Wednesday, 18th July 2018  

Vijayavani

ಸಾಲದ ಸುಳಿಯಲ್ಲಿದ್ರೂ ಐ ಫೋನ್​ ಗಿಫ್ಟ್​ - ಹತ್ತಾರು ಸಮಸ್ಯೆ ಮಧ್ಯೆ ಬೇಕಿತ್ತಾ ದುಬಾರಿ ಉಡುಗೊರೆ​ - ಇಟ್ಕೊಂಡೋರಾರು..? ವಾಪಸ್ ಕೊಟ್ಟವರಾರು.?        ದೆಹಲಿಯಲ್ಲಿದ್ರೂ ರೇವಣ್ಣಗೆ ತವರಿನ ಜಪ - ಹಾಸನದ ಅಭಿವೃದ್ಧಿ ಬಗ್ಗೆ ಕೇಂದ್ರ ಸಚಿವರ ಜತೆ ಚರ್ಚೆ - ಸಿಎಂ ಎಚ್​ಡಿಕೆಯನ್ನೇ ಓವರ್​​ಟೇಕ್​ ಮಾಡಿದ PWD ಮಿನಿಸ್ಟರ್​​​        ಜಾರಕಿಹೊಳಿ ಬ್ರದರ್ಸ್​​​​ ನಡುವೆ ಸಮರ - ದೆಹಲಿಗೆ ಶಾಸಕರನ್ನ ಕರೆದೊಯ್ದ ರಮೇಶ್​​​​​​​ ಜಾರಕಿಹೊಳಿ - ಸತೀಶ್​​ಗೆ ಮಂತ್ರಿಗಿರಿ ತಪ್ಪಿಸಲು ಶಕ್ತಿ ಪ್ರದರ್ಶನ        ಇಂದಿನಿಂದ ಸಂಸತ್ ಅಧಿವೇಶನ - ಮಹಿಳಾ ಮೀಸಲಾತಿ, ತ್ರಿಪಲ್ ತಲಾಖ್​​​​​ ಮಸೂದೆ ಅಂಗೀಕಾರ ಸಾಧ್ಯತೆ - ಸಂಜೆ ರಾಜ್ಯ ಸಂಸದರ ಜತೆ ಸಿಎಂ ಮೀಟಿಂಗ್​​        ವಸತಿ ಯೋಜನೆಯ ಹಣವನ್ನೇ ನುಂಗಿದ್ರು - 140 ಅನರ್ಹರಿಂದ 8 ಕೋಟಿ ಗುಳುಂ ಸ್ವಾಹ - ಗದಗ ನಗರಸಭೆಯಲ್ಲಿ ಬಯಲಾಯ್ತು ಗೋಲ್​ಮಾಲ್​​​​        ದೀಪಾಲಂಕಾರದಿಂದ ಕಂಗೊಳಿಸಿದ ಕೆಆರ್​ಎಸ್​ - ಗಗನ ಚುಕ್ಕಿ ಜಲಪಾತ ನಯನ ಮನೋಹರ - ಡ್ರೋಣ್​​ ಕಣ್ಣಲ್ಲಿ ಸೆರೆಯಾಯ್ತು ಜಲಧಾರೆಯ ದೃಶ್ಯ ವೈಭವ       
Breaking News

ಮದರಸಾಗಳ ಮೇಲೆ ಯೋಗಿ ಸರ್ಕಾರದ ಹದ್ದಿನ ಕಣ್ಣು!

Wednesday, 30.08.2017, 4:40 PM       No Comments

ಉತ್ತರ ಪ್ರದೇಶ: ಯೋಗಿ ಆದಿತ್ಯನಾಥ ನೇತೃತ್ವದ ರಾಜ್ಯ ಸರ್ಕಾರವು ಮದರಸಾಗಳಿಗಾಗಿ ಹೊಸ ಪೊರ್ಟ್‌ಲ್‌ ಮೂಲಕ ಜಿಯೋ- ಟ್ಯಾಗಿಂಗ್‌ ವ್ಯವಸ್ಥೆಯನ್ನು ಜಾರಿಗೆ ತಂದು ಮದರಸಾಗಳ ಮೇಲೆ ಕಣ್ಣಿಡಲು ಮುಂದಾಗಿದೆ.

ನಾಳೆ ಆಗಸ್ಟ್‌ 31ಕ್ಕೆ ರಾಜ್ಯ ಸರಕಾರ ಈ ಕುರಿತು ಆದೇಶ ಹೊರಡಿಸಲಿದ್ದು, ರಾಜ್ಯದ ಎಲ್ಲ ಮದರಸಾಗಳು ಜಿಪಿಎಸ್‌ ಜಿಯೋ ಟ್ಯಾಗಿಂಗ್‌ಗೆ ಒಳಪಡಲಿದೆ. ಮದರಸಾಗಳ ಅಭಿವೃದ್ಧಿ ದೃಷ್ಟಿಯಿಂದ ಈ ನಡೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ವ್ಯವಸ್ಥೆಯಿಂದಾಗಿ ಮದರಸಾದ ಮೇಲೆ ಯೋಗಿ ಸರ್ಕಾರ ಸದಾ ಹದ್ದಿನ ಕಣ್ಣಿಡಲಿದ್ದು, ಎಲ್ಲ ದಾಖಲೆಗಳನ್ನು ವ್ಯವಸ್ಥಿತವಾಗಿಡಬೇಕಿದೆ. ಅಲ್ಲದೆ ಈ ಪೊರ್ಟಲ್‌ ಮೂಲಕ ಅಲ್ಲಿನ ಆಚರಣೆಗಳ ಕುರಿತೂ ಸರ್ಕಾರ ನಿರ್ದೇಶನ ನೀಡಲಿದೆ.

ಪೋರ್ಟಲ್‌ಗೆ ಮದರಸಾಗಳ ಮಾಹಿತಿಗಳನ್ನು ಲಿಂಕ್‌ ಮಾಡುವುದು ಕಡ್ಡಾಯವಾಗಿದ್ದು, ಸದ್ಯ ಮದರಸಾ ತರಗತಿಗಳ ನಕ್ಷೆ, ಮದರಸಾ ಬಿಲ್ಡಿಂಗ್‌ನ ಫೋಟೊ ಮತ್ತು ಶಿಕ್ಷಕರ ಬ್ಯಾಂಕ್‌ ಕುರಿತಾದ ಮಾಹಿತಿಗಳನ್ನು ರಾಜ್ಯ ಸರಕಾರಕ್ಕೆ ತಿಳಿಸುವಂತೆ ಹೇಳಿದೆ. ಅಲ್ಲದೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ತಮ್ಮ ಆಧಾರ್‌ ಸಂಖ್ಯೆಯನ್ನು ಪೋರ್ಟಲ್‌ಗೆ ಲಿಂಕ್‌ ಮಾಡಬೇಕು.

ಸದ್ಯ 8,000 ಮದರಸಾಗಳು ಉತ್ತರ ಪ್ರದೇಶ ಮದರಸಾ ಶಿಕ್ಷಾ ಪರಿಷತ್‌ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿವೆ. ಇದರಲ್ಲಿ 560 ಮದರಸಾಗಳು ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುತ್ತಿವೆ. ಹೊಸ ವ್ಯವಸ್ಥೆಯಿಂದಾಗಿ ಸುಮಾರು 10 ಸಾವಿರ ಮದರಸಾಗಳು ಈ ವ್ಯವಸ್ಥೆಗೆ ಒಳಪಡಲಿವೆ.

ಇನ್ನು ಸರ್ಕಾರದ ಈ ನಡೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರಶ್ನಿಸಿದ್ದು, ಇದು ಮುಸ್ಲಿಂರ ವೈಯಕ್ತಿಕ ಆಚರಣೆ, ಭಕ್ತಿ ಮೇಲಿನ ಅನುಮಾನ ವ್ಯಕ್ತಪಡಿಸುವಂತಿದೆ. ಕೇವಲ ಮದರಸಾಗಳಿಗೆ ಮಾತ್ರ ಯಾಕೆ ಈ ನೀತಿ ಎಂದಿದೆ. (ಏಜೆನ್ಸೀಸ್‌)

Leave a Reply

Your email address will not be published. Required fields are marked *

Back To Top