Thursday, 19th July 2018  

Vijayavani

ಮೂಲ ಮಠದಲ್ಲಿ ಶ್ರೀಗಳ ಪಾರ್ಥೀವ ಶರೀರ - ಪೂಜಾ ಸಾಮಗ್ರಿ ಜತೆಗಿಟ್ಟು ಸಂಸ್ಕಾರ ಕಾರ್ಯ        ಶೀರೂರು ಶ್ರೀಗಳು ಇನ್ನು ನೆನಪು ಮಾತ್ರ - ಕನಕನ ಕಿಂಡಿ ಮೂಲಕ ಕೃಷ್ಣನ ಕೊನೆಯ ದರ್ಶನ - ಆರತಿ ಸೇವೆ ಸಲ್ಲಿಸಿದ ಸ್ವಾಮೀಜಿ        ಶೀರೂರು ಶ್ರೀ ಸಾವಿನ ಸುತ್ತ ಅನುಮಾನದ ಹುತ್ತ - ಸ್ವಾಮೀಜಿಗಳಿಗೆ ವಿಷಪ್ರಾಸನದ ಶಂಕೆ - ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲು        ಸಾಮಾಜಿಕ ಹೋರಾಟಕ್ಕೂ ಶೀರೂರು ಶ್ರೀಗಳು ಸೈ - ವಾದ್ಯಪರಿಕರಗಳನ್ನು ನುಡಿಸುವುರಲ್ಲೂ ಎತ್ತಿದ ಕೈ        ಶೀರೂರು ಶ್ರೀ ಮಠಾಧಿಶರೇ ಅಲ್ಲ - ಅದಕ್ಕೇ ಅವರಿಗೆ ಪಟ್ಟದೇವರು ಕೊಡಲಿಲ್ಲ - ಪೇಜಾವರ ಶ್ರೀಗಳಿಂದ ಸ್ಫೋಟಕ ಹೇಳಿಕೆ        ಮಹಾ ಮಳೆಗೆ ಮೈದುಂಬಿದ ಕೃಷ್ಣೆ - ಚಿಕ್ಕೋಡಿಯಲ್ಲಿ ಹಲವು ಸೇತುವ ಜಲಾವೃತ - ಇತ್ತ ಕೊಡಗಿನಲ್ಲಿ ಕಾವೇರಿಗೆ ಎಚ್​ಡಿಕೆ ಬಾಗಿನ       
Breaking News

ಸಾರಿಗೆ ಸೆಸ್​: ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲು ಸಚಿವ ತಮ್ಮಣ್ಣ ಪ್ಲ್ಯಾನ್​

Thursday, 12.07.2018, 12:40 PM       No Comments

ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ಜನರ ಜೇಬಿಗೆ ಕತ್ತರಿ ಹಾಕಲು ಪ್ಲ್ಯಾನ್​ ರೂಪಿಸಿದ್ದು, ಸಾರಿಗೆ ಸೆಸ್​ ರೂಪದಲ್ಲಿ ಜನರಿಂದ ಹಣ ಸಂಗ್ರಹಿಸಿ ನೀಡುವಂತೆ ಬಿಬಿಎಂಪಿಗೆ ಮನವಿ ಮಾಡಲು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮುಂದಾಗಿದ್ದಾರೆ.

ಬೆಂಗಳೂರಿನ ರಸ್ತೆಗಳು ಹದಗೆಟ್ಟಿದೆ. ಬಸ್​ ಸಂಚಾರಕ್ಕೆ ಉತ್ತಮ ರಸ್ತೆಯಿಲ್ಲ. ಹಾಳಾದ ರಸ್ತೆಗಳಿಂದಾಗಿ ಬಿಎಂಟಿಸಿ ಬಸ್​ಗಳ ಸಸ್ಪೆನ್ಷನ್, ಗಾಜು, ಎಂಜಿನ್ ಹಾಳಾಗುತ್ತಿದೆ. ಇದರಿಂದಲೇ ಸಂಸ್ಥೆಗೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಬಸ್ ಚಾಲನೆ ಮಾಡುವ ಡ್ರೈವರ್ ಗಳಿಗೂ ಅಸಾಧಾರಣ ಬೆನ್ನುನೋವಿನಂತ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಉತ್ತಮ ರಸ್ತೆಗಳನ್ನು ನಿರ್ಮಿಸಿ ನಿರ್ವಹಣೆ ಮಾಡಿದ್ದರೆ ಬಿಎಂಟಿಸಿಗೆ ಇಷ್ಟೆಲ್ಲಾ ನಷ್ಟವಾಗುತ್ತಿರಲಿಲ್ಲ. ಹಾಗಾಗಿ ಬಿಎಂಟಿಸಿ ಬಸ್​ಗಳ ನಿರ್ವಹಣೆಗೆ ಅಗತ್ಯವಿರುವ ಹಣವನ್ನು ಜನರಿಂದ ಸಂಗ್ರಹಿಸಿ ಕೊಡಿ ಎಂದು ಬಿಬಿಎಂಪಿಗೆ ಪ್ರಸ್ತಾವನೆ ಸಲ್ಲಿಸಲು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಯೋಜನೆ ರೂಪಿಸಿದ್ದಾರೆ.

ಬಿಬಿಎಂಪಿ ಈಗಾಗಲೇ ಆರೋಗ್ಯ, ಗ್ರಂಥಾಲಯ, ಭಿಕ್ಷುಕರ, ಆರೋಗ್ಯ, ಕಸ ಸೇರಿದಂತೆ ವಿವಿಧ ಸೆಸ್​ಗಳನ್ನು ಸಂಗ್ರಹಿಸಿ ಸಂಬಂಧಪಟ್ಟ ಇಲಾಖೆಗೆ ನೀಡುತ್ತಿದೆ. ಅದರಂತೆ ಸಾರಿಗೆ ಕರವನ್ನೂ ಸಂಗ್ರಹಿಸಿ ಸಾರಿಗೆ ಇಲಾಖೆಗೆ ನೀಡಬೇಕು ಎಂಬುದು ನಮ್ಮ ಮನವಿ ಎಂದು ತಮ್ಮಣ್ಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back To Top