Tuesday, 20th February 2018  

Vijayavani

ಹ್ಯಾರಿಸ್ ಪುತ್ರ ಆಯ್ತು ಮತ್ತೊಬ್ಬ ಕೈ ಮುಖಂಡನ ದರ್ಪ- ಸರ್ಕಾರಿ ಕಚೇರಿಗೆ ನುಗ್ಗಿ ಅಧಿಕಾರಿಗೆ ಧಮ್ಕಿ- ಜಲಮಂಡಳಿ ಸದಸ್ಯ ನಾರಾಯಣಸ್ವಾಮಿ ಗೂಂಡಾಗಿರಿ        ನಾನು ಎರಚಿದ್ದು ಪೆಟ್ರೋಲ್ ಅಲ್ಲ, ನೀರು- ಕಿವಿಗೆ ಕಲರ್ ಕಲರ್ ಹೂವಿಟ್ಟ ನಾರಾಯಣಸ್ವಾಮಿ- ನಿಮ್ಮ ಏರಿಯಾದಲ್ಲಿ ನೀರಿಗೆ ಬಣ್ಣ ಇರುತ್ತಾ...?        ಸಿದ್ದರಾಮಯ್ಯ ಆಪ್ತನ ದರ್ಪ ಕಾಂಗ್ರೆಸ್‌ಗೆ ಕಾಣಿಸಲ್ವಾ- ಪರಮೇಶ್ವರ್‌ ಅವರೇ ಗೂಂಡಾನ ವಿರುದ್ಧ ಕ್ರಮ ಇಲ್ವಾ..?- ಕಾಂಗ್ರೆಸ್‌ ಸರ್ಕಾರದಲ್ಲಿ ಅಧಿಕಾರಿಗಳಿಷ್ಟು ಸೇಫ್..?        ದಕ್ಷಿಣ ಕರ್ನಾಟಕದಲ್ಲಿ ಅಮಿತ್ ಷಾ ದಂಡಯಾತ್ರೆ- ಕುಕ್ಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ- ಜ್ವರದ ನಡುವೆಯೂ ಹತ್ತು ಹಲವು ಕಾರ್ಯಕ್ರಮದಲ್ಲಿ ಭಾಗಿ        ಮೇಯ್ತಿದ್ದ ಮದಗಜ ಕೆಣಕಿದ ಶ್ವಾನ- ನಾಯಿ ತುಂಟಾಟಕ್ಕೆ ತಿರುಗಿ ಬಿದ್ದ ಆನೆ- ಮಡಿಕೇರಿಯ ಕಾಫಿತೋಟದಲ್ಲಿ ಆನೆ, ನಾಯಿ ಕಾಳಗ       
Breaking News

ಗೋರಖ್​ಪುರ್​ ಟ್ರ್ಯಾಜಿಡಿ: ​ ಆಸ್ಪತ್ರೆಗೆ ಸಿಎಂ ಆದಿತ್ಯನಾಥ್​​ ಭೇಟಿ

Sunday, 13.08.2017, 4:53 PM       No Comments

ಲಖನೌ: ಕಳೆದ ಐದು ದಿನಗಳಲ್ಲಿ 70 ಮಕ್ಕಳ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಗೋರಖ್​ಪುರ್​ ಆಸ್ಪತ್ರೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್​​ ಭಾನುವಾರ ಭೇಟಿ ನೀಡಿದ್ದರು. ಮಕ್ಕಳ ಸಾವಿನ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ ಸಿಎಂ ಆದತ್ಯನಾಥ್​​ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

 

ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಆದಿತ್ಯನಾಥ್​​, ಮಕ್ಕಳ ಸಾವಿಗೆ ಕಾರಣ ಏನೆಂಬುದು ಸ್ಪಷ್ಟವಾಗಿ ತಿಳಿಯಲು ವರದಿ ನೀಡುವಂತೆ ಸೂಚಿಸಲಾಗಿದೆ. ಕೇವಲ ಬಾಬಾ ರಾಘವ್​ ದಾಸ್​​ ಆಸ್ಪತ್ರೆಯೊಂದೇ ಅಲ್ಲ, ರಾಜ್ಯದ ಎಲ್ಲಾ ಆಸ್ಪತ್ರೆಗಳ ಸ್ಥಿತಿಗತಿ ಬಗ್ಗೆಯೂ ಮಾಹಿತಿ ಕೇಳಲಾಗಿದೆ ಎಂದು ಹೇಳಿದ್ದಾರೆ.

 

ಘಟನೆ ಬಗ್ಗೆ ಪ್ರಧಾನಿ ಮೋದಿಯವರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇನ್ನು ಗೋರಖ್​ಪುರ್​ನಲ್ಲಿ 85ಕೋಟಿ ವೆಚ್ಚದ ಕೇಂದ್ರ ಸಂಶೋಧನಾ ಸಂಸ್ಥೆ ಸ್ಥಾಪಿಸುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್​​ ಜೊತೆ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ತಿಳಿಸಿದ್ದಾರೆ. (ಏಜೆನ್ಸೀಸ್​​)

Leave a Reply

Your email address will not be published. Required fields are marked *

Back To Top