Saturday, 20th October 2018  

Vijayavani

ಚೀಪ್ ಮೆಂಟಾಲಿಟಿ ನನಗಿಲ್ಲ - ಇದರ ಹಿಂದೆ ಕೈವಾಡ ಇರಬಹುದು - ನಟಿ ಶ್ರುತಿ ಹರಿಹರನ್ ಆರೋಪ ತಳ್ಳಿಹಾಕಿದ ಅರ್ಜುನ್ ಸರ್ಜಾ        ಸ್ಯಾಂಡಲ್​ವುಡ್​​ನಲ್ಲಿ ಮೀ ಟೂ - ನಾಳೆ ಸುದ್ದಿಗೋಷ್ಠಿಯಲ್ಲಿ ಶ್ರುತಿ ಹಾಕ್ತಾರಾ ಬಾಂಬ್ - ನಟಿ ವಿರುದ್ಧ ಗುಡುಗಿದ ಅರ್ಜುನ್ ಸರ್ಜಾ ಅತ್ತೆ        ಧರ್ಮ ವಿಚಾರದಲ್ಲಿ ಡಿಕೆಶಿ ಕ್ಷಮೆಯಾಚನೆಗೆ ಸಿದ್ದು ಸಿಟ್ಟು - ಒಂದೇ ವೇದಿಯಲ್ಲಿದ್ರೂ ಮುಖ ಮುಖ ನೋಡಲಿಲ್ಲ - ಜಂಟಿ ಸುದ್ದಿಗೋಷ್ಠಿಯಲ್ಲಿ ನಾಯಕರ ಮಹಾ ಮುನಿಸು        ಜೆಡಿಎಸ್‌, ಕಾಂಗ್ರೆಸ್‌ನ ಸುದ್ದಿಗೋಷ್ಠಿ - ಕಾಂಗ್ರೆಸ್‌, ಜೆಡಿಎಸ್‌ ಜಂಟಿ ಸಮರಕ್ಕೆ ಬಿಜೆಪಿ ವ್ಯಂಗ್ಯ- ಟ್ವೀಟ್‌ ಮೂಲಕ ಟಾಂಗ್‌        ಒಂದೇ ಮನಸ್ಸು ಎರಡು ದೇಹ ಅಂದ್ರು ಸಿಎಂ - ಈ ಜನ್ಮದಲ್ಲಿ ಗೌಡ್ರು-ಸಿದ್ದು ಒಂದಾಗಲ್ಲ ಅಂದ್ರು ಕಾರಜೋಳ - ದೋಸ್ತಿಗಳಿಗೆ ಬಿಜೆಪಿ ನಾಯಕರ ಟಕ್ಕರ್        ಗದಗಿನ ತೋಂಟದಾರ್ಯ ಶ್ರೀಗಳು ಲಿಂಗೈಕ್ಯ - ಹೃದಯಾಘಾತದಿಂದ ಗದಗ್‌ನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶ - ನಾಳೆ ಗದಗದಲ್ಲಿ ಅಂತ್ಯಕ್ರಿಯೆ       
Breaking News

ತ್ರಿವಳಿ ತಲಾಕ್ ಮಸೂದೆ ಮುಂದಿನ ಅಧಿವೇಶನಕ್ಕೆ

Saturday, 11.08.2018, 3:02 AM       No Comments

ನವದೆಹಲಿ: ಪ್ರತಿಪಕ್ಷಗಳ ಅಸಹಕಾರದ ಕಾರಣ ಈ ಬಾರಿಯ ಮುಂಗಾರು ಅಧಿವೇಶನದಲ್ಲೂ ತ್ರಿವಳಿ ತಲಾಕ್ ತಡೆ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಸಮ್ಮತಿ ದೊರೆತಿಲ್ಲ.

ಕಾಂಗ್ರೆಸ್ ಇನ್ನಿತರ ಪ್ರತಿಪಕ್ಷಗಳ ಒತ್ತಾಯದ ಹಿನ್ನೆಲೆಯಲ್ಲಿ ತ್ರಿವಳಿ ತಲಾಕ್ ವಿಧೇಯಕದಲ್ಲಿ 3 ತಿದ್ದುಪಡಿಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ತಿದ್ದುಪಡಿಯೊಂದಿಗೆ ವಿಧೇಯಕ ಮಂಡಿಸಲು ಕೇಂದ್ರ ಸರ್ಕಾರ ಶುಕ್ರವಾರ ಮುಂದಾದರೂ, ಪ್ರತಿಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದವು. ಹೀಗಾಗಿ ತ್ರಿವಳಿ ತಲಾಕ್ ಕುರಿತು ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಾಗದೇ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ. ತ್ರಿವಳಿ ತಲಾಕ್ ಸಂತ್ರಸ್ತೆ ಅಥವಾ ರಕ್ತ ಸಂಬಂಧಿಗಳು ಮಾತ್ರ ದೂರು ಸಲ್ಲಿಸಬಹುದು, ಪತಿ-ಪತ್ನಿ ಒಪ್ಪಿದರೆ ಪ್ರಕರಣ ಹಿಂಪಡೆ ಯಲು ನ್ಯಾಯಾಧೀಶರು ಸಮ್ಮತಿಸಬಹುದು ಹಾಗೂ ಪತ್ನಿ ಅಭಿಪ್ರಾಯ ಪಡೆದು ಪತಿಗೆ ಜಾಮೀನು ನೀಡುವ ಅವಕಾಶವನ್ನು ಸೇರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಸುಗ್ರೀವಾಜ್ಞೆ ಸಾಧ್ಯತೆ

ತ್ರಿವಳಿ ತಲಾಕ್ ನಿಷೇಧಕ್ಕೆ ರಾಜ್ಯಸಭೆಯಲ್ಲಿ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಮುಂದಿನ 6 ತಿಂಗಳಲ್ಲಿ ಸೂಕ್ತ ಕಾಯ್ದೆ ರೂಪಿಸಿ ಎಂದು 2017ರ ಆಗಸ್ಟ್​ನಲ್ಲಿ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ತ್ರಿವಳಿ ತಲಾಕ್ ಕಾಯ್ದೆ ರಾಜ್ಯಸಭೆ ಯಲ್ಲಿ ಅಂಗೀಕಾರಗೊಳ್ಳದಿರಲು ರಾಹುಲ್ ಗಾಂಧಿ ಕಾರಣ. ಮಹಿಳಾ ಸುರಕ್ಷತೆ ಕುರಿತು ಕಾಂಗ್ರೆಸ್​ನ ಇಬ್ಬಗೆಯ ನೀತಿ ಬಯಲಾಗಿದೆ.

| ಅನಂತ್ ​ಕುಮಾರ್, ಕೇಂದ್ರ ಸಂಸದೀಯ ವ್ಯವಹಾರ ಸಚಿವ

Leave a Reply

Your email address will not be published. Required fields are marked *

Back To Top