Sunday, 24th June 2018  

Vijayavani

ಆಪ್ತರ ಜತೆ ಮಾಜಿ ಸಿಎಂ ಸಭೆ ಹಿನ್ನೆಲೆ - ಸಿದ್ದರಾಮಯ್ಯ ಭೇಟಿಗೆ ತೆರಳಿದ ಪರಂ - ರಾಜಕೀಯ ವಿಚಾರಗಳ ಬಗ್ಗೆ ನಾಯಕರ ಚರ್ಚೆ ಸಾಧ್ಯತೆ        ಪ್ರಕೃತಿ ಚಿಕಿತ್ಸಾಲಯದಿಂದ ಹೊರ ಬಂದ ಸಿದ್ದು - ಅಭಿಮಾನಿಗಳ ಜತೆ ಮಾಜಿ ಸಿಎಂ ಚರ್ಚೆ - ಕೈ ಕಾರ್ಯಕರ್ತರ ಜತೆ ಸೆಲ್ಫಿಗೆ ಫೋಸ್​​        ಶಿವಮೊಗ್ಗದಲ್ಲಿ ಮತ್ತೆ ಝಳಪಿಸಿದ ಮಾರಕಾಸ್ತ್ರ - ರೌಡಿ ಶೀಟರ್​​​ ಹಬೀಬ್​ ಬರ್ಬರ ಹತ್ಯೆ - ತುಂಗಾನಗರ ಠಾಣೆಯಲ್ಲಿ ಪ್ರಕರಣ        ಖಾತೆ ಹಂಚಿಕೆಯಾಯ್ತು, ಈಗ ಬಂಗಲೆ ಸರದಿ - ಒಂದೊಂದು ಬಂಗಲೆಗೆ ಮೂವರ ಪೈಪೋಟಿ - ಸಿಎಂ ಕುಮಾರಸ್ವಾಮಿಗೆ ಬಂಗಲೆ ಕೊಡೋದೇ ಚಿಂತೆ        ಹಿಟ್​​ಲಿಸ್ಟ್​​ನಲ್ಲಿದ್ದ 20 ಉಗ್ರರ ಪೈಕಿ ಇಬ್ಬರು ಫಿನಿಶ್ - ಕುಲ್ಗಾಮದಲ್ಲಿ ಇಬ್ಬರು ಎಲ್​​ಇಟಿ ಉಗ್ರರು ಉಡೀಸ್​ - ಶಸ್ತ್ರ ಸಹಿತ ಒಬ್ಬ ಟೆರರ್​ ಸರೆಂಡರ್        ಮನೆಗಾಗಿ ಕಣ್ಣೀರಿಟ್ಟ ವೃದ್ಧೆಗೆ ಶಾಸಕರ ಸಹಾಯ - 20 ಸಾವಿರ ಹಣ ನೀಡಿದ ಡಾ.ರಂಗನಾಥ - ದಿಗ್ವಿಜಯ ನ್ಯೂಸ್​ ವರದಿಗೆ ಸ್ಪಂದಿಸಿದ ಕುಣಿಗಲ್​ ಶಾಸಕ       
Breaking News

ಸರ್ವಾಧಿಕಾರಿ ಕಿಮ್​ ಭೇಟಿ ಬಗ್ಗೆ ಡೊನಾಲ್ಡ್​ ಟ್ರಂಪ್​ ಹೇಳಿದ್ದೇನು?

Tuesday, 12.06.2018, 12:46 PM       No Comments

ನವದೆಹಲಿ: ಜಾಗತಿಕ ಮಟ್ಟದಲ್ಲಿ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷ ಡೋನಾಲ್ಡ್​ ಟ್ರಂಪ್​ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್​ ಜಾಂಗ್​ ಉನ್​ ಭೇಟಿಗೆ ಸಿಂಗಾಪುರ ಸಾಕ್ಷಿಯಾಗಿದ್ದು, ಉಭಯ ನಾಯಕರು ಮಹತ್ವದ ಚರ್ಚೆ ನಡೆಸಿ ಐತಿಹಾಸಿಕ ಹಾಗೂ ಸಮಗ್ರ ಕಡತಗಳಿಗೆ ಜಂಟಿ ಸಹಿ ಹಾಕಿದ್ದಾರೆ.

ಈ ಮಹತ್ವದ ಭೇಟಿಯನ್ನು ಉಭಯ ನಾಯಕರು ವರ್ಣಿಸಿದ್ದು, ಕಿಮ್​ ಹೊಸ ಬಾಂದವ್ಯವನ್ನು ಸೃಷ್ಟಿಸಿದ್ದಾರೆಂದು ಟ್ರಂಪ್​ ಹೇಳಿದರೆ, ಹಿಂದೆ ನಡೆದಿದ್ದನೆಲ್ಲಾ ಹಿಂದೆಯೇ ಬಿಟ್ಟು ಬಿಡೋಣ ಎಂದು ಕಿಮ್​ ಹೇಳಿದ್ದಾರೆ.

ವೈಟ್​ ಹೌಸ್​ಗೆ ಆಹ್ವಾನ
ಟ್ರಂಪ್​ ಮಾತನಾಡಿ ನಾವು ಖಂಡಿತವಾಗಿ ಕಿಮ್​ ಅವರನ್ನು ವೈಟ್​ಹೌಸ್​ಗೆ ಆಮಂತ್ರಿಸುತ್ತೇವೆ. ಉತ್ತರ ಕೊರಿಯಾ ಶಿಘ್ರವೇ ಅಣ್ವಸ್ತ್ರನಾಶ ಪ್ರಕ್ರಿಯೆಯನ್ನು ಶುರು ಮಾಡಬೇಕು ಎಂದು ತಿಳಿಸಿದರು.

ಕಡತಗಳಿಗೆ ಸಹಿ ಹಾಕುವುದಕ್ಕೂ ಮುನ್ನಾ ಎಲ್ಲರೂ ನಿರೀಕ್ಷಿಸಿದಕ್ಕಿಂತ ಉತ್ತಮವಾದುದ್ದನ್ನು ಮಾಡೋಣ ಎಂದು ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರೋ ಕ್ಯಾಪೆಲ್ಲ ಹೋಟೆಲ್​ನಲ್ಲಿ ನಡೆದ ಶೃಂಗ ಸಭೆಯಲ್ಲಿ ಟ್ರಂಪ್​ ಮಾತನಾಡಿದರು. ಅಲ್ಲದೆ, ಉಭಯ ನಾಯಕರು ಒಟ್ಟಿಗೆ ಕುಳಿತು ಕ್ಯಾಪೆಲ್ಲ ಹೋಟೆಲ್​ನ ಗಾರ್ಡನ್​ನಲ್ಲಿ ಮಧ್ಯಾಹ್ನದ ಊಟವನ್ನು ಸೇವಿಸಿದರು.​

ಧನಾತ್ಮಕ ಹಾದಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿ, ಎಲ್ಲರೂ ನಿರೀಕ್ಷಿಸಿದಕ್ಕಿಂತ ಉತ್ತಮ ಕೆಲಸ ಮಾಡಿ ಉಭಯ ರಾಷ್ಟ್ರಗಳು ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳಲು ನಾವು ಸಹಿ ಮಾಡುತ್ತಿರುವುದಾಗಿ ಕೊರಿಯನ್ ಪರ್ಯಾಯ ದ್ವೀಪದ ಮೇಲಿನ ಪರಮಾಣು ಬಿಕ್ಕಟ್ಟನ್ನು ಅಂತ್ಯಗೊಳಿಸುವ ಮಾರ್ಗಗಳ ಕುರಿತು ನಡೆದ ಮಾತುಕತೆಯ ನಂತರ ಟ್ರಂಪ್​, ಸುದ್ದಿಗಾರರಿಗೆ ತಿಳಿಸಿದರು.

ಯಾವ ಯಾವ ಒಪ್ಪಂದಗಳಿಗೆ ಸಹಿ ಹಾಕಿದ್ದೇನೆಂಬುದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡದೇ, ಮುಂದೆ ನಿಮಗೆ ಗೊತ್ತಾಗಲಿದೆ ಎಂದು ಮಾಧ್ಯಮದವರಿಗೆ ಹೇಳಿ ಮಾತನ್ನು ಮುಗಿಸಿದರು. ಈ ವೇಳೆ ಟ್ರಂಪ್​ ಜತೆ ಸುಮ್ಮನೆ ನಿಂತಿದ್ದ ಕಿಮ್​ ಮಾಧ್ಯಮದವರ ಜತೆ ಏನನ್ನು ಮಾತನಾಡಲಿಲ್ಲ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top