Monday, 16th July 2018  

Vijayavani

ಕಾಂಗ್ರೆಸ್‌ ಕಿರುಕುಳದಿಂದಲೇ ಸಿಎಂ ಕಣ್ಣೀರು - ಕಾಂಗ್ರೆಸ್‌ ನೆಚ್ಚಿಕೊಂಡು ಹೋದ್ರೆ ಇದೇ ಸ್ಥಿತಿ - ಎಚ್​ಡಿಕೆ  ಕಣ್ಣೀರಿಗೆ ಜೇಟ್ಲಿ ಟಾಂಗ್‌        ವಾಣಿಜ್ಯ ಬ್ಯಾಂಕ್‌ನಲ್ಲಿನ ಚಾಲ್ತಿ ಸಾಲವೂ ಮನ್ನಾ - ಸಿಎಂ ನಿರ್ಧಾರ - ರೈತರಿಗೆ ಮತ್ತೊಂದು ಕೊಡುಗೆ ನೀಡಿದ ಮುಖ್ಯಮಂತ್ರಿ        ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದ ಶಾಸಕರ ಪುತ್ರ - ಪ್ರಶ್ನಿಸಿದ ಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದನೆ        ಬಂಗಾಳದಲ್ಲಿ ಮೋದಿ ರ್ಯಾಲಿ ವೇಳೆ ಅವಗಢ - ಪೆಂಡಾಲ್ ಕುಸಿದು 22 ಜನರಿಗೆ ಗಾಯ - ಆರೋಗ್ಯ ವಿಚಾರಿಸಿದ ಪ್ರಧಾನಿ ನಮೋ        ಕರಾವಳಿಯಲ್ಲಿ ಭಾರಿ ಮಳೆಯ ಅವಾಂತರ - ಕುಸಿದುಬಿತ್ತು ಭಟ್ಕಳದ ಬಸ್ ನಿಲ್ದಾಣ - ಹೊರ ಓಡಿದ ಪ್ರಯಾಣಿಕರು        ಕೆಆರ್​​ಎಸ್​​​ನಿಂದ ಭಾರಿ ಪ್ರಮಾಣದ ನೀರು - ರಂಗನತಿಟ್ಟು ಪಕ್ಷಿಧಾಮ ಸಂಪೂರ್ಣ ಮುಳುಗಡೆ - ಧುಮ್ಮಿಕ್ಕುತ್ತಿದೆ ಹೊಗೇನಕಲ್ ಫಾಲ್ಸ್       
Breaking News

ಮೊಬೈಲ್​ ಗ್ರಾಹಕರಿಗೆ ಸಿಹಿ ಸುದ್ದಿ: ಕರೆ ದರ ಇನ್ನಷ್ಟು ಇಳಿಕೆ

Wednesday, 20.09.2017, 8:17 AM       No Comments

ನವದೆಹಲಿ: ಮೊಬೈಲ್​ ಕರೆ ದರ ಇನ್ನು ಮುಂದೆ ಮತ್ತಷ್ಟು ಇಳಿಕೆಯಾಗಲಿದೆ. ಮೊಬೈಲ್​ ಸೇವಾ ಕಂಪೆನಿಗಳ ನಡುವೆ ಇದ್ದ ಕರೆ ಶುಲ್ಕವನ್ನ ಈಗಿನ 14 ಪೈಸೆ ಬದಲಿಗೆ 6 ಪೈಸೆಗೆ ಟ್ರಾಯ್​ ಇಳಿಕೆ ಮಾಡಿದೆ.

ಈ ಲಾಭವನ್ನು ಕಂಪನಿಗಳು ಗ್ರಾಹಕರಿಗೆ ವರ್ಗ ಮಾಡಿದ್ರೆ, ಸ್ಥಳೀಯ ಕರೆಗಳ ಶುಲ್ಕದಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಲಿದೆ. ಹೊಸ ದರಗಳು ಅಕ್ಟೋಬರ್​1ರಿಂದ ಅನ್ವಯವಾಗಲಿದ್ದು, 2020ರ ಜನವರಿ 1ರಿಂದ ಸಂಪೂರ್ಣವಾಗಿ ಕರೆ ಸಂಪರ್ಕ ಶುಲ್ಕವನ್ನು ರದ್ದುಗೊಳಿಸೊದಾಗಿ ಟ್ರಾಯ್‌ ತಿಳಿಸಿದೆ.

ನಾನಾ ಮೊಬೈಲ್‌ ಸೇವಾ ಕಂಪನಿಗಳ ಜತೆ ಚರ್ಚಿಸಿದ ಬಳಿಕ ದೇಶೀಯ ಮೊಬೈಲ್‌ ಕಾಲ್‌ ಕನೆಕ್ಟ್ ಶುಲ್ಕಗಳನ್ನ ಪರಿಷ್ಕರಿಸಲಾಗಿದೆ ಅಂತಾ ಟ್ರಾಯ್​ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top