Sunday, 22nd October 2017  

Vijayavani

1. ಜಮ್ಮು ಕಾಶ್ಮೀರದಲ್ಲಿ ಗುಂಡಿನ ಕಾಳಗ – ಸೇನೆ ಎನ್​ಕೌಂಟರ್​ಗೆ ಉಗ್ರ ಫಿನಿಶ್ – ಹತನಿಂದ ಪಾಕ್​ ಕರೆನ್ಸಿ, ಶಸ್ತ್ರಾಸ್ತ್ರ ವಶಕ್ಕೆ 2. ಬಿಎಸ್​ವೈ-ಬಿ.ಎಲ್.ಸಂತೋಷ ನಡುವೆ ಕಿತ್ತಾಟ – ಸಂಘಟನಾತ್ಮಕ ವರದಿ ಪಡೆಯಲು ಮುಂದಾದ ಹೈಕಮಾಂಡ್​ – ರಿಪೋರ್ಟ್​ಗಾಗಿ ಶಿವಪ್ರಕಾಶ್​ ಯಾದವ್​ ನೇಮಕ 3. ಬಹುಮನಿ ಕಾಲದ ಕೋಟೆಗಿಲ್ಲ ಭದ್ರತೆ – ಅವ್ಯವಸ್ಥೆಗಳ ಆಗರ ಜಾಮೀಮಾ ಮಸೀದಿ – ಪ್ರವಾಸೋದ್ಯಮ ಸಚಿವರ ತವರಲ್ಲೇ ಇದೆಂಥ ಅದ್ವಾನ 4. ಗುಜರಾತ್​​​ ಚುನಾವಣೆ ಗೆಲ್ಲಲು ಸರ್ಕಸ್​ – ಹಲವು ಯೋಜನೆಗಳಿಗೆ ಇಂದು ನಮೋ ಚಾಲನೆ – ಹಾರ್ದಿಕ್​​​​​​​, ಜಿಗ್ನೇಶ್ ಸೆಳೆಯಲು ಕೈ ಪ್ಲಾನ್​​ 5. ಚಿರಂಜೀವಿ ಸರ್ಜಾ-ಮೇಘನಾ ರಾಜ್ ನಿಶ್ಚಿತಾರ್ಥ – ಮನೆಯಲ್ಲಿ ತಾಂಬುಲ ಶಾಸ್ತ್ರ – ಸಂಜೆ ಲೀಲಾ ಪ್ಯಾಲೇಸ್​ನಲ್ಲಿ ರಿಂಗ್​ ಎಕ್ಸ್​ಚೇಂಜ್​
Breaking News :

ರೇಪ್ ಆರೋಪಿ ಗಾಯತ್ರಿ ಪ್ರಜಾಪತಿಗೆ ಜಾಮೀನು: 10 ಕೋಟಿ ಬೇಲ್​ ಡೀಲ್​ ಸಾಬೀತು

Monday, 19.06.2017, 9:31 AM       No Comments

ನವದೆಹಲಿ: ನ್ಯಾಯ ಎತ್ತಿ ಹಿಡಿಯಬೇಕಾಗಿದ್ದ ನ್ಯಾಯಾಧೀಶರೇ ಸ್ವತ ನ್ಯಾಯ ದೇವತೆಯ ಕಣ್ಣಿಗೆ ಕಪ್ಪುಪಟ್ಟಿ ಸುತ್ತಿ ಅನ್ಯಾಯವನ್ನು ಪೋಷಿಸಿದ ನ್ಯಾಯಮೂರ್ತಿ ಮತ್ತು ತಂಡ ಅಲಾಹಾಬಾದ್ ಹೈಕೋರ್ಟ್​ನಲ್ಲಿ ನಗ್ನರಾಗಿದ್ದಾರೆ. 10 ಕೋಟಿ ರೂ ಲಂಚ ತಿಂದು ಅತ್ಯಾಚಾರಿ ಮಹಾಶಯನೊಬ್ಬನಿಗೆ ಜಾಮೂನು ತಿನಿಸಿರುವ ಪ್ರಸಂಗವಿದು.

ಅತ್ಯಾಚಾರ ಆರೋಪದಲ್ಲಿ ಸಿಲುಕಿಕೊಂಡಿದ್ದ ಉತ್ತರ ಪ್ರದೇಶದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರು ಜಾಮೀನಿ​ಗಾಗಿ 10 ಕೋಟಿ ಮೊತ್ತದ ಡೀಲ್​ ನಡೆಸಿದ್ದಾರೆ ಎಂದು ಅಲಾಹಾಬಾದ್ ಹೈಕೋರ್ಟ್​ ತನಿಖೆ ವೇಳೆ ಬಯಲಾಗಿದೆ.

ಅಲ್ಲದೆ, ಈ ಡೀಲ್​ನಲ್ಲಿ ಹಲವು ಪ್ರಮುಖರು ಭಾಗಿಯಾಗಿದ್ದಾರೆ. ಹಿರಿಯ ನ್ಯಾಯಮೂರ್ತಿಗಳು ಡೀಲ್​ನಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪ ವರದಿಯಲ್ಲಿ ಉಲ್ಲೇಖವಾಗಿದೆ.

ಬೇಲ್​ ಡೀಲ್​ಗಾಗಿ 10 ಕೋಟಿಯಲ್ಲಿ ಮೂವರು ವಕೀಲರಿಗೆ 5 ಕೋಟಿ ಹಣ ಸಂದಾಯ ಹಾಗೂ ಪ್ರಜಾಪತಿಗೆ ಜಾಮೀನು ನೀಡಿದ್ದ ಜಡ್ಜ್ ಮಿಶ್ರಾ ಹಾಗೂ ಜಿಲ್ಲಾ ನ್ಯಾಯಮೂರ್ತಿ ರಾಜೇಂದ್ರ ಸಿಂಗ್​ಗೆ ಉಳಿದ 5 ಕೋಟಿ ಸಂದಾಯವಾಗಿದೆ ಅಂತ ವರದಿಯಲ್ಲಿ ಹೇಳಲಾಗಿದೆ.

ನ್ಯಾಯಮೂರ್ತಿಗಳ ಆಯ್ಕೆ ವೇಳೆಯೂ ಭ್ರಷ್ಟಾಚಾರ ನಡೆದಿದೆ. ಏಪ್ರಿಲ್​ ಅಂತ್ಯದ ವೇಳೆಗೆ ನಿವೃತ್ತಿಯಾಗಬೇಕಾಗಿದ್ದ ಜಡ್ಜ್ ಓ.ಪಿ. ಮಿಶ್ರಾ, ಏಪ್ರಿಲ್​ 7 ರಂದು ಪೋಕ್ಸೋ ನ್ಯಾಯಮೂರ್ತಿಯನ್ನಾಗಿ ಆಯ್ಕೆ ಮಾಡಿದ್ದು, ಕಾನೂನು ಬಾಹಿರ ಅಂತ ಭೋಸಲೆ ವರದಿ ನೀಡಿದ್ದಾರೆ. ನ್ಯಾಯಮೂರ್ತಿ ಓ.ಪಿ.ಮಿಶ್ರಾರೇ ಏಪ್ರಿಲ್ 25 ರಂದು ಗಾಯತ್ರಿ ಪ್ರಜಾಪತಿಗೆ ಜಾಮೀನು ನೀಡಿದ್ದರು.

ಅಲಾಹಾಬಾದ್ ಹೈಕೋರ್ಟ್​ ನ್ಯಾಯಮೂರ್ತಿ ದಿಲೀಪ್. ಬಿ. ಭೋಸಲೆ ಆದೇಶದ ಮೇರೆಗೆ ಗುಪ್ತಚರ ಇಲಾಖೆ ತನಿಖೆ ನಡೆಸಿತ್ತು.

ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇರೆಗೆ ತಲೆಮರೆಸಿಕೊಂಡಿದ್ದ ಮಾಜಿ ಸಚಿವ ಪ್ರಜಾಪ್ರತಿಯನ್ನ ಬಂಧಿಸುವಂತೆ ಸುಪ್ರೀಂಕೋರ್ಟ್​, ಯುಪಿ ಸರ್ಕಾರಕ್ಕೆ ಚಾಟಿ ಬೀಸಿತ್ತು. ಮಾರ್ಚ್​ನಲ್ಲಿ ಪೊಲೀಸರು ಅವರನ್ನ ಬಂಧಿಸಿದ್ದರು. ಬಳಿಕ ಒಂದು ತಿಂಗಳಲ್ಲಿ ಜಾಮೀನು ಸಿಕ್ಕಿತ್ತು.

Leave a Reply

Your email address will not be published. Required fields are marked *

Back To Top