿದರೆ ಅರ್ಥವಾಗುತ್ತದೆ. ಅಂದಿನಿಂದ ಇಂದಿನವರೆಗೆ ಯಾವತ್ತೂ ಒಂದಿಲ್ಲೊಂದು ಕಾರಣಕ್ಕೆ ಶಾಂತಿ ಭಂಗವಾಗುತ್ತಲೇ ಇದೆ.

ಆಗ ರಾಜರುಗಳ ನಡುವೆ ಯುದ್ಧಗಳ ಘೊಷಣೆಯಾಗುತ್ತಿತ್ತು. ಸೈನಿಕರು ಕತ್ತಿ ಹಿಡಿದು ಗಡಿಯ ರಕ್ಷಣೆಗಾಗಿ ಪ್ರಾಣ ತೆರುತ್ತಿದ್ದರು. ಈಗ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಕಾಶ್ಮೀರದಲ್ಲಿ ಗಡಿ ಕಾಯುತ್ತಿರುವ ಸೈನಿಕರ ಪರಿಸ್ಥಿತಿ ಹೇಗಿದೆ? ಬೆನ್ನಹಿಂದೆ ಸಂಚುರೂಪಿಸಿ ಹತ್ಯೆ ಮಾಡಲಾಗುತ್ತಿಲ್ಲವೇ? ಇತ್ತೀಚೆಗೆ ಭಾರತದ ಸೈನಿಕರ ರುಂಡವನ್ನು ಕಡಿದು ಕ್ರೌರ್ಯ ಮೆರೆದಿದ್ದ ಪಾಕಿಸ್ತಾನದ ಕ್ರಮ ಇದಕ್ಕೆ ಸ್ಪಷ್ಟ ಉದಾಹರಣೆಯಲ್ಲವೇ? ಕಾಶ್ಮೀರದಲ್ಲಿ ಭಾರತೀಯ ಸೈನಿಕರಿಗಾಗುತ್ತಿರುವ ಅವಮಾನವನ್ನು ವಿಶ್ವದ ಯಾವುದೇ ದೇಶವಾದರೂ ಸ್ವೀಕರಿಸಲು, ಸಹನೆಯಿಂದ ನಡೆದುಕೊಳ್ಳಲು ಸಾಧ್ಯವಿದೆಯೇ? ಇದು ಈಗ ಹೊತ್ತಿಕೊಂಡಿರುವ ಬೆಂಕಿಯಲ್ಲ, ಸಾವಿರ ವರ್ಷಗಳ ಹಿಂದೆ ಆಕ್ರಮಣಕಾರರು ಇಟ್ಟಿದ್ದ ಬೆಂಕಿಯ ಕಿಡಿಯಿಂದ ವ್ಯಾಪಿಸುತ್ತಿರುವುದು. ಈಗಿನ ದಾಳಿ ಯಾವುದೇ ವ್ಯಕ್ತಿಯ ಮೇಲಲ್ಲ, ಸಮವಸ್ತ್ರ ಧರಿಸಿರುವ ಯೋಧನ ಮೇಲೆ ಮಾತ್ರವಲ್ಲ ಭಾರತದ ಮೇಲೆ ಆಗುತ್ತಿದೆ. ಇದನ್ನು ಅರ್ಥಮಾಡಿಕೊಳ್ಳದ ಹೊರತು ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ. ಹಾರುತ್ತಿರುವ ತ್ರಿವರ್ಣಧ್ವಜದ ಎದುರಲ್ಲಿ ಹೆಮ್ಮೆಯಿಂದ ತಲೆಎತ್ತಿ ನಿಂತಿರುವವರನ್ನು ಕಾಣಬೇಕು. ಆ ನಮ್ಮ ಕನಸು ಸಾಕಾರವಾಗಬೇಕು.

ಇಂತಹ ಬದಲಾವಣೆಯಾಗಬೇಕಾದರೆ ನಮ್ಮ ಮನಸ್ಥಿತಿ, ಚಿಂತನೆ, ಯೋಚನೆಗಳಲ್ಲಿ ಬದಲಾವಣೆ ಅಗತ್ಯ. ಒಮ್ಮೆ ನಮ್ಮ ಸುತ್ತಮುತ್ತಲಿರುವ ಜನರ ಕಡೆಗೆ ದೃಷ್ಟಿಹಾಯಿಸಿ ನೋಡಬೇಕು. ಅದೆಷ್ಟೊ ಕೂಲಿ ಕಾರ್ವಿುಕರು 42ರಿಂದ 47 ಡಿಗ್ರಿ ತಾಪಮಾನವನ್ನೂ ಲೆಕ್ಕಿಸದೆ ರಸ್ತೆ ಬದಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೆಷ್ಟೊ ಮನೆಗಳಲ್ಲಿ ಮಕ್ಕಳಿಗೆ ಹಾಲು ಕೊಡಿಸಲೂ ಸಾಧ್ಯವಾಗದ, ಉತ್ತಮ ವಿದ್ಯಾಸಂಸ್ಥೆಗೆ ಸೇರಿಸಲಾಗದ ಪರಿಸ್ಥಿತಿ. ಸಾಲತೀರಿಸಲು ಸಾಧ್ಯವಾಗದಿರುವ ನಿರಾಸೆ, ಮಳೆ ಕೊರತೆ, ಬೆಳೆನಷ್ಟ ಮುಂತಾದವುಗಳಿಂದ ಹತಾಶನಾಗಿರುವ ರೈತ ಪತ್ನಿ, ಮಕ್ಕಳು, ತಂದೆತಾಯಿಗೆ ವಿಷವುಣಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಇದೆ. ಇವೆಲ್ಲವೂ ಬದಲಾಗಬೇಕು. ಇವುಗಳ ಬದಲಾಗಿ ನಮ್ಮ ದೇಶದಲ್ಲಿ ಶಾಂತಿ, ಸಮೃದ್ಧಿ, ಖುಷಿ ನೆಲೆಸುವಂತಾಗಬೇಕು.

ನಿವೃತ್ತ ಯೋಧ ಕುಲದೀಪ್ ಜಾಧವ್ ಮಾಡದಿರುವ ತಪ್ಪಿಗೆ ಇಲ್ಲದ ಆರೋಪಗಳನ್ನು ತನ್ನ ತಲೆಯಮೇಲೆ ಹೊತ್ತುಕೊಂಡು ಮರಣದಂಡನೆ ಶಿಕ್ಷೆಗೆ ಗುರಿಯಾಗುವ ಪರಿಸ್ಥಿತಿ ಇದೆ. ಅಂತಾರಾಷ್ಟ್ರೀಯ ನ್ಯಾಯಾಲಯದ ಮೊರೆಹೋದರೂ ಇದಕ್ಕೆ ಪಾಕಿಸ್ತಾನ ಹೆಚ್ಚಿನ ಮಹತ್ವ ನೀಡುತ್ತಿಲ್ಲ. ಇದಕ್ಕೆ ಕಾರಣವೇನು? ಭಾರತ ಏನು ಮಾಡಿದರೂ ಸಹಿಸಿಕೊಂಡಿರುತ್ತದೆ ಎಂಬ ಕಲ್ಪನೆ. ಇಂತಹ ಮನಸ್ಥಿತಿಯನ್ನು ಬದಲಾಯಿಸಬೇಕು. ವಿಶ್ವದ ಯಾವ ದೇಶವಾದರೂ ಭಾರತಕ್ಕೆ ಅನ್ಯಾಯ ಮಾಡುವ ಮೊದಲು ನೂರು ಬಾರಿ ಯೋಚಿಸುವಂತಾಗಬೇಕು. ಅಭಿಮಾನದ ಸಶಕ್ತ ಭಾರತವನ್ನು ರೂಪಿಸಬೇಕು.

ಇದಕ್ಕೆ ಪ್ರಮುಖವಾಗಿ ಹಿಂದು ಎಂಬ ಪದದ ಬಗೆಗಿನ ಕ್ರೋಧ ಪ್ರೀತಿಯಾಗಿ ಬದಲಾಗಬೇಕು. ನಿಜವಾಗಿಯೂ ಹಿಂದು ಪದದ ಅರ್ಥವೇನು? ಹಿಂದು ಎಂದರೆ ಸಮಾನ ನ್ಯಾಯ ಕಾಪಾಡುವವನು, ಎಲ್ಲರ ಅಭಿವೃದ್ಧಿ ಮತ್ತು ಆರೋಗ್ಯವನ್ನು ಬಯಸುವಾತ. ಆದರೆ, ಇಂದು ಪರಿಸ್ಥಿತಿ ಹೇಗಿದೆಯೆಂದರೆ ಹಿಂದು ಸಂವೇದನಾಶೀಲ ವಿಚಾರದ ಬಗ್ಗೆ ಮಾತಾನಾಡುವಾಗ ಪ್ರತಿಯೊಂದು ಶಬ್ದಕ್ಕೂ ಸ್ಪಷ್ಟೀಕರಣ ನೀಡಬೇಕಾಗಿದೆ. ಇದಕ್ಕಿಂತ ದೊಡ್ಡ ವಿಡಂಬನೆ ಏನಿರಲು ಸಾಧ್ಯ? ಇಂತಹ ಮಾನಸಿಕತೆ ಬದಲಾಗಬೇಕು, ಭಾರತೀಯತೆಯ ಉದಯವಾಗಬೇಕು.

ನಾವು ಇಂದಿಗೂ ಈ ಭೂಮಿಯಲ್ಲಿ ಜೀವಿಸುತ್ತಿದ್ದೇವೆ, ನೆಮ್ಮದಿಯಾಗಿದ್ದೇವೆ ಎಂದರೆ ಅದಕ್ಕೆ ನಮ್ಮ ಪೂರ್ವಜರ ಪರಾಕ್ರಮ ಮಾತ್ರ ಕಾರಣವಲ್ಲ. ವಿದ್ವಾಂಸರು, ಅವರು ಹುಟ್ಟುಹಾಕಿದ ಸಂಸ್ಥೆಗಳು ಮುಂತಾದವುಗಳೂ ಕಾರಣವೇ. ಹೀಗಾಗಿಯೆ ನಾವು ಅದೆಷ್ಟೊ ವರ್ಷಗಳ ಕಾಲ ಬ್ರಿಟಿಷರ ಅಧೀನದಲ್ಲಿದ್ದರೂ, ಮೊಘಲ್ ದೊರೆಗಳ ಆಡಳಿತದಲ್ಲಿದ್ದರೂ ಇಂದಿಗೂ ಆಲೋಚನೆಗಳಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ವಿದೇಶಿ ದಾಳಿಕೋರರಿಂದ ನಿಜವಾದ ರೀತಿಯಲ್ಲಿ ರಕ್ಷಣೆ ಎಂದರೆ ಇದು ಕೂಡಾ. ವಿದೇಶಿ ದಾಳಿಕೋರರಿಂದ ದೇಶ ಮತ್ತು ಜನರನ್ನು ರಕ್ಷಿಸಲು ಸೇನೆ ಮತ್ತು ಶೌರ್ಯವಿದ್ದರೆ ಸಾಲದು. ನಮ್ಮ ಮನಸ್ಥಿತಿಯೂ ಬದಲಾಗದಂತೆ ಕಾಯುವುದು ಅಗತ್ಯ. ದೇಹ ಉಳಿದುಕೊಂಡು ಮನಸ್ಸು ಬದಲಾಗಿಬಿಟ್ಟರೆ ಏನು ಮಾಡುವುದು? ಉದಾಹರಣೆಗೆ ಕಾಶ್ಮೀರವನ್ನು ಶತ್ರುಗಳ ದಾಳಿಯಿಂದ ಉಳಿಸಿಕೊಂಡು ಅಲ್ಲಿನ ಜನರೇ ಬದಲಾಗಿಬಿಟ್ಟರೆ ಏನು ಪ್ರಯೋಜನ? ಭೂಮಿ ನಮ್ಮದಾದರೂ ಜನ ನಮ್ಮವರಾಗಿರುವುದಿಲ್ಲ. ನಮ್ಮ ರಕ್ತ ನಮ್ಮ ವಿರುದ್ಧವೆ ಹೋರಾಟ ನಡೆಸುತ್ತಿರುವುದನ್ನು ನಾವು ನೋಡುತ್ತಿಲ್ಲವೇ?

ಕೇವಲ ಸರ್ಕಾರ, ಸಚಿವಾಲಯಗಳಿಂದ ಮಾತ್ರ ಇದಕ್ಕೆ ಪರಿಹಾರ ಸಾಧ್ಯವಿಲ್ಲ. ನಮ್ಮಲ್ಲಿ ಬದಲಾವಣೆ ಅಗತ್ಯ. ಮಕ್ಕಳಲ್ಲಿ ಹುಟ್ಟಿನಿಂದಲೆ ಬಿತ್ತಲಾಗುತ್ತಿರುವ ದ್ವೇಷದ ಬೀಜ, ಬೌದ್ಧಿಕ ಸಂಸ್ಥೆಗಳು, ಶಿಕ್ಷಣ, ಪಠ್ಯಪುಸ್ತಕಗಳ ಅಧ್ಯಾಯಗಳು, ವ್ಯವಹಾರ ಪದ್ಧತಿ ಮುಂತಾದವುಗಳಲ್ಲಿ ನೆಲೆಸಿರುವ ಭಾರತ-ವಿರೋಧಿ ಪ್ರಜ್ಞೆಯನ್ನು ನಿಮೂಲನೆ ಮಾಡದ ಹೊರತು ಭಾರತದ ಬಗ್ಗೆ ಅಭಿಮಾನ, ಪ್ರೀತಿ ಮೂಡಿಸಲು ಸಾಧ್ಯವಿಲ್ಲ. ಬಂಕಿಮರು ಆನಂದಮಠವನ್ನು ಸ್ಥಾಪಿಸಿದರು. ಆದರೆ, ಸಂನ್ಯಾಸಿಗಳ ಪರಂಪರೆ ಹುಟ್ಟಿಕೊಂಡಿದ್ದು ಹೇಗೆ? ಸಂನ್ಯಾಸಿಗಳಿಗೆ ಶಾಸ್ತ್ರಗಳನ್ನು ಓದುವಂತಹ ಸಾಹಸ ಮಾಡಲು ಧೈರ್ಯ ತುಂಬಿದವರಾರು? ವೇದ, ಶಾಸ್ತ್ರ, ಉಪನಿಷತ್ತಿನ ಪಾಠದ ಜತೆಗೆ ಸಮಾಜ, ಧರ್ಮದ ರಕ್ಷಣೆಯ ಶಕ್ತಿಯನ್ನು ನೀಡಿದವರು ಯಾರು? ಇದರ ಮೂಲವೇನು? ಇವುಗಳೆಲ್ಲವನ್ನೂ ತಿಳಿದುಕೊಳ್ಳುವ ಅಗತ್ಯವಿದೆ. ಇದರ ಮೂಲವೇನು ಎಂದು ತಿಳಿದು ಅದನ್ನು ಇಂದಿನ ಸಾಫ್ಟ್​ವೇರ್ ಇಂಜಿನಿಯರ್​ಗಳು, ಅಧ್ಯಾಪಕರು, ರೈತನ ಮಕ್ಕಳು ಸೇರಿ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೆ ಉಳಿಯುವಂತೆ ಮಾಡಬೇಕು. ಅದರ ಹೊರತು ಭಾರತದ ಭವಿಷ್ಯ ರೂಪಿಸುವುದು ಅಸಾಧ್ಯ.

ದೇಶದ ಅಭಿವೃದ್ಧಿಯೆಂದರೆ ರಸ್ತೆ, ನೀರು ಸರಬರಾಜು, ವಿದ್ಯುತ್ ಪೂರೈಕೆ, ಬಡತನ ಮುಂತಾದ ಸಮಸ್ಯೆಗಳನ್ನು ನೀಗಿಸಿದರೆ ಸಾಲುವುದಿಲ್ಲ. ಹಿಂದು ವಿಚಾರಧಾರೆಗಳ ಬಗ್ಗೆ ಸುದೀರ್ಘಕಾಲದಿಂದ ವಿರೋಧಿಸುತ್ತಿರುವ ಸಂಸ್ಥೆಗಳ ಜತೆಗೆ ಉತ್ತಮ ಬಾಂಧವ್ಯ ಒಡಮೂಡಬೇಕು. ಹಾಗಾದಾಗ ಮಾತ್ರ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ. ನಿನ್ನೆಯವರೆಗೂ ಅಸಂಭವ ಎನಿಸುತ್ತಿದ್ದ ಹಲವು ವಿಚಾರಗಳು ಈಗ ಕೈಗೂಡಬಹುದೇನೊ ಎನ್ನುವ ಭರವಸೆ ಮೂಡುತ್ತಿದೆ. ಬದಲಾಗುತ್ತಿರುವ ಸಮಯಕ್ಕೆ ನಾವು ತಯಾರಾಗೋಣ.

Leave a Reply

Your email address will not be published. Required fields are marked *

Back To Top