Wednesday, 15th August 2018  

Vijayavani

ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ: ಕೆಆರ್‌ಎಸ್‌ಗೆ ಭಾರಿ ಒಳಹರಿವು, ಡ್ಯಾಂನಿಂದ 1.50 ಲಕ್ಷ ಕ್ಯೂಸೆಕ್‌ ನೀರು ಹೊರಕ್ಕೆ        ಹಾಸನದಲ್ಲಿ ಮಳೆ ಅಬ್ಬರ: ಶಿರಾಡಿಘಾಟ್‌ನಲ್ಲಿ ಅನಿಲ ಟ್ಯಾಂಕ್‌ ಪಲ್ಟಿ, ಸೋಮವಾರ ಪೇಟೆ ಹೆದ್ದಾರಿ ಬಿರುಕು        ಉಕ್ಕಿಹರಿಯುತ್ತಿದೆ ತುಂಗಭದ್ರ: ದಾವಣಗೆರೆ ಜಿಲ್ಲೆಯಲ್ಲಿ ಬೆಳೆ ನಾಶ, ಕಂಪ್ಲಿ ಸೇತುವೆ ನೀರಲ್ಲಿ ಮುಳುಗಡೆ        ಕೆಂಪು ಕೋಟೆ ಮೇಲೆ ಮೋದಿ ಧ್ವಜರೋಹಣ: ಸರ್ಕಾರದ ಸಾಧನೆಗಳ ಬಣ್ಣನೆ, ಆಯುಷ್ಮಾನ್‌ ಭಾರತ ಘೋಷಣೆ       
Breaking News

ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕಿದೆ

Sunday, 29.07.2018, 10:22 PM       No Comments

ಬ್ಯಾಡಗಿ: ಸಮುದಾಯಗಳ ಸಂಘಟನೆಗಳು ಅನ್ಯಕೋಮುಗಳಿಗೆ ಧಕ್ಕೆ ತಾರದೆ, ಸಮಾಜದ ಜಾಗೃತಿ ಹಾಗೂ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದು ಶಾಸಕ ವಿರೂಪಾಕ್ಪಪ್ಪ ಬಳ್ಳಾರಿ ಹೇಳಿದರು.

ಪಟ್ಟಣದ ಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ ಭಾನುವಾರ ಜರುಗಿದ ವೀರಶೈವ ಲಿಂಗಾಯತ ನೌಕರರ ಸಮಾವೇಶ ಉದ್ಘಾಟಿಸಿ ಭಾನುವಾರ ಮಾತನಾಡಿದರು.

ವೀರಶೈವ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ಸಂಸ್ಥೆಗಳನ್ನು ತೆರೆದು ಸರ್ವ ಸಮಾಜಗಳಿಗೆ ಸೇವೆ ಒದಗಿಸುತ್ತಿವೆ. ಕೆಎಲ್​ಇ, ಸಿದ್ದಗಂಗಾಮಠ, ನೂರಾರು ಮಠಾಧೀಶರು ಹಾಗೂ ಮುಖಂಡರು ಶಿಕ್ಷಣ, ಅನ್ನ, ಜ್ಞಾನ ಪ್ರಸಾರಕ್ಕೆ ಆದ್ಯತೆ ನೀಡಿದ್ದಾರೆ. ಎಲ್ಲ ಸಮಾಜಗಳು ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವ ಮೂಲಕ ಭಾರತೀಯತೆ ಮೈಗೂಡಿಸಿಕೊಂಡು, ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಸಂಘ, ಸಂಸ್ಥೆಗಳು ಮಾನವೀಯ ಬದುಕು ರೂಪಿಸಿ, ಉತ್ತಮ ವಾತಾವರಣ ಕಲ್ಪಿಸಬೇಕಿದೆ ಎಂದರು.

ಮುಪ್ಪಿನಸ್ವಾಮಿ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತರು ಕಾಯಕ ತತ್ವದ ನಿಷ್ಠರು. ಆಧುನಿಕ ಜೀವನ ಶೈಲಿಯಲ್ಲಿ ಲಿಂಗಧಾರಣೆಯ ವಿಧಿವಿಧಾನಗಳನ್ನು ಮರೆತು, ಪಾಶ್ಚಿಮಾತ್ಯ ಆಚರಣೆಗಳಿಗೆ ಮೊರೆ ಹೋಗಿದ್ದಾರೆ. ಮೊದಲು ನಾವು ಧರ್ಮಪಾಲನೆಗೆ ಒತ್ತು ನೀಡಬೇಕು ಎಂದು ಹೇಳಿದರು.

ತಾಲೂಕು ವೀರಶೈವ ಲಿಂಗವಂತ ನೌಕರರ ಅಧ್ಯಕ್ಷ ಬಸವರಾಜ ಸಂಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಮಡ್ಲೂರು ಮುರಘಾಮಠದ ಮುರುಘರಾಜೇಂದ್ರ ಶ್ರೀ, ಆಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಶಿದ್ದೇಶ್ವರ ಎನ್. ಉಪವಿಭಾಗಾಧಿಕಾರಿ, ಶಿದ್ದಲಿಂಗೇಶ ಬೇವಿನಮಟ್ಟಿ, ನೌಕರರ ರಾಜ್ಯಾಧ್ಯಕ್ಷ ಬಿ. ನಿರಂಜನ, ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪುರ, ಜಿ.ಪಂ. ಸದಸ್ಯರಾದ ಸುಮಂಗಲಾ ಪಟ್ಟಣಶೆಟ್ಟಿ, ಅನುಸೂಯಾ ಕುಳೇನೂರು, ತಾ.ಪಂ. ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ, ಅಂತಾರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ವಿಜೇತ ಶಶಿಧರಸ್ವಾಮಿ ಹಿರೇಮಠ, ಎಸ್.ಎಸ್. ಅಜಗೊಂಡ್ರ, ವಿ.ವಿ. ಬಣಕಾರ, ಶಿವನಗೌಡ್ರ ಚನ್ನಗೌಡ್ರ, ಎಸ್.ಪಿ. ಮಠದ, ಬಿ. ಸುಭಾಸ, ಎನ್.ಎಂ. ಸಣ್ಣಮನಿ ಇತರಿದ್ದರು.

ಬ್ರಿಟಿಷರ ಒಡೆದಾಳುವ ನೀತಿಯಿಂದ ದೇಶ ಛಿದ್ರವಾಗಿ ನಮ್ಮ ಹಕ್ಕು ಪಡೆದುಕೊಳ್ಳಲು ಸಾಕಷ್ಟು ಶ್ರಮಿಸಬೇಕಾಯಿತು. ಧರ್ಮ ಒಡೆಯುವುದು, ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದು ಯಾರಿಗೂ ಒಳ್ಳೆಯದಲ್ಲ. ವೀರಶೈವ, ಲಿಂಗಾಯತ ಬೇರೆಬೇರೆಯಲ್ಲ, ಎರಡೂ ಒಂದೇ ಎಂಬ ಒಕ್ಕೂರಲಿನ ಕೂಗು ಬರಬೇಕಿದೆ. ನಮ್ಮಲ್ಲಿರುವ ಒಡಕಿನ ಮನೋಭಾವ ಬಿಟ್ಟು ನಾವೆಲ್ಲ ಒಂದಾಗಬೇಕು.

| ಸುರೇಶಗೌಡ್ರ ಪಾಟೀಲ ಮಾಜಿ ಶಾಸಕ

Leave a Reply

Your email address will not be published. Required fields are marked *

Back To Top