Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಗಂಡ ಮಾಡಿದ್ದೇನು ಗೊತ್ತಾ?

Sunday, 09.07.2017, 7:59 AM       No Comments

ಶಿವಮೊಗ್ಗ: ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಪತಿಯೊಬ್ಬ ತನ್ನ ಇಬ್ಬರು ಮಕ್ಕಳನ್ನು ಕೊಂದು ತಾನು ನೇಣಿಗೆ ಶರಣಾಗಿರುವ ಘಟನೆ ಶಿವಮೊಗ್ಗ ನಗರದ ಸೇವಾಲಾಲ್​ ನಗರದಲ್ಲಿ ನಡೆದಿದೆ.

ಸೇವಾಲಾಲ್ ನಿವಾಸಿಯಾಗಿರೋ ಶಿವಾನಾಯ್ಕ ಎಂಬಾತನೇ ತನ್ನಿಬ್ಬರು ಮಕ್ಕಳ ಜೀವ ತೆಗೆದು, ತಾನು ಆತ್ಮಹತ್ಯೆ​​ ಮಾಡಿಕೊಂಡಿದ್ದಾನೆ. 6 ವರ್ಷದ ಹಿಂದೆ ಪ್ರೇಮ ಎಂಬಾಕೆಯನ್ನು ಶಿವಾನಾಯ್ಕ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದರು. ಆದರೆ, ಪೇಮ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಲ್ಲದೆ ಕಳೆದ ಒಂದು ವರ್ಷದ ಹಿಂದೆ ಅವನ ಜತೆ ಓಡಿಹೋಗಿದ್ದಳು.

ಇದರಿಂದ ಶಿವಾನಾಯ್ಕ ಖಾಸಗಿ ಕಂಪನಿಯೊಂದರಲ್ಲಿ ಮಾಡುತ್ತಿದ್ದ ಕೆಲಸ ಬಿಟ್ಟು ಬಾಡಿಗೆ ಕಾರು ಓಡಿಸುತ್ತಾ ಜೀವನ ನಡೆಸುತ್ತಿದ್ದ. ಇತ್ತ ಪ್ರಿಯಕರನಿಂದ ಬೇರೆಯಾದ ನಂತರ ಪ್ರೇಮ ಎಲ್ಲಾ ಮರೆತು ತನ್ನ ಪತಿಯೊಂದಿಗೆ ಮತ್ತೆ ಸಂಸಾರ ನಡೆಸುತ್ತಿದ್ದಳು. ಆದರೆ, ಆಕೆಗೆ ಮಾತ್ರ ಪ್ರಿಯಕರನ ಮೇಲಿನ ಮೋಹ ಕಡಿಮೆಯಾಗಿರಲಿಲ್ಲ. ಕಳೆದ ಮೂರು ದಿನಗಳ ಹಿಂದೆ ಮತ್ತೆ ಪ್ರಿಯಕರನೊಂದಿಗೆ ಮತ್ತೆ ಹೋಗಿದ್ದಾಳೆ.

ಇದರಿಂದ ಬೇಸತ್ತ ಶಿವಾನಾಯ್ಕ ಹೆಂಡತಿ ಮಾಡಿದ ಹೇಯ ಕೃತ್ಯದಿಂದ ತನ್ನ ಘನತೆ ಗೌರವಕ್ಕೆ ಹಾನಿಯಾಯ್ತು ಎಂದು ತನ್ನ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ತಾನು ಆತ್ಮಹತ್ಯೆ ಶರಣಾಗಿದ್ದಾನೆ.

ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Back To Top