Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ವಿಶ್ವಸಂಸ್ಥೆಯಲ್ಲೂ ರಷ್ಯಾಕ್ಕೆ ಹಿನ್ನಡೆ

Monday, 16.04.2018, 3:09 AM       No Comments

ವಿಶ್ವಸಂಸ್ಥೆ: ಸಿರಿಯಾದ ಮೇಲೆ ಅಮೆರಿಕ ಮತ್ತು ಅದರ ಮಿತ್ರಪಡೆಗಳು ನಡೆಸಿದ ದಾಳಿಯ ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸುವ ರಷ್ಯಾದ ಪ್ರಯತ್ನವೂ ವಿಫಲವಾಗಿದೆ. ಇದೇ ವೇಳೆ ಅಮೆರಿಕ ಮತ್ತದರ ಮಿತ್ರ ಪಡೆಗಳು ಸಿರಿಯಾದಲ್ಲಿ ರಾಸಾಯನಿಕ ಶಸ್ತ್ರಗಳ ಇರುವಿಕೆ ಕುರಿತು ತನಿಖೆ ನಡೆಸಲು ವಿಶ್ವಸಂಸ್ಥೆಯ ಮನವೊಲಿಸುವ ಪ್ರಯತ್ನವನ್ನು ಮತ್ತೆ ಆರಂಭಿಸಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಸಿರಿಯಾ ಮೇಲಿನ ಕ್ಷಿಪಣಿ ದಾಳಿ ಖಂಡಿಸುವ ನಿರ್ಣಯವನ್ನು ರಷ್ಯಾ ಮಂಡಿಸಿತು. ಈ ದಾಳಿ ತತ್​ಕ್ಷಣವೇ ನಿಲ್ಲಿಸಬೇಕು ಎಂದು ನಿರ್ಣಯದಲ್ಲಿ ಆಗ್ರಹಿಸಿತ್ತು. ಸಭೆಯಲ್ಲಿ ಉಪಸ್ಥಿತರಿದ್ದ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳ ಪೈಕಿ ಚೀನಾ ಮತ್ತೊ ಬೊಲಿವಿಯಾ ಮಾತ್ರ ರಷ್ಯಾದ ನಿರ್ಣಯವನ್ನು ಬೆಂಬಲಿಸಿದವು. ಅಮೆರಿಕ, ಬ್ರಿಟನ್, ನೆದರ್​ಲೆಂಡ್, ಕುವೈತ್, ಪೋಲೆಂಡ್ ಮತ್ತು ಐವರಿಕೋಸ್ಟ್ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿದರೆ, ಇಥಿಯೋಪಿಯಾ, ಕಜಕ್​ಸ್ತಾನ್, ಈಕ್ವಟೋರಿಯಲ್ ಗಿಯೆನ್ನಾ ಮತ್ತು ಪೆರು ಮತದಾನದಿಂದ ದೂರ ಉಳಿದವು.

ಸಭೆಯಲ್ಲಿ ಉಪಸ್ಥಿತರಿದ್ದ ಅಮೆರಿಕ ಮತ್ತು ಮಿತ್ರಪಡೆಗಳ ಸದಸ್ಯರು ಸಿರಿಯಾದಲ್ಲಿ ಸತತ 5ನೇ ವಾರ ರಾಸಾಯನಿಕ ಶಸ್ತ್ರಗಳ ದಾಳಿ ನಡೆಸಲಾಗಿದೆ. ಡಮಾಸ್ಕಸ್​ನ ಉಪನಗರ ಡೌಮಾದಲ್ಲಿ ಏ.7ರಂದು ಇಂತಹ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸಿರಿಯಾದ ಅಧ್ಯಕ್ಷ ಬಷರ್ ಅಸ್ಸಾದ್ ರಾಸಾಯನಿಕ ಶಸ್ತ್ರಗಳ ದಾಳಿ ನಡೆಸಿರುವ ಬಗ್ಗೆ ಖಚಿತ ಸಾಕ್ಷ್ಯಾಧಾರ ಸಿಕ್ಕಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಯಿತು ಎಂದು ಸಮರ್ಥಿಸಿಕೊಂಡರು. ಆದರೆ, ರಷ್ಯಾ ಮತ್ತು ಸಿರಿಯಾ, ಇದೊಂದು ಕಪೋಲಕಲ್ಪಿತ ಆರೋಪವಾಗಿದೆ. ಡೌಮಾದಲ್ಲಿ ರಾಸಾಯನಿಕ ಶಸ್ತ್ರ ಬಳಕೆಯಾಗಿರುವ ಯಾವುದೇ ಸಾಕ್ಷ್ಯಾಧಾರಗಳಿಲ್ಲದಿದ್ದರೂ ದಾಳಿ ಮಾಡಲಾಗಿದೆ ಎಂದು ದೂರಿದವು.

ತನಿಖೆ ನಡೆಸಬೇಕು: ಸಿರಿಯಾದ ಸರ್ಕಾರದ ಬಳಿ ರಾಸಾಯನಿಕ ಶಸ್ತ್ರಗಳ ಇರುವಿಕೆ ಮತ್ತು ಅವನ್ನು ಬಳಸಿ ದಾಳಿ ನಡೆಸಿರುವ ಕುರಿತು ವಿಶ್ವಸಂಸ್ಥೆಯ ನಿಯೋಗದಿಂದ ತನಿಖೆ ನಡೆಸುವಂತೆ ಅಮೆರಿಕ ಮತ್ತು ಮಿತ್ರಪಡೆಗಳು ಆಗ್ರಹಿಸಿವೆ.

ಟ್ರಂಪ್ ಟೋಮಾಹಾಕ್ ದಾಳಿ ಚಿತ್ರಣ

ಬ್ರಿಟನ್ ಮತ್ತು ಫ್ರಾನ್ಸ್ ಸಹಕಾರದಲ್ಲಿ ಅಮೆರಿಕದ 66 ಟೋಮಾಹಾಕ್ ಕ್ಷಿಪಣಿಗಳು ಸಿರಿಯಾದ ರಾಸಾಯನಿಕ ಶಸ್ತ್ರ ಘಟಕಗಳ ಮೇಲೆ ದಾಳಿ ನಡೆಸಿವೆ. ಡೌಮಾದಲ್ಲಿ ಅಸ್ಸಾದ್ ನೇತೃತ್ವದ ಸರ್ಕಾರ ತನ್ನದೇ ಪ್ರಜೆಗಳ ಮೇಲೆ ರಾಸಾಯನಿಕ ಶಸ್ತ್ರಗಳ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿರಿಯಾದ ಮೇಲೆ ನಡೆದ ಅಮೆರಿಕ ದಾಳಿಯ ವಿವರ ಇಲ್ಲಿದೆ

ಕರಡು ನಿರ್ಣಯ ಸಲ್ಲಿಕೆ

ಅಮೆರಿಕ ಮತ್ತು ಮಿತ್ರಪಡೆಗಳು ಕರಡು ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿವೆ. ಸಿರಿಯಾ ಜನತೆ ತೀವ್ರ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಅವರಿಗೆ ಮಾನವೀಯ ನೆರವು ನೀಡುವ ಅವಶ್ಯಕತೆ ಇದೆ. ಇದಕ್ಕಾಗಿ ಅಲ್ಲಿ ಕದನವಿರಾಮ ಘೋಷಿಸಬೇಕು. ಹಾಗೂ ವಿಶ್ವಸಂಸ್ಥೆ ನೇತೃತ್ವದ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳುವಂತೆ ಸಿರಿಯಾ ಮೇಲೆ ಒತ್ತಡ ಹೇರಬೇಕು ಎಂಬ ಅಂಶಗಳು ಕರಡು ನಿರ್ಣಯದಲ್ಲಿವೆ ಎನ್ನಲಾಗಿದೆ. ಒಂದು ರಾತ್ರಿಯ ದಾಳಿ ನಂತರದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಸಿರಿಯಾದ ಸಮಸ್ಯೆ ಪರಿಹರಿಸಲು ಮತ್ತೊಮ್ಮೆ ರಾಜತಾಂತ್ರಿಕ ಮಾರ್ಗ ಅನುಸರಿಸುವ ಬಗ್ಗೆ ಒಲವು ಹೊಂದಿರುವುದು ಕರಡು ನಿರ್ಣಯದಿಂದ ಸ್ಪಷ್ಟವಾಗಿದೆ.

 

Leave a Reply

Your email address will not be published. Required fields are marked *

Back To Top