Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಮ್ಯಾಂಚೆಸ್ಟರ್​ ಆತ್ಮಾಹುತಿ ಬಾಂಬ್​ ಸ್ಫೋಟ, 7 ಜನರ ಬಂಧನ

Thursday, 25.05.2017, 8:02 AM       No Comments

ಲಂಡನ್​: ಬ್ರಿಟನ್​ನ ಮ್ಯಾಚೆಸ್ಟರ್​ ಅರೇನಾದಲ್ಲಿ ಸೋಮವಾರ ರಾತ್ರಿ ನಡೆದಿದ್ದ ಆತ್ಮಾಹುತಿ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್​ ಪೊಲೀಸರು ಓರ್ವ ಮಹಿಳೆ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಿದ್ದಾರೆ.

ಬಾಂಬ್​ ಸ್ಫೋಟ ಪ್ರಕರಣದಲ್ಲಿ ಭಾಗಿಯಾಗಿರುವವರಿಗಾಗಿ ಬ್ರಿಟನ್​ ಪೊಲೀಸರು ತೀವ್ರವಾಗಿ ಹುಡುಕಾಟ ನಡೆಸುತ್ತಿದ್ದು, ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಮ್ಯಾಂಚೆಸ್ಟರ್​ ಬಾಂಬ್​ ಸ್ಫೋಟದಲ್ಲಿ ಲಿಬಿಯಾ ಮೂಲದ ಬಾಂಬರ್​ ಕೈವಾಡವಿರುವ ಶಂಕೆ ವ್ಯಕ್ತಿ ಪಡಿಸಿರುವ ಪೊಲೀಸರು ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಬ್ರಿಟನ್​ ಪೊಲೀಸರು ಶಂಕಿತ ಆತ್ಮಾಹುತಿ ಬಾಂಬರ್​ನ ಸಹೋದರ ಇಸ್ಮಾಯಿಲ್​ ಅಬೇದಿ ಮತ್ತು ಆತನ ತಂದೆ ರಮದನ್​ ಅಬೇದಿಯನ್ನು ಲಿಬಿಯಾದ ತ್ರಿಪೋಲಿಯಲ್ಲಿ ಬಂಧಿಸಿದ್ದಾರೆ. ಜತೆಯಲ್ಲೇ ದಕ್ಷಿಣ ಮ್ಯಾಂಚೆಸ್ಟರ್​ ಮತ್ತು ವಿಗನ್​ನಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು 3800 ಕ್ಕೂ ಹೆಚ್ಚು ಪೊಲೀಸರನ್ನು ಪ್ರಕರಣದ ತನಿಖೆಗಾಗಿ ನಿಯೋಜಿಸಲಾಗಿದೆ.

ಸೋಮವಾರ ರಾತ್ರಿ ಮ್ಯಾಂಚೆಸ್ಟರ್​ ಅರೇನಾ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಆತ್ಮಾಹುತಿ ಬಾಂಬರ್​ ಬಾಂಬ್​ ಸ್ಫೋಟ ನಡೆಸಿದ್ದ. ಈ ದಾಳಿಯಲ್ಲಿ ಒಟ್ಟು 22 ಜನರು ಮೃತಪಟ್ಟು, 119 ಜನರು ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ 20 ಜನರ ಸ್ಥಿತಿ ಗಂಭೀರವಾಗಿದೆ.

ದಿಗ್ವಿಜಯ ನ್ಯೂಸ್ LIVE LINK

Leave a Reply

Your email address will not be published. Required fields are marked *

Back To Top