Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ನಿಮ್​ ದಮ್ಮಯ್ಯ ಅಂತೀನಿ, ನೀರ್​ ಕೊಟ್ಟು ಪ್ರಾಣ ಉಳ್ಸಣ್ಣ: ವಿಡಿಯೋದಲ್ಲಿ ಸಿಎಂಗೆ ರೈತನ ಮನವಿ​

Monday, 06.08.2018, 9:29 AM       No Comments

ಹಾಸನ: ಸಾಲಮನ್ನ ಬೇಡ ಕಣಣ್ಣ… ನಿಮ್​ ದಮ್ಮಯ್ಯ ಅಂತೀನಿ ನೀರ್​ ಕೊಟ್ಟು ಪ್ರಾಣ ಉಳ್ಸಣ್ಣ ಎಂದು ರೈತರೊಬ್ಬರು ವಿಡಿಯೋ ಮೂಲಕ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಲ್ ಗ್ರಾಮದ ಚಿಕ್ಕರಸಿನ ಹಳ್ಳಿಯ ನಂಜೇಶ್ ಎಂಬ ರೈತ ವಿಡಿಯೋವೊಂದರಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದ್ದು, ಬಾಗೂರು ಸುರಂಗದಿಂದ ನಮ್ಮ ರೈತರಿಗೆ ತೊಂದರೆಯಾಗುತ್ತಿದೆ. ಇದರಿಂದ ಅಂತರ್ಜಲ ಕುಸಿದು ಹೋಗಿದೆ. ಸಾವಿರ ಅಡಿ ಬೋರ್​ವೆಲ್​ ಕೊರೆಸಿದರೂ ನೀರು ಸಿಗುತ್ತಿಲ್ಲ. ಕುಡಿಯಲೂ ನೀರು ಸಿಗದೆ ಮರಗಳು ಒಣಗಿ ಹೋಗಿವೆ. ಜಾನುವಾರುಗಳು ಪರದಾಡುತ್ತಿವೆ ಎಂದು ಅಳುತ್ತಾ ತಮ್ಮ ತೊಂದರೆಯನ್ನು ವಿವರಿಸಿದ್ದಾರೆ.

ನಮಗೆ ಸಾಲಮನ್ನಾ ಬೇಡ. ನೀರು ಕೊಟ್ಟರೆ ಸಾಕು. ನಾವೇ ಸಾಲ ತೀರಿಸುತ್ತೇವೆ. ನಾನು ನಿಮ್ಮ ಊರಿನವನೆ. ನಮಗೆ ವನವಾಸ ಯಾರಿಗೂ ಬೇಡ. ಯಾರನ್ನಾದರೂ ಕಳಿಸಿ ನಮ್ಮ ಪರಿಸ್ಥಿತಿ ಬಗ್ಗೆ ತಿಳಿದುಕೊಳ್ಳಿ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)

Farmer requesting CM H D Kumaraswamy to solve the problem

ನಿಮ್​ ದಮ್ಮಯ್ಯ ಅಂತೀನಿ, ನೀರ್​ ಕೊಟ್ಟು ಪ್ರಾಣ ಉಳ್ಸಣ್ಣ: ಎಚ್​ಡಿಕೆಗೆ ರೈತನ ಮನವಿ​ #VideoViral #Farmer #Request #CMHDK #HDKumaraswamy #WaterProblem #DebtRelief https://goo.gl/FNTZFe

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಅಗಸ್ಟ್ 5, 2018

Leave a Reply

Your email address will not be published. Required fields are marked *

Back To Top