Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಸ್ವತಂತ್ರ ಲಿಂಗಾಯತ ಧರ್ಮದ ಅಗತ್ಯ: ಪಾಟೀಲ್​ ಪ್ರಕರಣಕ್ಕೆ ತಿರುವು

Thursday, 14.09.2017, 12:33 PM       No Comments

ಬೆಂಗಳೂರು: ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಸಿದ್ದಗಂಗಾ ಶ್ರೀಗಳ ಬೆಂಬಲವಿದೆ ಎಂದು ಹೇಳಿಕೆ ನೀಡಿದ ಎಂ.ಬಿ ಪಾಟೀಲರ ಪ್ರಕರಣ ಹೊಸದೊಂದು ತಿರುವು ಪಡೆದುಕೊಂಡಿದೆ.

ಈ ವಿಚಾರದ ಬಗ್ಗೆ ಶಾಸಕ ಬಸವರಾಜ ಹೊರಟ್ಟಿ ಮತ್ತು ಸಚಿವ ವಿನಯ್ ಕುಲಕರ್ಣಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಚಿವ ಎಂ.ಬಿ.ಪಾಟೀಲ್​ ಪರ ಸ್ಪಷ್ಟನೆ ಕೊಡಲು ಹೊರಟ್ಟಿ, ಕುಲಕರ್ಣಿ ಸುದ್ದಿಗೋಷ್ಠಿ ನಡೆಸಿದ್ದು, ಸಿದ್ದಗಂಗಾ ಶ್ರೀಗಳು ಲಿಂಗಾಯತ ಪ್ರತ್ಯೇಕ ಧರ್ಮ ಅಗತ್ಯವಿದೆ ಎಂದಿದ್ದರು ಎನ್ನುವ ಮೂಲಕ ಶ್ರೀಗಳ ಮೇಲೆ ಆರೋಪ ಮಾಡಿದ್ದಾರೆ.

ಶ್ರೀಗಳು ಸಚಿವ ಎಂ.ಬಿ.ಪಾಟೀಲ್​ ಜತೆ ಈ ಕುರಿತು ಚರ್ಚಿಸಿದ್ದರು. ಶ್ರೀಗಳ ಹೇಳಿಕೆಯನ್ನು ಮಠದ ಆಡಳಿತಾಧಿಕಾರಿ ಶಿವಕುಮಾರ್​ ಖಚಿತ ಪಡಿಸಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಹೊರಟ್ಟಿ, ವಿನಯಕ್ ಕುಲಕರ್ಣಿ ಜಂಟಿ ಹೇಳಿಕೆ ನೀಡಿದ್ದಾರೆ.

ಮಠಗಳನ್ನ ಯಾರೂ ದುರ್ಬಳಕೆ ಮಾಡಿಕೊಳ್ಳಬಾರದು. ನಮಗೆ ಶ್ರೀಗಳ ಬಗ್ಗೆ ಅಪಾರ ಗೌರವ ಇದೆ. ಶ್ರೀ ಮಠದ ಆಸ್ಪತ್ರೆ ಉದ್ಘಾಟನೆಗೆ ಎಂ.ಬಿ ಪಾಟೀಲ್ ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸಾಗುವಾಗ ಮಠದ ಆಡಳಿತಾಧಿಕಾರಿ ಸ್ವಾಮೀಜಿಗಳನ್ನ ಭೇಟಿ ಮಾಡಲು ಸಚಿವರಿಗೆ ಕರೆ ಮಾಡಿದ್ದರು.

ಸಚಿವರು ಅಲ್ಲಿಗೆ ಹೋಗುವಷ್ಟೊತ್ತಿಗೆ ಸ್ವಾಮೀಜಿ ಅವರು ಪೂಜೆಗೆ ಹೋಗಿದ್ದರು. ಅಲ್ಲಿ ನಡೆದ ವಿಚಾರಗಳ ಬಗ್ಗೆ ನಾನು ಹೇಳಲ್ಲ. ಆಡಳಿತ ಅಧಿಕಾರಿಯನ್ನ ಒಂದು ಚಾನೆಲ್ ಸಂಪರ್ಕಿಸಿದೆ. ಆತ ಸ್ಪಷ್ಟವಾಗಿ ಹೇಳಿರುವ ವಿಚಾರ ಪ್ರಸಾರ ಆಗಿದೆ. ಪಾಟೀಲ್​ರು ಸುದ್ದಿಗೋಷ್ಠಿ ಮಾಡಿದ ದಿನ ಯಾರೂ ಪ್ರಶ್ನಿಸಲಿಲ್ಲ. ಆದರೆ, 13 ನೇ ತಾರೀಖು ಇದೆಲ್ಲಾ ಬೇರೆ ತಿರುವು ಪಡೆದು ಕೊಂಡಿತು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಒಬ್ಬ ಹಿರಿಯ ರಾಜಕಾರಣಿ ಮತ್ತು ಶ್ಯಾಮನೂರು ಶಿವಶಂಕರಪ್ಪ ಈ ಪ್ರಕರಣಕ್ಕೆ ಬೇರೆ ತಿರುವು ಕೊಟ್ಟಿದ್ದಾರೆ. ಆಡಳಿತ ಅಧಿಕಾರಿ ಸ್ಪಷ್ಟವಾಗಿ ದೃಶ್ಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಎಂ.ಬಿ ಪಾಟೀಲ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಅಂತ ಹೇಳಿದ್ದಾರೆ. ಸಣ್ಣ ಸ್ವಾಮೀಜಿಗಳು ಸಹ ಹೊಸ ಧರ್ಮ ಮಾಡುವುದು ತಪ್ಪಲ್ಲ ಅಂತ ಶ್ರೀಗಳು ಹೇಳಿದ್ದರು ಎಂದು ಶ್ರೀಗಳ ಕಡೆ ಬೊಟ್ಟು ಮಾಡಿದ್ದಾರೆ.

ಕೆಲ ರಾಜಕಾರಣಿಗಳು ಎಂ.ಬಿ ಪಾಟೀಲ್ ವಿರುದ್ಧ ಷಡ್ಯಂತರ ನಡೆಸುತ್ತಿದ್ದಾರೆ. ಈ ಪ್ರಕರಣದಿಂದ ಎಂ.ಬಿ ಪಾಟೀಲ್ ಮತ್ತು ಕುಟುಂಬ ಮೊನ್ನೆಯಿಂದ ಬಾರಿ ದುಃಖದಲ್ಲಿದೆ. ಸಿಡಿ ಆಡಿಯೋ ಕ್ಲಿಪ್ ಅನ್ನು ಸರಿಯಾಗಿ ಕೇಳಿಸಿಕೊಳ್ಳುವಂತೆ ಮಾಧ್ಯಮ ಪ್ರತಿನಿಧಿಗಳಿಗೆ ಮನವಿ ಮಾಡಿದ್ದು, ಮಠದ ಆಡಳಿತ ಅಧಿಕಾರಿ ಶಿವಕುಮಾರ್ ಧ್ವನಿ ಕೇಳಿಸಿಕೊಳ್ಳುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.

ನಾನು ಅಲ್ಲಿಯೇ ಇದ್ದೆ ಎಂ.ಬಿ ಪಾಟೀಲ್ ಹೇಳುತ್ತಿರುವುದು ಸತ್ಯ ಎಂದು ಆಡಳಿತಾಧಿಕಾರಿ ಖಾಸಗಿ ಟಿವಿಗೆ ನೀಡಿದ ಫೋನೋದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇತ್ತ ಮಠದ ಆಡಳಿತಾಧಿಕಾರಿ ಶಿವಕುಮಾರ್ ಅಲ್ಲ ಹೇಳಲಾಗುತ್ತಿದೆ. ಸಿದ್ದಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಎನ್ನಲಾಗುತ್ತಿದ್ದು, ಶಿವಕುಮಾರ್​ ಅನ್ನೋರಿಗೂ ಮಠದ ಆಡಳಿತಕ್ಕೂ ಸಂಬಂಧವಿಲ್ಲ. ಅಸಲಿಗೆ ಶಿವಕುಮಾರ ಮಠದಲ್ಲಿ ಗುಮಾಸ್ತ ಅಷ್ಟೇ ಎಂದು ದಿಗ್ವಿಜಯ ನ್ಯೂಸ್​ಗೆ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top