Monday, 19th March 2018  

Vijayavani

ಸಿಎಂ ಧರ್ಮ, ಸಂಸ್ಕೃತಿಗೆ ಧಕ್ಕೆ ತಂದಿದ್ದಾರೆ- ಅವರ ಸರ್ಕಾರಕ್ಕೆ ಜನರೇ ತಕ್ಕ ಪಾಠ ಕಲಿಸ್ತಾರೆ- ಸಿದ್ದರಾಮಯ್ಯ ವಿರುದ್ಧ ರಂಭಾಪುರ ಶ್ರೀ ಗರಂ        ಪ್ರತ್ಯೇಕ ಧರ್ಮದ ಬಗ್ಗೆ ಸಿಎಂ ಜಾಣ ಮೌನ- ಸಭೆ ಬಳಿಕ ಪ್ರತಿಕ್ರಿಯೆ ನೀಡಲು ನಕಾರ- ಮಾಧ್ಯಮ ಕಂಡು ಮುಖ್ಯಮಂತ್ರಿಗಳು ದೌಡು        ರಾಜ್ಯದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್ ವಿಚಾರ- 4 ವರ್ಷ ಮಾಡಿಲ್ಲ, ಈಗಲೂ ಮಾಡೋದಿಲ್ಲ- ಜವಡೇಕರ್​ ಹೇಳಿಕೆಗೆ ಡಿಕೆಶಿ ಟಾಂಗ್​​​        ಬಹುಕೋಟಿ ಮೇವು ಹಗರಣ- ನಾಲ್ಕನೇ ಕೇಸ್‌ನಲ್ಲಿ ಲಾಲೂ ಅಪರಾಧಿ- ಬಿಹಾರ ಮಾಜಿ ಸಿಎಂ ಜಗನ್ನಾಥ್‌ ಮಿಶ್ರಾ ಖುಲಾಸೆ        ಪ್ರಿಯಾ ವಾರಿಯರ್ ರೀತಿ ಕಣ್ಣೊಡೆದ್ರೆ ಹುಷಾರ್- ಒಂದು ವರ್ಷ ಕಾಲೇಜಿನಿಂದ ಡಿಬಾರ್- ತಮಿಳುನಾಡಿನ ಕಾಲೇಜೊಂದರಲ್ಲಿ ಆರ್ಡರ್       
Breaking News

ವೆಂಕಯ್ಯ ನಾಯ್ಡು ಮುಂದಿನ ಉಪ ರಾಷ್ಟ್ರಪತಿ

Monday, 17.07.2017, 6:30 PM       No Comments

ನವದೆಹಲಿ: ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರವು ರಾಮನಾಥ್ ಕೋವಿಂದ್ ಅವರನ್ನು ಅಚಾನಕ್ಕಾಗಿ ದೇಶದ 14 ನೇ ರಾಷ್ಟ್ರಪತಿ ಸ್ಥಾನದಲ್ಲಿ ಕೂರಿಸುವ ಪ್ರಯತ್ನದ ಬೆನ್ನಲ್ಲೆ ಇದೀಗ ಉಪರಾಷ್ಟ್ರಪತಿ ಸ್ಥಾನಕ್ಕೂ ಆಶ್ಚರ್ಯಕರ ರೀತಿಯಲ್ಲಿ ಪಕ್ಷದ ಹಿರಿಯ ನಾಯಕನಿಗೆ ಮಣೆ ಹಾಕಲು ನಿರ್ಧರಿಸಿದೆ.

ರಾಷ್ಟ್ರಪತಿ ಸ್ಥಾನಕ್ಕೆ ಇಂದು ಸಂಜೆ ಮತದಾನ ಮುಗಿಯುತ್ತಿದ್ದಂತೆ ಬಿಜೆಪಿ ಸಂಸದೀಯ ಮಂಡಳಿ ನವದೆಹಲಿಯಲ್ಲಿ ಸಭೆ ಸೇರಿದೆ.

ಬಿಜೆಪಿಯ ಮೂಲಗಳ ಪ್ರಕಾರ ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವರೂ ಆದ ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಿದೆ ಎನ್ನಲಾಗಿದೆ.

ಉಪ ರಾಷ್ಟ್ರಪತಿಯನ್ನಾಗಿ ದಕ್ಷಿಣ ಭಾರತದ ನೇತಾರರೊಬ್ಬರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ ಎಂಬ ಮಾತುಗಳು ಇತ್ತೀಚೆಗೆ ಕೇಳಿ ಬಂದಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಇದೀಗ ಬಿಜೆಪಿ ಆಂಧ್ರದ ವೆಂಕಯ್ಯ ನಾಯ್ಡು ಅವರನ್ನು ನಿಯುಕ್ತಿಗೊಳಿಸಿದೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top