Thursday, 20th September 2018  

Vijayavani

Breaking News

ವಸುಧೈವ ಕುಟುಂಬಕಂ ಮಂತ್ರ

Saturday, 15.09.2018, 2:03 AM       No Comments

ಇಂದೋರ್: ನಮ್ಮ ಸಂಸ್ಕೃತಿಯಲ್ಲಿನ ‘ವಸುಧೈವ ಕುಟುಂಬಕಂ’ ಪರಿಕಲ್ಪನೆಯಿಂದಾಗಿ ಭಾರತ ಇತರ ದೇಶಗಳಿಗಿಂತ ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇಡೀ ಜಗತ್ತು ನಮ್ಮ ಕುಟುಂಬ ಎಂಬ ಭಾವನೆ ಭಾರತೀಯರಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶುಕ್ರವಾರ ಸೈಫೀ ಮಸೀದಿಯಲ್ಲಿನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದಾವೂದಿ ಬೊಹ್ರಾ ಸಮುದಾಯ ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಶ್ಲಾಘನೀಯ. ವಸುಧೈವ ಕುಟುಂಬಕಂ ಎಂಬ ಪರಿಕಲ್ಪನೆಗೆ ಈ ಸಮುದಾಯ ಮಾದರಿಯಾಗಿದೆ. ಈ ಸಮುದಾಯದವರು ಸದಾ ಶಾಂತಿಪ್ರಿಯರು. ಸಮುದಾಯದವರ ಕೊಡುಗೆಯಿಂದ ಗುಜರಾತ್​ನ ಅನೇಕ ಗ್ರಾಮಗಳು ಕುಡಿಯುವ ನೀರು ಪಡೆದಿವೆ. ವ್ಯಾಪಾರದಲ್ಲೂ ಇವರು ಪ್ರಾಮಾಣಿಕರು ಎಂದು ಪ್ರಧಾನಿ ಮೋದಿ ಬಣ್ಣಿಸಿದರು. ಕಾರ್ಯಕ್ರಮದಲ್ಲಿ ದಾವೂದಿ ಬೊಹ್ರಾ ಸಮುದಾಯದ ಧಾರ್ವಿುಕ ಮುಖ್ಯಸ್ಥರಾದ ಸೈಯೆದ್ನಾ ಮುಫದ್ದಲ್ ಸೈಫುದ್ದೀನ್ ಇದ್ದರು. ಇಸ್ಲಾಮ್ ವರ್ಷದ ಆರಂಭ ಅಶಾರ ಮುಬಾರಕಾ ಪ್ರಯುಕ್ತ 9 ದಿನಗಳ ಧಾರ್ವಿುಕ ಸಮ್ಮೇಳನವನ್ನು ಬೊಹ್ರಾ ಸಮುದಾಯ ಹಮ್ಮಿಕೊಂಡಿದೆ.

Leave a Reply

Your email address will not be published. Required fields are marked *

Back To Top