Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಮಗಳಿಂದಲೇ ಮೋಸ ಹೋದ ತಾಯಿ ಕುಟುಂಬ ಬೀದಿಗೆ ಬಂತು

Sunday, 08.10.2017, 3:20 PM       No Comments

ತುಮಕೂರು: ಹೆಣ್ಣು ತವರಿಗೆ ಕೀರ್ತಿ ತರಬೇಕು ಅನ್ನೋದು ಗಾದೆ ಮಾತು. ಆದರೆ, ಅಂತಹ ಗಾದೆ ಮಾತಿಗೆ ಕಳಂಕ ತರುವಂತಹ ಕೆಲಸವೊಂದು ತುಮಕೂರಿನಲ್ಲಿ ನಡೆದಿದೆ. ಮಗಳು ಮಾಡಿದ ಕೆಲಸಕ್ಕೆ ತಾಯಿ ಹಾಗೂ ಮಕ್ಕಳು ಮನೆ ಕಳೆದುಕೊಂಡು ಊರೂರು ಸುತ್ತುವಂತಾಗಿದ್ದು, ಜೀವ ಉಳಿಸಿಕೊಳ್ಳಲು ಒದ್ದಾಡ್ತಿದ್ದಾರೆ.

ಹೌದು, ತುಮಕೂರು ತಾಲೂಕು ಮಾರನಾಯಕಹಳ್ಳಿಯ ಸುಶೀಲಮ್ಮ ಎಂಬುವವರ ಮಗಳು ನಾಗವೇಣಿ, ಮದುವೆಯಾಗಿ ಗಂಡ ಬಿಟ್ಟು ತವರು ಮನೆಯಲ್ಲಿದ್ದಳು. ಆದರೆ, ಆಯುಧ ಪೂಜೆ ಹಿಂದಿನ ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಅಲ್ಲದೆ, ಮನೆ ಬಿಟ್ಟು ಹೋಗುವ ಮುನ್ನ ಒಂದು ಲಕ್ಷ ಸಾಲ ಮಾಡಿ ಹೋಗಿದ್ದಾಳೆ.

ಈ ಬಗ್ಗೆ ತಾಯಿಗೆ ಹೇಳಿದ್ದ ನಾಗವೇಣಿ, ತಿಂಗಳ ಕಂತಲ್ಲಿ ತೀರಿಸ್ಬೇಕು. ಇಬ್ಬರೂ ದುಡಿದು ತೀರಿಸೋಣ ಅಂತ ತಾಯಿಗೆ ಹೇಳಿದ್ದಳಂತೆ. ಆದರೆ, ಊರು ಬಿಡೋ ಮುನ್ನ, ತನ್ನ ತಾಯಿಯಿಂದ ಖಾಲಿ ಪತ್ರಗಳಿಗೆ ಸಹಿ ಹಾಕಿಸಿಕೊಂಡು, ಅದನ್ನ ಸಾಲ ಕೊಟ್ಟ ಗಂಗಾಧರ್ ಬಳಿ ಕೊಟ್ಟುಹೋಗಿದ್ದಾರೆ. ಈಗ ಅದನ್ನೇ ಮುಂದಿಟ್ಟುಕೊಂಡ ಗಂಗಾಧರ್ ಇವರನ್ನು ಇನ್ನಿಲ್ಲದಂತೆ ಪೀಡಿಸುತ್ತಿದ್ದು ಹಣ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಒಂದು ಪತ್ರಕ್ಕೆ 6 ಲಕ್ಷ ಇನ್ನೊಂದು ಪತ್ರಕ್ಕೆ ಬರೋಬ್ಬರಿ 9 ಲಕ್ಷ ಸಾಲ ಬರೆದುಕೊಂಡು ಇವರು ವಾಸಿಸುತ್ತಿದ್ದ ಮಾರನಾಯಕಪಾಳ್ಯದ ಮನೆಯಿಂದ ಖಾಲಿ ಮಾಡಿಸಿ ಬೀಗ ಹಾಕಿಕೊಂಡಿದ್ದಾನೆ. ಇದರಿಂದ ನಿರಾಶ್ರಿತರಾಗಿರುವ ಇವರು ಅಲ್ಲಿ ಇಲ್ಲಿ ತಿರುಗಿಕೊಂಡು ಜೀವನ ನಡೆಸ್ತಿದ್ದಾರೆ. ಅಲ್ಲದೆ, ಸಿಕ್ಕಲೆಲ್ಲಾ ಹೊಡೆದು ಬಡಿದು ಮಾಡುತ್ತಿದ್ದು, ಹೀಗಾಗಿ ಜೀವ ರಕ್ಷಣೆಗಾಗಿ ಬೇಡುತ್ತಿದ್ದು, ಪೊಲೀಸರ ಮೊರೆ ಹೋಗಿದ್ದಾರೆ.

ಆದರೆ, ಗಂಗಾಧರ ತನ್ನ ರಾಜಕೀಯ ಪ್ರಭಾವ ಬಳಸಿ ಪೊಲೀಸರನ್ನೇ ಬುಕ್ ಮಾಡಿಕೊಂಡಿದ್ದಾನೆ. ಹೀಗಾಗಿ ಯಾವುದೇ ಠಾಣೆಯ ಮೆಟ್ಟಿಲೇರಿದ್ರು ರಕ್ಷಣೆ ಕೊಡಲು ಪೊಲೀಸರು ಹಿಂದೆ ಮುಂದೆ ನೋಡುತ್ತಿದ್ದಾರೆ ಅಂತ ಸುಶೀಲಮ್ಮ ಕುಟುಂಬ ಆರೋಪಿಸ್ತಿದೆ. ಇದ್ರಿಂದ ಬೇಸತ್ತ ಸುಶೀಲಮ್ಮ ಕುಟುಂಬ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೊರೆಹೋಗಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top