Wednesday, 19th September 2018  

Vijayavani

ಸಂಪುಟಕ್ಕೆ ಸತೀಶ್​​​​​.. ಲೋಕಸಭೆಗೆ ರಮೇಶ್​​ - ಬೆಳಗಾವಿ ಕದನಕ್ಕೆ ತೆರೆ ಎಳೆಯಲು ಸಿದ್ದು ಪ್ಲಾನ್​​        ಹೈಕಮಾಂಡ್​​ ಅಂಗಳಕ್ಕೆ ಅತೃಪ್ತರ ಪುರಾಣ - ರಾಹುಲ್​​ ಜತೆ ಇಂದು ಸಿದ್ದರಾಮಯ್ಯ ಚರ್ಚೆ        ರಣೋತ್ಸಾಹದಲ್ಲಿ ಕಮಲ ಪಾಳಯ - ಇಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​​ನಲ್ಲಿ ಶಾಸಕಾಂಗ ಸಭೆ        ಸಚಿವ ಡಿಕೆಶಿಗೆ ಫುಡ್​​ ಪಾಯ್ಸನ್​ - ಅಪೋಲೋ ಆಸ್ಪತ್ರೆಯಲ್ಲಿ ಸಚಿವರಿಗೆ ಟ್ರೀಟ್​ಮೆಂಟ್​ - ಸಂಜೆ ಡಿಸ್ಚಾರ್ಜ್ ಸಾಧ್ಯತೆ        ರಾಮಚಂದ್ರಾಪುರ ಮಠದ ಕೈತಪ್ಪಿದ ಗೋಕರ್ಣ ದೇಗುಲ - ಶ್ರೀ ಮಹಾಬಲೇಶ್ವರ ದೇವಸ್ಥಾನ ಸರ್ಕಾರದ ಸುಪರ್ದಿಗೆ        ದುಬೈ ಅಂಗಳದಲ್ಲಿಂದು ಭಾರತ- ಪಾಕ್​​ ಕಾಳಗ - ರೋಹಿತ್​​​​ ಪಡೆ ವಿರುದ್ಧ ಸರ್ಫರಾಜ್​ ಟೀಮ್​​ ತಂತ್ರ       
Breaking News

ಇಬ್ಬರು ಯೋಧರು ಹುತಾತ್ಮ

Wednesday, 11.07.2018, 3:03 AM       No Comments

ಕಾರವಾರ/ಬೆಳಗಾವಿ: ನಕ್ಸಲ್ ದಾಳಿ ಹಾಗೂ ನೆಲಬಾಂಬ್ ಸ್ಪೋಟದಲ್ಲಿ ರಾಜ್ಯದ ಯೋಧರಿಬ್ಬರು ವೀರಮರಣವನ್ನು ಅಪ್ಪಿದ್ದಾರೆ. ಛತ್ತೀಸ್​ಗಢದಲ್ಲಿ ನಕ್ಸಲರು ನಡೆಸಿದ ಬಾಂಬ್ ದಾಳಿಗೆ ಬಿಎಸ್​ಎಫ್ ಯೋಧರಾದ ಕಾರವಾರ ಕೋಡಿಬಾಗ ಕೋಮಾರಪಂಥವಾಡದ ವಿಜಯಾನಂದ ನಾಯ್ಕ (29), ಬೆಳಗಾವಿ ಖಾನಾಪುರ ತಾಲೂಕಿನ ಹುಲಗಾ ಗ್ರಾಮದ ಸಂತೋಷ ಲಕ್ಷ್ಮಣ ಗುರವ (27) ಹುತಾತ್ಮರಾಗಿದ್ದಾರೆ. ಛತ್ತೀಸ್​ಗಢದ ಕಂಕರ್ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸ ಮಟ್ಟ ಹಾಕಲು ಗಡಿ ರಕ್ಷಣಾ ಪಡೆಯ 121 ಬೆಟಾಲಿಯನ್​ನ 200 ಯೋಧರ ವಿಶೇಷ ತುಕಡಿ ಕೆಲ ದಿನಗಳಿಂದ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ 13 ಬೈಕ್​ಗಳಲ್ಲಿ 8 ತಂಡಗಳಲ್ಲಿ ಯೋಧರು ತೆರಳುತ್ತಿದ್ದರು. ಆಗ ನೆಲಬಾಂಬ್ ಸ್ಪೋಟಗೊಂಡು ಬೈಕ್​ನಲ್ಲಿದ್ದ ವಿಜಯಾನಂದ ಮತ್ತು ಸಂತೋಷ ಸಾವಿಗೀಡಾಗಿದ್ದಾರೆ. ವಿಜಯಾನಂದ 2014, ಸಂತೋಷ 2013ರಲ್ಲಿ ಬಿಎಸ್​ಎಫ್​ಗೆ ಸೇರಿದ್ದರು. ಯೋಧರ ಪಾರ್ಥಿವ ಶರೀರಗಳು ಬುಧವಾರ ಅವರವರ ಊರಿಗೆ ತಲುಪಲಿದ್ದು ಸಾರ್ವಜನಿಕ ದರ್ಶನದ ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Back To Top