Friday, 23rd March 2018  

Vijayavani

ರಾಜ್ಯಸಭಾ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ - ವಿಧಾನಸೌಧದಲ್ಲಿ ಮತ ಎಣಿಕೆ - ಚುನಾವಣಾ ಅಧಿಕಾರಿಯಿಂದ ರಿಸಲ್ಟ್​ ಅನೌನ್ಸ್        ಕೈಗೆ ಮೂರು, ಬಿಜೆಪಿಗೆ ಒಂದು ಸೀಟು ಪಕ್ಕಾ - ಈ ಬಾರಿಯೂ ಜೆಡಿಎಸ್​ಗಿಲ್ಲ ಸ್ಥಾನ - ಎರಡನೇ ಫಾರೂಕ್​ಗಿಲ್ಲ ಅದೃಷ್ಟ        ಸ್ಪೀಕರ್​ ನೆರವಿಗೆ ಬರಲಿಲ್ಲ - ನಾಗಮೋಹನ್​ದಾಸ್​ ವರದಿಯೇ ಸರಿಯಿಲ್ಲ - ವೀರಶೈವ ಮಹಾಸಭೆಯಲ್ಲಿ ಪ್ರತ್ಯೇಕ ಧರ್ಮಕ್ಕೆ ಆಕ್ರೋಶ        SSLC ಅಲ್ಲ ಇದು ಕಾಪಿಚೀಟಿ ಪರೀಕ್ಷೆ - ಬಹುತೇಕ ಕೇಂದ್ರಗಳಲ್ಲಿ ಸಾಮೂಹಿಕ ನಕಲು - ಹುಬ್ಬಳ್ಳಿ, ವಿಜಯಪುರ, ಕಲಬುರಗಿ ಸೇರಿ ಎಂಟು ಡಿಬಾರ್​        ಮಕ್ಕಳಾಗದ್ದಕ್ಕೆ ಪತ್ನಿ ಮೇಲೆ ದೌರ್ಜನ್ಯ - ವಿಕೃತ ಪತಿಯಿಂದ ಪತ್ನಿಗೆ ನಿರಂತರ ಕಿರುಕುಳ - ಮಗನಿಗೆ ಎರಡನೇ ಮದ್ವೆ ಮಾಡಲು ಪೋಷಕರ ಪ್ಲಾನ್​       
Breaking News

ವಿಯೆಟ್ನಾಂನ ಸಲಿಂಗಿಯನ್ನು ವರಿಸಿದ ಭಾರತೀಯ ಇಂಜಿನಿಯರ್

Saturday, 13.01.2018, 5:54 PM       No Comments

ಯಾವತ್ಮಲ್: ಅಮೆರಿಕ ನಿವಾಸಿಯಾಗಿರುವ ಭಾರತದ ಐಐಟಿ ಪದವೀಧರ ಇಂಜಿನಿಯರ್ ವಿಯಟ್ನಾಂನ ಸಲಿಂಗಿ ಜತೆ ಡಿಸೆಂಬರ್ 30ರಂದು ಮಹಾರಾಷ್ಟ್ರದ ಯಾವತ್ಮಲ್​ನಲ್ಲಿ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.

ಭಾರತದಲ್ಲಿ ಸಲಿಂಗಿಗಳ ವಿವಾಹವನ್ನು ಕಾನೂನು ಬದ್ಧಗೊಳಿಸುವ ಸಂಬಂಧ ಮರುಪರಿಶೀಲನೆ ನಡೆಸುವುದಾಗಿ ಸುಪ್ರೀಂಕೋರ್ಟ್ ಹೇಳಿದ ಎರಡು ದಿನಗಳ ಮುನ್ನವಷ್ಟೇ ಈ ವಿವಾಹ ಜರುಗಿದೆ.

ಮುಂಬೈನ ಐಐಟಿಯಲ್ಲಿ ಬಿ.ಟೆಕ್ ಪದವೀಧರನಾಗಿರುವ ಹೃಷಿ ಮೋಹನ್​ಕುಮಾರ್ ಸಥ್ವಾನೆ (40) ಕ್ಯಾಲಿಫೋರ್ನಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅಮೆರಿಕದ ಗ್ರೀನ್ ಕಾರ್ಡ್ ಪಡೆದಿದ್ದಾರೆ. ಅಮೆರಿಕದಲ್ಲಿ ಪರಿಚಯವಾದ ವಿಯೆಟ್ನಾಂನ ವಿನ್ಸ್ ರನ್ನು ಹೃಷಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡು ಅಕ್ಟೋಬರ್​ನಲ್ಲಿಯೇ ಅಮೆರಿಕದಲ್ಲಿ ವಿವಾಹವಾಗಿದ್ದರು. ಈಗ ಯಾವತ್ಮಲ್​ನ ಹೋಟೆಲ್​ವೊಂದರಲ್ಲಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದಾರೆ.

ಈ ಸಲಿಂಗಿ ವಿವಾಹಕ್ಕೆ ಮೊದಲು ಹೃಷಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ನಂತರ ಹೃಷಿ ಪೋಷಕರ ಮನವೊಲಿಸಿದ್ದಾರೆ. ಹೃಷಿ ಹಾಗೂ ವಿನ್ಸ್​ನ ಸಲಿಂಗ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ.

2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿತ್ತು. ಆದರೆ, 2014ರಲ್ಲಿ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪನ್ನು ವಜಾ ಮಾಡಿ ಸಲಿಂಗಕಾಮ ಅಪರಾಧ ಎಂದು ತೀರ್ಪು ನೀಡಿತ್ತು. ಈ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ 5 ಜನ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

Back To Top