Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

15ರಂದು ವೀರಶೈವ-ಲಿಂಗಾಯತರ ಸಭೆ

Tuesday, 12.06.2018, 3:03 AM       No Comments

ಬೆಂಗಳೂರು: ವೀರಶೈವ ಹಾಗೂ ಲಿಂಗಾಯತ ಸಮುದಾಯಗಳು ಒಗ್ಗೂಡಿ ಸೌಲಭ್ಯಗಳಿಗಾಗಿ ಹೋರಾಟ ನಡೆಸುವ ಕುರಿತ ಸಭೆಯನ್ನು ಒಂದು ದಿನ ಮುಂದೂಡಲಾಗಿದ್ದು, ಜೂ.15ರಂದು ನಿಗದಿಯಾಗಿದೆ.

ಕೆಲ ಮಠಾಧೀಶರು ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಪದಾಧಿಕಾರಿಗಳನ್ನು ಸಭೆಗೆ ಕರೆಯಲು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ಧರಿಸಿದೆ. ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರೇ ಎಲ್ಲರೊಂದಿಗೆ ದೂರವಾಣಿಯಲ್ಲಿ ಚರ್ಚೆ ನಡೆಸುತ್ತಿದ್ದಾರೆಂದು ಮಹಾಸಭಾದ ಮೂಲಗಳು ತಿಳಿಸಿವೆ. ಜೂ.13 ಅಥವಾ 14ರಂದು ಸಭೆ ನಡೆಸಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ಕಾರಣಾಂತರದಿಂದ ಒಂದು ದಿನ ಮುಂದೂಡಲಾಗಿದೆ.

ಲಿಂಗಾಯತ ಹಾಗೂ ಬಸವ ತತ್ವ ಅನುಸರಿಸುವ ವೀರಶೈವ ಸಮುದಾಯಕ್ಕೆ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವ ಸರ್ಕಾರದ ಶಿಫಾರಸು ಕೇಂದ್ರದಿಂದ ವಾಪಸ್ ಬಂದಿರುವ ಹಿನ್ನೆಲೆಯಲ್ಲಿ ಎರಡು ಸಂಘಟನೆಗಳು ಒಗ್ಗೂಡಿಯೇ ಹೋರಾಟ ಮಾಡಬೇಕೆಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಈ ಸಭೆ ಮಹತ್ವ ಪಡೆದಿದೆ. ಪಂಚಪೀಠ ಹಾಗೂ ವಿರಕ್ತ ಪರಂಪರೆಯ ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು ಹಾಗೂ ಮಾರ್ಗದರ್ಶನ ಪಡೆಯುವುದು ಸಭೆಯ ಉದ್ದೇಶವಾಗಿದೆ. ಸಮುದಾಯಕ್ಕೆ ಅಗತ್ಯವಾದ ಸೌಲಭ್ಯ ಪಡೆಯಬೇಕಾದರೆ ಒಗ್ಗೂಡಿ ಹೋರಾಟ ನಡೆಸುವ ಅಗತ್ಯವಿದೆ ಎಂಬುದನ್ನು ಎರಡೂ ಬಣಗಳು ಅರಿತುಕೊಂಡಿವೆ. ಆದ್ದರಿಂದಲೇ ಈ ಸಭೆ ನಡೆಸಲಾಗುತ್ತದೆ ಎಂದು ಮೂಲಗಳು ಹೇಳುತ್ತವೆ.

ಸಭೆಗೆ ಸುತ್ತೂರು ಶ್ರೀಗಳು, ಸಿದ್ಧಗಂಗಾ ಶ್ರೀಗಳು, ಸಿರಿಗೆರೆ ಶ್ರೀಗಳು, ಶ್ರೀ ಸಂಗನಬಸವ ಸ್ವಾಮೀಜಿ, ಶ್ರೀ ದಿಂಗಾಲೇಶ್ವರ ಸ್ವಾಮೀಜಿ, ಶ್ರೀಶೈಲ ಜಗದ್ಗುರುಗಳು, ಶ್ರೀ ಕಾಶಿ ಜಗದ್ಗುರುಗಳು, ಶ್ರೀ ರಂಭಾಪುರಿ ಜಗದ್ಗುರುಗಳು, ಶ್ರೀ ಉಜ್ಜಯಿನಿ ಜಗದ್ಗುರುಗಳು, ಎಂ.ಬಿ. ಪಾಟೀಲ್, ಬಸವರಾಜ ಹೊರಟ್ಟಿ, ವಿನಯ ಕುಲಕರ್ಣಿ, ಶರಣಪ್ರಕಾಶ ಪಾಟೀಲ್ ಹಾಗೂ ಇತರರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ಇವರೆಲ್ಲರ ಜತೆ ಶಾಮನೂರು ಶಿವಶಂಕರಪ್ಪ ಖುದ್ದು ಸಂರ್ಪಸಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿಯೇ ನಡೆಯಲಿದೆ. ಸಮಯ ಇನ್ನೂ ನಿಗದಿಯಾಗಿಲ್ಲ.

ಹಿಂದು ಸಮಾಜ ಒಡೆದೆ, ಲಿಂಗಾಯತ ಸಮುದಾಯ ಒಡೆದೆ ಎಂದು ನನ್ನ ಮೇಲೆ ಸಾಕಷ್ಟು ಆರೋಪ ಮಾಡಿದರು. ನಾವು ಸಮಾಜವನ್ನು ಒಗ್ಗೂಡಿಸುವ, ಜೋಡಿಸುವ ಕೆಲಸ ಮಾಡುತ್ತೇವೆ ವಿನಃ ಒಡೆಯುವ ಕೆಲಸ ಮಾಡಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ಶಿಫಾರಸನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕಳಿಸಿರುವ ವಿಚಾರ ನನಗೆ ಗೊತ್ತಿಲ್ಲ. ಹಿಂದೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದು, ಸಿದ್ದರಾಮಯ್ಯ ಅಲ್ಲ. ಅಂದಿನ ಸರ್ಕಾರದ ತೀರ್ವನವಾಗಿತ್ತು. ಈಗ ಹೊಸ ಸರ್ಕಾರ ಇದೆ. ಕೇಂದ್ರ ವಾಪಸ್ ಕಳಿಸಿರುವ ವಿಚಾರ ಸರ್ಕಾರಕ್ಕೆ ಬಿಟ್ಟಿದ್ದು.

| ಸಿದ್ದರಾಮಯ್ಯ ಮಾಜಿ ಸಿಎಂ

Leave a Reply

Your email address will not be published. Required fields are marked *

Back To Top